ಕನ್ನಡ ಸುದ್ದಿ  /  ಕ್ರೀಡೆ  /  ರಿಷಭ್ ಪಂತ್ ಬಳಿಕ ಕರೀಮ್ ಬೆಂಜೆಮಾ ಜೊತೆ ಊರ್ವಶಿ ರೌಟೇಲಾ ಡೇಟಿಂಗ್; ಫುಟ್ಬಾಲರ್​ಗೆ 15ನೇ ಗೆಳತಿಯಾದ ಭಾರತದ ಮೊದಲ ನಟಿ ಎಂದ ನೆಟ್ಟಿಗರು

ರಿಷಭ್ ಪಂತ್ ಬಳಿಕ ಕರೀಮ್ ಬೆಂಜೆಮಾ ಜೊತೆ ಊರ್ವಶಿ ರೌಟೇಲಾ ಡೇಟಿಂಗ್; ಫುಟ್ಬಾಲರ್​ಗೆ 15ನೇ ಗೆಳತಿಯಾದ ಭಾರತದ ಮೊದಲ ನಟಿ ಎಂದ ನೆಟ್ಟಿಗರು

Urvashi Rautela : ಖ್ಯಾತ ಫುಟ್ಬಾಲ್ ಆಟಗಾರ ಕರೀಮ್ ಬೆಂಜೆಮಾ ಜೊತೆಗಿರುವ ಫೋಟೋ ಹಂಚಿಕೊಂಡ ನಟಿ ಊರ್ವಶಿ ರೌಟೆಲಾ ಅವರು ಇನ್​ಸ್ಟಾಗ್ರಾಂನಲ್ಲಿ ಲವ್ ಎಂದು ಹ್ಯಾಶ್​ಟ್ಯಾಗ್​ ಹಾಕಿದ್ದಾರೆ. ಇಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿ ಎದ್ದಿದೆ.

ರಿಷಭ್ ಪಂತ್ ಬಳಿಕ ಕರೀಮ್ ಬೆಂಜೆಮಾ ಜೊತೆ ಊರ್ವಶಿ ರೌಟೇಲಾ ಡೇಟಿಂಗ್
ರಿಷಭ್ ಪಂತ್ ಬಳಿಕ ಕರೀಮ್ ಬೆಂಜೆಮಾ ಜೊತೆ ಊರ್ವಶಿ ರೌಟೇಲಾ ಡೇಟಿಂಗ್

ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ಅವರು ಫ್ರಾನ್ಸ್ ಫುಟ್ಬಾಲ್ ಆಟಗಾರ ಕರೀಮ್ ಬೆಂಜೆಮಾ (Karim Benzema) ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿ ಹಬ್ಬಿದೆ. ಪಾರ್ಟಿಯಲ್ಲಿ ಒಟ್ಟಿಗೆ ಕರೀಮ್-ಊರ್ವಶಿ ಅವರ ಆತ್ಮೀಯವಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿವೆ. ಕರೀಮ್ ಅವರು ಪ್ರಸಿದ್ಧ ಗಾಯಕಿ ರಿಹಾನ್ನಾ ಅವರ ಮಾಜಿ ಗೆಳೆಯ. ಊರ್ವಶಿ, ಕರೀಮ್‌ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾಳೆ ಎಂದು ನೆಟಿಜನ್ಸ್ ಪ್ರತಿಕ್ರಿಯಿಸುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇದಕ್ಕೂ ಮೊದಲು ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್​​ ರಿಷಭ್ ಪಂತ್ (Rishabh Pant) ಮತ್ತು ಪಾಕಿಸ್ತಾನದ ನಸೀಮ್​ ಶಾ (Naseem Shah) ಜೊತೆಗೆ ಊರ್ವಶಿ ಹೆಸರು ತಳುಕು ಹಾಕಿಕೊಂಡಿತ್ತು. ಅದರಲ್ಲೂ ರಿಷಭ್ ಜೊತೆಗೆ ಹೆಚ್ಚು ಕಾಲ ಈ ಹೆಸರು ಕಾಣಿಸಿಕೊಂಡಿತ್ತು. ಊರ್ವಶಿ ಕೂಡ ಆರ್​​ಪಿ ಅಂತ ತನ್ನ ಪೋಸ್ಟ್​​ಗಳಲ್ಲಿ ಹಾಕುತ್ತಿದ್ದರು. ಆದರೀಗ ವಿಶ್ವ ಶ್ರೇಷ್ಠ ಫುಟ್ಬಾಲ್ ಆಟಗಾರ, ಫ್ರಾನ್ಸ್ ತಂಡದ ಸ್ಟ್ರೈಕರ್, ಹಿಂದೆ ಬಿದ್ದಿದ್ದಾರೆ ಎಂದು ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ. ಕರೀಮ್ ಮತ್ತು ಊರ್ವಶಿ ದುಬೈನಲ್ಲಿ ಭೇಟಿಯಾಗಿದ್ದಾರೆ ಎಂದು ವರದಿಯಾಗಿದೆ.

