ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪಂಜಾಬ್ ಕಿಂಗ್ಸ್ ವಿರುದ್ಧ 261 ರನ್​​ಗಳ ಬೃಹತ್ ಮೊತ್ತ ದಾಖಲಿಸಿ ಆರ್​​ಸಿಬಿ ರೆಕಾರ್ಡ್ ಸರಿಗಟ್ಟಿದ ಕೆಕೆಆರ್

ಪಂಜಾಬ್ ಕಿಂಗ್ಸ್ ವಿರುದ್ಧ 261 ರನ್​​ಗಳ ಬೃಹತ್ ಮೊತ್ತ ದಾಖಲಿಸಿ ಆರ್​​ಸಿಬಿ ರೆಕಾರ್ಡ್ ಸರಿಗಟ್ಟಿದ ಕೆಕೆಆರ್

  • KKR Record: ಐಪಿಎಲ್​ನ 42ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 261 ರನ್ ಬಾರಿಸಿದ ಕೋಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ದಾಖಲೆಯನ್ನು ಸರಿಗಟ್ಟಿದೆ.

ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಏಪ್ರಿಲ್ 26ರಂದು ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಇತಿಹಾಸ ನಿರ್ಮಿಸಿದೆ. ಈ ಮೈದಾನದಲ್ಲಿ ಕೆಕೆಆರ್ ಅತ್ಯಧಿಕ ಸ್ಕೋರ್ ಗಳಿಸಿತು. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್​, 6 ವಿಕೆಟ್ ನಷ್ಟಕ್ಕೆ 261 ರನ್ ಗಳಿಸಿತು. ಇದು ಐಪಿಎಲ್​​ನಲ್ಲಿ ಈಡನ್ ಮೈದಾನದಲ್ಲಿ ದಾಖಲಾದ ಗರಿಷ್ಠ ಸ್ಕೋರ್ ಮತ್ತು ಐಪಿಎಲ್ ಇತಿಹಾಸದಲ್ಲಿ ದಾಖಲಾದ 7ನೇ ಅತಿ ಹೆಚ್ಚು ಸ್ಕೋರ್ ಆಗಿದೆ.
icon

(1 / 5)

ಇದೇ ಋತುವಿನಲ್ಲಿ ಕೆಕೆಆರ್ 250ಕ್ಕೂ ಹೆಚ್ಚು ರನ್ ಗಳಿಸಿರುವುದು ಇದು 2ನೇ ಬಾರಿ. ಇದಕ್ಕೂ ಮುನ್ನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 272 ರನ್ ಗಳಿಸಿತ್ತು. ಇದರೊಂದಿಗೆ ಆರ್​​ಸಿಬಿ ದಾಖಲೆಯನ್ನು ಕೆಕೆಆರ್​ ಸರಿಗಟ್ಟಿದೆ. ಎಸ್​​​ಆರ್​ಹೆಚ್​ ಒಂದು ಆವೃತ್ತಿಯಲ್ಲಿ 3 ಬಾರಿ 250+ ರನ್ ಗಡಿ ದಾಟಿ ದಾಖಲೆ ಬರೆದಿದ್ದು, ಆರ್​​ಸಿಬಿ 2 ಬಾರಿ 250ರ ಗಡಿ ದಾಟಿದೆ. 2013ರಲ್ಲಿ 263 ರನ್ ಬಾರಿಸಿದ್ದ ಆರ್​​ಸಿಬಿ, ಇದೇ ವರ್ಷ 262 ರನ್ ಬಾರಿಸಿತ್ತು.
icon

(2 / 5)

ಐಪಿಎಲ್​​​ನಲ್ಲಿ ಎಸ್​ಆರ್​​ಹೆಚ್​ 3 ಬಾರಿ 250+ ರನ್ (287, 277, 266) ಗಡಿ ದಾಟಿದೆ. ಈಗ ಕೆಕೆಆರ್ ಮತ್ತು ಆರ್​ಸಿಬಿ 2 ಬಾರಿ ಈ ಸಾಧನೆ ಮಾಡಿವೆ. ಲಕ್ನೋ ಸೂಪರ್ ಜೈಂಟ್ಸ್ ಒಮ್ಮೆ 250 ರನ್​​​ಗಳ ಗಡಿ ದಾಟಿದೆ. 2023ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 257 ರನ್ ಬಾರಿಸಿತ್ತು.
icon

(3 / 5)

ಪುರುಷರ ಟಿ20 ಕ್ರಿಕೆಟ್​​​ನಲ್ಲಿ ಹೈದರಾಬಾದ್ ಮತ್ತು ಸರ್ರೆ ತಂಡಗಳು ಅತಿ ಹೆಚ್ಚು ಬಾರಿ 250ಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದೆ. ಎರಡೂ ತಂಡಗಳು ತಲಾ ಮೂರು ಬಾರಿ ಈ ಸಾಧನೆ ಮಾಡಿವೆ. ಆರ್​​ಸಿಬಿ, ಕೆಕೆಆರ್, ಜೆಕ್ ಗಣರಾಜ್ಯ, ಸೋಮರ್ಸೆಟ್ ಮತ್ತು ಯಾರ್ಕ್​​ಶೈರ್​ ತಲಾ 2 ಬಾರಿ 250 ರನ್​​ಗಳ ಗಡಿ ದಾಟಿದೆ.
icon

(4 / 5)

ಕೋಲ್ಕತ್ತಾದ ಈಡನ್ ಗಾರ್ಡನ್​ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಕೆಕೆಆರ್​, 20 ಓವರ್​​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 261 ರನ್ ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ ಪಂಜಾಬ್, ಇನ್ನೂ 8 ಎಸೆತಗಳನ್ನು ಬಾಕಿ ಉಳಿಸಿ ಗೆದ್ದು ಬೀಗಿತು. 2 ವಿಕೆಟ್ ನಷ್ಟಕ್ಕೆ 18.4 ಓವರ್​​ಗಳಲ್ಲಿ 262 ರನ್ ಗಳಿಸಿತು.
icon

(5 / 5)

IPL_Entry_Point

ಇತರ ಗ್ಯಾಲರಿಗಳು