ಕನ್ನಡ ಸುದ್ದಿ  /  Lifestyle  /  Your Walking Style Could Be A Sign Of This Deadly Disease

Fatty Liver Disease: ನಿಮ್ಮ ನಿತ್ಯದ ನಡಿಗೆಯೇ ನೀಡಲಿದೆ ಗಂಭೀರ ಕಾಯಿಲೆಯ ಸುಳಿವು! ಈ ಬದಲಾವಣೆ ಬಗ್ಗೆ ಈಗಲೇ ಗಮನಹರಿಸಿ...

Fatty Liver Disease: ನಿತ್ಯ ವಾಕಿಂಗ್‌ ಮಾಡುತ್ತೀರಾ? ಹಾಗಾದರೆ ಎಂದಾದರೂ ನೀವು ನಿಮ್ಮ ನಡಿಗೆಯಲ್ಲಿ ಬದಲಾವಣೆ ಆಗಿದ್ದನ್ನು ಗಮನಿಸಿದ್ದೀರಾ? ಈಗಲೇ ಗಮನಿಸಿ.. ನಡೆಯುವಾಗ ನೀವು ಸಮಸ್ಯೆ ಎದುರಿಸುತ್ತಿದ್ದರೆ ಅದು ಈ ಕಾಯಿಲೆಯ ಮುನ್ಸೂಚನೆ ಆಗಿರಲೂಬಹುದು!

ನಿಮ್ಮ ನಿತ್ಯದ ನಡಿಗೆಯೇ ನೀಡಲಿದೆ ಗಂಭೀರ ಕಾಯಿಲೆಯ ಸುಳಿವು! ಈ ಬದಲಾವಣೆ ಬಗ್ಗೆ ಈಗಲೇ ಗಮನಹರಿಸಿ...
ನಿಮ್ಮ ನಿತ್ಯದ ನಡಿಗೆಯೇ ನೀಡಲಿದೆ ಗಂಭೀರ ಕಾಯಿಲೆಯ ಸುಳಿವು! ಈ ಬದಲಾವಣೆ ಬಗ್ಗೆ ಈಗಲೇ ಗಮನಹರಿಸಿ...

Fatty Liver Disease: ನಾನು ನಿತ್ಯ ಸುಮಾರು ಕಿಲೋ ಮೀಟರ್‌ ವಾಕ್‌ ಮಾಡ್ತೀನಿ.. ಆದರೆ, ಇತ್ತೀಚೆಗೆ ಹೆಚ್ಚು ವಾಕ್‌ ಮಾಡಲು ಸಾಧ್ಯವಾಗ್ತಿಲ್ಲ. ಸರಿಯಾಗಿ ಹೆಜ್ಜೆ ಹಾಕುವುದಕ್ಕೂ ಆಗ್ತಿಲ್ಲ.. ಕೆಲವೊಮ್ಮೆ ನಡೆಯುವಾಗಲೇ ಬಿದ್ದ ಉದಾಹರಣೆಗಳಿವೆ… ಈ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿದ್ದರೆ, ಅದು ನಿಮ್ಮ ಲಿವರ್‌ಗೆ (ಪಿತ್ತಜನಕಾಂಗ) ಸಂಬಂಧಿಸಿದ ಸಮಸ್ಯೆಯಾಗಿರಬಹುದು.

ತಜ್ಞರ ಪ್ರಕಾರ ಫ್ಯಾಟಿ ಲಿವರ್ ಸಮಸ್ಯೆ ಇದ್ದರೆ, ಅದು ತೀವ್ರ ಮಟ್ಟಕ್ಕೆ ತಲುಪಿದಾಗ ನಿಮ್ಮ ವಾಕಿಂಗ್ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆ ಎದುರಾದರೆ, ನಿಮ್ಮ ನಿತ್ಯದ ನಡಿಗೆಯಲ್ಲಿ ಬದಲಾವಣೆ ಆಗಲಿದೆ. ಸರಿಯಾಗಿ ನಡೆಯಲು ಬಾರದೆ, ವಿರೂಪಗೊಂಡ ರೀತಿಯಲ್ಲಿ ಹೆಜ್ಜೆ ಹಾಕಬೇಕಾಗುತ್ತದೆ. ಈ ಮಾರಣಾಂತಿಕ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಹೆಚ್ಚು ಶ್ರಮ ಪಡುವ ಅವಶ್ಯಕತೆಯಿಲ್ಲ. ಈ ಸರಳ ಕ್ರಮಗಳನ್ನು ಅನುಸರಿಸಿ.

