ಕನ್ನಡ ಸುದ್ದಿ  /  Nation And-world  /  Business News 14 Days Holiday For Banks In Month Of April Including Karnataka State Wise Details Rmy

Bank Holidays: ಏಪ್ರಿಲ್ ತಿಂಗಳಲ್ಲಿ ಬ್ಯಾಂಕ್‌ಗಳಿಗೆ 14 ದಿನ ರಜೆ; ಕರ್ನಾಟಕ ಸೇರಿ ಯಾವ ರಾಜ್ಯದಲ್ಲಿ ಎಷ್ಟುದಿನ, ಇಲ್ಲಿದೆ ವಿವರ

Bank Holidays: ಏಪ್ರಿಲ್‌ನಲ್ಲಿ ಒಟ್ಟು 14 ದಿನ ಬ್ಯಾಂಕ್‌ಗಳಿಗೆ ರಜೆ ಇದೆ. ನಿಮ್ಮ ಸುಗಮ ವಹಿವಾಟಿಗಾಗಿ ಮುಂದಿನ ತಿಂಗಳು ಯಾವೆಲ್ಲಾ ದಿನ ಬ್ಯಾಂಕ್ ಕ್ಲೋಸ್ ಆಗರಿಲಿದೆ ಎಂಬುದನ್ನ ತಿಳಿಯುವುದು ಮುಖ್ಯ. ರಾಜ್ಯವಾರು ಮಾಹಿತಿ ಇಲ್ಲಿದೆ.

2024 ರ ಏಪ್ರಿಲ್‌ನಲ್ಲಿ ಒಟ್ಟು 14 ದಿನ ಬ್ಯಾಂಕ್‌ಗಳಿಗೆ ರಜೆಗಳಿರುತ್ತವೆ. ಕರ್ನಾಟಕ ಸೇರಿ ಯಾವ ರಾಜ್ಯದಲ್ಲಿ ಎಷ್ಟು ದಿನ ಬ್ಯಾಂಕ್‌ಗಳಿಗೆ ರಜೆ ಅನ್ನೋದರ ವಿವರ ಇಲ್ಲಿ ನೀಡಲಾಗಿದೆ. (HT Photo)
2024 ರ ಏಪ್ರಿಲ್‌ನಲ್ಲಿ ಒಟ್ಟು 14 ದಿನ ಬ್ಯಾಂಕ್‌ಗಳಿಗೆ ರಜೆಗಳಿರುತ್ತವೆ. ಕರ್ನಾಟಕ ಸೇರಿ ಯಾವ ರಾಜ್ಯದಲ್ಲಿ ಎಷ್ಟು ದಿನ ಬ್ಯಾಂಕ್‌ಗಳಿಗೆ ರಜೆ ಅನ್ನೋದರ ವಿವರ ಇಲ್ಲಿ ನೀಡಲಾಗಿದೆ. (HT Photo)

ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರಕಾರ ಮುಂದಿನ ತಿಂಗಳು ಏಪ್ರಿಲ್‌ನಲ್ಲಿ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ವಿವಿಧ ರಾಜ್ಯಗಳಲ್ಲಿ ಆಚರಿಸುವ ಧಾರ್ಮಿಕ ಹಬ್ಬಗಳು ಸೇರಿದಂತೆ ಬ್ಯಾಂಕ್‌ಗಳಿಗೆ ಒಟ್ಟು 14 ದಿನ ರಜೆಗಳಿವೆ. ಏಪ್ರಿಲ್‌ನಲ್ಲಿ (April Bank Holidays) ನಿಮ್ಮ ಬ್ಯಾಂಕ್‌ ವ್ಯವಹಾರವನ್ನು ಸುಗಮವಾಗಿಸಿಕೊಳ್ಳಲು ಆ ತಿಂಗಳಲ್ಲಿ ಎಷ್ಟು ದಿನ ಬ್ಯಾಂಕ್‌ ತೆರೆಯಲಿದೆ, ಎಷ್ಟು ದಿನ ಮುಚ್ಚಲ್ಪಟ್ಟಿರುತ್ತದೆ ಎಂಬುದನ್ನು ತಿಳಿಯುವುದು ಬಹಳ ಮುಖ್ಯ. ಇಲ್ಲದಿದ್ದರೆ ಖುದ್ದು ಬ್ಯಾಂಕ್‌ಗೆ ಭೇಟಿ ನೀಡಿ ನೀವು ನಡೆಸಬೇಕಾದ ವಹಿವಾಟಿನ ಮೇಲೆ ಇದು ನೇರ ಪರಿಣಾಮ ಬೀರುತ್ತದೆ.

