Kannada News  /  Nation And-world  /  Gold Price Today February 10: Gold And Silver Rate In Karnataka And Other States
Gold Price Today in Karnataka: ದರ ತುಸು ಹೆಚ್ಚಾದ್ರೂ ಪರವಾಗಿಲ್ಲ ಅನ್ನೋರಿಗೆ ಚಿನ್ನ-ಬೆಳ್ಳಿ ಖರೀದಿಗೆ ಇಂದು ಶುಭ ಶುಕ್ರವಾರ
Gold Price Today in Karnataka: ದರ ತುಸು ಹೆಚ್ಚಾದ್ರೂ ಪರವಾಗಿಲ್ಲ ಅನ್ನೋರಿಗೆ ಚಿನ್ನ-ಬೆಳ್ಳಿ ಖರೀದಿಗೆ ಇಂದು ಶುಭ ಶುಕ್ರವಾರ (REUTERS)

Gold Price Today in Karnataka: ದರ ತುಸು ಹೆಚ್ಚಾದ್ರೂ ಪರವಾಗಿಲ್ಲ ಅನ್ನೋರಿಗೆ ಚಿನ್ನ-ಬೆಳ್ಳಿ ಖರೀದಿಗೆ ಇಂದು ಶುಭ ಶುಕ್ರವಾರ

10 February 2023, 8:49 ISTHT Kannada Desk
10 February 2023, 8:49 IST

Gold Price Today in Karnataka: ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಅಥವಾ ಹೊರರಾಜ್ಯಗಳಲ್ಲಿ ಚಿನ್ನ ಖರೀದಿಸಲು ಬಯಸುವವರಿಗೆ ಅನುಕೂಲವಾಗುವಂತೆ ದರ ಮಾಹಿತಿ ಇಲ್ಲಿ ನೀಡಲಾಗಿದೆ.

ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಶುಕ್ರವಾರ ಪೂಜಿಸಿದರೆ ಸಮೃದ್ಧಿ. ಈ ದಿನ ಮನೆಗೆ ಆಭರಣ ತಂದರೆ ಶುಭವಾಗುತ್ತದೆ ಎನ್ನುವ ನಂಬಿಕೆಯಿದೆ. ಹೀಗಾಗಿ, ಶುಕ್ರವಾರ ಮನೆಗೆ ಸಂಪತ್ತಿನ ಆಗಮನವಾದರೆ ಎಲ್ಲರೂ ಖುಷಿ ಪಡುತ್ತಾರೆ. ಇದೇ ಕಾರಣಕ್ಕಾಗಿ ಒಂದು ಗ್ರಾಂ ಆದರೂ ಚಿನ್ನ ಖರೀದಿಸಲು ಜನರು ಬಯಸುತ್ತಾರೆ. ಇಂತಹ ನಂಬಿಕೆಯಿಂದ ಚಿನ್ನ ಖರೀದಿಸಲು ನೀವು ಇಂದು ಮುಂದಾಗುವವರು ನೀವಾಗಿದ್ದರೆ ನಿನ್ನೆಗಿಂತ ಗ್ರಾಂಗೆ ತುಸು ಹೆಚ್ಚು ಹಣ ನೀಡಲು ಸಿದ್ಧರಿರಬೇಕು. ಆದರೆ, ಇತ್ತೀಚಿನ ದರ ಏರಿಕೆಗೆ ಹೋಲಿಸಿದರೆ ಇದು ಅತ್ಯಲ್ಪ ಏರಿಕೆ ಎನ್ನಬಹುದು. ಆದರೆ, ಬೆಳ್ಳಿ ದರ ಇಂದು ನಿನ್ನೆಗಿಂತ ಕಡಿಮೆಯಾಗಿದೆ.

ಈ ವರ್ಷದ ಆರಂಭದಿಂದಲೂ ಚಿನ್ನದ ದರ ಸಣ್ಣಮಟ್ಟದ ಏರಿಳಿತಗಳಿಗೆ ಸಾಕ್ಷಿಯಾಗಿದೆ. ಇತ್ತೀಚೆಗೆ ಹತ್ತು ಗ್ರಾಂ ಚಿನ್ನದ ದರ 60 ಸಾವಿರ ಗಡಿ ದಾಟಿತ್ತು. ಆಭರಣ ಖರೀದಿದಾರರು ಮಾತ್ರವಲ್ಲದೆ ಭವಿಷ್ಯದಲ್ಲಿ ಲಾಭಗಳಿಸುವ ಉದ್ದೇಶದಿಂದ ಚಿನ್ನದ ಮೇಲೆ ಹೂಡಿಕೆ ಮಾಡುವವರೂ ಹೆಚ್ಚಾಗುತ್ತಿದ್ದಾರೆ. ಇದರೊಂದಿಗೆ ಜಾಗತಿಕ ಬೆಳವಣಿಗೆಗಳು ಚಿನ್ನದ ದರದ ಮೇಲೆ ಪರಿಣಾಮ ಬೀರುತ್ತಿದೆ. ಇಂದು ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಅಥವಾ ಹೊರರಾಜ್ಯಗಳಲ್ಲಿ ಚಿನ್ನ ಖರೀದಿಸಲು ಬಯಸುವವರಿಗೆ ಅನುಕೂಲವಾಗುವಂತೆ ದರ ಮಾಹಿತಿ ಇಲ್ಲಿ ನೀಡಲಾಗಿದೆ.

