ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Nirjala Ekadashi 2023: ನಿರ್ಜಲ ಏಕಾದಶಿಯಂದು ತಾಯಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ; ಆರ್ಥಿಕ ಸಂಕಷ್ಟ ನಿವಾರಣೆ ಎನ್ನುತ್ತಾರೆ ಆಸ್ತಿಕರು

Nirjala ekadashi 2023: ನಿರ್ಜಲ ಏಕಾದಶಿಯಂದು ತಾಯಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ; ಆರ್ಥಿಕ ಸಂಕಷ್ಟ ನಿವಾರಣೆ ಎನ್ನುತ್ತಾರೆ ಆಸ್ತಿಕರು

  • Nirjala ekadashi 2023:ನಿರ್ಜಲ ಏಕಾದಶಿಯಂದು, ಪೂಜೆ ಮತ್ತು ದಾನಕ್ಕೆ ಸಂಬಂಧಿಸಿ ಕೆಲವು ಕ್ರಮಗಳನ್ನು ಅನುಷ್ಠಾನ ಮಾಡುವುದರಿಂದ, ತಾಯಿ ಲಕ್ಷ್ಮಿಯ ಆಶೀರ್ವಾದವು ಇಡೀ ಕುಟುಂಬದಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ. ಜನರ ನಂಬಿಕೆಯ ಪರಿಹಾರ ಅನುಷ್ಠಾನಗಳ ವಿವರ ಇಲ್ಲಿದೆ.

ವರ್ಷದಲ್ಲಿ 24 ಏಕಾದಶಿ ಬರುತ್ತವೆ. ಈ ಪೈಕಿ ನಿರ್ಜಲ ಏಕಾದಶಿಗೆ ಹೆಚ್ಚು ಪ್ರಾಮುಖ್ಯತೆ ಇದೆ. ಈ ದಿನ ಉಪವಾಸ ಮಾಡುವುದರಿಂದ ವಿಷ್ಣುವಿನ ಜತೆಗೆ ತಾಯಿ ಲಕ್ಷ್ಮಿ ಕೂಡ ಪ್ರಸನ್ನಳಾಗುತ್ತಾಳೆ. ಲಕ್ಷ್ಮಿದೇವಿಯ ಅನುಗ್ರಹದಿಂದ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಹಣಕಾಸಿನ ಬಿಕ್ಕಟ್ಟು ನಿವಾರಣೆಯಾಗುತ್ತದೆ ಮತ್ತು ಉದ್ಯೋಗ ವ್ಯವಹಾರವು ಪ್ರಗತಿಯಾಗಲಿದೆ ಎಂಬುದು ಆಸ್ತಿಕರ ನಂಬಿಕೆ.
icon

(1 / 7)

ನಿರ್ಜಲ ಏಕಾದಶಿ ಉಪವಾಸ ಮತ್ತು ದಾನದ ವಿಶೇಷ ಮಹತ್ವವನ್ನು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಈ ದಿನ ಲಕ್ಷ್ಮಿ ದೇವಿಯನ್ನು ಸಂತುಷ್ಟಗೊಳಿಸುವ ಕ್ರಮಗಳು ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಈ ಕ್ರಮಗಳನ್ನು ಮಾಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದವು ಲಭಿಸುತ್ತದೆ ಎಂಬುದು ಆಸ್ತಿಕರ ನಂಬಿಕೆ. ಲಕ್ಷ್ಮಿಯನ್ನು ಮೆಚ್ಚಿಸಲು ನಿರ್ಜಲ ಏಕಾದಶಿಯಂದು ನೀವು ಮಾಡಬಹುದಾದ ಕೆಲವು ಸರಳ ವಿಧಾನಗಳು ಇಲ್ಲಿವೆ. 
icon

(2 / 7)

ನಿರ್ಜಲ ಏಕಾದಶಿಯಂದು ಅಶ್ವತ್ಥ ವೃಕ್ಷವನ್ನು ಪೂಜಿಸುವುದರಿಂದ ಲಕ್ಷ್ಮಿಯು ಪ್ರಸನ್ನಳಾಗುತ್ತಾಳೆ. ಈ ದಿನ ಅಶ್ವತ್ಥ ವೃಕ್ಷದ ಬುಡದಲ್ಲಿ ಹಾಲು ಮಿಶ್ರಿತ ನೀರನ್ನು ಅರ್ಪಿಸಬೇಕು. ಅಶ್ವತ್ಥ ವೃಕ್ಷಕ್ಕೆ ಧೂಪ ದೀಪವನ್ನು ಬೆಳಗಿಸಿ ಸರಿಯಾದ ಪೂಜೆಯನ್ನು ಮಾಡಬೇಕು. ಇದರಿಂದ ಸಂಪತ್ತು ವೃದ್ಧಿಯಾಗುತ್ತದೆ ಮತ್ತು ಮನೆಯಲ್ಲಿ ಲಕ್ಷ್ಮಿಯೂ ನೆಲೆಸುತ್ತಾಳೆ.
icon

