Kannada News  /  Photo Gallery  /  Happy Rose Day 2023: Know The Color And Meaning Of Roses

Happy Rose Day 2023: ಫೆಬ್ರವರಿ 7 ರೋಸ್‌ ಡೇ, ನಿಮ್ಮ ಹುಡುಗಿಗೆ ಗುಲಾಬಿ ನೀಡುವ ಮುನ್ನ ಅದರ ಬಣ್ಣ ಹಾಗೂ ಅರ್ಥ ತಿಳಿದುಕೊಳ್ಳಿ

06 February 2023, 13:59 IST HT Kannada Desk
06 February 2023, 13:59 , IST

ಪ್ರತಿ ವರ್ಷ ಫೆಬ್ರವರಿ 14 ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಆದರೆ ಅದಕ್ಕೂ ಒಂದು ವಾರದ ಮುನ್ನ ವ್ಯಾಲೆಂಟೈನ್‌ ವೀಕ್‌ ಆಚರಿಸಲಾಗುತ್ತದೆ. ಫೆಬ್ರವರಿ 7 ರಿಂದ ಇದು ಆರಂಭವಾಗುತ್ತದೆ. ಚಾಕೊಲೇಟ್‌ ಡೇ, ಪ್ರಪೋಸ್‌ ಡೇ, ಹಗ್‌ ಡೇ ಹೀಗೆ ಏಳೂ ದಿನಗಳು ಒಂದೊಂದು ದಿನವನ್ನಾಗಿ ಆಚರಿಸಲಾಗುತ್ತದೆ. ಮೊದಲ ದಿನ ರೋಸ್‌ ಡೇ.

 ಫೆಬ್ರವರಿ 7, ರೋಸ್‌ ಡೇಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ತಮ್ಮ ಪ್ರೀತಿ ಪಾತ್ರರಿಗೆ ಗುಲಾಬಿಗಳನ್ನು ನೀಡಿ ಶುಭ ಕೋರುವ ದಿನವಾಗಿದೆ.  ಆದರೆ ನೀವು ಯಾವ ಬಣ್ಣದ ಗುಲಾಬಿ ನೀಡಬೇಕು ಎಂದು ನಿರ್ಧರಿಸಿದ್ದೀರಿ ಅನ್ನೋದು ಬಹಳ ಮುಖ್ಯ. ಏಕೆಂದರೆ ಒಂದೊಂದು ಬಣ್ಣದ ಗುಲಾಬಿ ಹೂ ಒಂದೊಂದು ಅರ್ಥವನ್ನು ಸೂಚಿಸುತ್ತದೆ. ಒಂದು ನಿಮಗೆ ಇದರ ಬಗ್ಗೆ ಮಾಹಿತಿ ಇಲ್ಲದಿದ್ದಲ್ಲಿ ಇದನ್ನು ಓದಿ. 

(1 / 8)

 ಫೆಬ್ರವರಿ 7, ರೋಸ್‌ ಡೇಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ತಮ್ಮ ಪ್ರೀತಿ ಪಾತ್ರರಿಗೆ ಗುಲಾಬಿಗಳನ್ನು ನೀಡಿ ಶುಭ ಕೋರುವ ದಿನವಾಗಿದೆ.  ಆದರೆ ನೀವು ಯಾವ ಬಣ್ಣದ ಗುಲಾಬಿ ನೀಡಬೇಕು ಎಂದು ನಿರ್ಧರಿಸಿದ್ದೀರಿ ಅನ್ನೋದು ಬಹಳ ಮುಖ್ಯ. ಏಕೆಂದರೆ ಒಂದೊಂದು ಬಣ್ಣದ ಗುಲಾಬಿ ಹೂ ಒಂದೊಂದು ಅರ್ಥವನ್ನು ಸೂಚಿಸುತ್ತದೆ. ಒಂದು ನಿಮಗೆ ಇದರ ಬಗ್ಗೆ ಮಾಹಿತಿ ಇಲ್ಲದಿದ್ದಲ್ಲಿ ಇದನ್ನು ಓದಿ. (PC: Freepik. Unsplash, Pixaby)

ಕೆಂಪು ಗುಲಾಬಿ:   ಗುಲಾಬಿ ಪ್ರಿಯರಿಗೆ ಕೆಂಪು ಬಣ್ಣದ ಗುಲಾಬಿ ಬಹಳ ಇಷ್ಟ. ಈ ಬಣ್ಣದ ಅರ್ಥ ಏನೆಂದು ಬಹಳ ಜನರಿಗೆ ಗೊತ್ತು. ಹೌದು, ಕೆಂಪು ಗುಲಾಬಿ ಪ್ರೀತಿಯ ಸಂಕೇತವಾಗಿದೆ. ಆದ್ದರಿಂದ ಬಹಳ ಮಂದಿ ತಾವು ಇಷ್ಟಪಡುವವರಿಗೆ ಕೆಂಪು ಬಣ್ಣದ ಗುಲಾಬಿ ನೀಡಿ ತಮ್ಮ ಪ್ರೇಮ ನಿವೇದನೆ ಮಾಡುತ್ತಾರೆ. ನಿಮ್ಮ ಮನಸ್ಸಿನಲ್ಲಿ ಯಾರಾದರೂ ಇದ್ದರೆ, ನೀವು ಅವರಿಗೆ ಕೆಂಪು ಗುಲಾಬಿ ನೀಡಿ ಪ್ರಪೋಸ್‌ ಮಾಡಬಹುದು. 

