ಕನ್ನಡ ಸುದ್ದಿ  /  Photo Gallery  /  Lpg Cylinder Insurance Scheme: Lpg Connection Holder Can Get Upto 50 Lakh Rupees Insurance Cover With Gas Connection

LPG Cylinder Insurance Scheme: ಗ್ಯಾಸ್‌ ಸಂಪರ್ಕದೊಂದಿಗೆ 50 ಲಕ್ಷ ರೂ. ವಿಮೆ; ಪ್ರೀಮಿಯಂ ಪಾವತಿಸಬೇಕಾಗಿಲ್ಲ- ಇದು ನಿಮಗೆ ಗೊತ್ತೆ?

LPG Cylinder Insurance Scheme: ಇಂದು ಭಾರತದ ಪ್ರತಿ ಮನೆಗೂ ಗ್ಯಾಸ್ ಸಿಲಿಂಡರ್ ಸಂಪರ್ಕವಿದೆ. ಆದರೆ ನಮ್ಮಲ್ಲಿ ಅನೇಕರಿಗೆ ಗ್ಯಾಸ್ ಸಿಲಿಂಡರ್‌ಗಳಿಗೆ ಸಂಬಂಧಿಸಿದ ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿದಿಲ್ಲ. ವಾಸ್ತವವಾಗಿ ಗ್ಯಾಸ್ ಸಂಪರ್ಕಕ್ಕೆ ಸಂಬಂಧಿಸಿ ಗ್ರಾಹಕರಿಗೆ ಅವರ ಹಕ್ಕುಗಳ ಬಗ್ಗೆ ತಿಳಿಸುವುದು ಗ್ಯಾಸ್ ವಿತರಕರ ಕರ್ತವ್ಯವಾಗಿದೆ. ನೀವೂ ತಿಳಿಯಿರಿ. 

LPG ಗ್ಯಾಸ್ ಸಂಪರ್ಕ ಪಡೆಯುವಾಗ 50 ಲಕ್ಷ ರೂಪಾಯಿ ತನಕದ ವಿಮೆ ಮಾಡಿಸುತ್ತಾರೆ. ಈ ಪಾಲಿಸಿಯನ್ನು LPG ವಿಮಾ ರಕ್ಷಣೆ ಎನ್ನುತ್ತಾರೆ. ಗ್ಯಾಸ್ ಸಿಲಿಂಡರ್‌ನಿಂದಾಗಿ ಯಾವುದೇ ರೀತಿಯ ಅಪಘಾತ ಸಂಭವಿಸಿದಲ್ಲಿ, ಆಸ್ತಿ ಹಾನಿ ಆದಲ್ಲಿ ವಿಮಾ ಮೊತ್ತವನ್ನು ಗ್ರಾಹಕರಿಗೆ ನೀಡಲಾಗುತ್ತದೆ. ನೀವು ಗ್ಯಾಸ್ ಸಂಪರ್ಕ ಪಡೆದ ತತ್‌ಕ್ಷಣವೇ ಈ ವಿಮಾ ಪಾಲಿಸಿಯನ್ನು ಹೊಂದಿರುವಿರಿ.
icon

(1 / 5)

LPG ಗ್ಯಾಸ್ ಸಂಪರ್ಕ ಪಡೆಯುವಾಗ 50 ಲಕ್ಷ ರೂಪಾಯಿ ತನಕದ ವಿಮೆ ಮಾಡಿಸುತ್ತಾರೆ. ಈ ಪಾಲಿಸಿಯನ್ನು LPG ವಿಮಾ ರಕ್ಷಣೆ ಎನ್ನುತ್ತಾರೆ. ಗ್ಯಾಸ್ ಸಿಲಿಂಡರ್‌ನಿಂದಾಗಿ ಯಾವುದೇ ರೀತಿಯ ಅಪಘಾತ ಸಂಭವಿಸಿದಲ್ಲಿ, ಆಸ್ತಿ ಹಾನಿ ಆದಲ್ಲಿ ವಿಮಾ ಮೊತ್ತವನ್ನು ಗ್ರಾಹಕರಿಗೆ ನೀಡಲಾಗುತ್ತದೆ. ನೀವು ಗ್ಯಾಸ್ ಸಂಪರ್ಕ ಪಡೆದ ತತ್‌ಕ್ಷಣವೇ ಈ ವಿಮಾ ಪಾಲಿಸಿಯನ್ನು ಹೊಂದಿರುವಿರಿ.(PTI)

