ಕನ್ನಡ ಸುದ್ದಿ  /  Nation And-world  /  Ufo Like Cloud Formation Over Bursa City In Turkey Stuns Internet

UFO-Like Cloud: ಟರ್ಕಿಯ ಆಗಸದಲ್ಲಿ ವಿಲಕ್ಷಣ ಮೋಡ ರಚನೆ: ಯುಎಫ್‌ಓ ಹೋಲುವ ಲೆಂಟಿಕ್ಯುಲರ್ ಕ್ಲೌಡ್ ಬಗ್ಗೆ ನಿಮಗೆಷ್ಟು ಗೊತ್ತು?

ಕಳೆದ ಗುರುವಾರ (ಜ.೧೯) ಬೆಳಗ್ಗೆ ಟರ್ಕಿಯ ಬುರ್ಸಾ ನಗರದಲ್ಲಿ ಕಂಡುಬಂದ, ಗುರುತಿಸಲಾಗದ ಹಾರುವ ವಸ್ತು(UFO)ವನ್ನು ಹೋಲುವ ಅಪರೂಪದ ಮೋಡದ ರಚನೆ ಜಾಗತಿಕವಾಗಿ ಗಮನ ಸೆಳೆದಿದೆ. ದಿ ಗಾರ್ಡಿಯನ್ ಪ್ರಕಾರ, ಲೆಂಟಿಕ್ಯುಲರ್ ಕ್ಲೌಡ್ ಎಂದು ಕರೆಯಲ್ಪಡುವ ಬಹುತೇಕ ವೃತ್ತಾಕಾರದ ಮೋಡವು, ಸುಮಾರು ಒಂದು ಗಂಟೆಗಳ ಕಾಲ ಬುರ್ಸಾ ನಗರದ ಆಗಸವನ್ನು ಆವರಿಸಿತ್ತು. ಈ ಕುರಿತು ಇಲ್ಲಿದೆ ಮಾಹಿತಿ.

ಯುಎಫ್‌ಓ ಮಾದರಿ ಮೋಡ
ಯುಎಫ್‌ಓ ಮಾದರಿ ಮೋಡ (Verified Twitter)

ಇಸ್ತಾಂಬುಲ್:‌ ಕಳೆದ ಗುರುವಾರ (ಜ.19) ಬೆಳಗ್ಗೆ ಟರ್ಕಿಯ ಬುರ್ಸಾ ನಗರದಲ್ಲಿ ಕಂಡುಬಂದ, ಗುರುತಿಸಲಾಗದ ಹಾರುವ ವಸ್ತು(UFO)ವನ್ನು ಹೋಲುವ ಅಪರೂಪದ ಮೋಡದ ರಚನೆ ಜಾಗತಿಕವಾಗಿ ಗಮನ ಸೆಳೆದಿದೆ.

ದಿ ಗಾರ್ಡಿಯನ್ ಪ್ರಕಾರ, ಲೆಂಟಿಕ್ಯುಲರ್ ಕ್ಲೌಡ್ ಎಂದು ಕರೆಯಲ್ಪಡುವ ಬಹುತೇಕ ವೃತ್ತಾಕಾರದ ಮೋಡವು, ಸುಮಾರು ಒಂದು ಗಂಟೆಗಳ ಕಾಲ ಬುರ್ಸಾ ನಗರದ ಆಗಸವನ್ನು ಆವರಿಸಿತ್ತು. ಸೂರ್ಯೋದಯದ ಸಮಯದಲ್ಲಿ ಕಾಣಿಸಿಕೊಂಡ ಈ ವಿಲಕ್ಷಣ ಮೋಡ ರಚನೆಯನ್ನು, ಇಂಟರ್ನೆಟ್ ಬಳಕೆದಾರರು ತಮ್ಮ ಫೋನ್‌ಗಳಲ್ಲಿ ಸೆರೆಹಿಡಿದಿದ್ದಾರೆ.

ವಿಲಕ್ಷಣವಾಗಿ ಕಾಣುವ ಈ ಮೋಡದ ವೀಡಿಯೊಗಳು ಮತ್ತು ಫೋಟೋಗಳು, ಜಾಗತಿಕವಾಗಿ ವೈರಲ್‌ ಆಗಿವೆ. ಈ ಮೋಡ ಯುಎಫ್‌ಓ ಮಾದರಿಯಲ್ಲಿದ್ದು, ಪರಗ್ರಹ ಜೀವಿಗಳ ಯಾನವೊಂದು ಅಗಾಧ ಪ್ರಮಾಣದಲ್ಲಿ ಹೊಗೆ ಉಗುಳಿದಂತೆ ಭಾಸವಾಗುತ್ತದೆ. ಆದರೆ ಈ ಅಪರೂಪದ ವಿದ್ಯಮಾನವು ಕೇವಲ "ಲೆಂಟಿಕ್ಯುಲರ್ ಕ್ಲೌಡ್" ರಚನೆಯ ಪ್ರಕ್ರಿಯೆ ಎಂದು ಟರ್ಕಿಯ ರಾಜ್ಯ ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.