(2 / 8)

ಪಿಂಕ್‌ ಗುಲಾಬಿ: ನೀವು ಯಾರಿಗಾದರೂ ಅಭಿನಂದಿಸಬೇಕು ಎಂದಾದಲ್ಲಿ ಅವರಿಗೆ ಪಿಂಕ್‌ ಬಣ್ಣದ ಗುಲಾಬಿ ನೀಡಬಹುದು.  ಪಿಂಕ್‌ ಬಣ್ಣದ ಗುಲಾಬಿ ಸ್ತ್ರೀತ್ವ ಹಾಗೂ ಸೊಬಗನ್ನು ಪ್ರತಿನಿಧಿಸುತ್ತದೆ. ನಿಶ್ಚಿತಾರ್ಥ, ಮದುವೆ, ಬರ್ತ್‌ಡೇ,  ಬೇಬಿ ಶವರ್‌ ಹಾಗೂ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ನೀವು ಈ ರೋಸ್‌ ನೀಡಬಹುದು. ಒಂದು ವೇಳೆ ನಿಮ್ಮ ಪ್ರಿಯತಮೆಗೆ ಇದೇ ಬಣ್ಣದ ರೋಸ್‌ ಇಷ್ಟವಿದ್ದಲ್ಲಿ ಅದನ್ನೇ ನೀಡಿ ಇಂಪ್ರೆಸ್‌ ಮಾಡಿದರೂ ತಪ್ಪಿಲ್ಲ. 

(3 / 8)

ಲ್ಯಾವೆಂಡರ್ ರೋಸ್‌: ಈ ಗುಲಾಬಿ ದೊರೆಯುವುದು ಬಹಳ ಅಪರೂಪ. ಒಂದು ವೇಳೆ ನೀವು ಈ ಬಣ್ಣದ ಗುಲಾಬಿಯನ್ನು ಯಾರಿಗಾದರೂ ನೀಡುತ್ತಿದ್ದೀರಿ ಎಂದರೆ ನಿಮಗೆ ಅವರ ಬಗ್ಗೆ ಮೊದಲ ನೋಟದಲ್ಲೇ ಲವ್‌ ಆಗಿದೆ ಎಂದರ್ಥ. ತಮ್ಮ ಪ್ರಾಮಾಣಿಕ ಭಾವನೆಯನ್ನು ವ್ಯಕ್ತಪಡಿಸಲು ಈ ಬಣ್ಣದ ಗುಲಾಬಿ ಪರಿಪೂರ್ಣವಾಗಿದೆ. 

(4 / 8)

 ಆರೆಂಜ್‌ ಗುಲಾಬಿ:  ಕಿತ್ತಳೆ ಬಣ್ಣದ ಗುಲಾಬಿಯು ನಿಮ್ಮ ಪ್ರೀತಿ ಪಾತ್ರರೊಂದಿಗೆ ನೀವು ಭಾವನಾತ್ಮಕ ಸಂಬಂಧವನ್ನು ಹೊಂದಲು ಬಯಸುತ್ತೀರಿ ಎಂಬುದನ್ನು ಸೂಚಿಸುತ್ತದೆ. ನಿಮ್ಮಿಬ್ಬರ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಿದ್ಧರಿದ್ದೀರಿ ಎಂಬುದರ ಸಂಕೇತವನ್ನು ಪ್ರತಿನಿಧಿಸುತ್ತದೆ. 

(5 / 8)

 ಹಳದಿ ಗುಲಾಬಿ: ಹಳದಿ ಗುಲಾಬಿಗಳು ಸ್ನೇಹ ಮತ್ತು ಸಂತೋಷವನ್ನು ಸಂಕೇತಿಸುತ್ತವೆ.  ಈ ಗುಲಾಬಿಯನ್ನು ನೀಡುವ ಮೂಲಕ ನಿಮ್ಮ ಸಂತೋಷ,  ಕಾಳಜಿ, ವಾತ್ಸಲ್ಯ, ಸ್ನೇಹದ ಭಾವನೆಯನ್ನು ನಿಮ್ಮ ಪ್ರೀತಿ ಪಾತ್ರರೊಂದಿಗೆ ಹಂಚಿಕೊಳ್ಳಬಹುದು. 

(6 / 8)

ಬಿಳಿ ಗುಲಾಬಿ: ಬಿಳಿ ಬಣ್ಣದ ಗುಲಾಬಿ ಮುಗ್ಧತೆ, ಶಾಂತಿ, ಪ್ರಶಾಂತತೆಯನ್ನು ಸಂಕೇತಿಸುತ್ತದೆ. ಆದರೆ ರೋಸ್‌ ಡೇಯಂದು ಈ ಬಣ್ಣದ ಗುಲಾಬಿ ನೀಡಲು ಸೂಕ್ತವಲ್ಲ. ಮದುವೆ ಅಥವಾ ಯಾರಿಗಾದರೂ ಗೌರವಾರ್ಥವಾಗಿ ನೀಡಲು ಇದು ಸೂಕ್ತವಾಗಿದೆ. 

(7 / 8)

ಪೀಚ್ ರೋಸ್: ಈ ಬಣ್ಣದ ಗುಲಾಬಿ ಪ್ರಾಮಾಣಿಕತೆ, ಮುಗ್ಧತೆ, ವಾತ್ಸಲ್ಯ, ಕಾಳಜಿ, ಕೃತಜ್ಞತೆಯನ್ನು ಸಂಕೇತಿಸುತ್ತದೆ.  ಪ್ರೇಮಿಗಳ ದಿನ ಅಥವಾ ರೋಸ್‌ ಡೇಯಂತೆ ನಿಮ್ಮ ಪ್ರಿಯತಮೆಗೆ ಈ ಪೀಚ್‌ ರೋಸ್‌ ನೀಡಬಹುದು.   

(8 / 8)

ಇತರ ಗ್ಯಾಲರಿಗಳು