ಕನ್ನಡ ಸುದ್ದಿ  /  Karnataka  /  Karnataka Elections Bjp Leaders Campaign In Hubli Dharwad West Constituency Amit Shah Predicts Shettar Will Lose Rmy

CM Bommai: ಕರ್ನಾಟಕ ಚುನಾವಣೆ: ಹು-ಧಾ ಪಶ್ಚಿಮ ಕ್ಷೇತ್ರದಲ್ಲಿ ಸಿಎಂ ಬೊಮ್ಮಾಯಿ ಪ್ರಚಾರ ಅಬ್ಬರ; ಶೆಟ್ಟರ್ ಸೋಲ್ತಾರೆಂದು ಅಮಿತ್ ಶಾ ಭವಿಷ್ಯ

ಶೆಟ್ಟರ್ ಅವರು ಕಾಂಗ್ರೆಸ್ ಗೆ ಹೋಗಿರುವುದರಿಂದ ಯಾವುದೇ ನಷ್ಟವಿಲ್ಲ. ನಮ್ಮ ಕಾರ್ಯಕರ್ತರು ಒಗ್ಗಾಟಾಗಿರುವುದರಿಂದ ಜಗದೀಶ್ ಶೆಟ್ಟರ್ ಅವರನ್ನು ಮತದಾರರು ಸೋಲಿಸುತ್ತಾರೆ ಅಂತ ಅಮಿತ್ ಶಾ ಗುಡುಗಿದ್ದಾರೆ.

ಹುಬ್ಬಳ್ಳಿ-ಧಾರವಾಡ ಪಶ್ಛಿಮ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಸಿಎಂ ಬೊಮ್ಮಾಯಿ ಪ್ರಚಾರ ಮಾಡಿದರು.
ಹುಬ್ಬಳ್ಳಿ-ಧಾರವಾಡ ಪಶ್ಛಿಮ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಸಿಎಂ ಬೊಮ್ಮಾಯಿ ಪ್ರಚಾರ ಮಾಡಿದರು.

ಹುಬ್ಬಳ್ಳಿ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ ವಾಪಸ್ ಪ್ರಕ್ರಿಯೆಯೂ ನಿನ್ನೆಗೆ (ಏ.24, ಸೋಮವಾರ) ಮುಗಿದಿದ್ದು, ಇದೀಗ ಎಲ್ಲರ ಚಿತ್ತ ಮೇ 10 ರಂದು ನಡೆಯಲಿರುವ ಚುನಾವಣೆಯತ್ತ ನೆಟ್ಟಿದೆ.

ರಾಜಕೀಯ ಪಕ್ಷಗಳು (Political Parties) ಅಬ್ಬರದ ಪ್ರಚಾರ ಮಾಡುತ್ತಿದ್ದು, ಸಿಎಂ ಬಸವರಾಜ ಬೊಮ್ಮಾಯಿ (Chief Minister Basavaraj Bommai) ಅವರು ಇಂದು ಹುಬ್ಬಳ್ಳಿ-ಧಾರವಾಡ ಪಶ್ಚಿಮ (Hubli-Dharwad West) ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ ಪರ ಭರ್ಜರಿ ಕ್ಯಾಂಪೇನ್ ನಡೆಸಿ ಮತಯಾಚನೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹಾಜರಿದ್ದರು.

