ಕನ್ನಡ ಸುದ್ದಿ  /  ಕ್ರೀಡೆ  /  Cwg 2022: ಟ್ರಿಪಲ್ ಜಂಪ್‌ನಲ್ಲಿ ಎಲ್ದೋಸ್ ಪಾಲ್ ಗೆ ಚಿನ್ನ, ಅಬ್ದುಲ್ಲಾ ಅಬೂಬಕರ್ ಗೆ ಬೆಳ್ಳಿ

CWG 2022: ಟ್ರಿಪಲ್ ಜಂಪ್‌ನಲ್ಲಿ ಎಲ್ದೋಸ್ ಪಾಲ್ ಗೆ ಚಿನ್ನ, ಅಬ್ದುಲ್ಲಾ ಅಬೂಬಕರ್ ಗೆ ಬೆಳ್ಳಿ

ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಟ್ರಿಪಲ್ ಜಂಪ್‌ನಲ್ಲಿ ಭಾರತಕ್ಕೆ ಚಿನ್ನ ಮತ್ತು ಬೆಳ್ಳಿ ಪದಕಗಳು ಬಂದಿವೆ. ಪುರುಷರ ಟ್ರಿಪಲ್ ಜಂಪ್‌ನಲ್ಲಿ ಎಲ್ದೋಸ್ ಪಾಲ್​ 17.03 ಮೀಟರ್​ ಜಿಗಿತದೊಂದಿಗೆ ಬಂಗಾರದ ಪದಕ ಗೆದ್ದಿದ್ದಾರೆ. ಅಬ್ದುಲ್ಲಾ ಅಬೂಬಕರ್ 17.02 ಮೀಟರ್​ ಜಿಗಿದು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್ ಪುರುಷರ ಟ್ರಿಪಲ್ ಜಂಪ್‌ನಲ್ಲಿ ಎಲ್ದೋಸ್ ಪಾಲ್ ಚಿನ್ನ​ ಮತ್ತು ಅಬ್ದುಲ್ಲಾ ಅಬೂಬಕರ್ ಬೆಳ್ಳಿ ಪದಕ ಗೆದಿದ್ದಾರೆ
ಕಾಮನ್‌ವೆಲ್ತ್ ಗೇಮ್ಸ್ ಪುರುಷರ ಟ್ರಿಪಲ್ ಜಂಪ್‌ನಲ್ಲಿ ಎಲ್ದೋಸ್ ಪಾಲ್ ಚಿನ್ನ​ ಮತ್ತು ಅಬ್ದುಲ್ಲಾ ಅಬೂಬಕರ್ ಬೆಳ್ಳಿ ಪದಕ ಗೆದಿದ್ದಾರೆ

ಬರ್ಮಿಂಗ್‌ಹ್ಯಾಮ್‌: ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಇಂದು ಭಾರತದ ಕ್ರೀಡಾಪಟುಗಳು ಹೊಸ ದಾಖಲೆಯನ್ನೇ ಬರೆದಿದ್ದಾರೆ. ಟ್ರಿಪಲ್ ಜಂಪ್‌ನಲ್ಲಿ ಭಾರತಕ್ಕೆ ಚಿನ್ನ ಮತ್ತು ಬೆಳ್ಳಿ ಪದಕಗಳು ಬಂದಿವೆ. ಪುರುಷರ ಟ್ರಿಪಲ್ ಜಂಪ್‌ನಲ್ಲಿ ಎಲ್ದೋಸ್ ಪಾಲ್​ 17.03 ಮೀಟರ್​ ಜಿಗಿತದೊಂದಿಗೆ ಬಂಗಾರದ ಪದಕ ಗೆದ್ದಿದ್ದಾರೆ. ಅಬ್ದುಲ್ಲಾ ಅಬೂಬಕರ್ 17.02 ಮೀಟರ್​ ಜಿಗಿದು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.

ಟ್ರಿಪಲ್ ಜಂಪ್‌ನಲ್ಲಿ ಭಾರತದ ಪಟುಗಳು ಇತಿಹಾಸ ನಿರ್ಮಿಸಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಎಲ್ದೋಸ್ ಪಾಲ್​ ತಂದು ಕೊಟ್ಟಿದ್ದಾರೆ.

ಅಬ್ದುಲ್ಲಾ ಅಬೂಬಕರ್ ಕೂಡ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ 17 ಮೀಟರ್​ ಜಿಗಿದ ಭಾರತದ ಮೂರನೇ ಪಟು ಎಂಬ ಹೆಗ್ಗಳಿಕೆಗೆ ಅಬ್ದುಲ್ಲಾ ಅಬೂಬಕರ್ ಪಾತ್ರರಾಗಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಎಲ್ದೋಸ್ ಪಾಲ್ ಹಾಗೂ ಅಬ್ದುಲ್ಲಾ ಅಬೂಬಕರ್ ಅವರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ಮೋದಿ, ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಅಬ್ದುಲ್ಲಾ ಅಬೂಬಕರ್ ಬೆಳ್ಳಿ ಗೆದ್ದಿರುವುದು ಸಂತಸ ತಂದಿದೆ.

