ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Alejandra Rodriguez; ಮಿಸ್‌ ಯೂನಿವರ್ಸ್ ಬ್ಯೂನಸ್ ಐರಿಸ್ 60 ವರ್ಷದ ಸುರಸುಂದರಿ, ಪತ್ರಕರ್ತೆ, ನ್ಯಾಯವಾದಿ ಅಲೆಜಾಂಡ್ರಾ ರೋಡ್ರಿಗಸ್ ಫೋಟೋಸ್

Alejandra Rodriguez; ಮಿಸ್‌ ಯೂನಿವರ್ಸ್ ಬ್ಯೂನಸ್ ಐರಿಸ್ 60 ವರ್ಷದ ಸುರಸುಂದರಿ, ಪತ್ರಕರ್ತೆ, ನ್ಯಾಯವಾದಿ ಅಲೆಜಾಂಡ್ರಾ ರೋಡ್ರಿಗಸ್ ಫೋಟೋಸ್

ಸೌಂದರ್ಯ ಸ್ಪರ್ಧೆಗೆ ಸ್ಪರ್ಧಿಸಲು ವಯಸ್ಸಿನ ಹಂಗೇಕೆ?, ಮಿಸ್ ಯೂನಿವರ್ಸ್ ಬ್ಯೂನಸ್ ಐರಿಸ್ ಸ್ಪರ್ಧೆ ಗೆದ್ದ ಮಹಿಳೆ 60 ವರ್ಷದ ಸುರಸುಂದರಿ. ವೃತ್ತಿಯಲ್ಲಿ ಅವರು ಪತ್ರಕರ್ತೆ, ನ್ಯಾಯವಾದಿ. ಹೆಸರು ಅಲೆಜಾಂಡ್ರಾ ರೋಡ್ರಿಗಸ್. ಇಲ್ಲಿದೆ ಚಿತ್ರನೋಟ.

ಅರ್ಜೆಂಟೀನಾದ ಬ್ಯೂನಸ್ ಐರಿಸ್ ಪ್ರಾಂತ್ಯದ ರಾಜಧಾನಿ ಲಾ ಪ್ಲಾಟಾದಲ್ಲಿ ನಡೆದ ಮಿಸ್‌ ಯೂನಿವರ್ಸ್ ಬ್ಯೂನಸ್ ಐರಿಸ್ 2024ರ ಸ್ಪರ್ಧೆಯಲ್ಲಿ 60 ವರ್ಷದ ಮಹಿಳೆ ವಿಜೇತರಾಗಿ ಜಗತ್ತಿನ ಗಮನಸೆಳೆದಿದ್ದಾರೆ. ಹೆಸರು ಅಲೆಜಾಂಡ್ರಾ ಮಾರಿಸಾ ರೋಡ್ರಿಗಸ್. ವೃತ್ತಿಯಲ್ಲಿ ನ್ಯಾಯವಾದಿ ಮತ್ತು ಪತ್ರಕರ್ತೆ. ಈ ಮೂಲಕ ಅವರು ವಯಸ್ಸು ಮತ್ತು ಸೌಂದಯ್ಯದ ವಿಚಾರದಲ್ಲಿ ತಮ್ಮದೇ ಆದ ವ್ಯಾಖ್ಯೆಯನ್ನು ಬರೆದುಬಿಟ್ಟರು.  
icon

(1 / 7)

ಅರ್ಜೆಂಟೀನಾದ ಬ್ಯೂನಸ್ ಐರಿಸ್ ಪ್ರಾಂತ್ಯದ ರಾಜಧಾನಿ ಲಾ ಪ್ಲಾಟಾದಲ್ಲಿ ನಡೆದ ಮಿಸ್‌ ಯೂನಿವರ್ಸ್ ಬ್ಯೂನಸ್ ಐರಿಸ್ 2024ರ ಸ್ಪರ್ಧೆಯಲ್ಲಿ 60 ವರ್ಷದ ಮಹಿಳೆ ವಿಜೇತರಾಗಿ ಜಗತ್ತಿನ ಗಮನಸೆಳೆದಿದ್ದಾರೆ. ಹೆಸರು ಅಲೆಜಾಂಡ್ರಾ ಮಾರಿಸಾ ರೋಡ್ರಿಗಸ್. ವೃತ್ತಿಯಲ್ಲಿ ನ್ಯಾಯವಾದಿ ಮತ್ತು ಪತ್ರಕರ್ತೆ. ಈ ಮೂಲಕ ಅವರು ವಯಸ್ಸು ಮತ್ತು ಸೌಂದಯ್ಯದ ವಿಚಾರದಲ್ಲಿ ತಮ್ಮದೇ ಆದ ವ್ಯಾಖ್ಯೆಯನ್ನು ಬರೆದುಬಿಟ್ಟರು.  (Alejandra Rodriguez)