ನೀವು ಹೊಸ ಸಿಲಿಂಡರ್ ಅನ್ನು ಪಡೆಯುತ್ತಿರುವಾಗ, ಆ ಸಿಲಿಂಡರ್‌ನ ಮುಕ್ತಾಯ ದಿನಾಂಕ (Expire Date)ವನ್ನು ಪರಿಶೀಲಿಸಬೇಕು. ಏಕೆಂದರೆ ಈ ವಿಮೆಯು ಸಿಲಿಂಡರ್‌ನ ಮುಕ್ತಾಯ ದಿನಾಂಕಕ್ಕೆ ಲಿಂಕ್ ಆಗಿದೆ. ಗ್ಯಾಸ್ ಸಂಪರ್ಕದ ಜತೆಗೆ ನಿಮಗೆ 40 ಲಕ್ಷ ರೂಪಾಯಿ ಅಪಘಾತ ವಿಮೆ ದೊರೆಯುತ್ತದೆ.
icon

(2 / 5)

ನೀವು ಹೊಸ ಸಿಲಿಂಡರ್ ಅನ್ನು ಪಡೆಯುತ್ತಿರುವಾಗ, ಆ ಸಿಲಿಂಡರ್‌ನ ಮುಕ್ತಾಯ ದಿನಾಂಕ (Expire Date)ವನ್ನು ಪರಿಶೀಲಿಸಬೇಕು. ಏಕೆಂದರೆ ಈ ವಿಮೆಯು ಸಿಲಿಂಡರ್‌ನ ಮುಕ್ತಾಯ ದಿನಾಂಕಕ್ಕೆ ಲಿಂಕ್ ಆಗಿದೆ. ಗ್ಯಾಸ್ ಸಂಪರ್ಕದ ಜತೆಗೆ ನಿಮಗೆ 40 ಲಕ್ಷ ರೂಪಾಯಿ ಅಪಘಾತ ವಿಮೆ ದೊರೆಯುತ್ತದೆ.(PTI)

ಸಿಲಿಂಡರ್ ಸ್ಫೋಟದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದರೆ, ಮೃತರ ನೇರ ಹಕ್ಕುದಾರರು  ವಿಮೆಗಾಗಿ 50 ಲಕ್ಷ ರೂಪಾಯಿ ತನಕ ಕ್ಲೈಮ್ ಮಾಡಬಹುದು. ಇದಕ್ಕಾಗಿ ನೀವು ಯಾವುದೇ ಹೆಚ್ಚುವರಿ ಮಾಸಿಕ ಪ್ರೀಮಿಯಂ ಅನ್ನು ಪಾವತಿಸಬೇಕಾಗಿಲ್ಲ. ಗ್ಯಾಸ್ ಸಿಲಿಂಡರ್ ಅಪಘಾತದ ಸಂದರ್ಭದಲ್ಲಿ, ಸಂತ್ರಸ್ತರ ಕುಟುಂಬ ಸದಸ್ಯರು ವಿಮಾ ಹಣವನ್ನು ಕ್ಲೈಮ್ ಮಾಡಬಹುದು.
icon

(3 / 5)

ಸಿಲಿಂಡರ್ ಸ್ಫೋಟದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದರೆ, ಮೃತರ ನೇರ ಹಕ್ಕುದಾರರು  ವಿಮೆಗಾಗಿ 50 ಲಕ್ಷ ರೂಪಾಯಿ ತನಕ ಕ್ಲೈಮ್ ಮಾಡಬಹುದು. ಇದಕ್ಕಾಗಿ ನೀವು ಯಾವುದೇ ಹೆಚ್ಚುವರಿ ಮಾಸಿಕ ಪ್ರೀಮಿಯಂ ಅನ್ನು ಪಾವತಿಸಬೇಕಾಗಿಲ್ಲ. ಗ್ಯಾಸ್ ಸಿಲಿಂಡರ್ ಅಪಘಾತದ ಸಂದರ್ಭದಲ್ಲಿ, ಸಂತ್ರಸ್ತರ ಕುಟುಂಬ ಸದಸ್ಯರು ವಿಮಾ ಹಣವನ್ನು ಕ್ಲೈಮ್ ಮಾಡಬಹುದು.(PTI)

ಅಪಘಾತ ಸಂಭವಿಸಿದ 30 ದಿನಗಳ ಒಳಗೆ ಗ್ರಾಹಕರು ವಿತರಕರಿಗೆ ಮತ್ತು ಹತ್ತಿರದ ಪೊಲೀಸ್ ಠಾಣೆಗೆ ಅಪಘಾತವನ್ನು ವರದಿ ಮಾಡಬೇಕು. ಅಪಘಾತದ ಎಫ್‌ಐಆರ್ ಪ್ರತಿಯನ್ನು ಪೊಲೀಸರಿಂದ ಪಡೆಯಬೇಕು. ವಿಮಾ ಹಣವನ್ನು ಪಡೆಯಲು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನ ಪ್ರತಿಯೊಂದಿಗೆ ವೈದ್ಯಕೀಯ ರಸೀದಿ, ಆಸ್ಪತ್ರೆಯ ಬಿಲ್, ಮರಣೋತ್ತರ ಪರೀಕ್ಷೆಯ ವರದಿ ಮತ್ತು ಮರಣ ಪ್ರಮಾಣ ಪತ್ರವೂ ಅಗತ್ಯ.
icon