ಯಕೃತ್ತು ನಮ್ಮ ದೇಹದ ಪ್ರಮುಖ ಅಂಗವಾಗಿದೆ. ಇದರ ಕಾರ್ಯವು ದೇಹದಲ್ಲಿನ ವಿಷವನ್ನು ನಿಯಂತ್ರಿಸುವುದು ಮತ್ತು ರಕ್ತದಲ್ಲಿನ ರಾಸಾಯನಿಕ ಮಟ್ಟವನ್ನು ಹಿಡಿತಕ್ಕೆ ತರುವುದು. ದೇಹದಲ್ಲಿನ ರಕ್ತವು ಹೊಟ್ಟೆ ಮತ್ತು ಕರುಳಿನ ಮೂಲಕ ಯಕೃತ್ತಿಗೆ ಹಾದುಹೋಗುತ್ತದೆ. ಹೀಗಿರುವ ಯಕೃತ್ತಿಗೆ ಕೊಬ್ಬಿನ ಸಮಸ್ಯೆ ಕಾಡುತ್ತದೆ. ಯಕೃತ್ತು ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ, ಹೆಚ್ಚುವರಿ ಕೊಬ್ಬು ಸಂಗ್ರಹವಾಗಿದೆ ಎಂದರ್ಥ.

ಕೊಬ್ಬು ತುಂಬಿದ ಲಿವರ್‌ಗೂ ನಿಮ್ಮ ನಡಿಗೆಗೂ ಏನು ಸಂಬಂಧ?

ನೀವು ಫ್ಯಾಟಿ ಲಿವರ್‌ ಹೊಂದಿದ್ದರೆ ಮತ್ತು ಅದು ತೀವ್ರ ಮಟ್ಟವನ್ನು ತಲುಪಿದರೆ, ಅದು ನಿಮ್ಮ ನಡಿಗೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳುತ್ತಾರೆ. ರೋಗಿಗಳು ಸರಿಯಾಗಿ ನಡೆಯಲು ಬಾರದ ಸ್ಥಿತಿಗೆ ತಲುಪುತ್ತಾರೆ.

ತಜ್ಞರು ಕೊಬ್ಬಿನ ಪಿತ್ತಜನಕಾಂಗವನ್ನು ಎರಡು ವರ್ಗಗಳಾಗಿ ವಿಂಗಡಿಸುತ್ತಾರೆ. ಆಲ್ಕೋಹಾಲಿಕ್‌ ಫ್ಯಾಟಿ ಲಿವರ್‌ (Alcoholic fatty liver) ಇನ್ನೊಂದು ನಾನ್‌ ಆಲ್ಕೋಹಾಲಿಕ್‌ ಫ್ಯಾಟಿ ಲಿವರ್‌ (Non-alcoholic fatty liver). ನಾನ್‌ ಆಲ್ಕೋಹಾಲಿಕ್‌ ಫ್ಯಾಟಿ ಲಿವರ್‌ ನರವೈಜ್ಞಾನಿಕ ಕಾಯಿಲೆಗಳಿಗೆ ಅಪಾಯಕಾರಿ ಅಂಶವಾಗಿದೆ ಎಂದು ವೈದ್ಯರು ಹೇಳುತ್ತಾರೆ. ಇದು ನಿಮ್ಮ ದೈನಂದಿನ ಚಟುವಟಿಕೆಗಳು, ನಿಮ್ಮ ನಡವಳಿಕೆ, ಮನಸ್ಥಿತಿ, ನಿದ್ರೆ ಮತ್ತು ನಿಮ್ಮ ನಡಿಗೆಯ ಮೇಲೆ ಪರಿಣಾಮ ಬೀರಬಹುದು. ನೀವು ನಡೆಯುವಾಗ ಯಾವುದೇ ಕಾರಣ ಇಲ್ಲದೆ ಬಿದ್ದರೆ ಅಥವಾ ನಿಮ್ಮ ನಡಿಗೆಯಲ್ಲಿ ಯಾವುದೇ ವಿರೂಪತೆ ಗಮನಿಸಿದರೆ, ನಿಮಗೆ ನಾನ್‌ ಆಲ್ಕೋಹಾಲಿಕ್‌ ಫ್ಯಾಟಿ ಲಿವರ್‌ ಕಾಯಿಲೆ ಇದೆ ಎಂದರ್ಥ. ಈ ನಡಿಗೆ ಅಸ್ವಸ್ಥತೆಯನ್ನು ವೈದ್ಯಕೀಯವಾಗಿ ಅಟಾಕ್ಸಿಯಾ ಎಂದು ಕರೆಯಲಾಗುತ್ತದೆ. ನಿಮ್ಮಲ್ಲಿ ಈ ಸಮಸ್ಯೆ ಕಂಡು ಬಂದರೆ ಈ ಕೂಡಲೇ ಸಂಬಂಧಿಸಿದ ವೈದ್ಯರನ್ನು ಸಂಪರ್ಕಿಸಿ.

