ಕನ್ನಡ ಸುದ್ದಿ  /  Nation And-world  /  Shabarimala News: Thiruvabharanam Procession On The Way To Sannidhanam Makara Jyoti Darshan Tomorrow Special Puja At Shree Ayyappa Sannidhi

Sabarimala News: ಅಯ್ಯಪ್ಪ ಸನ್ನಿಧಿಗೆ ಹೊರಟಿದೆ ತಿರುವಾಭರಣ; ನಾಳೆಯೇ ಮಕರ ಜ್ಯೋತಿ ದರ್ಶನ

Sabarimala News: ಕೇರಳದ ಶಬರಿಮಲೆ ಶ್ರೀ ಅಯ್ಯಪ್ಪ ಸನ್ನಿಧಾನ ಮಕರಜ್ಯೋತಿ ದರ್ಶನಕ್ಕೆ ಸಿದ್ಧತೆ ನಡೆಸಿದೆ. ಅಯ್ಯಪ್ಪ ಭಕ್ತರು ಕೂಡ ಸನ್ನಿಧಾನ ತಲುಪುವ ದಾವಂತದಲ್ಲಿದ್ದು, ಜ್ಯೋತಿ ದರ್ಶನಕ್ಕೆ ಕಾತರರಾಗಿದ್ದಾರೆ. ತಿರುವಾಭರಣ ಮೆರವಣಿಗೆ ಸನ್ನಿಧಾನದ ಕಡೆಗೆ ಹೊರಟಿದ್ದು, ನಾಳೆ ಸಂಜೆ ತಲುಪಲಿದೆ.

ಶಬರಿಮಲೆ ಅಯ್ಯಪ್ಪ ದೇವಾಲಯ
ಶಬರಿಮಲೆ ಅಯ್ಯಪ್ಪ ದೇವಾಲಯ

ಕೇರಳದ ಶಬರಿಮಲೆ ಶ್ರೀ ಅಯ್ಯಪ್ಪ ಸನ್ನಿಧಾನ ಈ ವರ್ಷದ ಮಕರ ಜ್ಯೋತಿ ದರ್ಶನಕ್ಕೆ ಸಿದ್ಧತೆ ನಡೆಸಿದೆ. ನಾಳೆಯೇ ಮುಸ್ಸಂಜೆ ಮಕರ ಜ್ಯೋತಿ ದರ್ಶನ ಮತ್ತು ಮಕರ ಸಂಕ್ರಮಣ ಪೂಜೆ ನಡೆಯಲಿದೆ.

ಸೂರ್ಯ ಭಗವಂತನು ಧನುರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಕಾಲಘಟ್ಟವೇ ಮಕರ ಸಂಕ್ರಮಣ. ತನ್ನಿಮಿತ್ತವಾಗಿ ಶ್ರೀ ಅಯ್ಯಪ್ಪ ಸನ್ನಿಧಿಯಲ್ಲಿ ಜ.14ರ ರಾತ್ರಿ 8.45ಕ್ಕೆ ಮಕರ ಸಂಕ್ರಮಣ ಪೂಜೆ ನಡೆಯಲಿದೆ. ಇದಕ್ಕೂ ಮುನ್ನ ಮುಸ್ಸಂಜೆ 6.30ಕ್ಕೆ ದೀಪಾರಾಧನೆ ನಡೆಯಲಿದೆ. ಇದೇ ವೇಳೆ ದೂರದ ಪೊನ್ನಂಬಲ ಮೇಡಿನಲ್ಲಿ ಮಕರ ಜ್ಯೋತಿ ದರ್ಶನವಾಗುತ್ತದೆ. ಆಕಾಶದಲ್ಲಿ ನಕ್ಷತ್ರ ಗೋಚರಿಸುತ್ತದೆ. ಅಯ್ಯಪ್ಪನ ಗರ್ಭಗುಡಿ ಮೇಲೆ ಗರುಡ ಪ್ರದಕ್ಷಿಣೆ ನಡೆಯುತ್ತದೆ.

