Karnataka Election 2023: ಮತ ಚಲಾಯಿಸಿದ ಅಮೂಲ್ಯ ರಕ್ಷಿತ್ ಶೆಟ್ಟಿ ಜಗ್ಗೇಶ್; ನೀವೂ ತಪ್ಪದೆ ಮತದಾನ ಮಾಡಿ ಎಂದ ಸೆಲೆಬ್ರಿಟಿಗಳು
- ಇಂದು ಬೆಳಗ್ಗಿನಿಂದಲೇ ಎಲ್ಲರೂ ಮತಗಟ್ಟೆಗೆ ತೆರಳಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ. ಜನಸಾಮಾನ್ಯರ ಜೊತೆಗೆ ಸೆಲೆಬ್ರಿಟಿಗಳು ಕೂಡಾ ಕ್ಯೂನಲ್ಲಿ ನಿಂತು ವೋಟ್ ಮಾಡಿದ್ದಾರೆ.
- ಇಂದು ಬೆಳಗ್ಗಿನಿಂದಲೇ ಎಲ್ಲರೂ ಮತಗಟ್ಟೆಗೆ ತೆರಳಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ. ಜನಸಾಮಾನ್ಯರ ಜೊತೆಗೆ ಸೆಲೆಬ್ರಿಟಿಗಳು ಕೂಡಾ ಕ್ಯೂನಲ್ಲಿ ನಿಂತು ವೋಟ್ ಮಾಡಿದ್ದಾರೆ.
(1 / 8)
ಬೆಂಗಳೂರಿನಲ್ಲಿ ಉಪೇಂದ್ರ, ಅಮೂಲ್ಯ, ಜಗ್ಗೇಶ್ ಸೇರಿದಂತೆ ಅನೇಕ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಮತ ಚಲಾಯಿಸಿದ್ದಾರೆ. ಅಲ್ಲದೆ ನೀವು ಮತ ಚಲಾಯಿಸಿ ಎಂದು ಜನರಿಗೆ ಸಂದೇಶ ನೀಡುತ್ತಿದ್ದಾರೆ.
(2 / 8)
ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿ ಉಡುಪಿಯ ಕುಕ್ಕಿಕಟ್ಟೆಯಲ್ಲಿ ಇಂದು ಬೆಳಗ್ಗೆ ಮತದಾನ ಮಾಡಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಎಲ್ಲರೂ ಮತದಾನದಲ್ಲಿ ಭಾಗಿಯಾಗುವ ಮೂಲಕ ತಮ್ಮ ಹಕ್ಕು ಚಲಾಯಿಸಬೇಕು. ಮತಗಟ್ಟೆಗೆ ಬಂದು ಈ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
(3 / 8)
ಸ್ಯಾಂಡಲ್‌ವುಡ್ ಗೋಲ್ಡನ್ ಗರ್ಲ್ ಅಮೂಲ್ಯ ರಾಜರಾಜೇಶ್ವರಿ ನಗರದಲ್ಲಿ ತಮ್ಮ ಪತಿ ಜಗದೀಶ್ ಚಂದ್ರ ಜೊತೆ ಬಂದು ಮತ ಚಲಾಯಿಸಿದರು. ಅಭಿವೃದ್ಧಿಗಾಗಿ ಓಟು ಚಲಾಯಿಸಿ ಎಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸಂದೇಶ ನೀಡಿದ್ದಾರೆ.
(4 / 8)
ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಪತ್ನಿ ಶಿಲ್ಪಾ ಜೊತೆ ಆರ್‌ಆರ್ ನಗರದಲ್ಲಿ ಮತ ಚಲಾಯಿಸಿದರು. ನಮ್ಮ ಒಂದು ಕ್ಷಣದ ನಿರ್ಧಾರ ನಾಡಿನ ಭವಿಷ್ಯವನ್ನೇ ಬದಲಿಸಬಲ್ಲದು. ವಿವೇಚನೆಯಿಂದ ಮತ ಹಾಕೋಣ. ನಾನು ಮತ ಹಾಕಿ ಬಂದೆ.ನೀವು? ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
(5 / 8)
ನವರಸನಾಯಕ ಜಗ್ಗೇಶ್ ತಮ್ಮ ಪತ್ನಿ ಪರಿಮಳಾ ಜೊತೆಗೆ ಮಲ್ಲೇಶ್ವರಂ ಮತಗಟ್ಟೆಯೊಂದರಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
(6 / 8)
ಬಹುಭಾಷಾ ನಟ ಪ್ರಕಾಶ್ ರಾಜ್ ಬೆಂಗಳೂರಿನ ಶಾಂತಿನಗರದಲ್ಲಿ ಮತ ಚಲಾಯಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಸೂಕ್ತ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದು ನಮ್ಮೆಲ್ಲರ ಕರ್ತವ್ಯ, ಎಲ್ಲರೂ ಮತ ಹಾಕಿ ಎಂಬ ಸಂದೇಶ ನೀಡಿದರು.
(7 / 8)
ಹಿರಿಯ ನಟ ರಮೇಶ್ ಅರವಿಂದ್ ಬೆಂಗಳೂರು ಬನಶಂಕರಿ ಬಿಎನ್ ಎಂ ಕಾಲೇಜಿನಲ್ಲಿ ಮತದಾನ ಮಾಡಿದರು. ಮತದಾನದ ಬಗ್ಗೆ ಅರಿವು ಮೂಡಿಸಲು ರಮೇಶ್ ಅರವಿಂದ್ ಸರ್ಕಾರದೊಂದಿಗೆ ಕೈ ಜೋಡಿಸಿದ್ದಾರೆ. ಫೋನ್ ಕಾಲರ್ ಟ್ಯೂನ್‌ಗಳಲ್ಲಿ ರಮೇಶ್ ಅರವಿಂದ್ ಅವರ ಧ್ವನಿಯನ್ನು ಕೇಳಿರಬಹುದು.
ಇತರ ಗ್ಯಾಲರಿಗಳು