ದಿ ಗಾರ್ಡಿಯನ್ ಪ್ರಕಾರ, ಮಸೂರ ಮೋಡಗಳು ಬಾಗಿದ ಹಾಗೂ ಹಾರುವ ತಟ್ಟೆಯಂತಹ ನೋಟಕ್ಕೆ ಹೆಸರುವಾಸಿಯಾಗಿದೆ. ಅವು ಸಾಮಾನ್ಯವಾಗಿ 2,000 ಮತ್ತು 5,000 ಮೀಟರ್ ಎತ್ತರದಲ್ಲಿ ಕಂಡುಬರುತ್ತವೆ. ಬಹುತೇಕವಾಗಿ ಸೂರ್ಯೋದಯದ ಸಮಯದಲ್ಲಿ ಈ ಮೋಡಗಳ ರಚನೆಯಾಗುವುದರಿಂದ, ಸೂರ್ಯನ ಕಿರಣ ಇವುಗಳ ಮೇಲೆ ಬಿದ್ದು, ಅವು ಬಂಗಾರದ ಬಣ್ಣದಲ್ಲಿ ಹೊಳೆಯುವುದು ವಿಶೇಷ.

ಫಾಕ್ಸ್ ನ್ಯೂಸ್ ಪ್ರಕಾರ, ವಾತಾವರಣದ ಪದರವು ಶುದ್ಧೀಕರಣದ ಪ್ರಕ್ರಿಯಲ್ಲಿದ್ದಾಗ, ಮಸೂರ ಮೋಡಗಳು ರೂಪುಗೊಳ್ಳುತ್ತವೆ. ಅಂದರೆ ಗಾಳಿಯು ಸ್ಥಿರವಾಗಿ ಮತ್ತು ತೇವವಾಗಿದ್ದಾಗ, ಬೆಟ್ಟಗಳು ಮತ್ತು ಪರ್ವತಗಳ ಮೇಲೆ ಬಲವಾದ ಗಾಳಿಯ ಏರಿಳಿತದ ಪರಿಣಾಮವಾಗಿ ಅವು ರೂಪುಗೊಳ್ಳುತ್ತವೆ. ಮಸೂರ ಮೋಡಗಳು ಹೆಚ್ಚಾಗಿ ಚಳಿಗಾಲದಲ್ಲಿ ರೂಪುಗೊಳ್ಳುತ್ತವೆ. ಆದರೆ ವರ್ಷದ ಇತರ ಸಮಯಗಳಲ್ಲೂ ಅವುಗಳನ್ನು ನೋಡುವುದು ಸಾಧ್ಯವಿದೆ.

ಈ ರೀತಿಯ ಮೋಡಗಳ ರಚನೆಯು ಮಳೆಯ ಸಂಕೇತವನ್ನು ನೀಡಬಹುದು. ಬುರ್ಸಾ ನಗರವು ಪರ್ವತದ ಅಡಿಯಲ್ಲಿದ್ದು, ಇಲ್ಲಿ ಇಂತಹ ಮೋಡ ರಚನೆ ಸಾಮಾನ್ಯ ಸಂಗತಿ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಿನಲ್ಲಿ ಈ ವಿಲಕ್ಷಣ ಮೋಡ ರಚನೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಈ ಮೋಡದ ಕುರಿತು ನೆಟ್ಟಿಗರು ತಮ್ಮದೇ ಆದ ವಿಚಿತ್ರ ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ.

ಇಂದಿನ ಪ್ರಮುಖ ಸುದ್ದಿ

Amartya Sen: ಮುಸ್ಲಿಮರನ್ನು ಹೊರಗಿಡುವ ಬಿಜೆಪಿ ರಾಜಕಾರಣ ಸ್ವೀಕಾರ್ಹವಲ್ಲದ ಅನಾಗರಿಕತನ: ಅಮರ್ತ್ಯ ಸೇನ್‌ ಅಭಿಮತ

ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಮುಸ್ಲಿಮರನ್ನು ಹೊರಗಿಡುವ ಬಿಜೆಪಿಯ ಸಿದ್ಧಾಂತವು, ಸ್ವೀಕಾರ್ಹವಲ್ಲದ ಅನಾಗರಿಕತನ ಎಂದು ನೊಬೆಲ್‌ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖಾಸಗಿ ಸುದ್ದಿಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, ಅಮರ್ತ್ಯ ಸೇನ್‌ ಅವರು ಮೋದಿ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

Praveen Nettar murder case: 'ಉದ್ದೇಶಿತ ಹತ್ಯೆಗೆ ಕಿಲ್ಲರ್ ಸ್ಕ್ವಾಡ್‌'; ನೆಟ್ಟಾರು ಹತ್ಯೆ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಏನೇನಿದೆ?

“ಕೆಲವು ಸಮುದಾಯಗಳು ಮತ್ತು ಗುಂಪುಗಳಿಗೆ ಸೇರಿದ ವ್ಯಕ್ತಿಗಳು ಅಥವಾ ನಾಯಕರನ್ನು ಗುರುತಿಸಲು, ಪಟ್ಟಿ ಮಾಡಲು ಮತ್ತು ಅವರ ಮೇಲೆ ಒಂದು ಕಣ್ಣಿಟ್ಟಿರಲು ಈ ಸೇವಾ ತಂಡದ ಸದಸ್ಯರಿಗೆ ದಾಳಿ ತರಬೇತಿ ನೀಡಲಾಗಿದೆ. ಅಲ್ಲದೆ ಶಸ್ತ್ರಾಸ್ತ್ರಗಳನ್ನು ಕೂಡಾ ನೀಡಲಾಗಿದೆ,” ಎಂಬ ಆತಂಕಕಾರಿ ಮಾಹಿತಿಯನ್ನು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

IPL_Entry_Point

ವಿಭಾಗ