ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್ 2024ರಲ್ಲಿ ಅಬ್ಬರಿಸುತ್ತಿರುವ ಹಿರಿಯ ಕ್ರಿಕೆಟಿಗರು; ಇವರಿಗೆ ವಯಸ್ಸು ಕೇವಲ ಸಂಖ್ಯೆಯಷ್ಟೇ

ಐಪಿಎಲ್ 2024ರಲ್ಲಿ ಅಬ್ಬರಿಸುತ್ತಿರುವ ಹಿರಿಯ ಕ್ರಿಕೆಟಿಗರು; ಇವರಿಗೆ ವಯಸ್ಸು ಕೇವಲ ಸಂಖ್ಯೆಯಷ್ಟೇ

  • ಐಪಿಎಲ್‌ 2024ರಲ್ಲಿ ಹಲವು ಆಟಗಾರರು ವಯಸ್ಸು ಕೇವಲ ಸಂಖ್ಯೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅವರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅಗ್ರಪಂಕ್ತಿಯಲ್ಲಿದ್ದಾರೆ. ಪ್ರಸಕ್ತ ಐಪಿಎಲ್‌ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಹಿರಿಯ ಆಟಗಾರರನ್ನು ನೋಡೋಣ.

ಈ ಬಾರಿಯ ಐಪಿಎಲ್‌ನಲ್ಲಿ ದಿನೇಶ್‌ ಕಾರ್ತಿಕ್‌, ಎಂಎಸ್‌ ಧೋನಿ ಸೇರಿ ಹಲವು ಹಿರಿಯ ಕ್ರಿಕೆಟಿಗರು ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ವಯಸ್ಸು 35ರ ಗಡಿ ದಾಟಿದ್ದರೂ, ಈ ಆಟಗಾರರ ಫಿಟ್‌ನೆಸ್‌ ಹಾಗೂ ಆಟದ ವೈಖರಿಯಲ್ಲಿ ಬದಲಾಗಿಲ್ಲ.
icon

(1 / 7)

ಈ ಬಾರಿಯ ಐಪಿಎಲ್‌ನಲ್ಲಿ ದಿನೇಶ್‌ ಕಾರ್ತಿಕ್‌, ಎಂಎಸ್‌ ಧೋನಿ ಸೇರಿ ಹಲವು ಹಿರಿಯ ಕ್ರಿಕೆಟಿಗರು ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ವಯಸ್ಸು 35ರ ಗಡಿ ದಾಟಿದ್ದರೂ, ಈ ಆಟಗಾರರ ಫಿಟ್‌ನೆಸ್‌ ಹಾಗೂ ಆಟದ ವೈಖರಿಯಲ್ಲಿ ಬದಲಾಗಿಲ್ಲ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ವಯಸ್ಸಿನ ಲೆಕ್ಕವಿಲ್ಲದೆ ಸ್ಫೋಟಕ ಆಟ ಪ್ರದರ್ಶಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಐಪಿಎಲ್‌ನಲ್ಲಿ ಅವರು ಆಡಿದ ಆರು ಇನ್ನಿಂಗ್ಸ್‌ಗಳಲ್ಲಿ ನಾಲ್ಕರಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಈ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಅವರು 59 ರನ್ ಗಳಿಸಿದ್ದಾರೆ. 236ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದಾರೆ. ಇದರೊಂದಿಗೆ ವಿಕೆಟ್‌ಗಳ ಹಿಂದೆ ಕೀಪಿಂಗ್‌ ಮಾಡುವುದರಲ್ಲಿಯೂ ಯಶಸ್ವಿಯಾಗಿದ್ದಾರೆ. 42 ವರ್ಷ ವಯಸ್ಸಿನಲ್ಲೂ ಮಹೇಂದ್ರ ಸಿಂಗ್ ಧೋನಿ ಫಿಟ್‌ನೆಸ್‌ ಯುವಕರನ್ನು ನಾಚಿಸುವಂತಿದೆ.
icon

(2 / 7)

