ಕನ್ನಡ ಸುದ್ದಿ  /  Nation And-world  /  Adani Shares Overwhelmed Investors 3 19 Lakh Crore Rupees Wealth Melted In One Day

Adani stocks crash: ಒಂದೇ ಒಂದು ವರದಿಯಿಂದ ಹೂಡಿಕೆದಾರರನ್ನ ಮುಳುಗಿಸಿದ ಅದಾನಿ ಷೇರುಗಳು; ಕರಗಿತು 4.4 ಲಕ್ಷ ಕೋಟಿ ಸಂಪತ್ತು!

Adani stocks crash: ಅದಾನಿ ಸಮೂಹದ ಷೇರುಗಳು ಹೂಡಿಕೆದಾರರನ್ನು ಪಾತಾಳಕ್ಕೆ ಕುಸಿಯುವಂತೆ ಮಾಡಿವೆ. ಶುಕ್ರವಾರ ಒಂದೇ ಒಂದು ವಹಿವಾಟಿನಲ್ಲಿ ಹೂಡಿಕೆದಾರರು 3.19 ಲಕ್ಷ ಕೋಟಿ ರೂಪಾಯಿಗಳ ಸಂಪತ್ತು ಕರಗಿ ಹೋಗಿದೆ. ಒಟ್ಟಾರೆಯಾಗಿ 4.4 ಲಕ್ಷ ಕೋಟಿ ರೂಪಾಯಿಗಳ ಸಂಪತ್ತು ಕಳೆದು ಕೊಂಡಿದ್ದಾರೆ. ಇದಕ್ಕೆ ಕಾರಣ ಒಂದೇ ಒಂದು ವರದಿ.

ಅದಾನಿ ಸಮೂಹ ಸಂಸ್ಥೆ
ಅದಾನಿ ಸಮೂಹ ಸಂಸ್ಥೆ

ಮುಂಬೈ: ಒಂದೇ ಒಂದು ವರದಿಯ ಪರಿಣಾಮವಾಗಿ ಅದಾನಿ ಸಮೂಹದ ಷೇರುಗಳನ್ನು ಖರೀದಿಸಿದ್ದ ಹೂಡಿಕೆದಾರರು ಪಾತಾಳಕ್ಕೆ ಕುಸಿಯುವಂತೆ ಮಾಡಿದ್ದು, ಶುಕ್ರವಾರ ಒಂದೇ ದಿನ ಇವರ 3.19 ಲಕ್ಷ ಕೋಟಿ ರೂಪಾಯಿ ಸಂಪತ್ತು ಕರಗಿ ಹೋಗಿದೆ.

ಹಿಂಡೆನ್ ಬರ್ಗ್ ರಿಸರ್ಚ್ ಸೃಷ್ಟಿಸಿದ ಕೋಲಾಹಲದೊಂದಿಗೆ ದೇಶೀಯ ಷೇರುಪೇಟೆಯಲ್ಲಿ ಅದಾನಿ ಸಮೂಹದ ಷೇರುಗಳು ತೀವ್ರ ಕುಸಿತ ಕಂಡಿವೆ. ಶುಕ್ರವಾರದ ವಹಿವಾಟಿನಲ್ಲಿ ಅದಾನಿ ಸಮೂಹದ ಶೇರುಗಳು ಶೇ.5-20ರಷ್ಟು ನಷ್ಟ ಅನುಭವಿಸಿದವು.

ಕಳೆದ ಕೆಲ ದಿನಗಳಿಂದ ನಷ್ಟದಲ್ಲೇ ಸಾಗುತ್ತಿದ್ದ ಅದಾನಿ ಷೇರುಗಳು!

ಅಮೆರಿಕದ ಹಿಂಡೆನ್‌ಬರ್ಗ್ ರಿಸರ್ಚ್ ಹೂಡಿಕೆ ಸಂಸ್ಥೆಯು ಅದಾನಿ ಗ್ರೂಪ್‌ನ ಆರ್ಥಿಕ ಸ್ಥಿತಿಗತಿಗಳ ಕುರಿತು ಸಂಚಲನ ವರದಿಯನ್ನು ಬಿಡುಗಡೆ ಮಾಡಿತ್ತು. ಅದಾನಿ ಸಮೂಹದ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದು ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ ತನ್ನ ವರದಿಯಲ್ಲಿ ವಿವರಿಸಿದೆ.