(4 / 5)

ಅಪಘಾತ ಸಂಭವಿಸಿದ 30 ದಿನಗಳ ಒಳಗೆ ಗ್ರಾಹಕರು ವಿತರಕರಿಗೆ ಮತ್ತು ಹತ್ತಿರದ ಪೊಲೀಸ್ ಠಾಣೆಗೆ ಅಪಘಾತವನ್ನು ವರದಿ ಮಾಡಬೇಕು. ಅಪಘಾತದ ಎಫ್‌ಐಆರ್ ಪ್ರತಿಯನ್ನು ಪೊಲೀಸರಿಂದ ಪಡೆಯಬೇಕು. ವಿಮಾ ಹಣವನ್ನು ಪಡೆಯಲು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನ ಪ್ರತಿಯೊಂದಿಗೆ ವೈದ್ಯಕೀಯ ರಸೀದಿ, ಆಸ್ಪತ್ರೆಯ ಬಿಲ್, ಮರಣೋತ್ತರ ಪರೀಕ್ಷೆಯ ವರದಿ ಮತ್ತು ಮರಣ ಪ್ರಮಾಣ ಪತ್ರವೂ ಅಗತ್ಯ.(PTI)

ಸಿಲಿಂಡರ್ ಅನ್ನು ಯಾರ ಹೆಸರಿನಲ್ಲಿ ನಮೂದಿಸಲಾಗಿದೆಯೋ ಅವರಿಗೆ ಮಾತ್ರ ವಿಮಾ ರಕ್ಷಣೆ ನೀಡಲಾಗುತ್ತದೆ ಎಂಬುದನ್ನು ನೆನಪಿಡಿ. ಆದರೆ ಈ ವಿಮಾ ಯೋಜನೆಯಲ್ಲಿ ನೀವು ಯಾರನ್ನೂ ನಾಮನಿರ್ದೇಶನ ಮಾಡುವಂತಿಲ್ಲ. ಈ ವಿಮಾ ಪ್ರಯೋಜನವು ಸಿಲಿಂಡರ್ ಪೈಪ್‌ಗಳು, ಸ್ಟೌವ್‌ಗಳು ಮತ್ತು ರೆಗ್ಯುಲೇಟರ್‌ಗಳ ಮೇಲೆ ISI ಗುರುತು ಹೊಂದಿರುವವರಿಗೆ ಮಾತ್ರ ಲಭ್ಯವಿರುತ್ತದೆ. ವಿಮಾ ಕ್ಲೈಮ್ ಅನ್ನು ತಿಳಿಸಲು ನಿಮ್ಮ ಸಿಲಿಂಡರ್ ಮತ್ತು ಸ್ಟೌವ್‌ನ ನಿಯತ ತಪಾಸಣೆಯನ್ನು ಮಾಡಿಸಬೇಕು.
icon

(5 / 5)

ಸಿಲಿಂಡರ್ ಅನ್ನು ಯಾರ ಹೆಸರಿನಲ್ಲಿ ನಮೂದಿಸಲಾಗಿದೆಯೋ ಅವರಿಗೆ ಮಾತ್ರ ವಿಮಾ ರಕ್ಷಣೆ ನೀಡಲಾಗುತ್ತದೆ ಎಂಬುದನ್ನು ನೆನಪಿಡಿ. ಆದರೆ ಈ ವಿಮಾ ಯೋಜನೆಯಲ್ಲಿ ನೀವು ಯಾರನ್ನೂ ನಾಮನಿರ್ದೇಶನ ಮಾಡುವಂತಿಲ್ಲ. ಈ ವಿಮಾ ಪ್ರಯೋಜನವು ಸಿಲಿಂಡರ್ ಪೈಪ್‌ಗಳು, ಸ್ಟೌವ್‌ಗಳು ಮತ್ತು ರೆಗ್ಯುಲೇಟರ್‌ಗಳ ಮೇಲೆ ISI ಗುರುತು ಹೊಂದಿರುವವರಿಗೆ ಮಾತ್ರ ಲಭ್ಯವಿರುತ್ತದೆ. ವಿಮಾ ಕ್ಲೈಮ್ ಅನ್ನು ತಿಳಿಸಲು ನಿಮ್ಮ ಸಿಲಿಂಡರ್ ಮತ್ತು ಸ್ಟೌವ್‌ನ ನಿಯತ ತಪಾಸಣೆಯನ್ನು ಮಾಡಿಸಬೇಕು.(PTI)


IPL_Entry_Point

ಇತರ ಗ್ಯಾಲರಿಗಳು