ನಿಮ್ಮ ಯಕೃತ್ತಿನ ಆರೈಕೆಗಾಗಿ ಹೀಗೆ ಮಾಡಿ..

ತೂಕ ಕಡಿಮೆ ಮಾಡಿಕೊಳ್ಳಿ..

ನಿಮ್ಮ ದೇಹದ ತೂಕ ಅಧಿಕವಾಗಿದ್ದರೆ, ಅದು ನಿಮ್ಮ ಯಕೃತ್ತಿಗೂ ಸಮಸ್ಯೆ ಉಂಟು ಮಾಡುತ್ತದೆ. ಅಲ್ಲಿಯೂ ಕೊಬ್ಬು ಶೇಖರಣೆ ಆಗುತ್ತಿರುತ್ತದೆ. ಅಮೇರಿಕನ್ ಅಸೋಸಿಯೇಷನ್ ​​ಫಾರ್ ದಿ ಸ್ಟಡಿ ಆಫ್ ಲಿವರ್ ಡಿಸೀಸ್ ಪ್ರಕಾರ, ತೂಕ ಇಳಿಸಿಕೊಂಡರೆ, ಫ್ಯಾಟಿ ಲಿವರ್‌ ಸಮಸ್ಯೆಯೂ ಕಡಿಮೆ ಆಗಲಿದೆ.

ಹಣ್ಣು, ತರಕಾರಿ ಹೆಚ್ಚು ಸೇವಿಸಿ..

ಕೊಬ್ಬಿನ ಯಕೃತ್ತಿನ ಮತ್ತೊಂದು ಪ್ರಮುಖ ಕಾರಣವೆಂದರೆ ಅನಿಯಂತ್ರಿತ ಆಹಾರ ಪದ್ಧತಿ. ಎಣ್ಣೆಯಲ್ಲಿ ಕರಿದ ಆಹಾರಗಳು, ಮಸಾಲೆಯುಕ್ತ ಪದಾರ್ಥಗಳ ಸೇವನೆಯಿಂದ ದೇಹದಲ್ಲಿ ಕೊಬ್ಬು ಹೆಚ್ಚಾಗುತ್ತದೆ. ಹಾಗಾಗಿ ಸಾಧ್ಯವಾದಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನೇ ಸೇವಿಸಿ. ಇದು ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ದಿನಕ್ಕಿರಲಿ ಎರಡು ಕಪ್‌ ಕಾಫಿ

ವೈದ್ಯರ ಪ್ರಕಾರ, ಕಾಫಿ ಯಕೃತ್ತಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಕಿಣ್ವಗಳು ರೋಗವನ್ನು ತಡೆಯುತ್ತದೆ. ದಿನಕ್ಕೆ 2-3 ಕಪ್ ಕಾಫಿ ಯಕೃತ್ತಿನ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಹಾಲು ಹಾಕಿದ ಕಾಫಿಗಿಂತ ಕಪ್ಪು ಕಾಫಿ ಹೆಚ್ಚು ಪರಿಣಾಮಕಾರಿ.

ನಿಮ್ಮ ಆಹಾರದಲ್ಲಿರಲಿ ಒಮೆಗಾ -3 ಅಂಶ..

ಯಕೃತ್ತು ಆರೋಗ್ಯಕರವಾಗಿರಲು ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದನ್ನು ವೈದ್ಯರು ಶಿಫಾರಸು ಮಾಡುತ್ತಾರೆ. ಒಮೆಗಾ-3 ಕೊಬ್ಬಿನಾಮ್ಲಗಳು ಹೆಚ್ಚಿರುವ ಚಿಯಾ ಸೀಡ್ಸ್‌, ವಾಲ್‌ನೆಟ್‌, ಸೋಯಾ ಬೀನ್‌, ಎಲೆಕೋಸು, ಕುಂಬಳಕಾಯಿ ಬೀಜ, ಅಗಸೆ ಬೀಜ, ಮೊಟ್ಟೆ, ಮೀನನ್ನು ಆಹಾರದ ರೂಪದಲ್ಲಿ ಸೇವಿಸಬೇಕು.