ಇಂದು 22 ಕ್ಯಾರೆಟ್​​ನ 10 ಗ್ರಾಂ ಚಿನ್ನದ ಬೆಲೆ 150 ರೂ. ಏರಿಕೆಯಾಗಿದೆ. ಅಂದರೆ, 10 ಗ್ರಾಂ ಚಿನ್ನದ ದರ 150 ರೂ. ಏರಿಕೆಯಾಗಿ 52,900 ರೂ. ಗೆ ತಲುಪಿದೆ. 24 ಕ್ಯಾರೆಟ್ ಚಿನ್ನದ ಬೆಲೆ 160 ರೂ. ಏರಿಕೆಯಾಗಿದೆ. ಅಂದ್ರೆ, 57,710 ರೂ. ಗೆ ತಲುಪಿದೆ. ಗ್ರಾಂಗೆ ಹದಿನೈದು, ಹದಿನಾರು ರೂ. ಏರಿಕೆಯಾದರೂ ಒಂದೆರಡು ತಿಂಗಳಲ್ಲಿ ಇದೇ ರೀತಿ ಏರಿಕೆಯಿಂದ ಚಿನ್ನದ ದರವು ಗಮನಾರ್ಹವಾಗಿ ಏರಿಕೆ ಕಾಣುತ್ತದೆ. ಹೀಗಾಗಿ, ಸಣ್ಣಪುಟ್ಟ ಏರಿಕೆಯನ್ನೂ ಕಡೆಗಣಿಸುವಂತೆ ಇಲ್ಲ. 1 ಕೆಜಿ ಬೆಳ್ಳಿ ಬೆಲೆ 50 ರೂ. ಇಳಿಕೆಯಾಗಿದೆ.

ವಿವಿಧ ನಗರಗಳಲ್ಲಿ ಇಂದಿನ ಚಿನ್ನದ ದರ

22 ಕ್ಯಾರೆಟ್‌ ಚಿನ್ನದ ದರ: ಚೆನ್ನೈ – 53,750 ರೂ., ಮುಂಬೈ- 52,900 ರೂ., ದೆಹಲಿ- 53,050 ರೂ., ಕೊಲ್ಕತ್ತಾ- 52,900 ರೂ., ಬೆಂಗಳೂರು- 52,950 ರೂ., ಹೈದರಾಬಾದ್- 52,900 ರೂ., ಕೇರಳ- 52,900 ರೂ., ಪುಣೆ- 52,900 ರೂ., ಮಂಗಳೂರು- 52,950 ರೂ., ಮೈಸೂರು- 52,950 ರೂ.ಗೆ ತಲುಪಿದೆ.

24 ಕ್ಯಾರೆಟ್ ಚಿನ್ನದ ದರ: ಚೆನ್ನೈ- 58,640 ರೂ., ಮುಂಬೈ- 57,710 ರೂ., ದೆಹಲಿ- 57,860 ರೂ., ಕೊಲ್ಕತ್ತಾ- 57,710 ರೂ., ಬೆಂಗಳೂರು- 57,760 ರೂ., ಹೈದರಾಬಾದ್- 57,710 ರೂ., ಕೇರಳ- 57,710 ರೂ., ಪುಣೆ- 57,710 ರೂ., ಮಂಗಳೂರು- 57,760 ರೂ., ಮೈಸೂರು- 57,760 ರೂ. ಇದೆ.

ಬೆಳ್ಳಿ ದರ ಒಂದು ಕೆಜಿಗೆ: ಬೆಂಗಳೂರು- 73,500 ರೂ., ಮೈಸೂರು- 73,500 ರೂ., ಮಂಗಳೂರು- 73,500 ರೂ., ಮುಂಬೈ- 71,350 ರೂ., ಚೆನ್ನೈ- 73,500 ರೂ., ದೆಹಲಿ- 71,350 ರೂ., ಹೈದರಾಬಾದ್- 73,500 ರೂ. ಮತ್ತು ಕೊಲ್ಕತ್ತಾ- 71,350 ರೂ. ಇದೆ.

ವಿಶ್ವ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಹಲವಾರು ಅಂತಾರಾಷ್ಟ್ರೀಯ ಕಾರಣಗಳಿವೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಇತ್ತೀಚಿನ ಯುದ್ಧವು ಪ್ರಭಾವದ ಪ್ರದೇಶಗಳ ಮೇಲೆ ಪರಿಣಾಮ ಬೀರಿದೆ. ಆ ಪರಿಣಾಮವೇ ಈ ಚಿನ್ನ ಗಣನೀಯವಾಗಿ ಏರಲು ಕಾರಣವಾಯಿತು. ಹಣದುಬ್ಬರ, ಸೆಂಟ್ರಲ್ ಬ್ಯಾಂಕ್‌ನಲ್ಲಿ ಚಿನ್ನದ ನಿಕ್ಷೇಪಗಳು, ಬಡ್ಡಿದರಗಳಲ್ಲಿ ಹೆಚ್ಚಳ ಅಥವಾ ಇಳಿಕೆಯಂತಹ ಅಂಶಗಳು ಸಹ ಚಿನ್ನ, ಬೆಳ್ಳಿ ಬೆಲೆಯಲ್ಲಿನ ಏರಿಳಿತಗಳಿಗೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.