ಕನ್ನಡ ಸುದ್ದಿ  /  ಕ್ರೀಡೆ  /  Cwg 2022: ಹಾಕಿ ಸೆಮಿಫೈನಲ್‌, ಕುಸ್ತಿಪಟುಗಳ ಮೇಲೆ ಎಲ್ಲರ ಕಣ್ಣು; ಇಂದಿನ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

CWG 2022: ಹಾಕಿ ಸೆಮಿಫೈನಲ್‌, ಕುಸ್ತಿಪಟುಗಳ ಮೇಲೆ ಎಲ್ಲರ ಕಣ್ಣು; ಇಂದಿನ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಭಾರತದ ಪ್ರತಿಭಾನ್ವಿತ ಕುಸ್ತಿಪಟುಗಳ ಮೇಲೆ ದೇಶದ ದೃಷ್ಟಿ ನೆಟ್ಟಿದೆ. ಇನ್ನೊದೆಡೆ ಸೆಮಿಫೈನಲ್‌ ಪ್ರವೇಶಿಸಿರುವ ಭಾರತೀಯ ಮಹಿಳಾ ಹಾಕಿ ತಂಡವು ಇಂದು ಬಲಿಷ್ಠ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ಹಾಕಿ ತಂಡ
ಹಾಕಿ ತಂಡ

ಬರ್ಮಿಂಗ್‌ಹ್ಯಾಮ್‌: ಕಾಮನ್‌ವೆಲ್ತ್‌ ಕ್ರೀಡಾಕೂಟವು ಇಂದಿಗೆ 8ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಇಡೀ ಭಾರತದ ಕಣ್ಣು, ಕುಸ್ತಿಪಟುಗಳ ಮೇಲಿದೆ. ಭಾರತದ ಪ್ರತಿಭಾನ್ವಿತ ಕುಸ್ತಿಪಟುಗಳಾದ ವಿನೇಶ್ ಫೋಗತ್‌ ಮತ್ತು ಬಜರಂಗ್ ಪೂನಿಯಾ ಅವರ ಮೇಲೆ ದೇಶದ ದೃಷ್ಟಿ ನೆಟ್ಟಿದೆ. ಇನ್ನೊದೆಡೆ ಸೆಮಿಫೈನಲ್‌ ಪ್ರವೇಶಿಸಿರುವ ಭಾರತೀಯ ಮಹಿಳಾ ಹಾಕಿ ತಂಡವು ಇಂದು ಬಲಿಷ್ಠ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ಭಾರತದ 8ನೇ ದಿನದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಅಥ್ಲೆಟಿಕ್ಸ್

ಮಧ್ಯಾಹ್ನ 3:06 : ಮಹಿಳೆಯರ 100 ಮೀಟರ್‌ ಹರ್ಡಲ್ಸ್ ಮೊದಲ ಸುತ್ತು, ಹೀಟ್ 2ರಲ್ಲಿ ಭಾರತದ ಜ್ಯೋತಿ ಯರ್ರಾಜಿ ಸ್ಪರ್ಧೆ

ಮಧ್ಯಾಹ್ನ 4:10 : ಮಹಿಳೆಯರ ಲಾಂಗ್ ಜಂಪ್ ಅರ್ಹತಾ ಸುತ್ತಿನ ಪಂದ್ಯ (ಗುಂಪು ಎ) - ಆನ್ಸಿ ಸೋಜನ್ ಎಡಪ್ಪಿಲ್ಲಿ

ಮಧ್ಯಾಹ್ನ 4:19 -ಪುರುಷರ 4 x 400 ಮೀಟರ್‌ ರಿಲೇ ಸುತ್ತು 1 (ಹೀಟ್ 2) ಭಾರತ

ಮಧ್ಯರಾತ್ರಿ 12:53 -ಮಹಿಳೆಯರ 200 ಮೀಟರ್‌ ಓಟ ಸೆಮಿಫೈನಲ್ 2 -ಹಿಮಾ ದಾಸ್

ಟೇಬಲ್ ಟೆನ್ನಿಸ್

ಮಧ್ಯಾಹ್ನ 2:00ರ ನಂತರ -ಮಿಶ್ರ ಡಬಲ್ಸ್ 16ರ ಸುತ್ತು -ಸತ್ಯನ್ ಜ್ಞಾನಶೇಖರನ್/ ಮಾನಿಕಾ ಬಾತ್ರಾ, ಅಚಂತ ಶರತ್ ಕಮಲ್/ ಅಕುಲಾ ಶ್ರೀಜಾ

ಮಧ್ಯಾಹ್ನ 3:15 ರಿಂದ -ಮಹಿಳೆಯರ ಸಿಂಗಲ್ಸ್ 16ರ ಸುತ್ತು - ರೀತ್ ಟೆನ್ನಿಸನ್, ಶ್ರೀಜಾ ಅಕುಲಾ, ಮನಿಕಾ ಬಾತ್ರಾ

ಮಧ್ಯಾಹ್ನ 3:55 ನಂತರ -ಪುರುಷರ ಡಬಲ್ಸ್ 16ರ ಸುತ್ತು -ಹರ್ಮೀತ್ ದೇಸಾಯಿ/ ಸನಿಲ್ ಶೆಟ್ಟಿ

ಮಧ್ಯಾಹ್ನ 4:30 ರಿಂದ -ಮಹಿಳೆಯರ ಡಬಲ್ಸ್ 16ರ ಸುತ್ತು -ಮನಿಕಾ ಬಾತ್ರಾ/ ಚಿತಾಲೆ ದಿಯಾ ಪರಾಗ್, ಅಕುಲಾ ಶ್ರೀಜಾ/ರೀತ್ ಟೆನ್ನಿಸನ್

