ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Multibagger Stock: ಮೊದಲ ತ್ರೈಮಾಸಿಕ ಫಲಿತಾಂಶದ ಬಳಿಕ ಅಪ್ಪರ್‌ ಸರ್ಕಿಟ್‌ ತಲುಪಿದ ಮಲ್ಟಿಬ್ಯಾಗರ್‌ ಷೇರು, ಒಂದೇ ಷೇರು ಶೇ 1350ರಷ್ಟು ನೆಗೆತ

Multibagger stock: ಮೊದಲ ತ್ರೈಮಾಸಿಕ ಫಲಿತಾಂಶದ ಬಳಿಕ ಅಪ್ಪರ್‌ ಸರ್ಕಿಟ್‌ ತಲುಪಿದ ಮಲ್ಟಿಬ್ಯಾಗರ್‌ ಷೇರು, ಒಂದೇ ಷೇರು ಶೇ 1350ರಷ್ಟು ನೆಗೆತ

Multibagger small-cap stock: ಭಾರತೀಯ ಷೇರುಪೇಟೆಯಲ್ಲಿ 2023ರಲ್ಲಿ Servotech Power Systems ಎಂಬ ಕಂಪನಿಯ ಷೇರು ಮಲ್ಟಿಬ್ಯಾಗರ್‌ ಷೇರು ಆಗಿದೆ. ಈ ಮಲ್ಟಿ ಬ್ಯಾಗರ್‌ ಸ್ಮಾಲ್‌ ಕ್ಯಾಪ್‌ ಷೇರು ಶೇಕಡ 430 ರಿಟರ್ನ್‌ ತಂದುಕೊಟ್ಟಿದೆ.

Multibagger stock: ಮೊದಲ ತ್ರೈಮಾಸಿಕ ಫಲಿತಾಂಶದ ಬಳಿಕ ಅಪ್ಪರ್‌ ಸರ್ಕಿಟ್‌ ತಲುಪಿದ ಮಲ್ಟಿಬ್ಯಾಗರ್‌ ಷೇರು, ಒಂದೇ ಷೇರು ಶೇ 1350ರಷ್ಟು ನೆಗೆತ
Multibagger stock: ಮೊದಲ ತ್ರೈಮಾಸಿಕ ಫಲಿತಾಂಶದ ಬಳಿಕ ಅಪ್ಪರ್‌ ಸರ್ಕಿಟ್‌ ತಲುಪಿದ ಮಲ್ಟಿಬ್ಯಾಗರ್‌ ಷೇರು, ಒಂದೇ ಷೇರು ಶೇ 1350ರಷ್ಟು ನೆಗೆತ

Multibagger stock: ಭಾರತೀಯ ಷೇರುಪೇಟೆಯಲ್ಲಿ 2023ರಲ್ಲಿ Servotech Power Systems ಎಂಬ ಕಂಪನಿಯ ಷೇರು ಮಲ್ಟಿಬ್ಯಾಗರ್‌ ಷೇರು ಆಗಿದೆ. ಈ ಮಲ್ಟಿ ಬ್ಯಾಗರ್‌ ಸ್ಮಾಲ್‌ ಕ್ಯಾಪ್‌ ಷೇರು ಶೇಕಡ 430 ರಿಟರ್ನ್‌ ತಂದುಕೊಟ್ಟಿದೆ. ಅಂದರೆ ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ ಇಷ್ಟೊಂದು ಲಾಭ ತಂದುಕೊಟ್ಟಿದೆ. ಕಳೆದ ಒಂದು ವರ್ಷದಲ್ಲಿ ಇದು ಷೇರು ಖರೀದಿದಾರರಿಗೆ ಶೇಕಡ 1,350ರಷ್ಟು ಲಾಭ ತಂದುಕೊಟ್ಟಿದೆ. ಆದರೆ, ಈ ಮಲ್ಟಿ ಬ್ಯಾಗರ್‌ ಸಣ್ಣ ಬಂಡವಾಳದ ಷೇರು ಇನ್ನಷ್ಟು ನೆಗೆತ ಕಾಣುವ ನಿರೀಕ್ಷೆಯಿದೆ. ಈ ಷೇರು ಇಂದು ಎನ್‌ಎಸ್‌ಇಯಲ್ಲಿ ಷೇರುಮಾರುಕಟ್ಟೆ ಓಪನಿಂಗ್‌ ಬೆಲ್‌ ಸಮಯದಲ್ಲಿ ಅಪ್ಪರ್‌ ಸರ್ಕಿಟ್‌ ತಲುಪಿತ್ತು. ಓಪನಿಂಗ್‌ ಬೆಲ್‌ ಆದ ಕೆಲವೇ ನಿಮಿಷದಲ್ಲಿ ಶೇಕಡ 5ರಷ್ಟು ಅಪ್ಪರ್‌ ಸರ್ಕಟ್‌ ತಲುಪಿದೆ. ಶುಕ್ರವಾರದ ವಹಿವಾಟಿನಲ್ಲೂ ಈ ಷೇರು ಅಪ್ಪರ್‌ ಸರ್ಕಿಟ್‌ ತಲುಪಿತ್ತು.

