ಕನ್ನಡ ಸುದ್ದಿ  /  Nation And-world  /  Ttd's Second Temple In Chennai To Be Dedicated To Devotees For Worship On March 17

TTD Temple: ನಟಿ ಕಾಂಚನ ಭೂಮಿ ದಾನ ನೀಡಿರುವ ಟಿಟಿಡಿಯ ಚೆನ್ನೈನ ಎರಡನೇ ದೇಗುಲ ಮಾರ್ಚ್‌ 17ರಂದು ಲೋಕಾರ್ಪಣೆ

ಟಿಟಿಡಿಯ ನೂತನ ದೇಗುಲಕ್ಕೆ ದಕ್ಷಿಣ ಭಾರತದ ನಟಿ ಪಿ. ಕಾಂಚನ ಅವರು ಭೂಮಿಯನ್ನು ದಾನ ಮಾಡಿದ್ದಾರೆ.

TTD Temple: ಟಿಟಿಡಿಯ ಚೆನ್ನೈನ ಎರಡನೇ ದೇಗುಲ ಮಾರ್ಚ್‌ 17ರಂದು ಲೋಕಾರ್ಪಣೆ
TTD Temple: ಟಿಟಿಡಿಯ ಚೆನ್ನೈನ ಎರಡನೇ ದೇಗುಲ ಮಾರ್ಚ್‌ 17ರಂದು ಲೋಕಾರ್ಪಣೆ

ತಿರುಪತಿ: ಜಗತ್ತಿನ ಶ್ರೀಮಂತ ದೇಗುಲದ ಉಸ್ತುವಾರಿ ನೋಡಿಕೊಳ್ಳುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಇದೀಗ ದೇವಿ ಪದ್ಮಾವತಿಯ ಎರಡನೇ ದೇಗುಲವನ್ನು ಚೆನ್ನೈನಲ್ಲಿ ಮಾರ್ಚ್‌ 17ರಂದು ಲೋಕಾರ್ಪಣೆ ಮಾಡಲಿದೆ.

ಚೆನ್ನೈನ ಟಿ ನಗರದ ಜಿಎನ್‌ ಚೆಟ್ಟಿ ರಸ್ತೆಯಲ್ಲಿ ನಿರ್ಮಿಸಲಾದ ಈ ದೇಗುಲವು ಟಿಟಿಡಿಯ ಎರಡನೇ ದೇಗುಲವಾಗಿದೆ. ಈ ದೇಗುಲವು ಟಿಟಿಡಿಯ ಮೊದಲ ದೇಗುಲದ ಹತ್ತಿರದಲ್ಲಿದೆ.

ಜಿಟಿ ರಸ್ತೆಯಲ್ಲಿರುವ ನೂತನ ದೇಗುಲದಲ್ಲಿ ಭಾನುವಾರದಿಂದಲೇ ವಿವಿಧ ಪೂಜಾ ಕಾರ್ಯಕ್ರಮಗಳನ್ನು, ಧಾರ್ಮಿಕ ವಿಧಿವಿಧಾನಗಳನ್ನು ಆರಂಭಿಸಲಾಗಿದೆ ಎಂದು ಟಿಟಿಡಿಯ ಚೆನ್ನೈ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷ ಮತ್ತು ಟಿಟಿಡಿಯ ವಿಶೇಷ ಸದಸ್ಯರಾದ ಎಜೆ ಶೇಖರ್‌ ರೆಡ್ಡಿ ಹೇಳಿದ್ದಾರೆ. ಈ ದೇಗುಲದಲ್ಲಿ ಮಾರ್ಚ್‌ 17ರಂದು ಮಹಾಕುಂಭಾಭಿಷೇಕಂ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ಟಿಟಿಡಿಯ ನೂತನ ದೇಗುಲಕ್ಕೆ ದಕ್ಷಿಣ ಭಾರತದ ನಟಿ ಪಿ. ಕಾಂಚನ ಅವರು ಭೂಮಿಯನ್ನು ದಾನ ಮಾಡಿದ್ದಾರೆ.

ಈ ದೇಗುಲದ ರಾಜಗೋಪುರಂ ನಿರ್ಮಾಣಕ್ಕೆ ಸುಮಾರು 1 ಕೋಟಿ ರೂಪಾಯಿ ವೆಚ್ಚವಾಗಿದೆ. ಈ ಮೊತ್ತವನ್ನು ಎಜೆ ಶೇಖರ್‌ ರೆಡ್ಡಿಯವರು ನೀಡಿದ್ದಾರೆ. ದೇಗುಲ ನಿರ್ಮಾಣಕ್ಕೆ ಸುಮಾರು 7 ಕೋಟಿ ರೂಪಾಯಿ ವೆಚ್ಚವಾಗಿದದೆ.

ಮಾರ್ಚ್‌ 17ರಂದು ಜಿಎನ್‌ ಚೆಟ್ಟಿ ರಸ್ತೆಯಲ್ಲಿ ಶ್ರೀ ಪದ್ಮಾವತಿ ಅಮ್ಮವರು ದೇಗುಲದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಎಲ್ಲಾ ಭಕ್ತರನ್ನು ಚೆನ್ನೈ ಎಲ್‌ಎಸಿ ಅಧ್ಯಕ್ಷರು ಆಮಂತ್ರಿಸಿದ್ದಾರೆ.