ಪುರುಷರ ಸಿಂಗಲ್ಸ್ 32ರ ಸುತ್ತು- ಅಚಂತ ಶರತ್ ಕಮಲ್, ಸತ್ಯನ್ ಜ್ಞಾನಶೇಖರನ್, ಸನಿಲ್ ಶೆಟ್ಟಿ

ಬ್ಯಾಡ್ಮಿಂಟನ್ (ಮಧ್ಯಾಹ್ನ 3:30ರಿಂದ ಪ್ರಾರಂಭ)

ಮಹಿಳೆಯರ ಡಬಲ್ಸ್ 16ರ ಸುತ್ತು -ಜಾಲಿ ಟ್ರೀಸಾ/ ಪುಲ್ಲೇಲ ಗಾಯತ್ರಿ ಗೋಪಿಚಂದ್

ಪುರುಷರ ಡಬಲ್ಸ್ 16ರ ಸುತ್ತು -ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ/ ಚಿರಾಗ್ ಶೆಟ್ಟಿ

ಮಹಿಳೆಯರ ಸಿಂಗಲ್ಸ್ 16ರ ಸುತ್ತು -ಪಿವಿ ಸಿಂಧು

ಮಹಿಳೆಯರ ಸಿಂಗಲ್ಸ್ 16ರ ಸುತ್ತು -ಆಕರ್ಷಿ ಕಶ್ಯಪ್

ಪುರುಷರ ಸಿಂಗಲ್ಸ್ 16ರ ಸುತ್ತು -ಕಿಡಂಬಿ ಶ್ರೀಕಾಂತ್

ಲಾನ್ ಬೌಲ್‌

ಮಧ್ಯಾಹ್ನ 1- ಮಹಿಳೆಯರ ಜೋಡಿ -ಕ್ವಾರ್ಟರ್ ಫೈನಲ್ -ಭಾರತ ಮತ್ತು ಇಂಗ್ಲೆಂಡ್ -

ಸ್ಕ್ವ್ಯಾಷ್

ಸಂಜೆ 5.15 -ಪುರುಷರ ಡಬಲ್ಸ್ 16ರ ಸುತ್ತು -ವೆಲವನ್ ಸೆಂಥಿಲ್‌ಕುಮಾರ್/ ಅಭಯ್ ಸಿಂಗ್

ಮಧ್ಯರಾತ್ರಿ 12 -ಮಿಶ್ರ ಡಬಲ್ಸ್ ಕ್ವಾರ್ಟರ್ ಫೈನಲ್: ದೀಪಿಕಾ ಪಲ್ಲಿಕಲ್/ ಸೌರವ್ ಘೋಸಲ್

ಹಾಕಿ

ರಾತ್ರಿ 10.30 -ಮಹಿಳೆಯರ ಸೆಮಿಫೈನಲ್: ಭಾರತ ಮತ್ತು ಆಸ್ಟ್ರೇಲಿಯಾ

ಕುಸ್ತಿ (ಮಧ್ಯಾಹ್ನ 3:30ರಿಂದ ಪ್ರಾರಂಭ

ಪುರುಷರ ಫ್ರೀಸ್ಟೈಲ್ 125 ಕೆಜಿ -ಮೋಹಿತ್ ಗ್ರೆವಾಲ್

ಪುರುಷರ ಫ್ರೀಸ್ಟೈಲ್ 65 ಕೆಜಿ -ಬಜರಂಗ್ ಪುನಿಯಾ

ಪುರುಷರ ಫ್ರೀಸ್ಟೈಲ್ 86 ಕೆಜಿ -ದೀಪಕ್ ಪುನಿಯಾ

ಮಹಿಳೆಯರ ಫ್ರೀಸ್ಟೈಲ್ 57 ಕೆಜಿ -ಅಂಶು ಮಲಿಕ್

ಮಹಿಳೆಯರ ಫ್ರೀಸ್ಟೈಲ್ 68 ಕೆಜಿ -ದಿವ್ಯಾ ಕಕ್ರನ್

ಮಹಿಳೆಯರ ಫ್ರೀಸ್ಟೈಲ್ 62 ಕೆಜಿ -ಸಾಕ್ಷಿ ಮಲಿಕ್

ಕಾಮನ್‌ವೆಲ್ತ್‌ ಕ್ರೀಡಾಕೂಟದ 7ನೇ ದಿನದ ಅಂತ್ಯಕ್ಕೆ ಒಟ್ಟು 20 ಪದಕಗಳೊಂದಿಗೆ ಭಾರತ, ಪದಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. 6 ಚಿನ್ನದ ಪದಕ, 7ಬೆಳ್ಳಿ ಹಾಗೂ 7 ಕಂಚಿನ ಪದಕಗಳ ಸಹಿತ ಒಟ್ಟು 20 ಪದಕಗಳನ್ನು ಗೆದ್ದಿದೆ. ಪ್ರತಿಬಾರಿಯಂತೆ ಈ ಬಾರಿಯೂ, ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದೆ. 50 ಚಿನ್ನದ ಪದಕ ಸಹಿತ ಒಟ್ಟು 130 ಪದಕಗಳನ್ನು ಆಸೀಸ್‌ ಗೆದ್ದಿದೆ.

ವಿಭಾಗ