ಕನ್ನಡ ಸುದ್ದಿ  /  Nation And-world  /  Drunk Man Falls Into Well Found After 4 Days

Uttar Pradesh: ಕುಡಿದ ಮತ್ತಿನಲ್ಲಿ ಬಾವಿಗೆ ಬಿದ್ದ; ಪೊಲೀಸರಿಗೆ ಸಿಗದಾತ 4 ದಿನದ ಬಳಿಕ ಪತ್ತೆಯಾಗಿದ್ದು ಹೀಗೆ

ಉತ್ತರ ಪ್ರದೇಶದಲ್ಲಿ ನಡೆದಿರುವ ಈ ನಾಪತ್ತೆ ಪ್ರಕರಣ, ಕೊನೆಗೂ ಸುಖಾಂತ್ಯ ಕಂಡಿದೆ. ಆದರೆ, ನಾಲ್ಕು ದಿನಗಳ ಕಾಲ ನಡೆದ ನಾಟಕೀಯ ಘಟನೆ ಮಾತ್ರ ರೋಚಕವೆಂಬಂತಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (freepik)

ಉತ್ತರ ಪ್ರದೇಶದ ಅಲಿಗಢದಲ್ಲಿ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದೆ. ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ ನಾಲ್ಕು ದಿನಗಳ ಬಳಿಕ ಬಾವಿಯಿಂದ ಜೀವಂತವಾಗಿ ಪತ್ತೆಯಾಗಿರುವ ಘಟನೆ ನಗರದ ಛರ್ರಾ ಪ್ರದೇಶದಲ್ಲಿ ನಡೆದಿದೆ. ಈ ಅಪರೂಪದ ಘಟನೆ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.

ಏನಿದು ಘಟನೆ?

ವೃತ್ತಿಯಲ್ಲಿ ಟ್ರಕ್ ಚಾಲಕನಾಗಿರುವ ಯೋಗೇಂದ್ರ ಯಾದವ್, ಈ ಪ್ರದೇಶಕ್ಕೆ ಮರಳು ತಂದಿದ್ದರು. ಹೋಟೆಲ್‌ನಲ್ಲಿ ಊಟ ಮಾಡಿದ ಬಳಿಕ ಮದ್ಯ ಸೇವಿಸಿದ್ದಾರೆ. ಕುಡಿದ ಅಮಲಿನಲ್ಲಿದ್ದ ಯಾದವ್, ಮೂತ್ರ ವಿಸರ್ಜಿಸಲು ಬಾವಿಯೊಂದರ ಬಳಿ ಹೋಗಿದ್ದಾರೆ. ಆದರೆ, ಸಮತೋಲನ ತಪ್ಪಿ ಬಾವಿಗೆ ಬಿದ್ದಿದ್ದಾರೆ.

ಯಾದವ್ ಹಠಾತ್ ಕಣ್ಮರೆಯಾದ ಬಳಿಕ, ಎಲ್ಲರೂ ಹುಡುಕಾಟ ಆರಂಭಿಸಿದ್ದಾರೆ. ಆದರೆ, ಯಾದವ್‌ ಎಲ್ಲೂ ಪತ್ತೆಯಾಗಿಲ್ಲ. ತಿಳಿದಿರುವ ಎಲ್ಲಾ ಸ್ಥಳಗಳಲ್ಲೂ ಹುಡುಕಾಡಿದ ಬಳಿಕ, ಬೇರೆ ದಾರಿ ಕಾಣದೆ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೂರು ಪಡೆದ ನಂತರ ಪೊಲೀಸರು ಮತ್ತು ಕುಟುಂಬ ಸದಸ್ಯರು ಸೇರಿಕೊಂಡು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಇದೇ ರೀತಿ ಸತತ ನಾಲ್ಕು ದಿನಗಳ ಕಾಲ ನಡೆದಿದೆ. ಸತತ ಹುಡುಕಾಟದ ಬಳಿಕವೂ ಸಿಗದ ಕಾರಣ, ಪೊಲೀಸರು ಕೈಚೆಲ್ಲಿದ್ದರು. ಆದರೆ, ಮನೆಯವರ ಪ್ರಯತ್ನ ಮಾತ್ರ ಮುಂದುವರೆಯಿತು.