ಬೆಂಜೆಮಾಗೆ ತಿಂಗಳಿಗೆ 148 ಕೋಟಿ ಆದಾಯ

ವಿಶ್ವದ ಅತ್ಯಧಿಕ ವೇತನ ಪಡೆಯುವ ಫುಟ್ಬಾಲ್ ಆಟಗಾರರಲ್ಲಿ ಕರೀಮ್ ಬೆಂಜೆಮಾ ಕೂಡ ಒಬ್ಬರು. ಸೌದಿ ಪ್ರೊ ಲೀಗ್‌ನ ಚಾಂಪಿಯನ್‌ ತಂಡ ಅಲ್ ಇತ್ತಿಹಾದ್‌ (Al Ittihad) ಕ್ಲಬ್‌ ಪರ ಕಣಕ್ಕಿಳಿಯುತ್ತಿದ್ದಾರೆ. ಪ್ರತಿ ತಿಂಗಳಿಗೆ 148 ಕೋಟಿ ರೂಪಾಯಿ ಸಂಪಾದನೆ ಮಾಡುವ ಸ್ಟ್ರೈಕರ್, 14 ವರ್ಷಗಳ ಕಾಲ ರಿಯಲ್ ಮ್ಯಾಡ್ರಿಡ್ ಕ್ಲಬ್​ ಪರ 14 ವರ್ಷಗಳ ಕಾಲ ಆಡಿದ್ದಾರೆ. ಪ್ರಸ್ತುತ ಅಲ್​ ಇತ್ತಿಹಾದ್ ಪರ 3 ವರ್ಷಗಳ ಕಾಲ ಒಪ್ಪಂದ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ ಊರ್ವಶಿ ರೌಟೆಲಾ ಮಾಸಿಕ ಆದಾಯ 45 ಲಕ್ಷ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ನಟಿಸುವುದರ ಜೊತೆ ಜಾಹೀರಾತು ಮೂಲಕವೂ ಹಣ ಸಂಪಾದಿಸುತ್ತಾರೆ. ಆಕೆಯ ಖಾಸಗಿ ಐಷಾರಾಮಿ ಬಂಗಲೆ ಕೂಡ ಮುಂಬೈನಲ್ಲಿದೆ. ಇದು ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತದೆ.

ನಟಿಯ ಕಾಲೆಳೆದ ನೆಟ್ಟಿಗರು

ಕರೀಮ್ ಬೆಂಜೆಮಾ ಅವರೊಂದಿಗಿನ ಫೋಟೋವನ್ನು ಊರ್ವಶಿ ತನ್ನ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಆಶ್ಚರ್ಯಗೊಳಿಸಿದ್ದಾರೆ. ಐದು ಬಾರಿ ಕ್ಲಬ್ ವಿಶ್ವಕಪ್ ಗೆದ್ದಿರುವ ಕರೀಮ್, ಬ್ಯಾಲನ್ ಡಿ'ಓರ್ ಪ್ರಶಸ್ತಿಯನ್ನೂ ಗೆದ್ದಿದ್ದಾರೆ. ಊರ್ವಶಿ ಮಾಡಿರುವ ಪೋಸ್ಟ್​​ನಲ್ಲಿ ಲವ್​ ಎಂದು ಹ್ಯಾಶ್​ಟ್ಯಾಗ್ ಹಾಕಿದ್ದಾರೆ. ಇದರೊಂದಿಗೆ ಅಭಿಮಾನಿಗಳು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಪೈಕಿ ನೆಟ್ಟಿಗನೊಬ್ಬ ಪ್ರತಿಕ್ರಿಯಿಸಿ 'ಫ್ರೆಂಚ್ ಫುಟ್ಬಾಲ್ ಆಟಗಾರನ 15ನೇ ಗೆಳತಿಯಾದ ಮೊದಲ ಭಾರತೀಯ ನಟಿ' ಎಂದು ಬರೆದಿದ್ದಾರೆ.

ಫ್ರೆಂಚ್ ಫುಟ್ಬಾಲ್ ಆಟಗಾರನಿಗಿಂತ ಮೊದಲು ಊರ್ವಶಿ ಭಾರತೀಯ ಕ್ರಿಕೆಟಿಗ ರಿಷಭ್ ಪಂತ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ. ಮುಂಬೈನಲ್ಲಿ ಡಿನ್ನರ್ ಡೇಟ್‌ನಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದರಿಂದ ವದಂತಿಗಳು ಪ್ರಾರಂಭವಾಗಿದ್ದವು. ಆದಾಗ್ಯೂ, ರಿಷಭ್ ತನ್ನ ಗೆಳತಿ ಇಶಾ ನೇಗಿ ಅವರ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಊಹಾಪೋಹಗಳಿಗೆ ಬ್ರೇಕ್ ಹಾಕಿದ್ದರು. ಅಲ್ಲದೆ, ಆಕೆ ರಾಜಕೀಯ ಸೇರುವ ಬಗ್ಗೆಯೂ ಚರ್ಚೆಗಳು ನಡೆದಿದ್ದವು.