ಟಿ ನಗರದ ಜಿಎನ್ ಚೆಟ್ಟಿ ರಸ್ತೆಯಲ್ಲಿ 14880 ಚದರ ಅಡಿ ಜಾಗದಲ್ಲಿ ಹೊಸ ದೇವಸ್ಥಾನ ನಿರ್ಮಿಸಲಾಗಿದೆ. ಈ ಭೂಮಿಯನ್ನು ದಕ್ಷಿಣ ಭಾರತದ ಖ್ಯಾತ ನಟಿ ಪಿ ಕಾಂಚನಾ ಅವರು ಟಿಟಿಡಿಗೆ ದಾನ ಮಾಡಿದ್ದರು.

7 ಕೋಟಿ ವೆಚ್ಚದಲ್ಲಿ ದೇವಾಲಯದ ಕಾಮಗಾರಿ ನಡೆಯುತ್ತಿದೆ. ಟಿಟಿಡಿ ವಿಶ್ವಸ್ಥ ಮಂಡಳಿಗೆ ವಿಶೇಷ ಆಹ್ವಾನಿತರಾದ ಎ.ಜೆ.ಶೇಖರ್ ರೆಡ್ಡಿ ಅವರು ನೀಡಿದ ಸುಮಾರು 1.1 ಕೋಟಿ ರೂ. ದೇಣಿಗೆಯ ನೆರವಿನಿಂದ ರಾಜಗೋಪುರ ಕಾಮಗಾರಿ ನಡೆದಿದೆ.

ದೇಶದ ವಿವಿಧ ಪ್ರಮುಖ ನಗರಗಳನ್ನು ಸಂಪರ್ಕಿಸುವ, ಕರ್ನಾಟಕದ ಮೂಲಕ ಸಂಚರಿಸುವ ಹಲವು ರೈಲುಗಳು ಇನ್ಮುಂದೆ ತಿರುಪತಿಯಲ್ಲಿ ಕರ್ನಾಟಕದ ವಿವಿಧೆಡೆ ನಿಲ್ಲಲಿವೆ. ತಿರುಪತಿ ಯಾತ್ರೆ ಕೈಗೊಳ್ಳುವವರಿಗೆ ಇದರಿಂದ ಅನುಕೂಲವಾಗಲಿದೆ. ತಿರುಪತಿ–ಚಾಮರಾಜನಗರ ಎಕ್ಸ್​ಪ್ರೆಸ್​ ರೈಲು ಮಾರ್ಚ್ 6ನೇ ತಾರಿಕಿನಿಂದ ಕಾಮಸಮುದ್ರಂನಲ್ಲಿ ನಿಲ್ಲಲಿದೆ. ಬೆಂಗಳೂರು–ಕಾಕಿನಾಡ ಶೇಷಾದ್ರಿ ಎಕ್ಸ್​ಪ್ರೆಸ್ ಮಾರ್ಚ್ 6ರಿಂದ ತ್ಯಾಕಲ್ ನಿಲ್ದಾಣದಲ್ಲಿ ನಿಲ್ಲಲಿದೆ.

ಮಾರ್ಚ್ 4ರಿಂದ ಕುಂದಾಪುರದಲ್ಲಿ ತಿರುವಂತಪುರ–ನೇತ್ರಾವತಿ ಎಕ್ಸ್​ಪ್ರೆಸ್ ರೈಲು ನಿಲ್ಲಲಿದೆ. ಕೊಚುವೆಲಿ–ಯಶವಂತಪುರ ಎಕ್ಸ್​ಪ್ರೆಸ್ ರೈಲು ಮಾರ್ಚ್ 4 ನೇ ತಾರೀಕಿನಿಂದ ಬಂಗಾರಪೇಟೆಯಲ್ಲಿ ನಿಲ್ಲಲಿದೆ. ಇದೇ ರೀತಿ ಹುಬ್ಬಳ್ಳಿ–ಕಾರಟಗಿ ಎಕ್ಸ್​ಪ್ರೆಸ್ ರೈಲು ಮಾರ್ಚ್ 7ರಿಂದ ಬನ್ನಿಕೊಪ್ಪ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಹೊಂದಲಿದೆ

ತುಮಕೂರು, ಅರಸೀಕೆರೆ ಹಾಗೂ ದಾವಣಗೆರೆ ನಿಲ್ದಾಣದಲ್ಲಿ ಮಾತ್ರ ನಿಲ್ಲುತ್ತಿದ್ದ ಯಶವಂತಪುರ–ಬಾರ್ಮೆರ್ ಎಕ್ಸ್​ಪ್ರೆಸ್ ರೈಲು ಮಾರ್ಚ್ 4ರಿಂದ ಬೀರೂರು ನಿಲ್ದಾಣದಲ್ಲಿ ನಿಲ್ಲಲಿದೆ.

IPL_Entry_Point