ಕನ್ನಡ ಸುದ್ದಿ  /  ಕ್ರೀಡೆ  /  ಮಾಂಟೆ ಕಾರ್ಲೊ ಮಾಸ್ಟರ್ಸ್: 38ನೇ ಶ್ರೇಯಾಂಕಿತ ಮ್ಯಾಟಿಯೊ ಅರ್ನಾಲ್ಡಿ ಮಣಿಸಿ ಐತಿಹಾಸಿಕ ದಾಖಲೆ ಬರೆದ ಸುಮಿತ್ ನಗಾಲ್

ಮಾಂಟೆ ಕಾರ್ಲೊ ಮಾಸ್ಟರ್ಸ್: 38ನೇ ಶ್ರೇಯಾಂಕಿತ ಮ್ಯಾಟಿಯೊ ಅರ್ನಾಲ್ಡಿ ಮಣಿಸಿ ಐತಿಹಾಸಿಕ ದಾಖಲೆ ಬರೆದ ಸುಮಿತ್ ನಗಾಲ್

Sumit Nagal: ಮಾಂಟೆ ಕಾರ್ಲೊ ಮಾಸ್ಟರ್ಸ್ ಟೆನಿಸ್‌ ಟೂರ್ನಿಯಲ್ಲಿ ಭಾರತದ ಸುಮಿತ್ ನಗಾಲ್ ಇಟಲಿಯ ಮ್ಯಾಟಿಯೊ ಅರ್ನಾಲ್ಡಿ ಅವರನ್ನು ಸೋಲಿಸಿದ್ದಾರೆ. ಆ ಮೂಲಕ ಮಣ್ಣಿನ ಕೋರ್ಟ್‌ ಮೇಲೆ ಮಾಸ್ಟರ್ಸ್ 1000 ಪಂದ್ಯ ಗೆದ್ದ ಭಾರತದ ಮೊದಲ ಸಿಂಗಲ್ಸ್ ಆಟಗಾರ ಎಂಬ ಹೆಗ್ಗಳಿಕೆಗೆ ನಗಾಲ್ ಪಾತ್ರರಾಗಿದ್ದಾರೆ.

38ನೇ ಶ್ರೇಯಾಂಕಿತ ಮ್ಯಾಟಿಯೊ ಅರ್ನಾಲ್ಡಿ ಮಣಿಸಿದ ಸುಮಿತ್ ನಗಾಲ್
38ನೇ ಶ್ರೇಯಾಂಕಿತ ಮ್ಯಾಟಿಯೊ ಅರ್ನಾಲ್ಡಿ ಮಣಿಸಿದ ಸುಮಿತ್ ನಗಾಲ್ (Getty Images via AFP)

ಭಾರತದ ನಂಬರ್‌ ವನ್‌ ಟೆನಿಸ್‌ ಆಟಗಾರ ಸುಮಿತ್ ನಗಾಲ್ (Sumit Nagal) ಐತಿಹಾಸಿಕ ಸಾಧನೆ ಮಾಡಿದ್ದಾರೆ. ವಿಶ್ವದ 38ನೇ ಶ್ರೇಯಾಂಕಿತ ಆಟಗಾರ ಮ್ಯಾಟಿಯೊ ಅರ್ನಾಲ್ಡಿ ಅವರನ್ನು ಮಣಿಸುವ ಮೂಲಕ, ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಫ್ರಾನ್ಸ್‌ನ ಮಾಂಟೆ ಕಾರ್ಲೊದಲ್ಲಿ ನಡೆಯುತ್ತಿರುವ ಮಾಂಟೆ ಕಾರ್ಲೊ ಎಟಿಪಿ ಮಾಸ್ಟರ್ಸ್ (Monte Carlo Masters) ಟೆನಿಸ್ ಟೂರ್ನಿಯಲ್ಲಿ ಚೊಚ್ಚಲ ಜಯ ದಾಖಲಿಸಿದ್ದಾರೆ. ಇದರೊಂದಿಗೆ ಮಣ್ಣಿನ ಕೋರ್ಟ್‌ ಮೇಲೆ ಮಾಸ್ಟರ್ಸ್ 1000 ಪಂದ್ಯವನ್ನು ಗೆದ್ದ ಮೊದಲ ಭಾರತೀಯ ಸಿಂಗಲ್ಸ್ ಆಟಗಾರ ಎಂಬ ಹೆಗ್ಗಳಿಕೆಗೆ ನಗಾಲ್ ಪಾತ್ರರಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮಾಂಟೆ ಕಾರ್ಲೊ ಮಾಸ್ಟರ್ಸ್ ಟೂರ್ನಿಯ ರೋಚಕ ಹಣಾಹಣಿಯಲ್ಲಿ ಭಾರತದ ಅಗ್ರ ಶ್ರೇಯಾಂಕದ ಸಿಂಗಲ್ಸ್ ಆಟಗಾರನು ಎದುರಾಳಿ ಅರ್ನಾಲ್ಡಿ ಅವರನ್ನು ಸೋಲಿಸಿದರು. ಮೂರು ಸೆಟ್‌ಗಳವರೆಗೆ ಸಾಗಿದ ಕದನದಲ್ಲಿ ರೋಚಕವಾಗಿ ಪುಟಿದೆದ್ದ ಭಾರತೀಯ, ಮತ್ತೊಂದು ಐತಿಹಾಸಿಕ ಸಾಧನೆಗೆ ಸಾಕ್ಷಿಯಾದರು.

