CWG 2022: ಕುಸ್ತಿಯಲ್ಲಿ ಕಂಚು ಗೆದ್ದ ಪೂಜಾ ಗೆಹ್ಲೋಟ್, ಮುಂದುವರೆದ ಭಾರತದ ಪದಕ ಬೇಟೆ
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ (CWG 2022) ಭಾರತಕ್ಕೆ ಮತ್ತೊಂದು ಪದಕ ದೊರಕಿದೆ. ಮಹಿಳಾ ಕುಸ್ತಿಪಟು ಪೂಜಾ ಗೆಹ್ಲೋಟ್ (Pooja Gehlot) ಅವರು ಶನಿವಾರ 50 ಕೆ.ಜಿ. ವಿಭಾಗದಲ್ಲಿ ಸ್ಕಾಟಿಷ್ ಕುಸ್ತಿಪಟುವನ್ನು ಮಣಿಸಿ ಭಾರತಕ್ಕೆ ಪದಕ ತಂದುಕೊಟ್ಟಿದ್ದಾರೆ.
ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ (CWG 2022) ಭಾರತಕ್ಕೆ ಮತ್ತೊಂದು ಪದಕ ದೊರಕಿದೆ. ಮಹಿಳಾ ಕುಸ್ತಿಪಟು ಪೂಜಾ ಗೆಹ್ಲೋಟ್ (Pooja Gehlot) ಅವರು ಶನಿವಾರ 50 ಕೆ.ಜಿ. ವಿಭಾಗದಲ್ಲಿ ಸ್ಕಾಟಿಷ್ ಕುಸ್ತಿಪಟುವನ್ನು ಮಣಿಸಿ ಭಾರತಕ್ಕೆ ಪದಕ ತಂದುಕೊಟ್ಟಿದ್ದಾರೆ.
ಆರಂಭದಲ್ಲಿ ಸ್ಕಾಟ್ಲೆಂಡ್‌ನ ಕ್ರಿಸ್ಟೆಲ್ಲೆ ಲೆಮೊಫೆಕ್ ಅವರು ಪೂಜಾ ಅವರಿಗೆ ಉತ್ತಮ ಸ್ಪರ್ಧೆ ನೀಡಿದ್ದಾರೆ. ಕುಸ್ತಿಯಲ್ಲಿ ಎರಡು ಬಾರಿ ಇವರನ್ನು ಉರುಳಿಸಿ ಒತ್ತಡ ನೀಡಿದರು. ಆದರೆ, ಬಳಿಕ ಪುಟಿದೆದ್ದ ಪೂಜಾ ಗೆಹ್ಲೋಟ್ ಅವರು ಎದುರಾಳಿಗೆ ಯಾವುದೇ ಅವಕಾಶ ನೀಡಿದೆ ಮುನ್ನಡೆ ಸಾಧಿಸಿದ್ದಾರೆ. ಬಳಿಕ ಮತ್ತೆ ಎರಡು ಅಂಕಗಳನ್ನು ಪಡೆದು ತಾಂತ್ರಿಕ ದಕ್ಷತೆಯ ಆಧಾರದಲ್ಲಿ ಗೆಲುವು ತನ್ನದಾಗಿಸಿಕೊಂಡರು.
ಇಂದು ಭಾರತದ ಕ್ರೀಡಾಪಟು ಪ್ರಿಯಾಂಕಾ ಗೋಸ್ವಾಮಿ ಅವರು ಹತ್ತು ಸಾವಿರ ಮೀಟರ್ ಓಟದ ನಡಿಗೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ವಿಶೇಷವೆಂದರೆ ಕಾಮನ್ವೆಲ್ತ್‌ನಲ್ಲಿ ರೇಸ್ ವಾಕ್ (race walk)ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ ಮೊದಲ ಆಟಗಾರ್ತಿ ಎಂಬ ಹಿರಿಮೆಗೂ ಇವರು ಪಾತ್ರರಾಗಿದ್ದಾರೆ. ಪ್ರಿಯಾಂಕ ಗೋಸ್ವಾಮಿ ಅವರು 43:38:82 ಸಮಯದಲ್ಲಿ ತನ್ನ ನಡಿಗೆ ಓಟವನ್ನು ಪೂರ್ಣಗೊಳಿಸಿದ್ದಾರೆ. ಇಂದು ಮುರುಳಿ ಶ್ರೀಶಂಕರ್ (ಲಾಂಗ್ ಜಂಪ್‌ನಲ್ಲಿ ಬೆಳ್ಳಿ) ಮತ್ತು ತೇಜಶ್ವರ ಶಂಕರ್ (ಹೈಜಂಪ್‌ನಲ್ಲಿ ಕಂಚು) ಪದಕ ಗೆದ್ದುಕೊಟ್ಟಿದ್ದಾರೆ.
