ಕನ್ನಡ ಸುದ್ದಿ  /  ಕ್ರೀಡೆ  /  ಐದನೇ ಪಂದ್ಯದಲ್ಲೂ ಸೋಲು; ಆಸ್ಟ್ರೇಲಿಯಾ ವಿರುದ್ಧ 5-0 ಅಂತರದಲ್ಲಿ ವೈಟ್‌ವಾಶ್ ಅನುಭವಿಸಿದ ಭಾರತ ಹಾಕಿ ತಂಡ

ಐದನೇ ಪಂದ್ಯದಲ್ಲೂ ಸೋಲು; ಆಸ್ಟ್ರೇಲಿಯಾ ವಿರುದ್ಧ 5-0 ಅಂತರದಲ್ಲಿ ವೈಟ್‌ವಾಶ್ ಅನುಭವಿಸಿದ ಭಾರತ ಹಾಕಿ ತಂಡ

India vs Australia: ಭಾರತದ ಪರ ಹರ್ಮನ್ ಪ್ರೀತ್ ಸಿಂಗ್ ಮತ್ತು ಬಾಬಿ ಸಿಂಗ್ ಧಾಮಿ ಮಾತ್ರವೇ ಗೋಲು ಗಳಿಸಿದರು. ಆಸೀಸ್‌ ಪರ ಮೂವರು ತಲಾ ಒಂದೊಂದು ಅಂಕ ಕಲೆ ಹಾಕಿದರು.

ಆಸ್ಟ್ರೇಲಿಯಾ ವಿರುದ್ಧ 5-0 ಅಂತರದಲ್ಲಿ ವೈಟ್‌ವಾಶ್ ಅನುಭವಿಸಿದ ಭಾರತ ಹಾಕಿ ತಂಡ
ಆಸ್ಟ್ರೇಲಿಯಾ ವಿರುದ್ಧ 5-0 ಅಂತರದಲ್ಲಿ ವೈಟ್‌ವಾಶ್ ಅನುಭವಿಸಿದ ಭಾರತ ಹಾಕಿ ತಂಡ

ಆಸ್ಟ್ರೇಲಿಯಾ ವಿರುದ್ಧದ ಹಾಕಿ ಟೆಸ್ಟ್ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯದಲ್ಲಿಯೂ ಭಾರತ ಪುರುಷರ ಹಾಕಿ ತಂಡ ಮುಗ್ಗರಿಸಿದೆ. ರೋಚಕ ಪೈಪೋಟಿ ನೀಡಿ ಕನಿಷ್ಠ ಡ್ರಾಗೊಳಿಸುವ ಪ್ರಯತ್ನ ಮಾಡಿದ ತಂಡವು, ಕೊನೆಗೆ 2-3 ಅಂಕಗಳ ಅಂತರದಲ್ಲಿ ಸೋಲನುಭವಿಸಿದೆ. ಇದರೊಂದಿಗೆ 0-5 ಅಂತರದ ವೈಟ್ ವಾಶ್ ಮುಖಭಂಗಕ್ಕೆ ತುತ್ತಾಗಿದೆ.

ಟ್ರೆಂಡಿಂಗ್​ ಸುದ್ದಿ

ಸರಣಿಯಲ್ಲಿ ಈ ಹಿಂದಿನ ನಾಲ್ಕೂ ಪಂದ್ಯಗಳಲ್ಲಿ ಭಾರತ ಸೋತಿತ್ತು. 1-5, 2-4, 1-2 ಮತ್ತು 1-3 ಸೆಟ್‌ಗಳಿಂದ ಮುಗ್ಗರಿಸಿ ಸರಣಿ ಕಳೆದುಕೊಂಡಿದ್ದ ತಂಡವು, ಕನಿಷ್ಠ ವೈಟ್ ವಾಶ್‌ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಲು ಸರಣಿಯ ಅಂತಿಮ ಪಂದ್ಯದಲ್ಲಿ ಅವಕಾಶವಿತ್ತು. ಆದರೆ, ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಆಡಲು ಮಹತ್ವದ ಸಿದ್ಧತಾ ಸರಣಿಯಲ್ಲಿ ಟೀಮ್‌ ಇಂಡಿಯಾ ನಿರಾಶೆ ಅನುಭವಿಸಿದೆ. ಒಂದೇ ಒಂದು ಗೆಲುವು ಇಲ್ಲದೆ ತವರಿಗೆ ಮರಳಬೇಕಿದೆ.

