ಕನ್ನಡ ಸುದ್ದಿ  /  Nation And-world  /  Bjp's Khushbu Sundar Nominated As Member Of National Commission For Women

Khushbu Sundar: ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆರಾಗಿ ಬಿಜೆಪಿಯ ಖುಷ್ಬೂ ಸುಂದರ್ ನಾಮನಿರ್ದೇಶನ

ರಾಜಕಾರಣಿಯಾಗಿ ಬದಲಾಗಿದ್ದ ತಮಿಳುನಾಡಿನ ನಟಿ ಖುಷ್ಬೂ ಸುಂದರ್‌ (Khushbu Sundar) ಇದೀಗ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ. ಇವರು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ.

Khushbu Sundar
Khushbu Sundar (PTI)

ನವದೆಹಲಿ: ರಾಜಕಾರಣಿಯಾಗಿ ಬದಲಾಗಿದ್ದ ತಮಿಳುನಾಡಿನ ನಟಿ ಖುಷ್ಬೂ ಸುಂದರ್‌ (Khushbu Sundar) ಇದೀಗ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ. ಇವರು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿ ನಾಮನಿರ್ದೇಶನಗೊಂಡಿರುವ ಖುಷ್ಬೂ ಅವರನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅಭಿನಂದಿಸಿದ್ದಾರೆ.

ಖುಷ್ಬೂ ಅವರ ನೇಮಕವು ಮಹಿಳೆಯರ ಹಕ್ಕುಗಳಿಗಾಗಿ "ಅವಿರತ ಹೋರಾಟ ಮಾಡಿರುವುದಕ್ಕೆ ದೊರಕಿರುವ ಮನ್ನಣೆಯಾಗಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ.

"ಇಂತಹ ದೊಡ್ಡ ಜವಾಬ್ದಾರಿಯನ್ನು ನನಗೆ ವಹಿಸಿದ್ದಕ್ಕಾಗಿ ನಾನು ನಮ್ಮ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ಮತ್ತು ಭಾರತ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ. ಜೈಹಿಂದ್‌" ಖುಷ್ಬೂ ಸುಂದರ್ ಟ್ವೀಟ್ ಮಾಡಿದ್ದಾರೆ.

ಖುಷ್ಬೂ ಸುಂದರ್ ಅವರು ರಾಜಕೀಯಕ್ಕೆ ಬರುವ ಮೊದಲು ಸಿನಿಮಾ ನಟಿಯಾಗಿ ಜನಪ್ರಿಯತೆ ಪಡೆದಿದ್ದಾರೆ. ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಇವರು ನಟಿಸಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗ ( ಎನ್‌ಸಿಡಬ್ಲ್ಯೂ )ವು ಭಾರತ ಸರ್ಕಾರದ ಒಂದು ಶಾಸನಬದ್ಧ ಅಂಗ ಸಂಸ್ಥೆವಾಗಿದೆ, ಸಾಮಾನ್ಯವಾಗಿ ಮಹಿಳೆಯರ ಮೇಲೆ ಪ್ರಭಾವ ಬೀರುವ ಎಲ್ಲಾ ನೀತಿ ವಿಷಯಗಳ ಬಗ್ಗೆ ಈ ಆಯೋಗವು ಸರ್ಕಾರಕ್ಕೆ ಸಲಹೆ ನೀಡುತ್ತದೆ. 1990 ರ ನ್ಯಾಷನಲ್ ಕಮಿಷನ್ ಫಾರ್ ವುಮೆನ್ ಆಕ್ಟ್‌ ಅಲ್ಲಿ ವ್ಯಾಖ್ಯಾನಿಸಿದಂತೆ ಇದು ಭಾರತೀಯ ಸಂವಿಧಾನದ ನಿಬಂಧನೆಗಳಡಿಯಲ್ಲಿ ಜನವರಿ 1992 ರಲ್ಲಿ ಸ್ಥಾಪಿಸಲ್ಪಟ್ಟಿತು. ಆಯೋಗದ ಮೊದಲ ಮುಖ್ಯಸ್ಥ ಜಯಂತಿ ಪಟ್ನಾಯಕ್ .