ಎಲ್ಲವೂ ಸರಿಯಾಗಿದೆ ಎಂದು ಹೊರಜಗತ್ತಿಗೆ ತೋರಿಸಲು ಅದಾನಿ ಸಿಬ್ಬಂದಿ ತಪ್ಪು ದಾರಿಯಲ್ಲಿ ಹೆಜ್ಜೆ ಇಟ್ಟಿದ್ದಾರೆ ಎಂದು ಉಲ್ಲೇಖಿಸಿದೆ. ಇದರಿಂದಾಗಿ ಅದಾನಿ ಸಮೂಹವು ಅಲ್ಪ ಮಾರಾಟದ ಕಡೆ ನಿಲ್ಲಲಿದೆ ಎಂದು ಸ್ಪಷ್ಟಪಡಿಸಿದೆ.

ಈ ವರದಿ ಬೆನ್ನಲ್ಲೇ ಬುಧವಾರ ಕುಸಿದ ಅದಾನಿ ಷೇರುಗಳು ಶುಕ್ರವಾರ ಪಾತಾಳಕ್ಕೆ ತಲುಪಿದವು. ಅದಾನಿ ಗ್ರೂಪ್‌ನ 10 ಸಂಸ್ಥೆಗಳ ಷೇರುಗಳಲ್ಲಿ 6 ಲೋವರ್ ಸರ್ಕ್ಯೂಟ್‌ಗೆ ತಲುಪಿವೆ. ಆ ನಂತರ ಇವುಗಳಲ್ಲಿ ಕೆಲವು ಸ್ವಲ್ಪಮಟ್ಟಿಗೆ ಚೇತರಿಕೆ ಕಂಡವು.

ಪ್ರೈಸ್ ಬ್ಯಾಂಡ್ ಹೊಂದಿರದ ಅದಾನಿ ಎಂಟರ್ ಪ್ರೈಸಸ್, ಅದಾನಿ ಪೋರ್ಟ್ಸ್, ಅಂಬುಜಾ ಸಿಮೆಂಟ್ಸ್ ಮತ್ತು ಎಸಿಸಿ ಷೇರುಗಳು ಶೇ.12-18ರಷ್ಟು ಕುಸಿದಿವೆ.

ಅದಾನಿ ಗ್ರೂಪ್ ಎಫೆಕ್ಟ್.. ಇಡೀ ಷೇರುಪೇಟೆಯಲ್ಲಿ ನೆಗೆಟೀವ್ ಫಲಿತಾಂಶ

ಶುಕ್ರವಾರದ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ 874 ಅಂಕ ಕಳೆದುಕೊಂಡು 59,331ಕ್ಕೆ ತಲುಪಿದರೆ, ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ-50 288 ಅಂಕಗಳ ನಷ್ಟದೊಂದಿಗೆ 17,604 ನಲ್ಲಿ ಕೊನೆಗೊಂಡಿತು.

ಅದಾನಿ ಗ್ರೂಪ್‌ಗೆ ಸಾಲ ನೀಡಿರುವ ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಬ್ಯಾಂಕ್‌ಗಳಿಗೆ ಸಂಬಂಧಿಸಿದ ಷೇರುಗಳು ಕೂಡ ಭಾರೀ ಪ್ರಮಾಣದಲ್ಲಿ ಕುಸಿದಿವೆ! ಬ್ಯಾಂಕ್ ನಿಫ್ಟಿ ಶೇ.3.1ರಷ್ಟು ಕುಸಿದು 40,345ಕ್ಕೆ ತಲುಪಿದೆ.

