ಇತಿಹಾಸ ಸೃಷ್ಟಿಸಿದ ಪಿಯೂಷ್ ಚಾವ್ಲಾ; ಡ್ವೇನ್ ಬ್ರಾವೋ ದಾಖಲೆ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಹಿರಿಯ ಸ್ಪಿನ್ನರ್
- Piyush Chawla Record: ಮುಂಬೈ ಇಂಡಿಯನ್ಸ್ ತಂಡದ 35 ವರ್ಷದ ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರು ಐಪಿಎಲ್ನಲ್ಲಿ ಡ್ವೇನ್ ಬ್ರಾವೋ ಅವರ ದಾಖಲೆಯನ್ನು ಮುರಿದಿದ್ದಾರೆ.
- Piyush Chawla Record: ಮುಂಬೈ ಇಂಡಿಯನ್ಸ್ ತಂಡದ 35 ವರ್ಷದ ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರು ಐಪಿಎಲ್ನಲ್ಲಿ ಡ್ವೇನ್ ಬ್ರಾವೋ ಅವರ ದಾಖಲೆಯನ್ನು ಮುರಿದಿದ್ದಾರೆ.
(1 / 5)
ಕೆಕೆಆರ್ ವಿರುದ್ಧದ ಐಪಿಎಲ್ನ 51ನೇ ಪಂದ್ಯದಲ್ಲಿ ರಿಂಕು ಸಿಂಗ್ ವಿಕೆಟ್ ಪಡೆದ ಮುಂಬೈ ಇಂಡಿಯನ್ಸ್ ಸ್ಪಿನ್ನರ್ ಪಿಯೂಷ್ ಚಾವ್ಲಾ ನೂತನ ದಾಖಲೆ ಬರೆದಿದ್ದಾರೆ.
(2 / 5)
ಪಂದ್ಯದಲ್ಲಿ ಮೂರು ಓವರ್ ಬೌಲಿಂಗ್ ಮಾಡಿದ ಚಾವ್ಲಾ 15 ರನ್ ಬಿಟ್ಟುಕೊಟ್ಟು 1 ವಿಕೆಟ್ ಪಡೆದರು. ಈ ವಿಕೆಟ್ನೊಂದಿಗೆ ಐಪಿಎಲ್ನಲ್ಲಿ ಡ್ವೇನ್ ಬ್ರಾವೋ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.
(IPL-X)(3 / 5)
ಐಪಿಎಲ್ನಲ್ಲಿ ಅತ್ಯಧಿಕ ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಈ ಪಂದ್ಯಕ್ಕೂ ಮುನ್ನ ಬ್ರಾವೋ ಅವರ 183 ವಿಕೆಟ್ಗಳ ದಾಖಲೆ ಸರಿಗಟ್ಟಿದ್ದ ಚಾವ್ಲಾ, ಈಗ ಮುರಿದಿದ್ದಾರೆ.
(PTI)(4 / 5)
ಪಿಯೂಷ್ ಚಾವ್ಲಾ 189 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 184 ವಿಕೆಟ್ ಪಡೆದಿದ್ದಾರೆ. ಪ್ರಸ್ತುತ ಟೂರ್ನಿಯಲ್ಲಿ ಅವರು 8 ಪಂದ್ಯಗಳಲ್ಲಿ ಕೇವಲ 5 ವಿಕೆಟ್ ಪಡೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ವಿಕೆಟ್ ಪಡೆದ ಹೆಗ್ಗಳಿಕೆಗೆ ಯುಜ್ವೇಂದ್ರ ಚಹಲ್ ಪಾತ್ರರಾಗಿದ್ದಾರೆ.
(AP)ಇತರ ಗ್ಯಾಲರಿಗಳು