ಕನ್ನಡ ಸುದ್ದಿ  /  ಕ್ರಿಕೆಟ್  /  Ipl 2024: ಮುಂಬೈ ಇಂಡಿಯನ್ಸ್ Vs ಎಸ್‌ಆರ್‌ಎಚ್; ಸಂಭಾವ್ಯ ತಂಡ, ವಾಂಖೆಡೆ ಪಿಚ್ ಹಾಗೂ ಹವಾಮಾನ ವರದಿ

IPL 2024: ಮುಂಬೈ ಇಂಡಿಯನ್ಸ್ vs ಎಸ್‌ಆರ್‌ಎಚ್; ಸಂಭಾವ್ಯ ತಂಡ, ವಾಂಖೆಡೆ ಪಿಚ್ ಹಾಗೂ ಹವಾಮಾನ ವರದಿ

MI vs SRH: 5 ಬಾರಿಯ ಚಾಂಪಿಯನ್‌ ಪಟ್ಟಕ್ಕೆ ತದ್ವಿರುದ್ಧವಾಗಿ ಆಡುತ್ತಿರುವ ಮುಂಬೈ ಇಂಡಿಯನ್ಸ್‌, ಮಾಡು ಇಲ್ಲವೇ ಮಡಿ ಕದನಕ್ಕೆ ಸಜ್ಜಾಗಿದೆ. ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಟೂರ್ನಿಯಲ್ಲಿ ಎರಡನೇ ಬಾರಿ ಎದುರಿಸಲು ಸಜ್ಜಾಗಿದೆ.

ಮುಂಬೈ ಇಂಡಿಯನ್ಸ್ vs ಎಸ್‌ಆರ್‌ಎಚ್; ಸಂಭಾವ್ಯ ತಂಡ, ವಾಂಖೆಡೆ ಪಿಚ್ ಹಾಗೂ ಹವಾಮಾನ ವರದಿ
ಮುಂಬೈ ಇಂಡಿಯನ್ಸ್ vs ಎಸ್‌ಆರ್‌ಎಚ್; ಸಂಭಾವ್ಯ ತಂಡ, ವಾಂಖೆಡೆ ಪಿಚ್ ಹಾಗೂ ಹವಾಮಾನ ವರದಿ (ANI)

ಐಪಿಎಲ್‌ 2024ರ ಪ್ಲೇ ಆಫ್‌ನಿಂದ ಬಹುತೇಕ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್‌ ತಂಡವು, ಟೂರ್ನಿಯ 55ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ (Mumbai Indians vs Sunrisers Hyderabad) ತಂಡವನ್ನು ಎದುರಿಸುತ್ತಿದೆ. ಈಗಾಗಲೇ ಪ್ರಸಕ್ತ ಟೂರ್ನಿಯಲ್ಲಿ ಉಭಯ ತಂಡಗಳ ನಡುವಿನ ಮೊದಲ ಮುಖಾಮುಖಿಯಲ್ಲಿ ಸೋತಿರುವ ಹಾರ್ದಿಕ್‌ ಪಾಂಡ್ಯ ಬಳಗ, ಟೂರ್ನಿಯಲ್ಲಿ ಗೆಲುವಿನ ಹುಡುಕಾಟದಲ್ಲಿದೆ. ಸದ್ಯ ತವರು ನೆಲ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಆ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಮೇಲೇರುವ ತವಕದಲ್ಲಿದೆ. ಅತ್ತ ಪ್ರಚಂಡ ಪ್ರದರ್ಶನ ನೀಡುತ್ತಿರುವ ಪ್ಯಾಟ್‌ ಕಮಿನ್ಸ್‌ ಪಡೆ ಕೂಡಾ, ಪ್ಲೇ ಆಫ್‌ ಟೆಕೆಟ್‌ ಖಚಿತಪಡಿಸಲು ಗೆಲ್ಲುವ ಅನಿವಾರ್ಯತೆ ಇದೆ.

ಟ್ರೆಂಡಿಂಗ್​ ಸುದ್ದಿ

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಬೆನ್ನಿನ ಸೆಳೆತದಿಂದಾಗಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದ್ದ ರೋಹಿತ್ ಶರ್ಮಾ, ಹೈದರಾಬಾದ್‌ ವಿರುದ್ಧ ಇದೇ ಪಾತ್ರದಲ್ಲಿ ಬಂದರೂ ಅಚ್ಚರಿಯಿಲ್ಲ. ಶನಿವಾರ ಹಾಗೂ ಭಾನುವಾರದಂದು ನೆಟ್ಸ್‌ನಲ್ಲಿ ಬ್ಯಾಟ್ ಬೀಸಿದ್ದ ಹಿಟ್‌ಮ್ಯಾನ್‌, ಸುಧಾರಿಸಿಕೊಂಡಿರುವಂತೆ ಕಾಣಿಸಿದೆ. ಅತ್ತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ತಂಡದ ಆಟಗಾರ ನಮನ್ ಧೀರ್ ಕೂಡಾ, ರೋಹಿತ್ ಫಿಟ್ ಆಗಿದ್ದಾರೆ ಎಂದು ಹೇಳಿದ್ದಾರೆ.