ಮಹಿಳೆಯರ ಹಕ್ಕುಗಳನ್ನು ರಕ್ಷಿಸುವುದು, ಅವರ ಸಮಸ್ಯೆಗಳ ಕುರಿತು ಧ್ವನಿ ಎತ್ತುವುದು, ವರದಕ್ಷಿಣಿ, ರಾಜಕೀಯ, ಧರ್ಮ ಮತ್ತು ಉದ್ಯೋಗಗಳಲ್ಲಿ ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯ ದೊರಕುವಂತೆ ಮಾಡುವುದು, ಕಾರ್ಮಿಕ ಮಹಿಳೆಯರ ಶೋಷಣೆ ತಪ್ಪಿಸುವುದು ಇತ್ಯಾದಿ ಹಲವು ಕಾರ್ಯಗಳನ್ನು ಮಾಡುವ ಉದ್ದೇಶದಿಂದ ಮಹಿಳಾ ಆಯೋಗವನ್ನು ಸ್ಥಾಪಿಸಲಾಗಿದೆ.

ಇಂದಿನ ಇತರ ಸುದ್ದಿಗಳು

ಪ್ರಶ್ನೆಪತ್ರಿಕೆ ಸೋರಿಕೆ ವದಂತಿ ಕುರಿತು ಎಚ್ಚರಿಕೆ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯ 10 ನೇ ತರಗತಿ ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಈಗಾಗಲೇ ಆರಂಭಗೊಂಡಿವೆ. ಈ ಪರೀಕ್ಷೆ ಕುರಿತು ತಪ್ಪು ಮಾಹಿತಿಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವುದನ್ನು ಸಿಬಿಎಸ್‌ಇ ಗಮನಿಸಿದ್ದು, ಸುಳ್ಳುಸುದ್ದಿಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ. ವಿಶೇಷವಾಗಿ ಸಿಬಿಎಸ್‌ಸಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ವದಂತಿ ಹರಡುವ ವಿದ್ಯಾರ್ಥಿಗಳು ಮತ್ತು ಇತರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಎಚ್ಚರಿಕೆ ನೀಡಿದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಟೋಲ್‌ ಶುಲ್ಕ ಎಷ್ಟು?: ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸುವವರು ಇಂದಿನಿಂದ ಟೋಲ್‌ ಶುಲ್ಕ ಪಾವತಿಸಬೇಕಾಗುತ್ತದೆ. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸುವ ವಾಹನಗಳು ಇನ್ನು ಟೋಲ್‌ ಶುಲ್ಕ ಪಾವತಿಸಬೇಕು ಎಂದು ಘೋಷಿಸಿತ್ತು. ಯಾವ ವಾಹನಕ್ಕೆ ಎಷ್ಟು ಶುಲ್ಕ ಎಂಬ ಮಾಹಿತಿ ಇಲ್ಲಿದೆ.

ಶಾಲೆಗೆ ಹೋಗುವ ಹೆಣ್ಣು ಮಕ್ಕಳಿಗೆ ವಿಷಪ್ರಾಶನ ಮಾಡುತ್ತಿದ್ದಾರಂತೆ ಕಟುಕರು: ಇರಾನ್‌ನಲ್ಲಿ ಇಸ್ಲಾಂ ಮೂಲಭೂತವಾದಿಗಳ ಅಟ್ಟಹಾಸ ಇನ್ನೊಂದು ಮಟ್ಟಕ್ಕೆ ಹೋಗಿದೆ. ಈಗಾಗಲೇ ಹಿಜಾಬ್‌ ಪ್ರತಿಭಟನೆಯ ಮೂಲಕ ಜಗತ್ತಿನ ಗಮನ ಸೆಳೆದಿರುವ ಇರಾನ್‌ನಲ್ಲೀಗ ಹೆಣ್ಣುಮಕ್ಕಳು ಶಾಲೆಗೆ ಹೋಗದಂತೆ ತಡೆಯಲು ಶಾಲಾ ವಿದ್ಯಾರ್ಥಿನಿಯರಿಗೆ ವಿಶಪ್ರಾಶನ ಮಾಡುತ್ತಿರುವಂತಹ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಕುರಿತ ವರದಿ ಇಲ್ಲಿದೆ.

IPL_Entry_Point