Mental Health: ಉಸಿರಾಟದ ಸಮಸ್ಯೆಯಷ್ಟೇ ಅಲ್ಲ, ಮಾನಸಿಕ ಆರೋಗ್ಯ ಹದಗೆಡಲು ಕಾರಣವಾಗುತ್ತಿದೆ ವಾಯುಮಾಲಿನ್ಯ; ಇರಲಿ ಎಚ್ಚರ
- Mental Health: ಇಂದಿನ ಅಸಮರ್ಪಕ ಜೀವನಶೈಲಿ ಹಾಗೂ ಒತ್ತಡದ ಕಾರಣದಿಂದ ಮಾನಸಿಕ ಆರೋಗ್ಯ ಹದಗೆಡುತ್ತಿದೆ ಎಂಬುದು ತಿಳಿದಿರುವ ವಿಚಾರ. ಆದರೆ ಹೆಚ್ಚುತ್ತಿರುವ ವಾಯುಮಾಲಿನ್ಯವೂ ಮಾನಸಿಕ ಅಸ್ವಸ್ಥತೆಗೆ ಕಾರಣವಾಗುತ್ತಿದೆ ಎಂದರೆ ನಂಬಲೇಬೇಕು. ಹೆಚ್ಚಿದ ಪರಿಸರ ಮಾಲಿನ್ಯವು ದೈಹಿಕ ಸಮಸ್ಯೆಯ ಜೊತೆಗೆ ಮಾನಸಿಕ ಸಮಸ್ಯೆಗೂ ಕಾರಣವಾಗುತ್ತಿದೆ.

(1 / 6)
ವಿಜ್ಞಾನಿಗಳ ಪ್ರಕಾರ, ವಾತಾವರಣದಲ್ಲಿ ನಡೆಯವ ವಿವಿಧ ಘಟನೆಗಳು ನಮ್ಮ ಮಾನಸಿಕ ಸ್ಥಿತಿಯ ಮೇಲೆ ಪ್ರಭಾವ ಬೀರುತ್ತದೆ. ವಾಯುಮಾಲಿನ್ಯದಿಂದ ಮಾನಸಿಕ ಆರೋಗ್ಯ ಸ್ಥಿತಿ ಹದಗೆಡುತ್ತಿದೆ ಎಂದು ಸಂಶೋಧಕರು ಹೇಳುತ್ತಿದ್ದಾರೆ.(Freepik)
(2 / 6)
ಪ್ರತಿದಿನ ಕಚೇರಿಗೆ ಹೋಗಿ ಬರುವ ಸಮಯದಲ್ಲಿ ಹೆಚ್ಚು ಹೊತ್ತು ಟ್ರಾಫಿಕ್‌ನಲ್ಲಿ ಕಳೆಯುತ್ತಾರೆ. ಕೆಲಸದ ಒತ್ತಡದ ನಡುವೆ ಈ ಕಿರಿಕಿರಿಯು ಮನಸ್ಸಿನ ಇತರ ಅಂಶಗಳ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಮಾನಸಿಕ ಒತ್ತಡ ಹೆಚ್ಚಲು ಕಾರಣವಾಗುತ್ತದೆ. (Freepik)
(3 / 6)
ಹೆಚ್ಚುತ್ತಿರುವ ವಾಯುಮಾಲಿನ್ಯದ ಪ್ರಮಾಣವು ಇತ್ತೀಚೆಗೆ ಸಮಸ್ಯೆಯಾಗಿ ಮಾರ್ಪಟ್ಟಿದೆ. ಕಾರ್ಖಾನೆಗಳು, ಬಸ್ಸುಗಳು, ಲಾರಿಗಳು, ಇತರ ವಾಹನಗ ಹೊಗೆಯಿಂದ ದೇಹವು ಅನಾರೋಗ್ಯಕ್ಕೆ ಒಳಗಾಗುತ್ತದೆ. ಇದು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. (Freepik)
(4 / 6)
ವಾಯುಮಾಲಿನ್ಯವು ಡಿಪ್ರೆಶನ್ ಭಾವವನ್ನು ಹೆಚ್ಚಿಸುತ್ತದೆ. ಹಲವು ಬಾರಿ ದೇಹಕ್ಕೆ ಆಮ್ಲಜನಕ ಪೂರೈಕೆಯಲ್ಲೂ ವ್ಯತ್ಯಯವಾಗುತ್ತದೆ. ಹೀಗೆ ವಿವಿಧ ಅಂಶಗಳು ಒತ್ತಡ ಹೆಚ್ಚಲು ಕಾರಣವಾಗುತ್ತದೆ. (Freepik)
(5 / 6)
ತಜ್ಞರ ಪ್ರಕಾರ, ವಾಯುಮಾಲಿನ್ಯವನ್ನು ತಡೆಯುವುದರಿಂದ ಮನಸ್ಸನ್ನು ಆರೋಗ್ಯವಾಗಿ ಇರಿಸಿಕೊಳ್ಳಬಹುದು. ಆದ್ದರಿಂದ ಹೊರಗೆ ಹೋಗುವಾಗ ಮಾಸ್ಕ್ ಬಳಸುವುದು ಉತ್ತಮ. (Freepik)
(6 / 6)
ಮಾನಸಿಕ ಆರೋಗ್ಯ ಈ ದಿನಗಳಲ್ಲಿ ಬಹಳ ಮೌಲ್ಯಯುತವಾಗಿದೆ. ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳುವ ಪ್ರಯತ್ನ ಮಾಡಿದರೆ ಒಟ್ಟಾರೆ ಆರೋಗ್ಯವೂ ಚೆನ್ನಾಗಿರುತ್ತದೆ.(Freepik)
ಇತರ ಗ್ಯಾಲರಿಗಳು