ಮತ್ತೊಂದೆಡೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್, ಜಗದೀಶ್ ಶೆಟ್ಟರ್ ಅವರು ಸೋಲುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಹುಬ್ಬಳ್ಳಿ ಜನರು ಯಾವಾಗಲೂ ಬಿಜೆಪಿಗೆ ಮತ ಹಾಕಿದ್ದಾರೆ. ಶೆಟ್ಟರ್ ಅವರು ಕಾಂಗ್ರೆಸ್ ಗೆ ಹೋಗಿರುವುದರಿಂದ ಯಾವುದೇ ನಷ್ಟವಿಲ್ಲ. ನಮ್ಮ ಕಾರ್ಯಕರ್ತರು ಒಗ್ಗಾಟಾಗಿರುವುದರಿಂದ ಜಗದೀಶ್ ಶೆಟ್ಟರ್ ಅವರನ್ನು ಮತದಾರರು ಸೋಲಿಸುತ್ತಾರೆ ಅಂತ ಗುಡುಗಿದ್ದಾರೆ.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರೋದು ಅಕ್ಷಮ್ಯ. ಹೀಗಾಗಿ ಅವರಿಬ್ಬರನ್ನು ಸೋಲಿಸಲೇಬೇಕೆಂದು ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಶಾ ಕೆಲದಿನಗಳ ಹಿಂದಷ್ಟೇ ಟಾಸ್ಕ್ ನೀಡಿದ್ದಾರೆ. ವಿಶೇಷವಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ತಮ್ಮದೇ ಸಮುದಾಯದವರಾದ ಈ ಇಬ್ಬರು ನಾಯಕರನ್ನು ಸೋಲಿಸುವ ಜವಾಬ್ದಾರಿ ನೀಡಲಾಗಿದೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಸಿಎಂ, ನಾನು ಮುಂದೊಂದು ದಿನ ಸಿಎಂ ಆಗುತ್ತೇನೆ ಎಂದು ಊಹಿಸಿರಲಿಲ್ಲ, ಆದರೆ ಪಕ್ಷದ ಹೈಕಮಾಂಡ್ ನಿರ್ಧರಿಸಿ ಮುಖ್ಯಮಂತ್ರಿ ಹುದ್ದೆಯನ್ನು ನೀಡಿದೆ. ಮುಂದೆಯೂ ಪಕ್ಷದ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.

ಬಿಜೆಪಿ ಮತ್ತೊಂದು ಬಾರಿ ಗೆದ್ದರೆ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗುತ್ತೀರಾ ಎಂಬ ಪ್ರಶ್ನೆಗೆ ಈ ಮೇಲಿನಂತೆ ಉತ್ತರಿಸಿರುವ ಸಿಎಂ, ಕರ್ನಾಟಕದಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಅಂತ ನಿನ್ನೆಯಷ್ಟೇ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಅತ್ಯಂತ ಹಳೆಯ ಪಕ್ಷಕ್ಕೆ ಇನ್ನೊಂದು ಹೆಸರು ಭ್ರಷ್ಟಾಚಾರ ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಜನರು ತಿರಸ್ಕರಿಸಲಿದ್ದಾರೆ ಅಂತ ಹೇಳಿದ್ದಾರೆ.

ಕಾಂಗ್ರೆಸ್ ನವರಿಗೆ ದಿಕ್ಕು ತಪ್ಪಿದೆ. ಸಿದ್ದರಾಮಯ್ಯ ಒಂದು ರೀತಿ, ಡಿಕೆಶಿ ಒಂದು ರೀತಿ ಮಾತನಾಡುತ್ತಾರೆ. 2013-18ರಿಂದ ಕಾಂಗ್ರೆಸ್ ಅವಧಿಯಲ್ಲಿ ನೀರಾವರಿ ಇಲಾಖೆಯಲ್ಲಿ, ಬಿಡಿಎ, ಎಸ್ಸಿ ಎಸ್ಟಿ ಮಕ್ಕಳ ದಿಂಬು ಹಾಸಿಗೆಯಲ್ಲಿ ಲಂಚ ಹೊಡೆದಿದ್ದಾರೆ. ಕಾಂಗ್ರೆಸ್ ಅನೇಕ ಯೋಜನೆಗಳಲ್ಲಿ 100 ರಷ್ಟು ಭ್ರಷ್ಟಾಚಾರ ಮಾಡಿದೆ ಸಿಎಂ ಬೊಮ್ಮಾಯಿ ಇತ್ತೀಚೆಗೆ ಆರೋಪಿಸಿದ್ದರು.

ಕಾಂಗ್ರೆಸ್ ನಾಯಕರು ಈಗ ಲಿಂಗಾಯತ ಜಪ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮನೆಯ ಒಳಗೆ ಬಿಟ್ಟುಕೊಳ್ಳುತ್ತಾರೆ. ಚುನಾವಣೆ ಮುಗಿದ ಮೇಲೆ ಮನೆಯ ಹೊರಗೆ ಹಾಕುತ್ತಾರೆ. ಕಾಂಗ್ರೆಸ್ ಅಂದರೆ ಬ್ರಿಟಿಷರ ಬೀಜ, ಅವರು ಒಡೆದು ಆಳುವ ನೀತಿ ಅನುಸರಿಸುತ್ತಾರೆ. ಧರ್ಮ ಒಡೆಯಲು ಪ್ರಯತ್ನ ಮಾಡಿದರು. ಜಾತಿಗಳನ್ನು ಸಣ್ಣ ಸಣ್ಣ ಜಾತಿಗಳಾಗಿ ಒಡೆದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

IPL_Entry_Point