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ 7ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದರ ಜೊತೆಗೆ ಏಷ್ಯಾದಲ್ಲೇ ನಂಬರ್ ಒನ್ ಶ್ರೀಮಂತ ಎಂಬ ಸ್ಥಾನವನ್ನೂ ಕಳೆದುಕೊಂಡಿದ್ದಾರೆ. ಇದೀಗ ಆ ಸ್ಥಾನವನ್ನು ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖೇಶ್ ಅಂಬಾನಿ ಪಾಲಾಗಿದೆ.

ಒಂದು ವರ್ಷದ ಹಿಂದಷ್ಟೇ ಏಷ್ಯಾದ ನಂಬರ್ 1 ಸ್ಥಾನದಲ್ಲಿದ್ದ ಅಂಬಾನಿಯನ್ನು ಅದಾನಿ ಹಿಂದಕ್ಕೆ ತಳ್ಳಿದ್ದರು. ಇದೀಗ ಷೇರುಪೇಟೆಯಲ್ಲಿ ತಮ್ಮ ಸಮೂಹ ಸಂಸ್ಥೆಗಳ ಷೇರು ಮೌಲ್ಯ ಭಾರಿ ಕುಸಿತದ ಪರಿಣಾಮ ಅವರು ನಂಬರ್ ಸ್ಥಾನವನ್ನು ಕಳೆದುಕೊಂಡಿದ್ದಾರೆ.

ಅದಾನಿ ಸಮೂಹದ ಷೇರುಗಳ ಮೌಲ್ಯ ಭಾರಿ ಕುಸಿತದಿಂದಾಗಿ ಶುಕ್ರವಾರ ಹೂಡಿಕೆದಾರರ ಸಂಪತ್ತು 3.9 ಲಕ್ಷ ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ. ಬುಧವಾರದ ನಷ್ಟವೂ ಸೇರಿಸಿದರೆ ಷೇರುದಾರರ ಒಟ್ಟು 4.4 ಲಕ್ಷ ಕೋಟಿ ರೂಪಾಯಿಗಳ ಸಂಪತ್ತು ಕರಗಿದಂತಾಗಿದೆ.

ಈಗ ಪರಿಸ್ಥಿತಿ ಏನು?

ಹಿಂಡೆನ್‌ಬರ್ಗ್ ರಿಸರ್ಚ್ ವರದಿ ನಿರಾಕರಿಸಿದ ಅದಾನಿ: ಅದಾನಿ ಗ್ರೂಪ್ ಈಗಾಗಲೇ ಹಿಂಡೆನ್‌ಬರ್ಗ್ ಸಂಶೋಧನಾ ವರದಿಯನ್ನು ನಿರಾಕರಿಸಿದೆ. ಆದರೆ ಷೇರುಪೇಟೆಯಲ್ಲಿ ಅನುಮಾನಗಳು ಮುಂದುವರಿದಿವೆ. ಇದರ ಬೆನ್ನಲ್ಲೇ ಅದಾನಿ ಸಿಬ್ಬಂದಿ ಮತ್ತೊಂದು ಘೋಷಣೆ ಮಾಡಿದ್ದಾರೆ.

ದೇಶದ 6 ದೊಡ್ಡ ಸಂಸ್ಥೆಗಳಿಂದ ತಮ್ಮ ಸಂಸ್ಥೆಯ ಹಣಕಾಸು ವ್ಯವಸ್ಥೆಯನ್ನು ಆಡಿಟ್ ಮಾಡಲಾಗಿದೆ ಎಂದು ಹೇಳಲಾಗಿದೆ. ಆರ್ಥಿಕವಾಗಿ ಸಂಸ್ಥೆಗಳು ಆರೋಗ್ಯವಾಗಿವೆ ಎಂದು ವಿವರಿಸಿದ್ದಾರೆ.

ಈ ಬಗ್ಗೆ ಸೆಬಿ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಅದಾನಿ ಗ್ರೂಪ್‌ ಈ ವಿಷಯದ ಬಗ್ಗೆ ಸ್ಪಷ್ಟತೆ ನೀಡಬೇಕು. ಆ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

IPL_Entry_Point