(3 / 7)

ನಿರ್ಜಲ ಏಕಾದಶಿಯ ಸಂದರ್ಭದಲ್ಲಿ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಕಾಡಿಗೆಯನ್ನು ಪೂಜೆಯಲ್ಲಿ ಬಳಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಏಳು ಪಾಯಸಗಳನ್ನು ಏಳು ಗಂಟುಗಳ ಅರಿಶಿನವನ್ನು ಹಳದಿ ಬಟ್ಟೆಯಲ್ಲಿ ಸುತ್ತಿ ಮಾ ಲಕ್ಷ್ಮಿಯ ಪೂಜೆಯನ್ನು ಮಾಡಿ ಮತ್ತು ಪೂಜೆಯ ನಂತರ ಎಲ್ಲಾ ಪದಾರ್ಥಗಳೊಂದಿಗೆ ಹಳದಿ ಬಟ್ಟೆಯನ್ನು ನಿಮ್ಮ ಸಂಪತ್ತಿನ ಸ್ಥಳದಲ್ಲಿ ಇರಿಸಿ. ಇದರಿಂದ ತಾಯಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ ಎಂಬುದು ನಂಬಿಕೆ
icon

(4 / 7)

ನಿರ್ಜಲ ಏಕಾದಶಿಯ ದಿನ, ಮೊದಲು ಬೆಳಗ್ಗೆ ಎದ್ದು ಈ ಮಂತ್ರವನ್ನು 5 ಬಾರಿ ಎರಡೂ ಕೈಗಳನ್ನು ಜೋಡಿಸಿ ಮತ್ತು ಅಂಗೈಗಳನ್ನು ನೋಡಬೇಕು. ನಂತರ “ಕರಾಗ್ರೇ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತಿ ।ಕರಮೂಲೇ ತು ಗೋವಿನ್ದಃ ಪ್ರಭಾತೇ ಕರದರ್ಶನಮ್ ॥” ಎಂಬ ಶ್ಲೋಕವನ್ನು ಹೇಳಬೇಕು. ಇದು ನಿಮ್ಮನ್ನು ಒತ್ತಡದಿಂದ ಮುಕ್ತಗೊಳಿಸುತ್ತದೆ ಮತ್ತು ಮನೆಗೆ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ.
icon

(5 / 7)

ತುಳಸಿಯು ಭಗವಾನ್ ವಿಷ್ಣುವಿಗೆ ತುಂಬಾ ಪ್ರಿಯವಾದುದು. ಈ ದಿನದಂದು ತುಳಸಿಯನ್ನು ಪೂಜಿಸುವುದರಿಂದ ತಾಯಿ ಲಕ್ಷ್ಮಿ ಕೂಡ ಸಂತುಷ್ಟಳಾಗುತ್ತಾಳೆ. ನಿರ್ಜಲ ಏಕಾದಶಿಯ ದಿನ ಸ್ನಾನದ ನಂತರ ತುಳಸಿ ಗಿಡಕ್ಕೆ ಹಸಿ ಹಾಲನ್ನು ಅರ್ಪಿಸಿ. ತುಳಸಿ ಸಸ್ಯವು ತೇವಾಂಶದಿಂದ ಕೂಡಿರುವ ಬೇಸಿಗೆಯಲ್ಲಿ ಈ ರೀತಿ ಮಾಡಿದರೆ, ತಾಯಿ ಲಕ್ಷ್ಮಿ ಸಂತುಷ್ಟಳಾಗುವಳು ಎಂಬುದು ನಂಬಿಕೆ.
icon

(6 / 7)

ನಿರ್ಜಲ ಏಕಾದಶಿಯಂದು ಜಲದಾನವನ್ನು ಮಹಾದಾನ ಎಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಕೆಲವರು ಬಿಡಾರ ಹೂಡಿ ಜನಸೇವೆ ಮಾಡುತ್ತಾರೆ. ಇದಲ್ಲದೆ, ನೀವು ದೇವಾಲಯದಲ್ಲಿ ಶರಬತ್ ಅನ್ನು ಸಹ ವಿತರಿಸಬಹುದು. ಈ  ಉಪಕ್ರಮವು ಒಂದು ಕಡೆ ಲಕ್ಷ್ಮಿದೇವಿ ಮತ್ತು ಶ್ರೀ ಹರಿ ವಿಷ್ಣುವನ್ನು ಸಂತುಷ್ಟಗೊಳಿಸುತ್ತದೆ. ಮತ್ತೊಂದೆಡೆ ಕುಂಡಲಿಯಲ್ಲಿರುವ ಚಂದ್ರನ ದೋಷವನ್ನು ಪರಿಹರಿಸುತ್ತದೆ ಎನ್ನುತ್ತಾರೆ ಬಲ್ಲವರು.
icon

(7 / 7)

IPL_Entry_Point

ಇತರ ಗ್ಯಾಲರಿಗಳು