ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೆಕೆಆರ್​ ವಿರುದ್ದ ಮೂರು ವಿಕೆಟ್ ಉರುಳಿಸಿ ಪ್ರಮುಖ ಮೂರು ದಾಖಲೆ ನಿರ್ಮಿಸಿದ ಜಸ್ಪ್ರೀತ್ ಬುಮ್ರಾ

ಕೆಕೆಆರ್​ ವಿರುದ್ದ ಮೂರು ವಿಕೆಟ್ ಉರುಳಿಸಿ ಪ್ರಮುಖ ಮೂರು ದಾಖಲೆ ನಿರ್ಮಿಸಿದ ಜಸ್ಪ್ರೀತ್ ಬುಮ್ರಾ

  • Jasprit Bumrah Record: ಕೆಕೆಆರ್ ವಿರುದ್ಧ ಮೂರು ವಿಕೆಟ್ ಪಡೆದ ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾ ಪ್ರಮುಖ ಮೂರು ದಾಖಲೆಗಳನ್ನು ನಿರ್ಮಿಸಿದ್ದಾರೆ.

ಮುಂಬೈನ ವಾಂಖೆಡೆ ಮೈದಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್​ನ 51ನೇ ಪಂದ್ಯದಲ್ಲಿ 3.5 ಓವರ್​​ಗಳಲ್ಲಿ ಕೇವಲ 18 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದ ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾ, ಹಲವು ದಾಖಲೆ ಬರೆದಿದ್ದಾರೆ.
icon

(1 / 7)

ಮುಂಬೈನ ವಾಂಖೆಡೆ ಮೈದಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್​ನ 51ನೇ ಪಂದ್ಯದಲ್ಲಿ 3.5 ಓವರ್​​ಗಳಲ್ಲಿ ಕೇವಲ 18 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದ ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾ, ಹಲವು ದಾಖಲೆ ಬರೆದಿದ್ದಾರೆ.

ಬುಮ್ರಾ ಅದ್ಭುತ ಬೌಲಿಂಗ್ ನಡೆಸಿದರೂ ಬ್ಯಾಟಿಂಗ್​ನಲ್ಲಿ ವಿಫಲವಾದ ಮುಂಬೈ, 24 ರನ್​ಗಳಿಂದ ಸೋಲಿಗೆ ಶರಣಾಯಿತು. ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ 169 ರನ್​ಗಳಿಗೆ ಆಲೌಟ್ ಆಗಿತ್ತು. ಈ ಗುರಿ ಬೆನ್ನಟ್ಟಿದ ಮುಂಬೈ 145 ರನ್​ಗಳಿಗೆ ಸರ್ವಪತನ ಕಂಡಿತು.
icon

(2 / 7)

ಬುಮ್ರಾ ಅದ್ಭುತ ಬೌಲಿಂಗ್ ನಡೆಸಿದರೂ ಬ್ಯಾಟಿಂಗ್​ನಲ್ಲಿ ವಿಫಲವಾದ ಮುಂಬೈ, 24 ರನ್​ಗಳಿಂದ ಸೋಲಿಗೆ ಶರಣಾಯಿತು. ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ 169 ರನ್​ಗಳಿಗೆ ಆಲೌಟ್ ಆಗಿತ್ತು. ಈ ಗುರಿ ಬೆನ್ನಟ್ಟಿದ ಮುಂಬೈ 145 ರನ್​ಗಳಿಗೆ ಸರ್ವಪತನ ಕಂಡಿತು.(AFP)

ಮುಂಬೈ ಇಂಡಿಯನ್ಸ್ ಪಂದ್ಯ ಸೋತರೂ ಮೂರು ವಿಕೆಟ್ ಕಬಳಿಸಿದ ಜಸ್ಪ್ರೀತ್ ಬುಮ್ರಾ, ಪರ್ಪಲ್​ ಕ್ಯಾಪ್​ ಪಡೆದುಕೊಂಡರು. ಅಲ್ಲದೆ, ಐಪಿಎಲ್​ನಲ್ಲಿ ಪ್ರಮುಖ ಮೂರು ದಾಖಲೆ ನಿರ್ಮಿಸಿದ್ದಾರೆ. ಅವುಗಳ ನೋಟ ಇಲ್ಲಿದೆ.
icon

(3 / 7)