ಅರ್ಜೆಂಟೀನಾದ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯನ್ನು ಗೆದ್ದ 60 ವರ್ಷ ವಯಸ್ಸಿನ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಈಗ ಅಲೆಜಾಂಡ್ರಾ ಅವರದ್ದು. ಅವರ ಈ ಗೆಲುವು ಐತಿಹಾಸಿಕ.
icon

(2 / 7)

ಅರ್ಜೆಂಟೀನಾದ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯನ್ನು ಗೆದ್ದ 60 ವರ್ಷ ವಯಸ್ಸಿನ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಈಗ ಅಲೆಜಾಂಡ್ರಾ ಅವರದ್ದು. ಅವರ ಈ ಗೆಲುವು ಐತಿಹಾಸಿಕ.(Alejandra Rodriguez)

ಮಿಸ್ ಯೂನಿವರ್ಸ್ ಅರ್ಜೆಂಟೀನಾ ಸ್ಪರ್ಧೆ ಮುಂದಿನ ತಿಂಗಳು (2024ರ ಮೇ ) ನಡೆಯಲಿದ್ದು, ಅದಕ್ಕೂ ಮೊದಲು ನಡೆದ ರಾಷ್ಟ್ರೀಯ ಆಯ್ಕೆಯಲ್ಲಿ ಬ್ಯೂನಸ್ ಐರಿಸ್ ಸ್ಪರ್ಧೆಯಲ್ಲಿ ಅಲೆಜಾಂಡ್ರಾ ರೋಡ್ರಿಗಸ್ ಮಿಸ್ ಯೂನಿವರ್ಸ್ ಬ್ಯೂನಸ್ ಐರಿಸ್ ಕಿರೀಟ ಮುಡಿಗೇರಿಸಿಕೊಂಡರು. 
icon

(3 / 7)

ಮಿಸ್ ಯೂನಿವರ್ಸ್ ಅರ್ಜೆಂಟೀನಾ ಸ್ಪರ್ಧೆ ಮುಂದಿನ ತಿಂಗಳು (2024ರ ಮೇ ) ನಡೆಯಲಿದ್ದು, ಅದಕ್ಕೂ ಮೊದಲು ನಡೆದ ರಾಷ್ಟ್ರೀಯ ಆಯ್ಕೆಯಲ್ಲಿ ಬ್ಯೂನಸ್ ಐರಿಸ್ ಸ್ಪರ್ಧೆಯಲ್ಲಿ ಅಲೆಜಾಂಡ್ರಾ ರೋಡ್ರಿಗಸ್ ಮಿಸ್ ಯೂನಿವರ್ಸ್ ಬ್ಯೂನಸ್ ಐರಿಸ್ ಕಿರೀಟ ಮುಡಿಗೇರಿಸಿಕೊಂಡರು. (Alejandra Rodriguez)

ಅಲೆಜಾಂಡ್ರಾ ರೋಡ್ರಿಗಸ್ ಅವರ ಮೋಹಕ ನಗು, ಆಕರ್ಷಕ ವರ್ತನೆ ತೀರ್ಪುಗಾರರ ಮತ್ತು ಪ್ರೇಕ್ಷಕರ ಹೃದಯ ಗೆದ್ದುಕೊಂಡಿತು. ಸೋಷಿಯಲ್‌ ಮೀಡಿಯಾದಲ್ಲಿ ಅಲೆಜಾಂಡ್ರಾ ರೋಡ್ರಿಗಸ್‌ ಸದ್ಯ ಸೆನ್ಸೇಷನ್ ಹುಟ್ಟುಹಾಕಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
icon

(4 / 7)

