IPL 2023: ಧೋನಿಗೆ 'ಬಿಗ್ ಡಾಗ್' ಎಂದ CSK ಮಾಜಿ ಆಟಗಾರ, ಕೆರಳಿದ ಫ್ಯಾನ್ಸ್!
ಟ್ವಿಟರ್ನಲ್ಲಿ ಸಿಎಸ್‌ಕೆ ಹಂಚಿಕೊಂಡಿದ್ದ ಈ ವಿಡಿಯೋನಲ್ಲಿ ಧೋನಿಯನ್ನು ‘ಬಿಗ್ ಡಾಗ್’ ಎಂದು ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಸಂಬೋಧಿಸಿದ್ದಾರೆ. ಈ ಟ್ವೀಟ್ ಕಂಡು ಕೆರಳಿದ ಅಭಿಮಾನಿಗಳು, ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗನ ಚಳಿ ಬಿಡಿಸಿದ್ದಾರೆ.
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಹಬ್ಬಕ್ಕೆ ಎರಡೇ ದಿನ ಬಾಕಿ ಉಳಿದಿದೆ. ಮಾರ್ಚ್ 31ರಿಂದ ಟೂರ್ನಿ ಅದ್ಧೂರಿ ಆರಂಭ ಪಡೆಯಲಿದೆ. ಗುಜರಾತ್ ಟೈಟಾನ್ಸ್ (Gujarat Titans) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ನಡುವೆ ಜಿದ್ಧಾಜಿದ್ದಿನ ಪೈಪೋಟಿ ಏರ್ಪಡಲಿದೆ. ಅದಕ್ಕಾಗಿ ನಾಯಕ MS ಧೋನಿ (MS Dhoni) ಚೆನ್ನೈನಲ್ಲಿ ಭರ್ಜರಿ ಸಿದ್ದತೆ ನಡೆಸುತ್ತಿದ್ದು, ಚೆನ್ನೈ ತಂಡದ ಆಟಗಾರರ ಅಭ್ಯಾಸ ಕಣ್ತುಂಬಿಕೊಳ್ಳಲು ಚೆಪಾಕ್ ಕ್ರೀಡಾಂಗಣವೇ ಅಭಿಮಾನಿಗಳಿಂದ ಕಿಕ್ಕಿರಿದು ತುಂಬುತ್ತಿದೆ.
ನೆಟ್ಸ್ನಲ್ಲಿ ಧೋನಿಯ ದೈತ್ಯ ಸಿಕ್ಸರ್ಗಳ ಸುರಿಮಳೆ ಕಂಡು ಅಭಿಮಾನಿಗಳು, ಮನಸೋತಿದ್ದಾರೆ. ಪಂದ್ಯದಲ್ಲೂ ಇದೇ ಸಿಕ್ಸರ್ಗಳ ನಿರೀಕ್ಷೆಯಲ್ಲೂ ಇದ್ದಾರೆ. ಇತ್ತೀಚೆಗಷ್ಟೇ ಅಭಿಮಾನಿಗಳಿಂದ ತುಂಬಿರುವ ಕ್ರೀಡಾಂಗಣದಲ್ಲಿ ಧೋನಿ ಬ್ಯಾಟಿಂಗ್ ಅಭ್ಯಾಸಕ್ಕಾಗಿ ಮೈದಾನಕ್ಕೆ ಬರುತ್ತಿರುವ ವಿಡಿಯೋವನ್ನು ಚೆನ್ನೈ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದೆ. ಆಗ, ಇಡೀ ಕ್ರೀಡಾಂಗಣವೇ ಧೋನಿ ನಾಮಜಪ ಮೊಳಗಿದ್ದು ವಿಶೇಷವಾಗಿತ್ತು.