ಮಕರ ಸಂಕ್ರಮಣ ಪೂಜೆಗಾಗಿ ಅಯ್ಯಪ್ಪ ಸನ್ನಿಧಾನ ಇಂದಿನಿಂದಲೇ ತಯಾರಿ ನಡೆಸುತ್ತದೆ. ಇಂದು ಶುದ್ಧಿಕ್ರಿಯೆಗಳು ನಡೆಯಲಿವೆ. ನಿನ್ನೆ ಪ್ರಸಾದ ಶುದ್ಧಿ ಕ್ರಿಯೆ ನಡೆದಿದೆ. ಇಂದು ಬಿಂಬ ಶುದ್ಧಿ ಕ್ರಿಯೆ ನಡೆಯುತ್ತದೆ.

ನಾಳೆ ರಾತ್ರಿ ಮಕರ ಸಂಕ್ರಮಣ ಪೂಜೆ ಬಳಿಕ ಮಾಳಿಗಪುರತ್ತಮ್ಮ ದೇವರು ಅಯ್ಯಪ್ಪ ಸನ್ನಿಧಿಗೆ ಆಗಮಿಸುವುದು ಸನ್ನಿವೇಶವಿದೆ. ಜ.15ರಿಂದ 19ರ ತನಕ ಮೆಟ್ಟಿಲ ಪೂಜೆ, 18ರಂದು ಭಸ್ಮಾಭಿಷೇಕ, 19ರಂದು ಗುರುಪೂಜೆ ನಡೆಯಲಿದೆ. ಜ.20ಕ್ಕೆ ಪಂದಳ ರಾಜ ಪ್ರತಿನಿಧಿ ಅಯ್ಯಪ್ಪ ದರ್ಶನ ಪಡೆದ ಬಳಿಕ ದೇವಸ್ಥಾನದ ಬಾಗಿಲು ಮುಚ್ಚುತ್ತದೆ. ಭಕ್ತರು ಜ.19ರ ತನಕ ಮಾತ್ರವೇ ಅಯ್ಯಪ್ಪ ದರ್ಶನ ಪಡೆಯಬಹುದು.

ಪಂದಳ ರಾಜನ ಅರಮನೆಯಿಂದ ಶ್ರೀ ಅಯ್ಯಪ್ಪನ ತಿರುವಾಭರಣ ಪೆಟ್ಟಿಗೆಯ ಮೆರವಣಿಗೆ ಶಬರಿಮಲೆ ಕಡೆಗೆ ಹೊರಟಿದೆ. ಮಕರಜ್ಯೋತಿ ಉತ್ಸವದ ಸಂದರ್ಭದಲ್ಲಿ ಶ್ರೀ ಅಯ್ಯಪ್ಪನನ್ನು ಈ ಆಭರಣಗಳಿಂದ ಅಲಂಕರಿಸಿ ಪೂಜಿಸುವುದು ವಾಡಿಕೆ. ನಾಳೆ ಸಂಜೆ 6.30ರ ಸುಮಾರಿಗೆ ಇದು ನೆರವೇರಲಿದೆ.

ಮಕರ ಸಂಕ್ರಮಣ ಪೂಜೆ ನಿಮಿತ್ತ ಸನ್ನಿಧಾನದಲ್ಲಿ ಈಗಾಗಲೇ ಭಕ್ತರು ತುಂಬಿಕೊಂಡಿರುವ ಕಾರಣ, ಜನದಟ್ಟಣೆ ಕಡಿಮೆ ಮಾಡಲು ಬೆಟ್ಟ ಏರುವಿಕೆ ಮತ್ತು ಅಯ್ಯಪ್ಪ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ನಾಳೆ ಸಂಜೆಯ ಮಕರ ಸಂಕ್ರಮಣ ಪೂಜೆ ಪ್ರಯುಕ್ತ ಶ್ರೀ ಅಯ್ಯಪ್ಪ ಸನ್ನಿಧಿಯ ಬಾಗಿಲು ಮಧ್ಯಾಹ್ನವೇ ಮುಚ್ಚಲಿದೆ.