ಟ್ರೆಂಡಿಂಗ್​ ಸುದ್ದಿ

2023ರ ಮೊದಲ ತ್ರೈಮಾಸಿಕದ ಫಲಿತಾಂಶ ಪ್ರಕಟಿಸಿದ ಬಳಿಕ ಈ ಮಲ್ಟಿಬ್ಯಾಗರ್‌ ಷೇರಿಗೆ ಬೇಡಿಕೆ ಹೆಚ್ಚಾಯಿತು. ಕಳೆದ ವಾರ ಶುಕ್ರವಾರ ಸರ್ವೊಟೆಕ್‌ ಪವರ್‌ ಸಿಸ್ಟಮ್ಸ್‌ ತನ್ನ ಫಲಿತಾಂಶ ಪ್ರಕಟಿಸಿತ್ತು. ಕಂಪನಿಯು 68.4 ಕೋಟಿ ರೂಪಾಯಿ ಒಟ್ಟು ಆದಾಯ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯ ಆದಾಯ 30.35 ಕೋಟಿ ರೂಪಾಯಿ ಆಗಿತ್ತು. ಕಂಪನಿಯು ವರ್ಷದಿಂದ ವರ್ಷಕ್ಕೆ ಶೇಕಡ 93.50 ಲಾಭ ಗಳಿಸಿದಂತಾಗಿದೆ.

ಕಳೆದ ಒಂದು ತಿಂಗಳಲ್ಲಿ ಈ ಮಲ್ಟಿ ಬ್ಯಾಗ್‌ ಷೇರು ಒಂದು ವರ್ಷದ ಅವಧಿಗೆ ಹೋಲಿಸಿದರೆ ಶೇಕಡ 4.50ರಷ್ಟು ಹೆಚ್ಚಳವಾಗಿದೆ. ಅಂದರೆ ಒಂದು ಷೇರಿನ ದರ 32.40 ರೂ. ಇದ್ದದ್ದು ಈಗ 171.65 ರೂಪಾಯಿಗೆ ತಲುಪಿದೆ. ಒಟ್ಟಾರೆ ಶೇಕಡ 430ರಷ್ಟು ಏರಿಕೆ ಕಂಡಿದೆ. ಕಳೆದ ಆರು ತಿಂಗಳಲ್ಲಿ ಈ ಮಲ್ಟಿಬ್ಯಾಗರ್‌ ಷೇರು ಪ್ರತಿಷೇರಿಗೆ 40.20 ರೂ.ನಿಂದ 171.65 ರೂ.ಗೆ ನೆಗೆದಿದೆ. ಈ ಅವಧಿಯಲ್ಲಿ ಶೇಕಡ 325ರಷ್ಟು ಏರಿಕೆ ಕಂಡಿದೆ.

