ಕನ್ನಡ ಸುದ್ದಿ  /  ಕರ್ನಾಟಕ  /  Human Powered Vehicle: ಬೆಂಗಳೂರಲ್ಲಿ ಕಾಣಸಿಕ್ಕಿತು ಆಮದು ಮಾಡಿಕೊಂಡ ಹ್ಯುಮನ್‌ ಪವರ್ಡ್‌ ವೆಹಿಕಲ್‌! ಇಲ್ಲಿದೆ ವಿಡಿಯೋ, ಫೋಟೋಸ್‌

Human powered vehicle: ಬೆಂಗಳೂರಲ್ಲಿ ಕಾಣಸಿಕ್ಕಿತು ಆಮದು ಮಾಡಿಕೊಂಡ ಹ್ಯುಮನ್‌ ಪವರ್ಡ್‌ ವೆಹಿಕಲ್‌! ಇಲ್ಲಿದೆ ವಿಡಿಯೋ, ಫೋಟೋಸ್‌

Human powered vehicle: ಬೆಂಗಳೂರಲ್ಲಿ ಕಂಡ ಇಂಪೋರ್ಟೆಡ್‌ ಹ್ಯುಮನ್‌ ಪವರ್ಡ್‌ ವೆಹಿಕಲ್‌ನ ವಿಡಿಯೋ, ಫೋಟೋ ಟ್ವೀಟ್‌ ರೀಟ್ವೀಟ್‌ ಮತ್ತು ಲೈಕ್ಸ್‌ ಅನ್ನು ಪಡೆದುಕೊಂಡಿದೆ. ಬೆಂಗಳೂರಿನ ಜೆಪಿ ನಗರದಲ್ಲಿ ಸ್ಲೀಪಿಂಗ್‌ ಪಾಡ್‌ ಆಕಾರದ ಈ ವಾಹನ ಪತ್ತೆಯಾಗಿದೆ.

ಬೆಂಗಳೂರಲ್ಲಿ ಕಾಣಸಿಕ್ಕಿತು ಆಮದು ಮಾಡಿಕೊಂಡ ಹ್ಯುಮನ್‌ ಪವರ್ಡ್‌ ವೆಹಿಕಲ್‌
ಬೆಂಗಳೂರಲ್ಲಿ ಕಾಣಸಿಕ್ಕಿತು ಆಮದು ಮಾಡಿಕೊಂಡ ಹ್ಯುಮನ್‌ ಪವರ್ಡ್‌ ವೆಹಿಕಲ್‌

ಸಂಚಾರ ದಟ್ಟಣೆ ಇರುವ ಬೆಂಗಳೂರು ಮಹಾನಗರದ ರಸ್ತೆಗಳಲ್ಲಿ ಐಷಾರಾಮಿ, ವಿದೇಶಿ ಕಾರುಗಳಷ್ಟೇ ಸಂಚರಿಸುತ್ತಿರುವುದಲ್ಲ; ಆಮದು ಮಾಡಿಕೊಂಡ ಹ್ಯುಮನ್‌ ಪವರ್ಡ್‌ ವೆಹಿಕಲ್‌ ಕೂಡ ಕಾಣಸಿಕ್ಕಿದೆ!

ಈ ಹ್ಯುಮನ್‌ ಪವರ್ಡ್‌ ವೆಹಿಕಲ್‌ನ ವಿಡಿಯೋ ಮತ್ತು ಕೆಲವು ಫೋಟೋಸ್‌ ಟ್ವಿಟರ್‌ನಲ್ಲಿ ಸದ್ದುಮಾಡಿದೆ. ಅನೇಕರು ಇದನ್ನು ಇಷ್ಟಪಟ್ಟಿದ್ದಾರೆ. ಹೀಗಾಗಿ ಬೆಂಗಳೂರಲ್ಲಿ ಕಂಡ ಇಂಪೋರ್ಟೆಡ್‌ ಹ್ಯುಮನ್‌ ಪವರ್ಡ್‌ ವೆಹಿಕಲ್‌ ವಿಡಿಯೋ, ಫೋಟೋ ಟ್ವೀಟ್‌ ರೀಟ್ವೀಟ್‌ ಮತ್ತು ಲೈಕ್ಸ್‌ ಅನ್ನು ಪಡೆದುಕೊಂಡಿದೆ.