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ವಯಸ್ಸಿನ ಲೆಕ್ಕವಿಲ್ಲದೆ ಸ್ಫೋಟಕ ಆಟ ಪ್ರದರ್ಶಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಐಪಿಎಲ್‌ನಲ್ಲಿ ಅವರು ಆಡಿದ ಆರು ಇನ್ನಿಂಗ್ಸ್‌ಗಳಲ್ಲಿ ನಾಲ್ಕರಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಈ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಅವರು 59 ರನ್ ಗಳಿಸಿದ್ದಾರೆ. 236ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದಾರೆ. ಇದರೊಂದಿಗೆ ವಿಕೆಟ್‌ಗಳ ಹಿಂದೆ ಕೀಪಿಂಗ್‌ ಮಾಡುವುದರಲ್ಲಿಯೂ ಯಶಸ್ವಿಯಾಗಿದ್ದಾರೆ. 42 ವರ್ಷ ವಯಸ್ಸಿನಲ್ಲೂ ಮಹೇಂದ್ರ ಸಿಂಗ್ ಧೋನಿ ಫಿಟ್‌ನೆಸ್‌ ಯುವಕರನ್ನು ನಾಚಿಸುವಂತಿದೆ.(AFP)

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್‌ಗೆ ಈಗ 40ರ ಹರೆಯ. ಅವರು ಈವರೆಗೆ ಆಡಿದ 7 ಪಂದ್ಯಗಳಲ್ಲಿ 232 ರನ್ ಗಳಿಸಿದ್ದಾರೆ. ಆರಂಭದ ಕೆಲ ಪಂದ್ಯಗಳಲ್ಲಿ ವಿಫಲರಾಗಿದ್ದ ಫಾಫ್, ಪ್ರಸ್ತುತ ಆರೆಂಜ್ ಕ್ಯಾಪ್ ರೇಸ್‌ನಲ್ಲಿ 12ನೇ ಸ್ಥಾನದಲ್ಲಿದ್ದಾರೆ.
icon

(3 / 7)

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್‌ಗೆ ಈಗ 40ರ ಹರೆಯ. ಅವರು ಈವರೆಗೆ ಆಡಿದ 7 ಪಂದ್ಯಗಳಲ್ಲಿ 232 ರನ್ ಗಳಿಸಿದ್ದಾರೆ. ಆರಂಭದ ಕೆಲ ಪಂದ್ಯಗಳಲ್ಲಿ ವಿಫಲರಾಗಿದ್ದ ಫಾಫ್, ಪ್ರಸ್ತುತ ಆರೆಂಜ್ ಕ್ಯಾಪ್ ರೇಸ್‌ನಲ್ಲಿ 12ನೇ ಸ್ಥಾನದಲ್ಲಿದ್ದಾರೆ.(ANI )

ದಿನೇಶ್ ಕಾರ್ತಿಕ್ ಈ ವರ್ಷ 39ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಭಾರತದ ಅನುಭವಿ ಹಾಗೂ ಹಿರಿಯ ಆಟಗಾರ ಇನ್ನೂ ಬ್ಯಾಟ್ನೊಂದಿಗೆ ಗರ್ಜಿಸುತ್ತಿದ್ದಾರೆ. ಪ್ರಸ್ತುತ ಐಪಿಎಲ್‌ನಲ್ಲಿ ಅವರು ಏಳು ಪಂದ್ಯಗಳ ಆರು ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿ 226 ರನ್ ಕಲೆ ಹಾಕಿದ್ದಾರೆ. 205ರ ಸ್ಟ್ರೈಕ್ ರೇಟ್ ಕಾಪಾಡಿಕೊಂಡಿದ್ದಾರೆ.
icon

(4 / 7)

ದಿನೇಶ್ ಕಾರ್ತಿಕ್ ಈ ವರ್ಷ 39ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಭಾರತದ ಅನುಭವಿ ಹಾಗೂ ಹಿರಿಯ ಆಟಗಾರ ಇನ್ನೂ ಬ್ಯಾಟ್ನೊಂದಿಗೆ ಗರ್ಜಿಸುತ್ತಿದ್ದಾರೆ. ಪ್ರಸ್ತುತ ಐಪಿಎಲ್‌ನಲ್ಲಿ ಅವರು ಏಳು ಪಂದ್ಯಗಳ ಆರು ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿ 226 ರನ್ ಕಲೆ ಹಾಕಿದ್ದಾರೆ. 205ರ ಸ್ಟ್ರೈಕ್ ರೇಟ್ ಕಾಪಾಡಿಕೊಂಡಿದ್ದಾರೆ.(AFP)