ಸ್ಮೃತಿ ಮಾಂಧಾನ(61 ರನ್) ಅರ್ಧಶತಕ ಹಾಗೂ ಸ್ನೆಹ್ ರಾಣಾ(28ಕ್ಕೆ 2) ಅವರ ಸ್ಪಿನ್ ಮೋಡಿಯ ಸಹಾಯದಿಂದ ಭಾರತ ಮಹಿಳಾ ಕ್ರಿಕೆಟ ತಂಡ 2022ರ ಕಾಮನ್‌ವೆಲ್ತ್ ಕ್ರೀಡಾಕೂಟದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 4 ರನ್‌ಗಳ ರೋಚಕ ಗೆಲುವು ದಾಖಲಿಸಿದ್ದಾರೆ.
2022ರ ಕಾಮನ್‌ವೆಲ್ತ್ ಕ್ರೀಡಾಕೂಟದ ಎಂಟನೇ ದಿನವಾದ ನಿನ್ನೆ ಹಲವು ಪದಕ ಪಡೆದಿದ್ದಾರೆ.. ಭಜರಂಗ್ ಪೂನಿಯಾ, ದೀಪಕ್ ಪೂನಿಯಾ ಹಾಗೂ ಸಾಕ್ಷಿ ಮಲಿಕ್ ಆಯಾ ವಿಭಾಗಗಳಲ್ಲಿ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇವರ ಜೊತೆಗೆ ಅಂಶು ಮಲಿಕ್ ಅವರು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.
ಭಾರತದ ಸ್ಟಾರ್ ಕುಸ್ತಿಪಟು ಭಜರಂಗ್ ಪೂನಿಯಾ ಅವರು ಪುರುಷರ 65 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಕೆನಡಾದ ಲ್ಯಾಚ್ಲನ್ ಮೆಕ್‌ನೀಲ್ ವಿರುದ್ಧ ಗೆಲ್ಲುವ ಮೂಲಕ 2022ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದಿದ್ದರು. ಇದಕ್ಕೂ ಮುನ್ನ ಸೆಮಿಫೈನಲ್‌ನಲ್ಲಿ ಭಜರಂಗ್ ಪೂನಿಯಾ, ಇಂಗ್ಲೆಂಡ್‌ನ ಜಾರ್ಜ್ ರ್ಯಾಮ್ ಅವರನ್ನು 10-0 ಅಂತರದಲ್ಲಿ ಭರ್ಜರಿ ಪಡೆಯುವ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿದ್ದರು.
ಅನುಭವಿ ಲಿಫ್ಟರ್ ಸುಧೀರ್, ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ ಹೆವಿವೇಟ್ ವಿಭಾಗದ ಪ್ಯಾರಾ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಸಾರ್ವಕಾಲಿಕ ಶ್ರೇಷ್ಠ ಸಾಧನೆಯ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಮೊದಲ ಪ್ರಯತ್ನದಲ್ಲೇ 208 ಕೆ.ಜಿ ಭಾರವೆತ್ತಿದ ಸುಧೀರ್, ತಮ್ಮ ಎರಡನೇ ಪ್ರಯತ್ನದಲ್ಲಿ 212 ಕೆ.ಜಿ ಭಾರವನ್ನೆತ್ತಿ ಒಟ್ಟಾರೆ 134.5 ಅಂಕಗಳೊಂದಿಗೆ ಕಾಮನ್‌ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಅತ್ಯಧಿಕ ಅಂಕ ಗಳಿಸಿದ ಇತಿಹಾಸ ನಿರ್ಮಿಸಿದ್ದಾರೆ.
ವಿಭಾಗ