ಕನ್ನಡ ಸುದ್ದಿ  /  Sports  /  Kkr In Deep Trouble After Skipper Shreyas Iyer Now Lockie Ferguson Suffers Injury Blow Ahead Of Ipl 16

IPL 2023: ಕೆಕೆಆರ್​ ಫ್ರಾಂಚೈಸಿಗೆ ಇಂಜುರಿ ವರಿ; ಅಯ್ಯರ್​​ ಬೆನ್ನಲ್ಲೇ ಮತ್ತೊಬ್ಬ ಸ್ಟಾರ್​​​ ಪ್ಲೇಯರ್​​ಗೆ ಗಾಯ

IPL 2023: ಬಾಂಗ್ಲಾದೇಶ ಆಟಗಾರರು ಅಲಭ್ಯತೆ, ಕ್ಯಾಪ್ಟನ್​ ಶ್ರೇಯಸ್​ ಅಯ್ಯರ್ ಗಾಯದ ಸಮಸ್ಯೆ ಬೆನ್ನಲ್ಲೇ ಕೆಕೆಆರ್​​ ಫ್ರಾಂಚೈಸಿಗೆ ಮತ್ತೆ ಇಂಜುರಿ ವರಿಯಾಗಿದೆ. ತಂಡದ ಸ್ಟಾರ್​​​​ ವೇಗಿ ಲೂಕಿ ಫರ್ಗ್ಯೂಸನ್​​​​​ ಇಂಜುರಿ ಸಮಸ್ಯೆಗೆ ಸಿಲುಕಿದ್ದಾರೆ. ಫರ್ಗ್ಯೂಸನ್​​​​ ಐಪಿಎಲ್​​ನ ಆರಂಭದ ಕೆಲ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.

ಕೋಲ್ಕತ್ತಾ ನೈಟ್​ ರೈಡರ್ಸ್ ತಂಡ
ಕೋಲ್ಕತ್ತಾ ನೈಟ್​ ರೈಡರ್ಸ್ ತಂಡ

16ನೇ ಆವೃತ್ತಿಯ ಕಲರ್​​​​ಫುಲ್​ ಲೀಗ್ ಐಪಿಎಲ್​​​ಗೆ (IPL) ತಂಡಗಳು ಸಜ್ಜಾಗುತ್ತಿವೆ. ಗಾಯದ ಕಾರಣದಿಂದ ಪ್ರಮುಖ ಆಟಗಾರರೇ ಲೀಗ್​ನಿಂದ ಹಿಂದೆ ಸರಿದಿದ್ದಾರೆ. ಅದರಲ್ಲೂ ಕೋಲ್ಕತ್ತಾ ನೈಟ್​ ರೈಡರ್ಸ್ (Kolkata Knight Riders) ತಂಡವಂತೂ ಹಿನ್ನಡೆ ಮೇಲೆ ಹಿನ್ನಡೆ ಅನುಭವಿಸುತ್ತಿದೆ. ಈಗಾಗಲೇ ನಾಯಕ ಶ್ರೇಯಸ್​ ಅಯ್ಯರ್ (Shreyas Iyer)​​​ ಅವರನ್ನು ಕಳೆದುಕೊಳ್ಳುವ ಭೀತಿಗೆ ಸಿಲುಕಿರುವ ಫ್ರಾಂಚೈಸಿಗೆ ಈಗ ಮತ್ತೊಂದು ಗಾಯದ ಸಮಸ್ಯೆ ಕಾಣಿಸಿಕೊಂಡಿದೆ.

ಬಾಂಗ್ಲಾದೇಶ ತಂಡದ ಆಟಗಾರರು ಅಲಭ್ಯತೆ, ಕ್ಯಾಪ್ಟನ್​ ಶ್ರೇಯಸ್​ ಅಯ್ಯರ್ ಗಾಯದ ಸಮಸ್ಯೆ ಬೆನ್ನಲ್ಲೇ ಕೆಕೆಆರ್​​ (KKR) ಫ್ರಾಂಚೈಸಿಗೆ ಮತ್ತೆ ಇಂಜುರಿ ವರಿಯಾಗಿದೆ. ಕೋಲ್ಕತ್ತಾ ತಂಡದ ಸ್ಟಾರ್​​​​ ವೇಗಿ ಲೂಕಿ ಫರ್ಗ್ಯೂಸನ್​​​​​ ಇಂಜುರಿ ಸಮಸ್ಯೆಗೆ ಸಿಲುಕಿದ್ದಾರೆ. ಫರ್ಗ್ಯೂಸನ್​​​​ ಐಪಿಎಲ್​​ನ ಆರಂಭದ ಕೆಲ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಹಾಗಾಗಿ ಬೌಲಿಂಗ್​ ವಿಭಾಗದಲ್ಲಿ ಫರ್ಗ್ಯೂಸನ್​ ಅವರನ್ನೇ ನೆಚ್ಚಿಕೊಂಡಿದ್ದ ಕೆಕೆಆರ್​​​ಗೆ ಭಾರಿ ಹಿನ್ನಡೆಯಾಗಿದೆ.

