ಕನ್ನಡ ಸುದ್ದಿ  /  Karnataka  /  In First K'taka Poll Rally, Kejriwal Urges People To Give Aap A Chance For Corruption-free Govt

Kejriwal Karnataka poll rally: ಭ್ರಷ್ಟಾಚಾರ ಮುಕ್ತ ಸರಕಾರಕ್ಕಾಗಿ ಆಪ್‌ಗೊಂದು ಅವಕಾಶ ನೀಡಿ, ಕರ್ನಾಟಕದಲ್ಲಿ ಕೇಜ್ರಿವಾಲ್‌ ಪ್ರಚಾರ

Aravind Kejriwal in Karnataka: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಇಂದು ಬೆಣ್ಣೆನಗರಿ ದಾವಣಗೆರೆಗೆ ಆಗಮಿಸಿದ್ದು, ಭ್ರಷ್ಟಾಚಾರ ಮುಕ್ತ ಸರಕಾರ ನಡೆಸಲು ಕರ್ನಾಟಕದಲ್ಲಿ ಆಮ್‌ ಆದ್ಮಿಗೆ ಒಂದು ಅವಕಾಶ ನೀಡುವಂತೆ ಕೇಳಿಕೊಂಡಿದ್ದಾರೆ.

Kejriwal Karnataka poll rally: ಭ್ರಷ್ಟಾಚಾರ ಮುಕ್ತ ಸರಕಾರಕ್ಕಾಗಿ ಆಪ್‌ಗೊಂದು ಅವಕಾಶ ನೀಡಿ, ಕರ್ನಾಟಕದಲ್ಲಿ ಕೇಜ್ರಿವಾಲ್‌ ಪ್ರಚಾರ
Kejriwal Karnataka poll rally: ಭ್ರಷ್ಟಾಚಾರ ಮುಕ್ತ ಸರಕಾರಕ್ಕಾಗಿ ಆಪ್‌ಗೊಂದು ಅವಕಾಶ ನೀಡಿ, ಕರ್ನಾಟಕದಲ್ಲಿ ಕೇಜ್ರಿವಾಲ್‌ ಪ್ರಚಾರ

ದಾವಣಗೆರೆ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಇಂದು ಬೆಣ್ಣೆನಗರಿ ದಾವಣಗೆರೆಗೆ ಆಗಮಿಸಿದ್ದು, ಭ್ರಷ್ಟಾಚಾರ ಮುಕ್ತ ಸರಕಾರ ನಡೆಸಲು ಕರ್ನಾಟಕದಲ್ಲಿ ಆಮ್‌ ಆದ್ಮಿಗೆ ಒಂದು ಅವಕಾಶ ನೀಡುವಂತೆ ಕೇಳಿಕೊಂಡಿದ್ದಾರೆ. ಆಮ್‌ ಆದ್ಮಿ ಪಕ್ಷ ಗೆದ್ದರೆ ಉಚಿತ ವಿದ್ಯುತ್‌, ಸರಕಾರಿ ಶಾಳೆಗಳಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ರಾಜ್ಯದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವುದಾಗಿ ಅವರು ಘೋಷಿಸಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಹಲವು ಸುತ್ತಿನ ಪ್ರಚಾರ ನಡೆಸುತ್ತಿವೆ. ವಿವಿಧ ಯಾತ್ರೆಗಳನ್ನು ನಡೆಸುತ್ತಿವೆ. ಕೇಂದ್ರದ ಪ್ರಮುಖ ನಾಯಕರು ರಾಜ್ಯಕ್ಕೆ ನಿಯಮಿತವಾಗಿ ಭೇಟಿ ನೀಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅರವಿಂದ್‌ ಕೇಜ್ರಿವಾಲ್‌ ಅವರು ಕರ್ನಾಟಕದಲ್ಲಿ ಪ್ರಚಾರ ಆರಂಭಿಸಿದ್ದಾರೆ.

ಇಂದು ಮಧ್ಯಾಹ್ನ ದಾವಣಗೆರೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮತ್ತು ಪಂಜಾಬ್‌ ಮುಖ್ಯಮಂತ್ರಿ ಭಗವಾನ್‌ ಸಿಂಗ್‌ ಮಾನ್‌ ಆಗಮಿಸಿದ್ದಾರೆ. ಇವರು ವೇದಿಕೆ ಹತ್ತುತ್ತಿದ್ದಂತೆ ಆಪ್‌ ಕಾರ್ಯಕರ್ತರ ಉತ್ಸಾಹ ಮುಗಿಲು ಮುಟ್ಟಿದ್ದು, ಜೈಕಾರ ಹಾಕಿ ಸಂಭ್ರಮಿಸಿದ್ದಾರೆ. ಹೆಲಿಕಾಪ್ಟರ್‌ ಮೂಲಕ ಅರವಿಂದ್‌ ಕೇಜ್ರಿವಾಲ್‌ ಅವರು ದಾವಣಗೆರೆಗೆ ಆಗಮಿಸಿದ್ದಾರೆ.