ಆತನ ಪತ್ನಿ ಶ್ರದ್ಧಾ, ತನ್ನ ಪತಿಯನ್ನು ಹುಡುಕಿಕೊಂಡು ಛರ್ರಾಗೆ ಹೋಗಿ ಹೋಟೆಲ್ ಬಳಿಯ ಪ್ರದೇಶಕ್ಕೆ ಹೋಗಿದ್ದಾಳೆ. ಯಾದವ್ ಮೂತ್ರ ವಿಸರ್ಜನೆಗೆ ಹೋಗಿದ್ದ ಬಾವಿಯ ಬಳಿ, ಆಕೆಗೆ ತನ್ನ ಗಂಡನ ಸ್ವೆಟರ್ ಕಂಡಿದೆ. ಇದರಿಂದ ಅನುಮಾನಗೊಂಡ ಪತ್ನಿ ಬಾವಿಯಲ್ಲಿ ನೋಡಿದಾಗ, ಅಲ್ಲಿ ಆಕೆಯ ಗಂಡ ಕಂಡಿದ್ದಾನೆ.

ತಕ್ಷಣವೇ ತಡಮಾಡದೆ, ಸುತ್ತಲಿನವರ ಸಹಾಯದಿಂದ ಯೋಗೇಂದ್ರನನ್ನು ಬಾವಿಯಿಂದ ಹೊರತೆಗೆದಿದ್ದಾಳೆ. ಬಾವಿಯಿಂದ ಹೊರಬಂದ ನಂತರ ಯೋಗೇಂದ್ರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ. ತಕ್ಷಣವೇ ಯೋಗೇಂದ್ರನನ್ನು ಹೊರಗೆಳೆದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಪ್ರಾಣಾಪಾಯದಿಂದ ವ್ಯಕ್ತಿ ಪಾರಾಗಿದ್ದಾನೆ. ಮನೆಯವರ ನಿದ್ದೆಗೆಡಿಸಿದ್ದ ಪ್ರಕರಣ ಸುಖಾಂತ್ಯ ಕಂಡಿದೆ.

ಗಮನಿಸಬಹುದಾದ ಇತರೆ ಸುದ್ದಿಗಳು

ನೈತಿಕ ಪೊಲೀಸ್‌ ಘಟಕ ರದ್ದುಗೊಳಿಸಿದ ಇರಾನ್:‌ ಹಿಜಾಬ್‌ ವಿರೋಧಿ ಆಂದೋಲನವೇ ರೀಸನ್!‌

ಟೆಹ್ರನ್‌: ಒಗ್ಗಟ್ಟು, ಏಕತೆ ಹಾಗೂ ಸಕಲ ತ್ಯಾಗಕ್ಕೆ ಸಿದ್ಧವಾಗುವ ಯಾವುದೇ ಜನಪರ ಚಳುವಳಿಗಳು ಖಂಡಿತ ಯಶಸ್ಸು ಗಳಿಸುತ್ತವೆ ಎಂಬುದನ್ನು, ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್‌ ವಿರೋಧಿ ಚಳುವಳಿ ಮತ್ತೊಮ್ಮೆ ಸಾಬೀತುಪಡಿಸಿದೆ. ಇರಾನ್‌ನಲ್ಲಿ ಬದಲಾವಣೆಗಾಗಿ ಮತ್ತು ಮಹಿಳೆಯರ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಆರಂಭಿಕ ಜಯ ದೊರೆತಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಏನಿದು ಆಪರೇಷನ್‌ ಟ್ರೈಡೆಂಟ್?:‌ ಕರಾಚಿ ಬಂದರು ಉಡೀಸ್‌ ಮಾಡಿದ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು?

ನವದೆಹಲಿ: ದೇಶಾದ್ಯಂತ ಇಂದು(ಡಿ.04-ಭಾನುವಾರ) ಭಾರತೀಯ ನೌಕಾಸೇನೆ ದಿನ ಆಚರಣೆ ನಡೆಯುತ್ತಿದ್ದು, ದೇಶದ ಸಮುದ್ರ ಗಡಿಗಳ ರಕ್ಷಣೆಯಲ್ಲಿ ನಿರತವಾಗಿರುವ ನೌಕಾ ವೀರರಿಗೆ ದೇಶ ನಮಿಸುತ್ತಿದೆ. ಪಾಕಿಸ್ತಾನದ ಕರಾಚಿ ಬಂದರಿನ ಮೇಲೆ, ಭಾರತೀಯ ನೌಕಾಸೇನೆ ನಡೆಸಿದ ದಾಳಿಯ ಇತಿಹಾಸವನ್ನು ಸ್ಮರಿಸಲಾಗುತ್ತಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point