ಪಂದ್ಯದಲ್ಲಿ 2 ಗೋಲು ಗಳಿಸಲಷ್ಟೇ ಭಾರತ ಶಕ್ತವಾಯ್ತು. ಭಾರತದ ಪರ ಹರ್ಮನ್ ಪ್ರೀತ್ ಸಿಂಗ್ 4ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸಿದರೆ, ಬಾಬಿ ಸಿಂಗ್ ಧಾಮಿ 53ನೇ ನಿಮಿಷದಲ್ಲಿ ಎರಡನೇ ಗೋಲು ಬಾರಿಸಿದರು. ಅತ್ತ ಕಾಂಗರೂಗಳ ಪರ 20ನೇ ನಿಮಿಷದಲ್ಲಿ ಜೆರೆಮಿ ಹೇವಾರ್ಡ್ ಗೋಲು ಗಳಿಸಿದರೆ, ಕೀ ವಿಲ್ಲಾಟ್ 38ನೇ ನಿಮಿಷ ಮತ್ತು ಟಿಮ್ ಬ್ರಾಂಡ್ 39ನೇ ನಿಮಿಷದಲ್ಲಿ ತಲಾ ಒಂದು ಗೋಲು ಕಲೆ ಹಾಕಿದರು.

ಆರಂಭದಲ್ಲಿ ಭಾರತಕ್ಕೆ ಮುನ್ನಡೆ

ಭಾರತವು ಆಕ್ರಮಣಕಾರಿ ಮನಸ್ಥಿತಿಯೊಂದಿಗೆ ಆಟ ಪ್ರಾರಂಭಿಸಿತು. ಚೆಂಡಿನ ಮೇಲೆ ಹಿಡಿತ ಸಾಧಿಸುವ ಮೂಲಕ, ಆಸ್ಟ್ರೇಲಿಯಾದ ಡಿಫೆನ್ಸ್ ಅನ್ನು ಅನೇಕ ಬಾರಿ ಮುರಿಯಲು ಯತ್ನಿಸಿತು. ಸತತ ಪೆನಾಲ್ಟಿ ಕಾರ್ನರ್‌ ಅವಕಾಶ ಭಾರತಕ್ಕೆ ಸಿಕ್ಕಿತು. ನಾಯಕ ಹರ್ಮನ್ ಪ್ರೀತ್ ಸಿಂಗ್ ಮೊದಲ ಕ್ವಾರ್ಟರ್‌ನ 4ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸುವ ಮೂಲಕ ಆರಂಭದಲ್ಲಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. 20ನೇ ನಿಮಿಷದಲ್ಲಿ ಹೇವಾರ್ಡ್ ಗೋಲಿನಿಂದ ಆಸೀಸ್ ಸಮಬಲ ಸಾಧಿಸಿತು.

ಇದನ್ನೂ ಓದಿ | ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್; ಆರಂಭಿಕ ಸುತ್ತಿನಲ್ಲೇ ಸೋತು ನಿರ್ಗಮಿಸಿದ ಲಕ್ಷ್ಯ ಸೇನ್

ಸ್ಕೋರ್ ಸಮಬಲಗೊಂಡ ನಂತರ ಆಸ್ಟ್ರೇಲಿಯಾವು ಆಕ್ರಮಣಕಾರಿ ಆಟವನ್ನು ತೀವ್ರಗೊಳಿಸಿತು. ಮೂರನೇ ಕ್ವಾರ್ಟರ್‌ನಲ್ಲಿ ಭಾರತ ತಂಡ ಮತ್ತೆ ಆಕ್ರಮಣಕಾರಿ ಆಟವನ್ನು ಪ್ರಾರಂಭಿಸಿತು. ಆಸ್ಟ್ರೇಲಿಯಾ ಪ್ರತಿದಾಳಿ ನಡೆಸಿತು. ಕೈ ವಿಲ್ಲಾಟ್ ಮತ್ತು ಟಿಮ್ ಬ್ರಾಂಡ್ ಕೇವಲ ಒಂದು ನಿಮಿಷದ ಅಂತರದಲ್ಲಿ ಫೀಲ್ಡ್ ಗೋಲುಗಳನ್ನು ಗಳಿಸಿದರು. ಅಂತಿಮ ಕ್ವಾರ್ಟರ್ ಮುಕ್ತಾಯದ ವೇಳೆಗೆ ಆತಿಥೇಯರು 3-1ರ ಮುನ್ನಡೆ ಸಾಧಿಸಿದರು. ಅಲ್ಲದೆ ಪಂದ್ಯವನ್ನು ಬಹುತೇಕ ವಶಪಡಿಸಿಕೊಂಡರು. ಅಂತಿಮವಾಗಿ ಆಸ್ಟ್ರೇಲಿಯಾವು 3-2 ಅಂತರದಿಂದ ಪಂದ್ಯ ಹಾಗೂ ಸರಣಿಯನ್ನು ಸಂಪೂರ್ಣ ವಶಕ್ಕೆ ಪಡೆಯಿತು.