ವಾರ್ಷಿಕ ಖಾತೆಗಳ ಕ್ಲೋಸಿಂಗ್, ಬಾಬು ಜಗಜ್ಜೀನವ್ ರಾಮ್ ಹುಟ್ಟುಹಬ್ಬ, ಅಂಬೇಡ್ಕರ್ ಜಯಂತಿ, ಯುಗಾದಿ ಹಾಗೂ ರಂಜಾನ್ ಸೇರಿದಂತೆ ಹಲವು ವಿಶೇಷ ದಿನಗಳಂದು ಬ್ಯಾಂಕ್‌ಗಳು ಮುಚ್ಚಲ್ಪಟ್ಟಿರುತ್ತವೆ. ಈ ಬಾರಿ ಡಾ ಬಿಆರ್ ಅಂಬೇಡ್ಕರ್ ಜಯಂತಿ ಭಾನುವಾರ ಬಂದಿದೆ. ಈ ವಿಶೇಷ ದಿನಗಳಂದು ನೇರ ಬ್ಯಾಂಕ್ ವ್ಯವಹಾರಗಳಿಗೆ ಯಾವುದೇ ರೀತಿಯಲ್ಲೂ ಅವಕಾಶ ಇರುವುದಿಲ್ಲ. ಆದರೆ ಆನ್‌ಲೈನ್ ವ್ಯವಹಾರ ಎಂದಿನಂತೆ ಇರಲಿದೆ.

ಏಪ್ರಿಲ್‌ನಲ್ಲಿ ಬ್ಯಾಂಕ್ ರಾಜಾದಿಗಳು ರಾಜ್ಯವಾರು ಪಟ್ಟಿ ಇಲ್ಲಿದೆ

ಏಪ್ರಿಲ್ 1 (ಸೋಮವಾರ): ಬ್ಯಾಂಕ್‌ಗಳು ತಮ್ಮ ವಾರ್ಷಿಕ ಖಾತೆಗಳನ್ನು ಮುಚ್ಚುವ ಸಲುವಾಗಿ ಅಂದು ಮಿಜೋರಾಂ, ಚಂಡೀಗಢ, ಬಂಗಾಳ, ಹಿಮಾಚಲ ಪ್ರದೇಶ, ಮೇಘಾಲಯವನ್ನು ಹೊರತುಪಡಿಸಿ ಉಳಿದಂತೆ ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

ಏಪ್ರಿಲ್ 5 (ಶುಕ್ರವಾರ): ಬಾಬು ಜಗಜೀವನ್ ರಾಮ್ ಅವರ ಜನ್ಮ ದಿನ ಜಮಾತ್-ಉಲ್-ವಿದಾ. ತೆಲಂಗಾಣ, ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳಿಗೆ ರಜೆ

ಏಪ್ರಿಲ್ 9 (ಮಂಗಳವಾರ): ದುಧಿ ಪಡ್ವಾ/ಯುಗಾದಿ/ತೆಲುಗು ಹೊಸ ವರ್ಷದ ದಿನ/ ಸಜಿಬು ನೋಂಗ್ಮಪನ್ಬ (ಚೀರಾಬಾ), 1ನೇ ನವರಾತ್ರಿ ಹಿನ್ನೆಲೆಯಲ್ಲಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಮಣಿಪುರ ಹಾಗೂ ಗೋವಾ, ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