ಅತ್ತ ಎಸ್‌ಆರ್‌ಹೆಚ್ ತಂಡವು ಕೊನೆಯ ಪಂದ್ಯದಲ್ಲಿ ಅಚ್ಚರಿಯ ನಿರ್ಧಾರ ತೆಗೆದುಕೊಂಡಿತ್ತು. ರನ್‌ ಗಳಿಸಲು ಹೆಣಗಾಡುತ್ತಿದ್ದ ಐಡೆನ್ ಮಾರ್ಕ್ರಾಮ್ ಹೊರಗಿಟ್ಟು, ಬೌಲಿಂಗ್ ಆಲ್‌ರೌಂಡರ್ ಮಾರ್ಕೊ ಜಾನ್ಸನ್ ಅವರನ್ನು ಆಡಿಸಿತು. ಇದೇ ಆಡುವ ಬಳಗ ಮುಂಬೈ ವಿರುದ್ಧವೂ ಕಣಕ್ಕಿಳಿಯುವ ಸಾಧ್ಯತೆ ಇದೆ. ಜಯದೇವ್ ಉನದ್ಕತ್ ಅಥವಾ ಮಯಾಂಕ್ ಮಾರ್ಕಾಂಡೆ ಅವರನ್ನು ಪಿಚ್ ಪರಿಸ್ಥಿತಿ ಆಧಾರದಲ್ಲಿ ಅಂತಿಮಗೊಳಿಸಬಹುದು.

ಇದನ್ನೂ ಓದಿ | ಐಷಾರಾಮಿ ಹೋಟೆಲ್​ನಲ್ಲಿ ವಿರಾಟ್​​ ಕೊಹ್ಲಿ-ಅನುಷ್ಕಾ ಶರ್ಮಾ ಸ್ಪೆಷಲ್ ಪಾರ್ಟಿ; ಮ್ಯಾಕ್ಸ್​ವೆಲ್, ಡು ಪ್ಲೆಸಿಸ್ ಭಾಗಿ - PHOTOS

ವಾಂಖೆಡೆ ಸ್ಟೇಡಿಯಂ ಪಿಚ್‌ ವರದಿ

ಸಾಂಪ್ರದಾಯಿಕವಾಗಿ ಹೆಚ್ಚು ರನ್‌ಗಳಿಗೆ ಹೆಸರಾಗಿರುವ ವಾಂಖೆಡೆ ಪಿಚ್‌, ಪ್ರಸಕ್ತ ಆವೃತ್ತಿಯ ಕೊನೆಯ ಕೆಲವು ಪಂದ್ಯಗಳಳ್ಲಿ ತುಸು ಭಿನ್ನವಾಗಿ ವರ್ತಿಸಿತು. ಸ್ಪಿನ್ನರ್‌ಗಳು ಮಿಂಚು ಹರಿಸಿದರೆ, ಬ್ಯಾಟರ್‌ಗಳು ಹೇಳಿಕೊಳ್ಳುವಂಥಾ ರನ್‌ ಪೇರಿಸಲಿಲ್ಲ. ಹೀಗಾಗಿ ಮುಂದಿನ ಪಂದ್ಯದಲ್ಲಿ ಪಿಚ್‌ ಸ್ವರೂಪದ ಕುರಿತು ಕುತೂಹಲ ಮೂಡಿಸಿದೆ.

ಮುಂಬೈ ಹವಾಮಾನ ವರದಿ

ವಾಣಿಜ್ಯ ನಗರಿ ಮುಂಬೈನಲ್ಲಿ ಪಂದ್ಯದ ದಿನ ಸಂಜೆ ವೇಳೆಗೆ ತಾಪಮಾನವು ಸುಮಾರು 29 ಡಿಗ್ರಿ ಇರುವ ಸಾಧ್ಯತೆ ಇದೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇಲ್ಲ.

ಮುಂಬೈ ಇಂಡಿಯನ್ಸ್‌ ಸಂಭಾವ್ಯ ತಂಡ

ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕೆಟ್‌ ಕೀಪರ್),‌ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ನೆಹಾಲ್ ವಾಧೇರಾ, ರೊಮಾರಿಯೋ ಶೆಫರ್ಡ್ / ಮೊಹಮ್ಮದ್ ನಬಿ, ಜೆರಾಲ್ಡ್ ಕೋಟ್ಜಿ, ಪಿಯೂಷ್ ಚಾವ್ಲಾ, ಜಸ್ಪ್ರೀತ್ ಬುಮ್ರಾ, ನುವಾನ್ ತುಷಾರ (ಇಂಪ್ಯಾಕ್ಟ್‌ ಆಟಗಾರ).

ಎಸ್‌ಆರ್‌ಹೆಚ್ ಸಂಭಾವ್ಯ ತಂಡ

ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಅನ್ಮೋಲ್‌ಪ್ರೀತ್ ಸಿಂಗ್, ಹೆನ್ರಿಚ್ ಕ್ಲಾಸೆನ್ (ವಿಕೆಟ್‌ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಮಾರ್ಕೊ ಜಾನ್ಸೆನ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಟಿ ನಟರಾಜನ್, ಜಯದೇವ್ ಉನದ್ಕತ್/ಮಯಾಂಕ್ ಮಾರ್ಕಂಡೆ (ಇಂಪ್ಯಾಕ್ಟ್‌ ಆಟಗಾರ).

IPL_Entry_Point