ಮುಂಬೈ ಇಂಡಿಯನ್ಸ್ ಪಂದ್ಯ ಸೋತರೂ ಮೂರು ವಿಕೆಟ್ ಕಬಳಿಸಿದ ಜಸ್ಪ್ರೀತ್ ಬುಮ್ರಾ, ಪರ್ಪಲ್​ ಕ್ಯಾಪ್​ ಪಡೆದುಕೊಂಡರು. ಅಲ್ಲದೆ, ಐಪಿಎಲ್​ನಲ್ಲಿ ಪ್ರಮುಖ ಮೂರು ದಾಖಲೆ ನಿರ್ಮಿಸಿದ್ದಾರೆ. ಅವುಗಳ ನೋಟ ಇಲ್ಲಿದೆ.(AFP)

3 ವಿಕೆಟ್ ಕಬಳಿಸಿದ ಬುಮ್ರಾ, ವಾಂಖೆಡೆ ಮೈದಾನದಲ್ಲಿ ಅತ್ಯಧಿಕ ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಹಾಗೂ ಐಪಿಎಲ್​ನಲ್ಲಿ ಎರಡನೇ ಬೌಲರ್ ಆಗಿದ್ದಾರೆ. ಮುಂಬೈ ಪರವೇ ಆಡಿದ್ದ ಲಸಿತ್ ಮಾಲಿಂಗ ವಾಂಖೆಡೆಯಲ್ಲಿ 68 ವಿಕೆಟ್ ಪಡೆದಿದ್ದರೆ, ಬುಮ್ರಾ 51 ವಿಕೆಟ್ ಉರುಳಿಸಿದ್ದಾರೆ. ಹರ್ಭಜನ್ ಸಿಂಗ್ (49) ಡ್ವೇನ್ ಬ್ರಾವೋ (26), ಹಾರ್ದಿಕ್ ಪಾಂಡ್ಯ (26) ಕ್ರಮವಾಗಿ 3, 4, 5ನೇ ಸ್ಥಾನದಲ್ಲಿದ್ದಾರೆ.
icon

(4 / 7)

3 ವಿಕೆಟ್ ಕಬಳಿಸಿದ ಬುಮ್ರಾ, ವಾಂಖೆಡೆ ಮೈದಾನದಲ್ಲಿ ಅತ್ಯಧಿಕ ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಹಾಗೂ ಐಪಿಎಲ್​ನಲ್ಲಿ ಎರಡನೇ ಬೌಲರ್ ಆಗಿದ್ದಾರೆ. ಮುಂಬೈ ಪರವೇ ಆಡಿದ್ದ ಲಸಿತ್ ಮಾಲಿಂಗ ವಾಂಖೆಡೆಯಲ್ಲಿ 68 ವಿಕೆಟ್ ಪಡೆದಿದ್ದರೆ, ಬುಮ್ರಾ 51 ವಿಕೆಟ್ ಉರುಳಿಸಿದ್ದಾರೆ. ಹರ್ಭಜನ್ ಸಿಂಗ್ (49) ಡ್ವೇನ್ ಬ್ರಾವೋ (26), ಹಾರ್ದಿಕ್ ಪಾಂಡ್ಯ (26) ಕ್ರಮವಾಗಿ 3, 4, 5ನೇ ಸ್ಥಾನದಲ್ಲಿದ್ದಾರೆ.(AFP)

ಜಸ್ಪ್ರೀತ್ ಬುಮ್ರಾ ಐಪಿಎಲ್ ಇತಿಹಾಸದಲ್ಲಿ ಒಂದೇ ಮೈದಾನದಲ್ಲಿ 50 ಪ್ಲಸ್ ವಿಕೆಟ್ ಪಡೆದ 5ನೇ ಬೌಲರ್ ಆಗಿದ್ದಾರೆ. ಈ ಸಾಧನೆ ಮಾಡಿದ 2ನೇ ಎಂಐ ಬೌಲರ್ ಕೂಡ ಹೌದು. ಸುನಿಲ್ ನರೈನ್ ಈಡನ್ ಗಾರ್ಡನ್ಸ್​ನಲ್ಲಿ 69 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ. 
icon

(5 / 7)

ಜಸ್ಪ್ರೀತ್ ಬುಮ್ರಾ ಐಪಿಎಲ್ ಇತಿಹಾಸದಲ್ಲಿ ಒಂದೇ ಮೈದಾನದಲ್ಲಿ 50 ಪ್ಲಸ್ ವಿಕೆಟ್ ಪಡೆದ 5ನೇ ಬೌಲರ್ ಆಗಿದ್ದಾರೆ. ಈ ಸಾಧನೆ ಮಾಡಿದ 2ನೇ ಎಂಐ ಬೌಲರ್ ಕೂಡ ಹೌದು. ಸುನಿಲ್ ನರೈನ್ ಈಡನ್ ಗಾರ್ಡನ್ಸ್​ನಲ್ಲಿ 69 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ. (AP)