ಸದ್ಯ ಈ ವಿಡಿಯೋ ಈಗಲೂ ಟ್ರೆಂಡಿಂಗ್ನಲ್ಲಿದೆ. ಎಲ್ಲವೂ ಸರಿಯಾಗಿತ್ತು. ಆದರೆ ಈಗ ಹೊಸ ವಿವಾದವೊಂದು ಸೃಷ್ಟಿಯಾಗಿದೆ. ಧೋನಿಯ ಮಾಜಿ ಸಹ ಆಟಗಾರ ಟ್ವಿಟರ್ನಲ್ಲಿ ಸಿಎಸ್‌ಕೆ ಹಂಚಿಕೊಂಡಿದ್ದ ಈ ವಿಡಿಯೋನಲ್ಲಿ ಮಾಹಿಯನ್ನು ‘ಬಿಗ್ ಡಾಗ್’ ಎಂದು ಸಂಬೋಧಿಸಿದ್ದಾರೆ. ಈ ಟ್ವೀಟ್ ಕಂಡು ಕೆರಳಿದ ಅಭಿಮಾನಿಗಳು, ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗನ ಚಳಿ ಬಿಡಿಸಿದ್ದಾರೆ. ಮನಬಂದಂತೆ ಕಾಮೆಂಟ್ಗಳ ಮೂಲಕ ಮಾಜಿ ಕ್ರಿಕೆಟರ್ನ ವಿರುದ್ಧ ಕಿಡಿ ಕಾರಿದ್ದಾರೆ.
IPLನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ ನ್ಯೂಜಿಲೆಂಡ್ ತಂಡದ ಸ್ಕಾಟ್ ಸ್ಟೈರಿಸ್ (Scott Styris), ಧೋನಿ ಮೇಲಿನ ಕ್ರೇಜ್ ಕಂಡು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಸಿಎಸ್‌ಕೆ ಹಂಚಿಕೊಂಡ ವಿಡಿಯೋಗೆ ಸ್ಟೈರಿಸ್, Still the big dog around town ಎಂದು ಕಾಮೆಂಟ್ ಮಾಡಿದ್ದರು. ಬಿಗ್ ಡಾಗ್ ಎಂಬ ಪದವನ್ನು ಕಂಡ ಕೂಡಲೇ ಅಭಿಮಾನಿಗಳು, ಅವರ ವಿರುದ್ಧ ದಂಗೆ ಎದ್ದಿದ್ದಾರೆ.
ತಪ್ಪಾಗಿ ಅರ್ಥೈಸಿಕೊಂಡ ಫ್ಯಾನ್ಸ್.!
ಧೋನಿ ಈಗಲೂ ಚೆನ್ನೈನಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿ. ಅವರಿಗಿರುವ ಕ್ರೇಜ್ ಬೇರೆಲ್ಲೂ ಇಲ್ಲ ಎಂದು ಸ್ಟೈರಿಸ್ ಹೇಳಲು ಬಯಸಿದ್ದರು. ಆದರೆ ಧೋನಿ ಅಭಿಮಾನಿ ಬಳಗ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದೆ. ಧೋನಿಯನ್ನು ‘ಬಿಗ್ ಡಾಗ್’ ಎಂದು ಕರೆದಿದ್ದಾರೆ. ಇಂತಹ ಪದವನ್ನು ಧೋನಿಗೆ ಬಳಸಿದರೆ ಹೇಗೆ ಎಂದು ಬಳಕೆದಾರರು ಕಾಮೆಂಟ್ ಮಾಡುತ್ತಿದ್ದಾರೆ. ಇದು ಸ್ಟೈರಿಸ್ ಬೇಸರಕ್ಕೂ ಕಾರಣವಾಗಿದೆ. ಸ್ಕಾಟ್ ಸ್ಟೈರಿಸ್ IPLನಲ್ಲಿ ಮೂರು (2008, 2009, 2011) ಆವೃತ್ತಿಗಳಲ್ಲಿ ಕಣಕ್ಕಿಳಿದಿದ್ದು, ಕೇವಲ 12 ಪಂದ್ಯಗಳನ್ನು ಆಡಿದ್ದಾರೆ. 131 ರನ್ ಗಳಿಸಿದ್ದರೆ, 8 ವಿಕೆಟ್ ಪಡೆದಿದ್ದರು.
ಸಿಎಸ್‌ಕೆ ತಂಡ
MS ಧೋನಿ (ನಾಯಕ), ಡೆವೊನ್ ಕಾನ್ವೆ, ಋತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ಮುಖೇಶ್ ಚೌಧರಿ, ಮಥೀಶ ಪತಿರಾನ, ಸಿಮರ್ಜೀತ್ ಸಿಂಗ್, ದೀಪಕ್ ಚಾಹರ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ಅಜಿಂಕ್ಯ ರಹಾನೆ, ಬೆನ್ ಸ್ಟೋಕ್ಸ್, ಶೇಕ್ ರಶೀದ್, ನಿಶಾಂತ್ ಸಿಂಧು, ಸಿಸಂದಾ ಮಗಾಲಾ, ಅಜಯ್ ಮಂಡಲ್, ಭಗತ್ ವರ್ಮಾ.