ಬೆಂಗಳೂರಿನ ಜೆಪಿ ನಗರದಲ್ಲಿ ಸ್ಲೀಪಿಂಗ್‌ ಪಾಡ್‌ ಆಕಾರದ ಈ ವಾಹನ ಪತ್ತೆಯಾಗಿದೆ. ರೇವಂತ್‌ ಎಂಬ ಬೆಂಗಳೂರು ವಾಸಿ ಈ ವಾಹನದ ವಿಡಿಯೋ, ಫೋಟೋವನ್ನು ಟ್ವೀಟ್‌ ಮಾಡಿರುವಂಥದ್ದು. ಜೆಪಿನಗರ ಸಮೀಪ ಈ ವ್ಯಕ್ತಿಯನ್ನು ಭೇಟಿ ಮಾಡಿದೆ. ಇದು ನೆದರ್ಲೆಂಡ್ಸ್‌ನಿಂದ ತರಿಸಿಕೊಂಡ ಹ್ಯುಮನ್‌ ಪವರ್ಡ್‌ ವೆಹಿಕಲ್‌ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ಹ್ಯುಮನ್‌ ಪವರ್ಡ್‌ ವೆಹಿಕಲ್‌ನ ವಿಡಿಯೋ, ಫೋಟೋ ವೈರಲ್‌ ಆಗುತ್ತಿರುವಂತೆ ಹಲವು ಸಂದೇಹಗಳು ವ್ಯಕ್ತವಾಗಿವೆ. ಅನೇಕಾನೇಕ ನಾಗರಿಕ ಸಮಸ್ಯೆಗಳ ಮುಕ್ತಿಗಾಗಿ ಬೆಂಗಳೂರು ಹೋರಾಟ ನಡೆಸುತ್ತಿದೆ. ರಸ್ತೆ ಗುಂಡಿಗಳೇ ಹೆಚ್ಚಿರುವ ಬೆಂಗಳೂರಿನ ರಸ್ತೆಗಳಲ್ಲಿ ಈ ಹ್ಯುಮನ್‌ ಪವರ್ಡ್‌ ವೆಹಿಕಲ್‌ ಅನ್ನು ಹೇಗೆ ಚಲಾಯಿಸಿಕೊಂಡು ಹೋಗುವುದು ಎಂಬ ಪ್ರಶ್ನೆ ಹೆಚ್ಚು ಚರ್ಚೆಗೆ ಒಳಗಾಗಿದೆ.

ಪ್ರಣವ್‌ ಎಂಬುವವರು, ರಸ್ತೆ ಗುಂಡಿಗಳು ಈ ವ್ಯಕ್ತಿಯ ಬಗ್ಗೆ ಕನಿಕರ ಹೊಂದಬಹುದು ಎಂದು ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ರೇವಂತ್‌ ಪ್ರತಿಕ್ರಿಯೆ ನೀಡಿದ್ದು, “ವಾಸ್ತವದಲ್ಲಿ ನಾನೂ ಇದನ್ನೆ ಕೇಳಿದ್ದೆ ಅವರ ಬಳಿ, ರಸ್ತೆ ಗುಂಡಿಗಳು ಇರುವಾಗ ಹೇಗೆ ಇದನ್ನು ಚಲಾಯಿಸುವುದು? ಅದು ಕಾಣಿಸುವುದೇ ? ಅದಕ್ಕೆ ಅವರು ಹೇಳಿದ್ದು ಇಷ್ಟು - ಕೆಲ ಕಾಲದಿಂದ ಇದನ್ನು ಬಳಸುತ್ತಿದ್ದೇನೆ” ಎಂಬ ಉತ್ತರ ಸಿಕ್ಕಿದ್ದಾಗಿ ವಿವರಿಸಿದ್ದಾರೆ.

ಬಹಳ ಕುತೂಹಲಕಾರಿ ವಿಚಾರ! ಇದು ನಿಜವಾಗಿಯೂ ಚಲಾಯಿಸಬೇಕಾದ ವಾಹನವೇ? ಆದರೆ ರಸ್ತೆ ಗುಂಡಿಗಳನ್ನು ಗಮನಿಸಿ ಹೇಳುವುದಾದರೆ ಇದು ಭಾರತದ ರಸ್ತೆಗಳಿಗೆ ಹೇಳಿ ಮಾಡಿಸಿದ್ದಲ್ಲ ಎಂದು ಇನ್ನೊಬ್ಬರು ಟ್ವೀಟ್‌ ಮಾಡಿದ್ದಾರೆ.