37ರ ಹರೆಯದ ಡೇವಿಡ್ ವಾರ್ನರ್ ಈಗಾಗಲೇ 166 ರನ್ ಗಳಿಸಿದ್ದಾರೆ. ಅವರು 6 ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಆಸ್ಟ್ರೇಲಿಯಾದ ಸ್ಟಾರ್ ಆರಂಭಿಕ ಆಟಗಾರ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಆತ್ಮವಿಶ್ವಾಸ ಹೆಚ್ಚಿಸುತ್ತಿದ್ದಾರೆ.
icon

(5 / 7)

37ರ ಹರೆಯದ ಡೇವಿಡ್ ವಾರ್ನರ್ ಈಗಾಗಲೇ 166 ರನ್ ಗಳಿಸಿದ್ದಾರೆ. ಅವರು 6 ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಆಸ್ಟ್ರೇಲಿಯಾದ ಸ್ಟಾರ್ ಆರಂಭಿಕ ಆಟಗಾರ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಆತ್ಮವಿಶ್ವಾಸ ಹೆಚ್ಚಿಸುತ್ತಿದ್ದಾರೆ.(ANI)

39 ವರ್ಷದ ವೃದ್ಧಿಮಾನ್ ಸಹಾ ಗುಜರಾತ್‌ ತಂಡದ ಅನುಭವಿ ಬ್ಯಾಟರ್. ಈ ಬಾರಿ ಅವರು ಆಡಿದ 5 ಪಂದ್ಯಗಳ 5 ಇನ್ನಿಂಗ್ಸ್‌ಗಳಲ್ಲಿ 78 ರನ್ ಗಳಿಸಿದ್ದಾರೆ. ವಿಕೆಟ್‌ ಕೀಪಿಂಗ್‌ನಲ್ಲಿಯೂ ಅವರು ಮಿಂಚುತ್ತಿದ್ದಾರೆ.
icon

(6 / 7)

39 ವರ್ಷದ ವೃದ್ಧಿಮಾನ್ ಸಹಾ ಗುಜರಾತ್‌ ತಂಡದ ಅನುಭವಿ ಬ್ಯಾಟರ್. ಈ ಬಾರಿ ಅವರು ಆಡಿದ 5 ಪಂದ್ಯಗಳ 5 ಇನ್ನಿಂಗ್ಸ್‌ಗಳಲ್ಲಿ 78 ರನ್ ಗಳಿಸಿದ್ದಾರೆ. ವಿಕೆಟ್‌ ಕೀಪಿಂಗ್‌ನಲ್ಲಿಯೂ ಅವರು ಮಿಂಚುತ್ತಿದ್ದಾರೆ.(PTI)

ಪಂಜಾಬ್‌ ಕಿಂಗ್ಸ್‌ ತಂಡದ ನಾಯಕ ಶಿಖರ್ ಧವನ್ ಈವರೆಗೆ ಐದು ಪಂದ್ಯಗಳಲ್ಲಿ ಆಡಿದ್ದು, 152 ರನ್ ಗಳಿಸಿದ್ದಾರೆ. ಸದ್ಯ ಗಾಯಾಳುವಾಗಿ ತಂಡದಿಂದ ಹೊರಬಿದ್ದಿರುವ ಧವನ್‌ಗೆ 38ರ ಹರೆಯ.
icon

(7 / 7)

ಪಂಜಾಬ್‌ ಕಿಂಗ್ಸ್‌ ತಂಡದ ನಾಯಕ ಶಿಖರ್ ಧವನ್ ಈವರೆಗೆ ಐದು ಪಂದ್ಯಗಳಲ್ಲಿ ಆಡಿದ್ದು, 152 ರನ್ ಗಳಿಸಿದ್ದಾರೆ. ಸದ್ಯ ಗಾಯಾಳುವಾಗಿ ತಂಡದಿಂದ ಹೊರಬಿದ್ದಿರುವ ಧವನ್‌ಗೆ 38ರ ಹರೆಯ.(PTI)


IPL_Entry_Point

ಇತರ ಗ್ಯಾಲರಿಗಳು