ಸೋಮವಾರ ಸತತ ಎರಡನೇ ಸೆಷನ್‌ನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನಿವ್ವಳ ಮಾರಾಟಗಾರರಾಗಿ ಉಳಿದಿದ್ದಾರೆ, ನಿವ್ವಳ ಆಧಾರದ ಮೇಲೆ 829.6 ದಶಲಕ್ಷ ರೂಪಾಯಿ (10.1 ದಶಲಕ್ಷ ಡಾಲರ್‌) ಭಾರತೀಯ ಷೇರುಗಳನ್ನು ಆಫ್‌ಲೋಡ್ ಮಾಡಿದ್ದಾರೆ. ಇದೇ ಸಮಯದಲ್ಲಿ ದೇಶೀಯ ಹೂಡಿಕೆದಾರರು 9.35 ಶತಕೋಟಿ ರೂಪಾಯಿ ಷೇರುಗಳನ್ನು ಖರೀದಿಸಿದ್ದಾರೆ.

ಸಿಂಗಾಪುರ ಎನ್‌ಎಸ್‌ಇಯಿಂದ ಭಾರತದ ಸ್ವಂತ ಗಿಫ್ಟ್‌ ನಿಫ್ಟಿ

ಭಾರತದ ಷೇರುಪೇಟೆ ಬೆಳಗ್ಗೆ 9 ಗಂಟೆಗೆ ಬೆಲ್‌ ಹೊಡೆದರೂ ಷೇರು ಹೂಡಿಕೆದಾರರಿಗೆ ಇಂದಿನ ಆರಂಭ ಗ್ರೀನ್‌ ಅಥವಾ ರೆಡ್‌ ಎಂಬ ಮಾಹಿತಿಯನ್ನು ಎಸ್‌ಜಿಎಕ್ಸ್‌ ನಿಫ್ಟಿ ನೀಡುತ್ತಿತ್ತು. ಅಂದರೆ, ಸಿಂಗಾಪುರ ಷೇರುಪೇಟೆಯಲ್ಲಿ ಲಿಸ್ಟ್‌ ಆದ ನಿಫ್ಟಿ ಫ್ಯೂಚರ್‌ನಿಂದ ಒಂದು ಸ್ಪಷ್ಟವಾದ ಅಂದಾಜು ದೊರಕುತ್ತಿತ್ತು. ಆದರೆ, ಈಗ ಭಾರತವು ತನ್ನದೇ ಸ್ವಂತ ಅಂತಾರಾಷ್ಟ್ರೀಯ ಷೇರು ಕೇಂದ್ರ ಹೊಂದಿದೆ. ಅದು ಗುಜರಾತ್‌ನಲ್ಲಿದೆ. ಗಿಫ್ಟ್‌ ನಿಫ್ಟಿ ಎನ್ನುವುದು ಅದರ ಹೆಸರು. ಗುಜರಾತ್‌ ಇಂಟರ್‌ನ್ಯಾಷನಲ್‌ ಫೈನಾನ್ಸ್‌ ಟೆಕ್‌ ಸಿಟಿ ಅಥವಾ ಜಿಫ್ಟ್‌ ಸಿಟಿಯನ್ನು ನಿರ್ಮಿಸಿದೆ. ಇದು ಸುಮಾರು 900 ಎಕರೆಯ ಕ್ಯಾಂಪಸ್‌. ಗಾಂಧಿನಗರ ಮತ್ತು ಅಹಮಾದಬಾದ್‌ ನಡುವೆ ಇದೆ. ಇದು ಭಾರತೀಯ ರೂಪಾಯಿ ಅನ್ವಯವಾಗದೆ ಇರುವ ಫ್ರೀ ಟ್ರೇಡ್‌ ಝೋನ್‌. ಈ ಕುರಿತು ವಿವರವಾದ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ.

ಟಿ20 ವರ್ಲ್ಡ್‌ಕಪ್ 2024

ವಿಭಾಗ