ಇದೇ ವೇಳೆ, ಈ ವಾಹವನ್ನು ಭಾರತದಲ್ಲಿ ಬಳಸುವುದಕ್ಕೆ ಅವಕಾಶ ಇದೆಯಾ? ಕಾನೂನು ಸಮಸ್ಯೆ ಇಲ್ಲವೆ? ಬೆಂಗಳೂರು ಸಂಚಾರಿ ಪೊಲೀಸರಿಗೆ ಈ ವ್ಯಕ್ತಿ ಸಿಕ್ಕರೆ ಅವರೂ ಹಲವು ಪ್ರಶ್ನೆಗಳನ್ನು ಕೇಳುವುದು ಖಚಿತ ಎಂದು ಮತ್ತೊಬ್ಬರು ಟ್ವೀಟ್‌ ಮಾಡಿದ್ದಾರೆ.

ಗಮನಿಸಬಹುದಾದ ಸುದ್ದಿ

ತೆಲುಗು ಗಾಯಕಿ ಮಂಗ್ಲಿ ಕಾರಿನ ಮೇಲೆ ದಾಳಿ; ನಿಜವಾ ಸುಳ್ಳಾ? ಮಂಗ್ಲಿ ಏನು ಹೇಳಿದ್ರು? ಎಸ್‌ಪಿ ಸ್ಪಷ್ಟೀಕರಣ ಏನು?

ಬಳ್ಳಾರಿ ಉತ್ಸವದ ಸಂಗೀತ ಕಾರ್ಯಕ್ರಮಕ್ಕೆ ಬಂದ ತೆಲುಗು ಗಾಯಕಿ ಮಂಗ್ಲಿ ಕಾರಿನ ಮೇಲೆ ದಾಳಿ ನಡೆದಿದೆ. ಕಲ್ಲುತೂರಾಟ ಆಗಿದ್ದರಿಂದ ಕಾರಿನ ಗಾಜು ಒಡೆದಿದೆ. ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ ಎಂಬಿತ್ಯಾದಿ ಸುದ್ದಿ ಹರಡಿತ್ತು. ಆದರೆ, ಈ ಬಗ್ಗೆ ಗಾಯಕಿ ಮಂಗ್ಲಿ ಟ್ವೀಟ್‌ ಮಾಡಿದ್ದಾರೆ. ಬಳ್ಳಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೂಡ ಮಾಧ್ಯಮಗಳ ಜತೆಗೆ ಮಾತನಾಡಿದ್ದಾರೆ. ಅವರು ಹೇಳಿರುವುದೇನು? ಘಟನೆ ನಡೆದಿರುವುದೇನು? ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

Vigyanika: ಭೋಪಾಲ ವಿಜ್ಞಾನ ಹಬ್ಬದಲ್ಲಿ ಹರಡಿತು ಕನ್ನಡದ ಕಂಪು; ವಿಜ್ಞಾನ ಸಂವಹನದಲ್ಲಿ ಕನ್ನಡದ ಸಾಧನೆ ವ್ಯಕ್ತ - 2 ಕನ್ನಡ ಕೃತಿ ಬಿಡುಗಡೆ

Vigyanika: ಇಂಡಿಯಾ ಇಂಟರ್ ನ್ಯಾಶನಲ್ ಸೈನ್ಸ್ ಫೆಸ್ಟಿವಲ್‌ನ ಭಾಗವಾಗಿ ಈ ಸಾಹಿತ್ಯ ಹಬ್ಬ ಜನವರಿ 22 ಮತ್ತು 23ರಂದು ಅಂದರೆ ನಿನ್ನೆ ಮತ್ತು ಇಂದು ನಡೆಯುತ್ತಿದೆ. ಈ ಕಾರ್ಯಕ್ರಮದ ಮೊದಲ ದಿನದಲ್ಲಿ ಕನ್ನಡ ವಿಜ್ಞಾನ ಸಾಹಿತ್ಯದ ಹಲವು ಆಯಾಮಗಳಿಗೆ ವೇದಿಕೆ ದೊರೆತದ್ದು ವಿಶೇಷ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point