ಕನ್ನಡ ಸುದ್ದಿ  /  Nation And-world  /  Leaked Report Says Realme Gt Neo 5 To Come With A Big Battery And 240w Fast Charging Support

Realme GT Neo 5: ಫಾಸ್ಟ್‌ ಚಾರ್ಜಿಂಗ್‌, ಕೂಲ್‌ ಲುಕ್ಸ್‌ ಮೊಬೈಲ್‌ ಹುಡುಕ್ತಿದ್ದೀರಾ?: ಸ್ಮಾರ್ಟ್‌ಫೋನ್‌ ಜಗತ್ತಿನ ಬಾದ್‌ಶಾ ಬರ್ತಿದ್ದಾನಂತೆ

ಜಿಟಿ ನಿಯೋ 5 (Realme GT Neo 5) ಹೆಸರಿನ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲಿರುವ ರಿಯಲ್‌ ಮಿ ಕಂಪನಿ, ಇದುವರೆಗೂ ನೋಡಿರದ ಅತ್ಯಂತ ವೇಗದ ಚಾರ್ಜಿಂಗ್‌ ಸ್ಮಾರ್ಟ್‌ಫೋನ್‌ ಪರಿಚಯಿಸಲಿದೆ ಎನ್ನಲಾಗಿದೆ. ಬರೋಬ್ಬರಿ 240W ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಇರಲಿದ್ದು, ಇದು ಹೊಸ ದಾಖಲೆಯಾಗಲಿದೆ ಎಂದು ಅಂದಾಜಿಸಲಾಗಿದೆ. ರಿಯಲ್‌ ಮಿ ಕಂಪನಿಯ ಈ ಭವಿಷ್ಯದ ಸ್ಮಾರ್ಟ್‌ಫೋನ್‌ ಬಗ್ಗೆ ಸೋರಿಕೆಯಾಗಿರುವ ಮಾಹಿತಿ ಏನು?

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (HT)

ನವದೆಹಲಿ: ಸ್ಮಾರ್ಟ್‌ಫೋನ್‌ ಜಗತ್ತೇ ಹಾಗೆ, ಇಲ್ಲಿ ನಿತ್ಯವೂ ಹೊಸತನ, ಇಂದು ಹೊಸತು ಎನಿಸಿದ್ದು, ನಾಳೆ ಹಳತಾಗಿ ಅದರ ಸ್ಥಾನವನ್ನು ಮತ್ತೊಂದು ಆಕ್ರಮಿಸಿಕೊಂಡು ಬಿಟ್ಟಿರುತ್ತದೆ. ಅದರ ಆಯಸ್ಸು ಕೂಡ ಹೆಚ್ಚು ದಿನಗಳೇನು ಇರದು. ಹರಿಯುವ ನದಿಯಂತಿರುವ ಸ್ಮಾರ್ಟ್‌ಫೋನ್‌ ಕ್ಷೇತ್ರ, ನಿತ್ಯವೂ ಹೊಸ ಹೊಸ ಫೀಚರ್‌ಗಳುಳ್ಳ ಸ್ಮಾರ್ಟ್‌ಫೋನ್‌ಗಳನ್ನು ಜಗತ್ತಿಗೆ ಪರಿಚಯಿಸುತ್ತಿರುತ್ತದೆ.

ಅದರಂತೆ ಸ್ಮಾರ್ಟ್‌ಫೋನ್‌ ಕ್ಷೇತ್ರದ ದಿಗ್ಗಜ ರಿಯಲ್ ಮಿ ಕಂಪನಿಯು ಹೊಸ ಸ್ಮಾರ್ಟ್‌ಫೋನ್‌ವೊಂದನ್ನು ಬಿಡುಗಡೆ ಮಾಡುತ್ತಿದ್ದು, ಅತ್ಯಂತ ವೇಗದ ಚಾರ್ಜಿಂಗ್‌ಗೆ ಈ ಸ್ಮಾರ್ಟ್‌ಫೋನ್‌ ಹೆಸರು ಮಾಡಲಿದೆ ಎಂದು ನಿರೀಕ್ಷೆ ಮಾಡಲಿದೆ.

ಜಿಟಿ ನಿಯೋ 5 (Realme GT Neo 5) ಹೆಸರಿನ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲಿರುವ ರಿಯಲ್‌ ಮಿ ಕಂಪನಿ, ಇದುವರೆಗೂ ನೋಡಿರದ ಅತ್ಯಂತ ವೇಗದ ಚಾರ್ಜಿಂಗ್‌ ಸ್ಮಾರ್ಟ್‌ಫೋನ್‌ ಪರಿಚಯಿಸಲಿದೆ ಎನ್ನಲಾಗಿದೆ. ಬರೋಬ್ಬರಿ 240W ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಇರಲಿದ್ದು, ಇದು ಹೊಸ ದಾಖಲೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ರಿಯಲ್ ಮಿ ಕಂಪನಿಯು 2022ರಲ್ಲಿ ಆಕರ್ಷಕ ಮೊಬೈಲ್​​ಗಳನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿದೆ. ಈಗಾಗಲೇ ಸಾಲು ಸಾಲು ರಿಯಲ್‌ ಮಿ ಸ್ಮಾರ್ಟ್​ಫೋನ್​ಗಳು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಗೆ ಕಾಯುತ್ತಿವೆ. ಕಳೆದ ಸೆಪ್ಟೆಂಬರ್​ನಲ್ಲಿ ಜಿಟಿ ನಿಯೋ 3T ಫೋನ್ ಅನಾವರಣ ಮಾಡಿದ್ದ ರಿಯಲ್ ಮಿ, ಇದೀಗ ಜಿಟಿ ನಿಯೋ 5 ಫೋನ್‌ ಬಿಡುಗಡೆಗೆ ಸಿದ್ಧತೆ ನಡೆಸಿದೆ.