ಸುನಿಲ್ ನರೇನ್ ಬಳಿಕ ಲಸಿತ್ ಮಾಲಿಂಗ್  ವಾಂಖೆಡೆಯಲ್ಲಿ 68, ಅಮಿತ್ ಮಿಶ್ರಾ ಅರುಣ್ ಜೇಟ್ಲಿ ಮೈದಾನದಲ್ಲಿ 58, ಯುಜ್ವೇಂದ್ರ ಚಹಲ್ ಚಿನ್ನಸ್ವಾಮಿ ಮೈದಾನದಲ್ಲಿ 52, ಜಸ್ಪ್ರೀತ್ ಬುಮ್ರಾ ವಾಂಖೆಡೆಯಲ್ಲಿ 51 ವಿಕೆಟ್ ಪಡೆದಿದ್ದಾರೆ.
icon

(6 / 7)

ಸುನಿಲ್ ನರೇನ್ ಬಳಿಕ ಲಸಿತ್ ಮಾಲಿಂಗ್  ವಾಂಖೆಡೆಯಲ್ಲಿ 68, ಅಮಿತ್ ಮಿಶ್ರಾ ಅರುಣ್ ಜೇಟ್ಲಿ ಮೈದಾನದಲ್ಲಿ 58, ಯುಜ್ವೇಂದ್ರ ಚಹಲ್ ಚಿನ್ನಸ್ವಾಮಿ ಮೈದಾನದಲ್ಲಿ 52, ಜಸ್ಪ್ರೀತ್ ಬುಮ್ರಾ ವಾಂಖೆಡೆಯಲ್ಲಿ 51 ವಿಕೆಟ್ ಪಡೆದಿದ್ದಾರೆ.(AP)

ಜಸ್ಪ್ರೀತ್ ಬುಮ್ರಾ ಈಗ ಐಪಿಎಲ್ ಇತಿಹಾಸದಲ್ಲಿ ಹೆಚ್ಚು ಸಲ 3 ವಿಕೆಟ್​ಗಳ ಗುಚ್ಛ ಪಡೆದ ದಾಖಲೆಯನ್ನು ವಿಸ್ತರಿಸಿದ್ದಾರೆ. ಒಟ್ಟು 23 ಬಾರಿ (131 ಇನ್ನಿಂಗ್ಸ್) 3 ವಿಕೆಟ್ ಹಾಲ್ ಪಡೆದಿದ್ದಾರೆ. ಯುಜ್ವೇಂದ್ರ ಚಹಲ್ (154 ಇನ್ನಿಂಗ್ಸ್) ಅವರು 20 ಸಲ ಈ ಸಾಧನೆ ಮಾಡಿದ್ದಾರೆ. ಮಾಲಿಂಗ 19 ಬಾರಿ (122 ಇನ್ನಿಂಗ್ಸ್), ಅಮಿತ್ ಮಿಶ್ರಾ 19 ಸಲ (162 ಇನ್ನಿಂಗ್ಸ್) ಈ ಸಾಧನೆ ಮಾಡಿದ್ದಾರೆ.
icon

(7 / 7)

ಜಸ್ಪ್ರೀತ್ ಬುಮ್ರಾ ಈಗ ಐಪಿಎಲ್ ಇತಿಹಾಸದಲ್ಲಿ ಹೆಚ್ಚು ಸಲ 3 ವಿಕೆಟ್​ಗಳ ಗುಚ್ಛ ಪಡೆದ ದಾಖಲೆಯನ್ನು ವಿಸ್ತರಿಸಿದ್ದಾರೆ. ಒಟ್ಟು 23 ಬಾರಿ (131 ಇನ್ನಿಂಗ್ಸ್) 3 ವಿಕೆಟ್ ಹಾಲ್ ಪಡೆದಿದ್ದಾರೆ. ಯುಜ್ವೇಂದ್ರ ಚಹಲ್ (154 ಇನ್ನಿಂಗ್ಸ್) ಅವರು 20 ಸಲ ಈ ಸಾಧನೆ ಮಾಡಿದ್ದಾರೆ. ಮಾಲಿಂಗ 19 ಬಾರಿ (122 ಇನ್ನಿಂಗ್ಸ್), ಅಮಿತ್ ಮಿಶ್ರಾ 19 ಸಲ (162 ಇನ್ನಿಂಗ್ಸ್) ಈ ಸಾಧನೆ ಮಾಡಿದ್ದಾರೆ.(PTI)


IPL_Entry_Point

ಇತರ ಗ್ಯಾಲರಿಗಳು