ಪದಕವು ಬಹಳಷ್ಟು ಕಠಿಣ ಪರಿಶ್ರಮ ಮತ್ತು ಗಮನಾರ್ಹ ಬದ್ಧತೆಯ ಫಲಿತಾಂಶವಾಗಿದೆ. ಇವರ ಮುಂದಿನ ಎಲ್ಲಾ ಪ್ರಯತ್ನಗಳಿಗೆ ಶುಭವಾಗಲಿ ಎಂದಿದ್ದಾರೆ.

ಟ್ರಿಪಲ್ ಜಂಪ್ ನಲ್ಲಿ ಚಿನ್ನ ಗೆದ್ದಿರುವ ಎಲ್ದೋರ್ ಪಾಲ್ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ. ಇಂದಿನ ಟ್ರಿಪಲ್ ಜಂಪ್ ಈವೆಂಟ್ ಐತಿಹಾಸಿಕವಾಗಿದೆ. ನಮ್ಮ ಕ್ರೀಡಾಪಟುಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಚಿನ್ನದ ಪದಕವನ್ನು ಗೆದ್ದು ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರೆಸಿರುವ ಪ್ರತಿಭಾವಂತ ಎಲ್ದೋಸ್ ಪಾಲ್ ಅವರಿಗೆ ಅಭಿನಂದನೆಗಳು ಎಂದಿದ್ದಾರೆ.

ಮಹಿಳೆಯರ ಹಾಕಿ ಸ್ಪರ್ಧೆಯಲ್ಲಿ ಭಾರತ, ನ್ಯೂಜಿಲೆಂಡ್ ಅನ್ನು ಸೋಲಿಸಿ ಕಂಚಿನ ಪದಕವನ್ನು ಗೆದ್ದುಕೊಂಡಿದೆ. ಹಾಕಿಯ 3ನೇ ಕ್ವಾರ್ಟರ್‌ ಫೈನಲ್​ನಲ್ಲಿ ಭಾರತೀಯ ವನಿತೆಯರು ಪೆನಾಲ್ಟಿ ಶೂಟೌಟ್‌ನಲ್ಲಿ 2-1 ಗೋಲುಗಳಿಂದ ನ್ಯೂಜಿಲೆಂಡ್​ ತಂಡವನ್ನು ಸೋಲಿಸಿ ಕಂಚಿನ ಪದಕವನ್ನು ಗೆದ್ದರು. ಇದಕ್ಕೂ ಮೊದಲು ನ್ಯೂಜಿಲೆಂಡ್ ತಂಡ ಪಂದ್ಯ ಮುಗಿಯಲು ಕೇವಲ 17 ಸೆಕೆಂಡ್​ಗಳಲ್ಲಿ ತಮ್ಮ ಸ್ಕೋರ್​ಅನ್ನು ಸಮಗೊಳಿಸಿಕೊಂಡಿತ್ತು. ಆದ್ದರಿಂದ ಪಂದ್ಯವು ಪೆನಾಲ್ಟಿ ಶೂಟೌಟ್‌ಗೆ ಸಾಗಿತು. ಇದಕ್ಕಿಂತ ಮುಂಚೆ ಭಾರತದ ತಂಡ 1-0 ಮುನ್ನಡೆ ಸಾಧಿಸಿತ್ತು.

ಸಲಿಮಾ ಟೆಟೆ ಬಾರಿಸಿದ ಗೋಲಿನ ನಂತರ ಭಾರತ ಗೆಲುವಿನ ಹಾದಿಯಲ್ಲಿತ್ತು. ಆದರೆ ಒಲಿವಿಯಾ ಮೆರ್ರಿ ಕ್ವಾರ್ಟರ್ 4 ರ ಅಂತಿಮ ಸೆಕೆಂಡ್‌ಗಳಲ್ಲಿ ನ್ಯೂಜಿಲೆಂಡ್‌ಗೆ ಪಂದ್ಯವನ್ನು ಶೂಟೌಟ್‌ಗೆ ಒತ್ತಾಯಿಸಿದರು. ಶೂಟೌಟ್‌ನಲ್ಲಿ, ನಾಯಕಿ ಮತ್ತು ಗೋಲ್‌ಕೀಪರ್ ಸವಿತಾ ಪುನಿಯಾ ಕೆಲವು ಉತ್ತಮ ಉಳಿತಾಯಗಳೊಂದಿಗೆ ಭಾರತ 2-1 ಗೆಲುವು ಸಾಧಿಸಿತು.

ಈ ಹಿಂದೆ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿವಾದಾತ್ಮಕ ಶೂಟೌಟ್‌ನಲ್ಲಿ 0-3 ಅಂತರದಿಂದ ಭಾರತದ ಮಹಿಳಾ ತಂಡ ಸೋಲು ಕಂಡಿತ್ತು. ಇದೀಗ ಇಂದು ಕಂಚಿಗಾಗಿ ನ್ಯೂಜಿಲೆಂಡ್​​ ವಿರುದ್ಧ ಹೋರಾಟ ನಡೆಸಿ ಪದಕಕ್ಕೆ ಗೆಲ್ಲುವಲ್ಲಿ ಯಶಸ್ಸು ಕಂಡಿದೆ.

ವಿಭಾಗ