ಅರ್ಹತಾ ಪಂದ್ಯಗಳ ಮೂಲಕ ನಗಾಲ್ ಎಟಿಪಿ ಮಾಸ್ಟರ್ಸ್ 1000 ಸ್ಪರ್ಧೆಯಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ಮಾಂಟೆ ಕಾರ್ಲೊ ಮಾಸ್ಟರ್ಸ್ ಆರಂಭಿಕ ಪಂದ್ಯದಲ್ಲಿ ಇಟಲಿಯ ಎದುರಾಳಿಯನ್ನು ಎದುರಿಸಿದ ನಗಾಲ್, ಮೊದಲ ಸೆಟ್ ಸೋತರು. ಅಲ್ಲಿಗೆ ಸೋಲೊಪ್ಪದ ಅವರು, ಬಲುಬೇಗನೆ ಪುಟಿದೆದ್ದು ನಂತರದ ಎರಡೂ ಸೆಟ್‌ಗಳನ್ನು ವಶಪಡಿಸಿಕೊಂಡರು. 6-2, 6-4 ಸೆಟ್‌ಗಳಿಂದ ಎರಡು ಹಾಗೂ ಮೂರನೇ ಸೆಟ್‌ ಗೆಲ್ಲುವ ಮೂಲಕ ಭಾರತದ ಸ್ಟಾರ್ ಆಟಗಾರ ಆಕರ್ಷಕ ಪುನರಾಗಮನ ಮಾಡಿದರು.

ಇದನ್ನೂ ಓದಿ | ಟಿ20 ಕ್ರಿಕೆಟ್‌ನ ಅತ್ಯಂತ ಯಶಸ್ವಿ ತಂಡ ಮುಂಬೈ ಇಂಡಿಯನ್ಸ್; ಟೀಮ್ ಇಂಡಿಯಾ ಮೀರಿಸಿ ಸಿಎಸ್‌ಕೆ ಹಿಂದಿಕ್ಕಿದ ಎಂಐ

ಅಂತಿಮವಾಗಿ ಪಂದ್ಯದಲ್ಲಿ 5-7, 6-2, 6-4 ಸೆಟ್ ಗಳಿಂದ ಗೆದ್ದ ನಗಾಲ್, ಎಟಿಪಿ ಮಾಸ್ಟರ್ಸ್ ಪಂದ್ಯಾವಳಿಯಲ್ಲಿ ಮೊದಲ ಪ್ರಮುಖ ಸುತ್ತಿನ ಗೆಲುವನ್ನು ತಮ್ಮದಾಗಿಸಿಕೊಂಡರು.

ಮೂರನೇ ಬಾರಿ ವಿಶೇಷ ಸಾಧನೆ

ಅರ್ನಾಲ್ಡಿ ವಿರುದ್ಧದ ಐತಿಹಾಸಿಕ ವಿಜಯವು, ಅಗ್ರ 50ರೊಳಗಿನ ಶ್ರೇಯಾಂಕದ ಆಟಗಾರನೊಬ್ಬನ ವಿರುದ್ಧ ನಗಾಲ್ ಅವರ ಮೂರನೇ ಜಯವಾಗಿದೆ. ಭಾರತದ ಟೆನಿಸ್ ಆಟಗಾರ ಈ ಋತುವಿನಲ್ಲಿ ಎರಡು ಬಾರಿ ಅಗ್ರ 50ರೊಳಗಿನ ಆಟಗಾರರನ್ನು ಮಣಿಸಿದ್ದಾರೆ. ಇದಕ್ಕೂ ಮುನ್ನ 26ರ ಹರೆಯದ ಯುವ ಆಟಗಾರ ಅಲೆಕ್ಸಾಂಡರ್ ಬುಬ್ಲಿಕ್‌ರನ್ನು ಮಣಿಸಿ ದಾಖಲೆ ನಿರ್ಮಿಸಿದ್ದರು. ಮೆಲ್ಬೋರ್ನ್‌ನಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್‌ನಲ್ಲಿ ನಗಾಲ್ ಆಗ ವಿಶ್ವದ 27ನೇ ಶ್ರೇಯಾಂಕಿತ ಆಟಗಾರನ ವಿರುದ್ಧ ಅಬ್ಬರದ ಜಯಭೇರಿ ಬಾರಿಸಿದ್ದರು.

ಮುಂದಿನ ಪಂದ್ಯದಲ್ಲಿ ನಗಾಲ್ ಡೆನ್ಮಾರ್ಕ್‌ನ ಎದುರಾಳಿ ವಿಶ್ವದ ನಂಬರ್‌ 7 ಶ್ರೇಯಾಂಕದ ಹೋಲ್ಗರ್ ರೂನ್ ಅವರನ್ನು ಎದುರಿಸಲಿದ್ದಾರೆ.

ವಿಭಾಗ