ದೇಶೀ ಕ್ರಿಕೆಟ್​ನಲ್ಲಿ ಫರ್ಗ್ಯೂಸನ್​

ಫರ್ಗ್ಯೂಸನ್​ ಮಂಡಿರಜ್ಜು ಗಾಯದಿಂದಾಗಿ ಐಪಿಎಲ್‌ನ ಆರಂಭದ ಕೆಲವು ಪಂದ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ನ್ಯೂಜಿಲೆಂಡ್ ಬೌಲಿಂಗ್ ಕೋಚ್​​​ ಶೇನ್ ಜುರ್ಗೆನ್‌ಸೆನ್ ಈ ಮಾತನ್ನು ದೃಢಪಡಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್​​​ನಲ್ಲಿ ಆಕ್ಲೆಂಡ್ ತಂಡದ ಪರ ಆಡುತ್ತಿದ್ದ ವೇಳೆ ಗಾಯದ ಸಮಸ್ಯೆಗೆ ಸಿಲುಕಿದ್ದಾರೆ. ಶನಿವಾರ ದಿಂದ (ಮಾರ್ಚ್ 25) ಶ್ರೀಲಂಕಾ ವಿರುದ್ಧ ಆರಂಭವಾಗುವ ODI ಸರಣಿಯಿಂದಲೂ ಹೊರಗುಳಿದಿದ್ದಾರೆ.

ಗುಜರಾತ್​​ನಿಂದ ಕೋಲ್ಕತ್ತಾಕ್ಕೆ.!

ಗುಜರಾತ್ ಟೈಟಾನ್ಸ್​, 15ನೇ ಆವೃತ್ತಿಯ ಚಾಂಪಿಯನ್ ಪಟ್ಟಕ್ಕೇರಿತ್ತು. ಈ ತಂಡದಲ್ಲಿದ್ದ ಫರ್ಗ್ಯೂಸನ್​, ಕಳೆದ ಡಿಸೆಂಬರ್​​​ನಲ್ಲಿ ನಡೆದ ಐಪಿಎಲ್​ ಮಿನಿ ಹರಾಜಿನಲ್ಲಿ ಕೆಕೆಆರ್​ ಪಾಲಾದರು. ನ್ಯೂಜಿಲೆಂಡ್ ವೇಗಿ ಗುಜರಾತ್ ಪರ ಕಳೆದ ಆವೃತ್ತಿಯಲ್ಲಿ 14 ಪಂದ್ಯಗಳಲ್ಲಿ 12 ವಿಕೆಟ್‌ ಪಡೆಯಲಷ್ಟೇ ಶಕ್ತರಾಗಿದ್ದರು. ಈ ಕಳಪೆ ಪ್ರದರ್ಶನದ ಕಾರಣದಿಂದಾಗಿ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿತ್ತು.

ಲೂಕಿ ಫರ್ಗ್ಯೂಸನ್​ ಬೌಲಿಂಗ್​​ ಬೊಂಬಾಟ್​ ಆಗಿದೆ. ವಿಶ್ವ ಕ್ರಿಕೆಟ್​​​ನಲ್ಲಿ ಅತೀ ವೇಗದ ಎಸೆತಗಳನ್ನು ಎಸೆಯುವ ಬೌಲರ್​ ಎಂಬ ಖ್ಯಾತಿಗೂ ಒಳಗಾಗಿದ್ದಾರೆ. ಫರ್ಗ್ಯೂಸನ್​ ಮಾತ್ರ ವಿಕೆಟ್​ ಪಡೆಯದೆ ವಾಪಸ್​ ಹೋಗಲ್ಲ. ಕಳೆದ ಆವೃತ್ತಿಯಲ್ಲಿ 157.3 ರ ವೇಗದಲ್ಲಿ ಬೌಲಿಂಗ್​ ಮಾಡುವ ಮೂಲಕ ಗಮನ ಸೆಳೆದಿದ್ದರು. ಪವರ್​​ ಪ್ಲೇನಲ್ಲಿ ಹೇಗೆ ಅಟ್ಯಾಕಿಂಗ್​ ಬೌಲಿಂಗ್​ ಮಾಡುತ್ತಿದ್ದರೋ ಡೆತ್ ಓವರ್‌ಗಳಲ್ಲಿಯೂ ಅಷ್ಟೇ ಪರಿಣಾಮಕಾರಿ ಬೌಲಿಂಗ್​ ಮಾಡುತ್ತಾರೆ ಎಂಬುದು ವಿಶೇಷ.

