ರಾಜಸ್ಥಾನದಲ್ಲಿ ಆಡಳಿತಾರೂಢ ಬಿಜೆಪಿ ಕರಣಪುರ ಉಪಚುನಾವಣೆಯಲ್ಲಿ ಭಾರಿ ಮುಖಭಂಗಕ್ಕೆ ಒಳಗಾಗಿದೆ. ಡಿಸೆಂಬರ್ 30ರಂದು ಸಚಿವರಾಗಿ ಸಂಪುಟ ಸೇರಿದ್ದ ಸುರೇಂದ್ರ ಪಾಲ್ ಸಿಂಗ್ ಟಿಟಿ ಅವರು ಕಾಂಗ್ರೆಸ್ ಅಭ್ಯರ್ಥಿ ರೂಪಿಂದರ್ ಸಿಂಗ್ ಕೊನೂರ್ ವಿರುದ್ಧ 11261 ಮತಗಳ ಸೋಲು ಅನುಭವಿಸಿದ್ದು, ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡುವ ಪ್ರಸಂಗ ಉಂಟಾಯಿತು.