Zodiac Signs: ಮೋಸ, ಪ್ರಾಮಾಣಿಕತೆ, ಆವೇಶ; ಸಂಬಂಧಗಳ ವಿಚಾರದಲ್ಲಿ ಯಾವ ರಾಶಿಯವರು ಯಾವ ರೀತಿ ನಡೆದುಕೊಳ್ಳುತ್ತಾರೆ?
ಒಬ್ಬೊಬ್ಬರು ಒಂದೊಂದು ರೀತಿಯ ಗುಣ ಹೊಂದಿರುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಆಯಾ ರಾಶಿಗೆ ಅನುಗುಣವಾಗಿ ಜನರು ನಡವಳಿಕೆ ಇರುತ್ತದೆ. ಕೆಲವರು ಸ್ನೇಹವಾಗಲೀ, ಪ್ರೀತಿಯಾಗಲೀ ತಮ್ಮ ಸಂಬಂಧದ ಬಗ್ಗೆ ಬಹಳ ಸ್ಪಷ್ಟತೆ ಹೊಂದಿರುತ್ತಾರೆ. ಕೆಲವರು ನಿರ್ಲಕ್ಷ್ಯದ ಮನೋಭಾವನೆ ಹೊಂದಿರುತ್ತಾರೆ.
(2 / 14)
ಮೇಷ ರಾಶಿಯವರು ತೀವ್ರ ಮತ್ತು ಭಾವೋದ್ರಿಕ್ತ ವ್ಯಕ್ತಿತ್ವದವರು. ಜೊತೆಗೆ ಹಠಾತ್ ಪ್ರವೃತ್ತಿಯವರು. ತಾವು ಬಯಸಿದ್ದನ್ನು ಪಡೆಯಲು ತಮ್ಮ ಕೈಲಾದ ಪ್ರಯತ್ನ ಮಾಡುತ್ತಾರೆ. ಹೊಸ ಸಂಬಂಧವನ್ನು ಪಡೆಯಲ ಹಳೆಯ ಸಂಬಂಧಕ್ಕೆ ತಿಲಾಂಜಲಿ ಇಡುವ ಪ್ರಯತ್ನದಲ್ಲಿರುತ್ತಾರೆ.
(3 / 14)
ಈ ರಾಶಿಯವರು ಬಹಳ ವಿಶ್ವಾಸಾರ್ಹ ಮತ್ತು ಹಟಮಾರಿಗಳು. ನಿಷ್ಠಾವಂತರು, ತಾಳ್ಮೆ ಮತ್ತು ದೃಢ ನಿಶ್ಚಯದಿಂದ ಕೂಡಿರುತ್ತಾರೆ .
(4 / 14)
ಮಿಥುನ ರಾಶಿಯವರು ಮತ್ತೊಬ್ಬರ ಭಾವನೆಗಳಿಗೆ ಘಾಸಿಗೊಳಿಸುವಂಥವರು. ತಮಗೆ ಬೇಕಾದ್ದು ದೊರೆಯದಿದ್ದಲ್ಲಿ ಯಾವುದೇ ಸಂಬಂಧದಿಂದ ಹೊರ ಹೋಗಲೂ ಹಿಂಜರಿಯುವುದಿಲ್ಲ.
(5 / 14)
ಕರ್ಕಾಟಕ ರಾಶಿಯವರು ಅತ್ಯಂತ ನಿಷ್ಠಾವಂತರು. ಈ ರಾಶಿಯವರಿಗೆ ಕುಟುಂಬ, ಸ್ನೇಹಿತರು ಮತ್ತು ಪ್ರೇಮಿಗಳು ಅತ್ಯಂತ ಮುಖ್ಯವಾದ ವಿಷಯ. ನಿರಂತರ ಭಾವನಾತ್ಮಕ ಬೆಂಬಲ ಮತ್ತು ಪ್ರೀತಿಗೆ ಧಕ್ಕೆ ತರುವಂತಹ ಯಾವ ಕೆಲಸವನ್ನೂ ಅವರು ಮಾಡುವುದಿಲ್ಲ.
(6 / 14)
ಸಿಂಹ ರಾಶಿಯವರು ಸದಾ ಮತ್ತೊಬ್ಬರ ಗಮನ ಕೇಂದ್ರೀಕರಿಸಲು ಬಯಸುತ್ತಾರೆ. ಆತ್ಮವಿಶ್ವಾಸ, ಹಟಮಾರಿ ಸ್ವಭಾವದವರು. ಆದರೆ ತಮ್ಮನ್ನು ಲಘುವಾಗಿ ಪರಿಗಣಿಸುತ್ತಿದ್ದೀರಿ ಎಂದು ಗೊತ್ತಾದರೆ ಅವರಿಗೆ ನೋವುಂಟು ಮಾಡಲು ಹಿಂಜರಿಯುವುದಿಲ್ಲ.
(7 / 14)
ಕನ್ಯಾ ರಾಶಿಯವರು ದಯೆ ಮತ್ತು ನಿಜವಾದ ಸಂಬಂಧಕ್ಕೆ ಬೆಲೆ ಕೊಡುವ ಜನರು. ಅವರು ಹೆಚ್ಚು ಅರ್ಥಗರ್ಭಿತರು ಮತ್ತು ಸತ್ಯವನ್ನು ಹೇಳಲು ಬಯಸುತ್ತಾರೆ. ನಾಟಕದ ಜೀವನ ಇವರಿಗೆ ಇಷ್ಟವಿರುವುದಿಲ್ಲ. ಎಲ್ಲಾ ವಿಚಾರವನ್ನು ಮುಕ್ತವಾಗಿ ಮಾತನಾಡುತ್ತಾರೆ.