ಐಪಿಎಲ್​ಗೆ ಅಯ್ಯರ್ ಅನುಮಾನ?

ಸದ್ಯ ಬೆನ್ನು ನೋವಿನ ಸಮಸ್ಯೆಗೆ ಸಿಲುಕಿರುವ ಶ್ರೇಯಸ್​ ಅಯ್ಯರ್​​ ಗಾಯದಿಂದ ಚೇತರಿಸಿಕೊಳ್ಳಲು ಇನ್ನೂ ಹೆಚ್ಚಿನ ಸಮಯ ಬೇಕು ಎಂದು ವೈದ್ಯರು ಸೂಚಿಸಿದ್ದಾರೆ. ಹಾಗಾಗಿ ಈ ಬಾರಿಯ ಐಪಿಎಲ್​​​ ಆವೃತ್ತಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕನಾಗಿರುವ ಶ್ರೇಯಸ್​ ಅಯ್ಯರ್, 6 ತಿಂಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ.

ನರೈನ್​ ಅಥವಾ ರಸೆಲ್​​ಗೆ ನಾಯಕತ್ವ.?

ಸದ್ಯ ನಾಯಕತ್ವದ ಹುಡುಕಾಟದಲ್ಲಿರುವ ಕೋಲ್ಕತ್ತಾಗೆ 2 ಆಯ್ಕೆಗಳು ಮುಂದಿವೆ. ವೆಸ್ಟ್​ ಇಂಡೀಸ್​​​ ತಂಡದ ಸುನಿಲ್​ ನರೈನ್​​​​ ಮತ್ತು ಆ್ಯಂಡ್ರೆ ರಸೆಲ್​​​​​ ಇಬ್ಬರಲ್ಲಿ ಒಬ್ಬರಿಗೆ ಪಟ್ಟ ಕಟ್ಟಲು ಮ್ಯಾನೇಜ್​ಮೆಂಟ್​ ಚಿಂತನೆ ನಡೆಸಿದೆ. ಜೊತೆಗೆ ನಿತೀಶ್​ ರಾಣಾ ಕೂಡ ಈ ರೇಸ್​​ನಲ್ಲಿದ್ದಾರೆ ಎಂಬುದು ವಿಶೇಷ. ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೆಕೆಆರ್‌ನ ನಿಜವಾದ ನಾಯಕ ಯಾರು ಎಂಬುದು ಕುತೂಹಲ ಮೂಡಿಸಿದೆ.

ಕೋಲ್ಕತ್ತಾ ನೈಟ್​ ರೈಡರ್ಸ್​​​ ತಂಡ

ಶ್ರೇಯಸ್ ಅಯ್ಯರ್ (ನಾಯಕ) (ಫಿಟ್‌ನೆಸ್ ಪರೀಕ್ಷೆಗಾಗಿ ಕಾಯಲಾಗುತ್ತಿದೆ), ನಿತೀಶ್ ರಾಣಾ, ರೆಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ಆ್ಯಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಲಾಕಿ ಫರ್ಗುಸನ್, ಉಮೇಶ್ ಯಾದವ್, ಟಿಮ್ ಸೌಥಿ, ಹರ್ಷಿತ್ ರಾಣಾ, ವರುಣ್ ಸಿಂಗ್ ರೋಣ, ಅನುಕುಲ್ ಚಕ್ರವರ್ತಿ, ಆರ್. ನಾರಾಯಣ್ ಜಗದೀಸನ್, ವೈಭವ್ ಅರೋರಾ, ಸುಯಾಶ್ ಶರ್ಮಾ, ಡೇವಿಡ್ ವೈಸ್, ಕುಲ್ವಂತ್ ಖೆಜ್ರೋಲಿಯಾ, ಮನ್ದೀಪ್ ಸಿಂಗ್, ಲಿತ್ತನ್ ದಾಸ್, ಶಕೀಬ್ ಅಲ್ ಹಸನ್.