ಏಪ್ರಿಲ್ 10 (ಬುಧವಾರ): ರಂಜಾನ್-ಐದ್ (ಈದ್-ಉಲ್-ಫಿತರ್) ಕೇರಳದಲ್ಲಿ ಬ್ಯಾಂಕ್‌ಗಳಿಗೆ ರಜೆ

ಏಪ್ರಿಲ್ 11 (ಗುರುವಾರ): ರಂಜಾನ್-ಐದ್ (ಈದ್-ಉಲ್-ಫಿತರ್) (1ನೇ ಶಾವಾಲ್) ಸಾರ್ವಜನಿಕ ರಜಾದಿನವಾಗಿದ್ದು ಬ್ಯಾಂಕ್‌ಗಳು ಮುಚ್ಚಲ್ಪಟ್ಟಿರುತ್ತವೆ. ಆದರೆ ಚಂಡೀಗಢ, ಸಿಕ್ಕಿಂ, ಕೇರಳ ಹಾಗೂ ಹಿಮಾಚಲ ಪ್ರದೇಶದಲ್ಲಿ ಬ್ಯಾಂಕ್‌ಗಳು ತೆರೆದಿರುತ್ತವೆ.

ಏಪ್ರಿಲ್ 13 (2ನೇ ಶನಿವಾರ): ಬ್ಯಾಂಕ್‌ಗಳು ಮುಚ್ಚಲ್ಪಟ್ಟಿರುತ್ತವೆ

ಏಪ್ರಿಲ್ 15 (ಸೋಮವಾರ): ಬೋಹಾಗ್ ಬಿಹು/ಹಿಮಾಚಲ ದಿನ ಕಾರಣ ಅಸ್ಸಾಂ ಮತ್ತು ಹಿಮಾಚಾಲ ಪ್ರದೇಶದಲ್ಲಿ ಬ್ಯಾಂಕ್‌ಗಳು ಕ್ಲೋಸ್ ಆಗಿರುತ್ತವೆ.

ಏಪ್ರಿಲ್ 16 (ಮಂಗಳವಾರ): ಶ್ರೀರಾಮ ನವಮಿ (ತೈತೆ ದಸೈನ್: ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಒರಿಸ್ಸಾ, ಚಂಡೀಗಢ, ಆಂಧ್ರ ಪ್ರದೇಶ, ತೆಲಂಗಾಣ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಹಿಮಾಚಲ ಪ್ರದೇಶದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

ಏಪ್ರಿಲ್ 16 (ಶನಿವಾರ): ಗರಿಯಾ ಪೂಜೆ: ತ್ರಿಪುರಾದಲ್ಲಿ ಬ್ಯಾಂಕ್‌ಗಳಿಗೆ ರಜೆ

ಏಪ್ರಿಲ್ 7, 14 ( ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ), 21, 28 ಭಾನುವಾರ ಆಗಿದ್ದು, ಏಪ್ರಿಲ್ 13 ಮತ್ತು 27 ರಂದು ಎರಡು ಮತ್ತು ನಾಲ್ಕನೇ ಶನಿವಾರದ ಕಾರಣ ಈ ದಿನಗಳಂದು ಬ್ಯಾಂಕ್ ವಹಿವಾಟುಗಳು ಇರುವುದಿಲ್ಲ. ಈ ಮೇಲೆ ತಿಳಿಸಿರುವ ಎಲ್ಲಾ ದಿನಗಳು ಬ್ಯಾಂಕ್‌ಗಳಲ್ಲಿ ನೇರ ವ್ಯವಾಹರ ಇರುವುದಿಲ್ಲ. ಆದರೆ ಡಿಜಿಟಲ್ ವ್ಯವಹಾರಗಳು ಎಂದಿನಂತೆ ಇರಲಿವೆ. ನೀವು ಎಟಿಎಂನಲ್ಲಿ ಹಣವನ್ನು ಡೆಪಾಸಿಟ್, ವಿತ್‌ಡ್ರಾ ಮಾಡಬಹುದು. ಆನ್‌ಲೈನ್ ಪೇಮೆಂಟ್‌ಗಳನ್ನು ಮಾಡಬಹುದು.

IPL_Entry_Point