(8 / 14)
ಈ ರಾಶಿಯವರು ತಮ್ಮ ಲವ್ ರಿಲೇಶನ್‌ಶಿಪ್ ಬಗ್ಗೆ ಗಂಭೀರವಾಗಿರುವುದಿಲ್ಲ. ಸಂಬಂಧಗಳ ವಿಚಾರದಲ್ಲಿ ಎಲ್ಲವನ್ನೂ ರಹಸ್ಯವಾಗಿ ಮುಚ್ಚಿಡಲು ಬಯಸುತ್ತಾರೆ.
(9 / 14)
ವೃಶ್ಚಿಕ ರಾಶಿಯವರು ವಿನೋದಪ್ರಿಯರು. ನಿಮಗೆ ಹೆಚ್ಚು ಪ್ರೀತಿ ನೀಡುತ್ತಾರೆ. ಅವರು ನೀಡುವ ಗೌರವ ಮತ್ತು ಪ್ರೀತಿಯನ್ನು ಪ್ರೇಮಿಯಿಂದ ಬಯಸುತ್ತಾರೆ. ಆದರೆ, ನೀವು ಅವರನ್ನು ಲಘುವಾಗಿ ಪರಿಗಣಿಸುತ್ತಿದ್ದೀರಿ ಅಥವಾ ನೀವು ವಿಶ್ವಾಸದ್ರೋಹಿ ಎಂದು ಅವರು ಕಂಡುಕೊಂಡರೆ, ಅವರು ಸೇಡು ತೀರಿಸಿಕೊಳ್ಳಲು ಹಿಂಜರಿಯುವುದಿಲ್ಲ.
(10 / 14)
ಧನಸ್ಸು ರಾಶಿಯವರು ಪ್ರಾಮಾಣಿಕ, ಸ್ವಾಭಾವಿಕ ಮತ್ತು ವಿನೋದಪ್ರಿಯರು. ಅವರು ತಮ್ಮ ಅಗತ್ಯತೆಗಳು ಮತ್ತು ಭಾವನೆಗಳ ಬಗ್ಗೆ ಪ್ರಾಮಾಣಿಕರಾಗಿದ್ದಾರೆ. ಈ ರಾಶಿಯವರು ಮೊದಲಿನಿಂದಲೂ ಸಂಬಂಧದ ಬಗ್ಗೆ ಬಹಳ ಪರಿಪೂರ್ಣತೆ ಹೊಂದಿರುತ್ತಾರೆ.
(11 / 14)
ಮಕರ ರಾಶಿಯವರು ತಮ್ಮ ಸಂಬಂಧಗಳ ಬಗ್ಗೆ ಉತ್ಸುಕರಾಗಿದ್ದಾರೆ. ಅವರು ತಮ್ಮ ಅಗತ್ಯಗಳನ್ನು ಪೂರೈಸುವ ಯಾರನ್ನೂ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ತಮ್ಮ ಸಂಗಾತಿಯು ಎಲ್ಲದರಲ್ಲೂ ಪರ್ಫೆಕ್ಟ್ ಆಗಿರಬೇಕೆಂದು ಬಯಸುತ್ತಾರೆ.
(12 / 14)
ಕುಂಭ ರಾಶಿಯವರು ತಮ್ಮ ಸಂತೋಷಕ್ಕಾಗಿ ಏನು ಬೇಕಾದರೂ ಮಾಡಲು ಹಿಂಜರಿಯುವುದಿಲ್ಲ. ಈ ರಾಶಿಯವರು ತಮ್ಮ ಸಂಬಂಧದಲ್ಲಿ ಬಹಳ ಸಮಸ್ಯೆಯನ್ನು ಹೊಂದಿರುತ್ತಾರೆ. ಒಂದು ಸಂಬಂಧ ಅವರಿಗೆ ಸರಿ ಬರದಿದ್ದರೆ ಸುಲಭವಾಗಿ ಅದರಿಂದ ಹೊರ ನಡೆಯುತ್ತಾರೆ.
(13 / 14)
ಮೀನ ರಾಶಿಯವರು ಎಷ್ಟು ಒಳ್ಳೆಯ ಪ್ರೇಮಿಗಳಾಗಿರುತ್ತಾರೆಯೋ ಅಷ್ಟೇ ಭಾವುಕತೆ ಮತ್ತು ಮೂಡಿ ಇರುತ್ತಾರೆ. ಪ್ರೀತಿಸಿದವರಿಗೆ ಏನು ತ್ಯಾಗ ಮಾಡಲು ಬೇಕಾದರ್ ಸಿದ್ಧರಿರುತ್ತಾರೆ. ಆದರೆ ಅವರ ಭಾವನೆಗಳಿಗೆ ಬೆಲೆ ಕೊಡದಿದ್ದಲ್ಲಿ ಒಂದು ಸಂಬಂಧ ಬಿಟ್ಟು ಮತ್ತೊಂದರೆಡೆಗೆ ಹೋಗಬಹುದು.
ಇತರ ಗ್ಯಾಲರಿಗಳು