ನಾಳೆ ಬೆಳಗ್ಗೆ 10 ಗಂಟೆ ಬಳಿಕ ಪಂಪಾದಿಂದ ಶಬರಿಮಲೆ ಶ್ರೀ ಸನ್ನಿಧಿಗೆ ಯಾತ್ರಿಕರು ಬೆಟ್ಟ ಏರುವುದನ್ನು ನಿಷೇಧಿಸಲಾಗಿದೆ. ಆದರೆ, ಮಕರ ಜ್ಯೋತಿ ದರ್ಶನದ ಬಳಿಕ ಈ ನಿಷೇಧ, ನಿರ್ಬಂಧಗಳು ಸಡಿಲವಾಗಲಿವೆ. ಅಯ್ಯಪ್ಪ ಭಕ್ತರ ದಟ್ಟಣೆ ನಿಯಂತ್ರಿಸಿ, ಸುಗಮವಾಗಿ ಉತ್ಸವ ನಡೆಸುವುದಕ್ಕೆಈ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊ‍ಳ್ಳಲಾಗುತ್ತದೆ ಎಂದು ದೇವಸ್ವಂ ಬೋರ್ಡ್‌ ಪ್ರತಿನಿಧಿಗಳು ತಿಳಿಸಿದ್ದಾರೆ.

ಗಮನಿಸಬಹುದಾದ ಸುದ್ದಿಗಳು

Sabarimala News: ಕೀಟನಾಶಕ ಸೃಷ್ಟಿಸಿದ ಕಳವಳ; ಶಬರಿಮಲೆಯಲ್ಲಿ ಈಗ ಏಲಕ್ಕಿ ಇಲ್ಲದ ಪ್ರಸಾದ

ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ʻಅರವಣ ಪಾಯಸಂʼಗೆ ವಿಶೇಷ ಮಹತ್ವ. ಕೀಟನಾಶಕ ಬಳಸಿದ ಏಲಕ್ಕಿಯನ್ನು ಅರವಣ ಪಾಯಸಂ ತಯಾರಿಕೆ ಬಳಸಿದ್ದು, ಆ ಬ್ಯಾಚ್‌ನ ಪ್ರಸಾದ ವಿತರಿಸದೇ ಇರುವಂತೆ ಕೇರಳ ಹೈಕೋರ್ಟ್‌ ಇತ್ತೀಚೆಗೆ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ದೇವಸ್ವಂ ಬೋರ್ಡ್‌ ಈ ತೀರ್ಮಾನ ತೆಗೆದುಕೊಂಡಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

Karnataka election 2023: ಜೆಡಿಎಸ್‌ ಜತೆಗೆ ಮೈತ್ರಿ; ಬಿಜೆಪಿ ನಾಯಕರ ಲೆಕ್ಕಾಚಾರ ಏನು?

Karnataka election 2023: ಬಿಜೆಪಿಗೆ ಬಹುಮತ ಸಿಗದೇ ಇದ್ದರೂ, ಕಾಂಗ್ರೆಸ್‌ಗೆ ಬಹುಮತ ಸಿಗದೇ ಇದ್ದರೂ ಮೈತ್ರಿಗೆ ಸಿಗುವ ಪಕ್ಷ ಜೆಡಿಎಸ್‌. ಹೀಗಾಗಿ ಅತಂತ್ರ ಫಲಿತಾಂಶ ಬಂದಾಗ ಅದರ ಪ್ರಯೋಜನ ಬಹುತೇಕ ಜೆಡಿಎಸ್‌ ಪಾಲಿಗೆ. ಈ ಸನ್ನಿವೇಶದಲ್ಲಿ ಬಿಜೆಪಿ ನಾಯಕರ ಲೆಕ್ಕಾಚಾರ ಏನು? ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point