ಜಿಟಿ ನಿಯೋ 5 ಯಾವಾಗ ಬಿಡುಗಡೆ ಆಗಲಿದೆ ಎಂಬ ಬಗ್ಗೆ ಕಂಪನಿ ಇದುವರೆಗೂ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ ಈ ಫೋನ್‌ನ ಕೆಲವು ಫೀಚರ್​​ಗಳು ಆನ್​ಲೈನ್​ನಲ್ಲಿ ಸೋರಿಕೆ ಆಗಿದ್ದು, ಇದರ ವೇಗದ ಚಾರ್ಜಿಂಗ್‌ ವ್ಯವಸ್ಥೆ ಎಲ್ಲರನ್ನೂ ದಂಗುಬಡಿಸಿದೆ.

ಸೋರಿಕೆ ಆಗಿರುವ ಮಾಹಿತಿಯ ಪ್ರಕಾರ, ರಿಯಲ್‌ ಮಿ GT ನಿಯೋ 5 ಸ್ಮಾರ್ಟ್‌ಫೋನ್‌, 1,080*2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.6 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ E4 ಅಮೋಲೆಡ್‌ ಡಿಸ್‌ಪ್ಲೇ ಹೊಂದಿರುವ ಸಾಧ್ಯತೆ ಇದೆ. 120Hz ರಿಫ್ರೆಶ್ ರೇಟ್ ನೀಡಲಾಗಿದ್ದು, ಬಲಿಷ್ಠವಾದ ಮೀಡಿಯಾಟೆಕ್ ಡೈಮೆನ್ಸಿಟಿ 8100 5G SoC ಪ್ರೊಸೆಸರ್‌ ಕೂಡ ಇರಲಿದೆ. ಆಂಡ್ರಾಯ್ಡ್ 13ನಲ್ಲಿ ಈ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಿಸಲಿದೆ‌ ಎನ್ನಲಾಗಿದೆ.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX890 ಸೆನ್ಸಾರ್​ನಿಂದ ಕೂಡಿದೆ. ಉಳಿದ ಕ್ಯಾಮೆರಾ ಆಯ್ಕೆ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ. ಆದರೆ, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್‌, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಮತ್ತು 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಇರಲಿದೆ ಎಂದು ನಿರೀಕ್ಷಿಸಲಾಗಿದೆ.

ಸೋರಿಕೆಯಾದ ಮಾಹಿತಿಯನ್ನೇ ಪರಿಗಣಿಸುವುದಾದರೆ, ರಿಯಲ್‌ ಮಿ ಜಿಟಿ ನಿಯೋ 5 ಸ್ಮಾರ್ಟ್‌ಫೋನ್​, ಎರಡು ಬ್ಯಾಟರ್ ಆಯ್ಕೆಯೊಂದಿಗೆ ಮಾರುಕಟ್ಟೆಗೆ ಬರಲಿದೆ. 4,600mAh ಬ್ಯಾಟರಿಗೆ 240W ಫಾಸ್ಟ್ ಚಾರ್ಜರ್ ಮತ್ತು 5,000mAh ಸಾಮರ್ಥ್ಯದ ಬ್ಯಾಟರಿಗೆ 150W ಫಾಸ್ಟ್ ಚಾರ್ಜ್ ಟೆಕ್ನಾಲಜಿಯನ್ನು ನೀಡಲಾಗಿದೆ. ಇದು ಕೇಲವೇ ನಿಮಿಷಗಳಲ್ಲಿ ಶೇ.100ರಷ್ಟು ಚಾರ್ಜ್ ಮಾಡುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ..

ರಿಯಲ್‌ ಮಿ ಜಿಟಿ ನಿಯೋ 5 ಸ್ಮಾರ್ಟ್‌ಫೋನ್‌, ಭಾರತೀಯ ಮಾರುಕಟ್ಟೆಗೆ ಒಟ್ಟು ಮೂರು ಆಯ್ಕೆಗಳಲ್ಲಿ ಲಗ್ಗೆ ಇಡಬಹುದು ಎನ್ನಲಾಗಿದೆ. 6GB RAM + 128GB ಸ್ಟೋರೇಜ್, 8GB RAM + 128GB ಸ್ಟೋರೇಜ್‌ ಮತ್ತು 8GB RAM + 256GB ಸ್ಟೋರೇಜ್ ಆಯ್ಕೆಗಳು ದೊರೆಯಲಿವೆ ಎಂಬ ಮಾತುಗಳು ಕೇಳಿಬರುತ್ತಿವೆ.

ಆನ್‌ಲೈನ್‌ನಲ್ಲಿ ಸೋರಿಕೆಯಾದ ಬಹುತೇಕ ಮಾಹಿತಿಗಳು ನಿಜ ಎಂಬ ಮಾತುಗಳೂ ಕೇಳಿಬರುತ್ತಿದ್ದು, ಈ ಫೋನ್‌ ಸ್ಮಾರ್ಟ್‌ಫೋನ್‌ ಜಗತ್ತಿನಲ್ಲಿ ಹೊಸ ಸಂಚಲನ ಸೃಷ್ಟಿಸುವ ಅಂದಾಜು ಮಾಡಲಾಗಿದೆ. ಆದರೆ ಈ ಭವಿಷ್ಯದ ಸ್ಮಾರ್ಟ್‌ಫೋನ್‌ ಬೆಲೆ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

IPL_Entry_Point

ವಿಭಾಗ