ಕರ್ನಾಟಕದಲ್ಲಿ ತಮ್ಮ ಚೊಚ್ಚಲ ಚುನಾವಣಾ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಎಎಪಿ ವರಿಷ್ಠ ಅರವಿಂದ್‌ ಕೇಜ್ರಿವಾಲ್‌ ಅವರು "ಪಕ್ಷದ ಆಡಳಿತವಿರುವ ಪಂಜಾಬ್‌ನಲ್ಲಿ ಸಚಿವರು ಮತ್ತು ಶಾಸಕರು ಜೈಲು ಪಾಲಾಗಿದ್ದಾರೆ. ಪಕ್ಷವು ಭ್ರಷ್ಟಾಚಾರವನ್ನುಶೂನ್ಯದಷ್ಟು ಸಹಿಸುವುದಿಲ್ಲ" ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್, ರಾಜ್ಯದಲ್ಲಿ 40 ಪರ್ಸೆಂಟ್ ಕಮಿಷನ್ ಸರ್ಕಾರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಇದೇ ಸಂದರ್ಭದಲ್ಲಿ ಟೆಂಡರ್‌ಗಾಗಿ ಲಂಚ ಪ್ರಕರಣದಲ್ಲಿ ಸಿಬಿಐಗೆ ಸಿಕ್ಕಿ ಬಿದ್ದ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರ ಕುರಿತೂ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

"ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕಕ್ಕೆ ಆಗಮಿಸಿ ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಸರ್ಕಾರ ಸ್ಥಾಪಿಸಲು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ನೀಡುವಂತೆ ಜನತೆಗೆ ಮನವಿ ಮಾಡಿದ್ದರು. ಆಗ, ರಾಜ್ಯದಲ್ಲಿ ಈಗಾಗಲೇ ಬಿಜೆಪಿ ಸರ್ಕಾರವಿದೆ ಎಂದು ಯಾರೋ ನೆನಪಿಸಿದರು. ಕಳೆದ ನಾಲ್ಕು ವರ್ಷಗಳಲ್ಲಿ ನೀವು ಏಕೆ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸಾಧ್ಯವಾಗಲಿಲ್ಲ ಎಂದು ನಾನು ಅವರನ್ನು ಕೇಳಲು ಬಯಸುತ್ತೇನೆ" ಎಂದು ಅರವಿಂದ್‌ ಕೇಜ್ರಿವಾಲ್‌ ಪ್ರಶ್ನಿಸಿದ್ದಾರೆ.

ಅಮಿತ್‌ ಶಾ ಅವರು ದೆಹಲಿಗೆ ವಾಪಸ್‌ ಹೋದ ಮರುದಿನವೇ ಕರ್ನಾಟಕದಲ್ಲಿ ಬಿಜೆಪಿ ಶಾಸಕರ ಪುತ್ರ ಸಿಬಿಐಗೆ ಸಿಕ್ಕಿ ಬಿದ್ದಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

"ದಾವಣಗೆರೆ ಮೂಲದ ಆ ಅಪ್ಪ ಮತ್ತು ಮಗನ ಬಂಧನ ಇನ್ನೂ ಆಗಿಲ್ಲ. ಆದರೆ, ಮನೀಶ್‌ ಸಿಸೋಡಿಯಾ ಅವರ ಬಂಧನವಾಗಿದೆ" ಎಂದು ಅವರು ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರ ಪ್ರಕರಣವನ್ನು ಹೋಲಿಸಿದರು.

ಕರ್ನಾಟಕ ಮಂತ್ರಿಗಳು ಗುತ್ತಿಗೆ ಪಡೆಯಲು ಶೇಕಡ 40 ಕಮಿಷನ್‌ ಪಡೆಯುತ್ತಿದ್ದಾರೆ ಎಂದು ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಈ ರೀತಿ ಪತ್ರ ಬರೆದ ವಿಷಯಕ್ಕೆ ಸಂಬಂಧಪಟ್ಟಂತೆ ಕ್ರಮ ಕೈಗೊಳ್ಳದೆ ದೂರು ನೀಡಿದ 82 ವರ್ಷ ವಯಸ್ಸಿನ ಗುತ್ತಿಗೆದಾರರನ್ನು ಬಂಧಿಸಲಾಗಿದೆ ಎಂದರು.

ಡಬಲ್‌ ಎಂಜಿನ್‌ ಸರಕಾರದಲ್ಲಿ ಭ್ರಷ್ಟಾಚಾರವೂ ಡಬಲ್‌ ಆಗಿದೆ ಎಂದು ಈ ಸಂದರ್ಭದಲ್ಲಿ ಬಿಜೆಪಿಗೆ ಅರವಿಂದ್‌ ಕೇಜ್ರಿವಾಲ್‌ ತಿವಿದಿದ್ದಾರೆ. "ಈಗ ಇರುವುದು ಡಬಲ್‌ ಎಂಜಿನ್‌ ಸರಕಾರ. ಇಲ್ಲಿ ಭ್ರಷ್ಟಾಚಾರವೂ ಡಬಲ್‌ ಆಗಿದೆ. ಇದಕ್ಕಾಗಿ ನಾವು ಇಲ್ಲಿ ಹೊಸ ಸರಕಾರ ರಚಿಸಬೇಕಿದೆ. ಭ್ರಷ್ಟಾಚಾರ ಮುಕ್ತ ಸರಕಾರಕ್ಕಾಗಿ ಆಮ್‌ ಆದ್ಮಿಗೆ ಒಂದು ಅವಕಾಶ ನೀಡಿʼʼ ಎಂದು ಅವರು ಕೇಳಿಕೊಂಡಿದ್ದಾರೆ.

IPL_Entry_Point