ಮಿಸ್ ಯೂನಿವರ್ಸ್ ಸಂಸ್ಥೆಯು ಕಳೆದ ವರ್ಷ ಸ್ಪರ್ಧೆಯ ಸ್ಪರ್ಧಿಗಳಿಗೆ ನಿಗದಿ ಮಾಡಿದ್ದ ಗರಿಷ್ಠ ವಯೋಮಿತಿಯನ್ನು ತೆರವುಗೊಳಿಸಿದೆ. ಈ ಹಿಂದೆ 18 ರಿಂದ 28 ವರ್ಷ ವಯೋಮಾನದವರಿಗಷ್ಟೇ ಸ್ಪರ್ಧೆಗೆ ಅವಕಾಶ ಇತ್ತು. ಈ ವರ್ಷದಿಂದ, 18 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ಮಹಿಳೆ ಇದರಲ್ಲಿ ಸ್ಪರ್ಧಿಸುವ ಅವಕಾಶ ಇದ್ದ ಕಾರಣ ಅಲೆಜಾಂಡ್ರಾ ಸ್ಪರ್ಧಿಸಿದ್ದರು. 
icon

(5 / 7)

ಮಿಸ್ ಯೂನಿವರ್ಸ್ ಸಂಸ್ಥೆಯು ಕಳೆದ ವರ್ಷ ಸ್ಪರ್ಧೆಯ ಸ್ಪರ್ಧಿಗಳಿಗೆ ನಿಗದಿ ಮಾಡಿದ್ದ ಗರಿಷ್ಠ ವಯೋಮಿತಿಯನ್ನು ತೆರವುಗೊಳಿಸಿದೆ. ಈ ಹಿಂದೆ 18 ರಿಂದ 28 ವರ್ಷ ವಯೋಮಾನದವರಿಗಷ್ಟೇ ಸ್ಪರ್ಧೆಗೆ ಅವಕಾಶ ಇತ್ತು. ಈ ವರ್ಷದಿಂದ, 18 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ಮಹಿಳೆ ಇದರಲ್ಲಿ ಸ್ಪರ್ಧಿಸುವ ಅವಕಾಶ ಇದ್ದ ಕಾರಣ ಅಲೆಜಾಂಡ್ರಾ ಸ್ಪರ್ಧಿಸಿದ್ದರು. (Alejandra Rodriguez)

ಅಲೆಜಾಂಡ್ರಾ ಅವರು ಮೇ ತಿಂಗಳಲ್ಲಿ ನಡೆಯುವ ಮಿಸ್ ಯೂನಿವರ್ಸ್ ಅರ್ಜೆಂಟೀನಾ ಕಿರೀಟ ಮುಡಿಗೇರಿಸಿಕೊಂಡರೆ, ಮುಂದೆ ಸೆಪ್ಟೆಂಬರ್ 28ರಂದು ನಡೆಯುವ ಮಿಸ್ ಯೂನಿವರ್ಸ್ ವರ್ಲ್ಡ್ ಸ್ಪರ್ಧೆಯಲ್ಲಿ ರೋಡ್ರಿಗಸ್ ಅರ್ಜೆಂಟೀನಾವನ್ನು ಪ್ರತಿನಿಧಿಸುವ ಅವಕಾಶ ಪಡೆಯಲಿದ್ದಾರೆ.
icon

(6 / 7)

"ಸೌಂದರ್ಯ ಸ್ಪರ್ಧೆಗಳಲ್ಲಿ ಈ ಹೊಸ ಮಾದರಿಯನ್ನು ಪ್ರತಿನಿಧಿಸಲು ಮುಂದಾಗಿದ್ದೇನೆ. ಈ ಅವಕಾಶ ಸಿಕ್ಕಿದ ಕಾರಣರೋಮಾಂಚನಗೊಂಡಿದ್ದೇನೆ. ಸೌಂದರ್ಯ ಸ್ಪರ್ಧೆಯಲ್ಲಿ ನಾವು ಹೊಸ ಸ್ತರವನ್ನು ಹುಟ್ಟುಹಾಕುತ್ತಿದ್ದೇವೆ. ಇದರಲ್ಲಿ ಮಹಿಳೆಯರ ದೈಹಿಕ ಸೌಂದರ್ಯ ಮಾತ್ರವಲ್ಲ, ಮೌಲ್ಯಗಳಿಗೂ ಬೆಲೆ ಇದೆ ”ಎಂದು ಅಲೆಜಾಂಡ್ರಾ ಅವರು ಮಿಸ್ ಯೂನಿವರ್ಸ್ ಬ್ಯೂನಸ್ ಐರಿಸ್ ಸ್ಪರ್ಧೆ ಗೆದ್ದ ನಂತರ ಮಾಧ್ಯಮಗಳಿಗೆ ತಿಳಿಸಿದರು.
icon

(7 / 7)

IPL_Entry_Point

ಇತರ ಗ್ಯಾಲರಿಗಳು