ಕನ್ನಡ ಸುದ್ದಿ  /  Sports  /  The Wait Is Over, The Drought Has Ended 100 Virat Kohli Has His First Test Century Since November 2019

Virat Kohli: ಕಿಂಗ್​ ಈಸ್​​​ ಬ್ಯಾಕ್.. 3 ವರ್ಷ, 3 ತಿಂಗಳ ಬಳಿಕ ಟೆಸ್ಟ್​​​ನಲ್ಲಿ ದಾಖಲೆಯ ಶತಕ ಸಿಡಿಸಿದ ಕೊಹ್ಲಿ!

Virat Kohli: ಕಿಂಗ್​ ಈಸ್​​​ ಬ್ಯಾಕ್​..! ಟೆಸ್ಟ್​ ಕ್ರಿಕೆಟ್​​ನಲ್ಲಿ ಕೊಹ್ಲಿ ಶತಕ ಯಾವಾಗ..? ಕೊಹ್ಲಿ ಶತಕ ಯಾವಾಗ.? ಅಂತ 3 ವರ್ಷಗಳಿಂದ ಕೇಳುತ್ತಿದ್ದ ಪ್ರಶ್ನೆಗಳಿಗೆ ಕೊಹ್ಲಿ ಖಡಕ್​ ಉತ್ತರ ಕೊಟ್ಟಿದ್ದಾರೆ. ಕೊನೆಗೂ ಶತಕ ಸಿಡಿಸಿ, ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ಆಸ್ಟ್ರೇಲಿಯಾ​ ವಿರುದ್ಧ ತಮ್ಮ 28ನೇ ಶತಕ ಸಿಡಿಸಿ ಮಿಂಚಿದ್ದಾರೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ (BCCI/Twitter)

ONCE A KING ALWAYS A KING.! ಈ ಮಾತನ್ನ ವಿರಾಟ್​​​ ಕೊಹ್ಲಿ (Virat Kohli) ಮತ್ತೆ ನಿರೂಪಿಸಿದ್ದಾರೆ. ಟೀಕೆ, ಅವಮಾನ, ಹತಾಶೆ, ನೋವು, ಯಾತನೆ.. ಎಲ್ಲವನ್ನೂ ಮೆಟ್ಟಿ ನಿಂತ ಕಿಂಗ್,​​ ಘರ್ಜಿಸಿದ್ದಾರೆ. 3 ವರ್ಷಗಳ ನಂತರ ಕೊ​ಹ್ಲಿ, ಶತಕದ ಬರ ನೀಗಿದೆ. ಕಿಂಗ್​​​ ಬ್ಯಾಟ್ ಕೊನೆಗೂ ಅಗಸದ ಕಡೆ ಮುಖಮಾಡಿ ಸಂಭ್ರಮಿಸಿದೆ. ಅದರಲ್ಲೂ ವಿಶೇಷವಾಗಿ ಕೊಹ್ಲಿ, ಅಭಿಮಾನಿಗಳು​ ಕಾಯುವಿಕೆ ದೊಡ್ಡ ವನವಾಸ ಕೊನೆಗೊಂಡಿದೆ. ಸೆಂಚುರಿ ಸಿಡಿಸಿಲ್ಲ, ಸೆಂಚುರಿ ಸಿಡಿಸಿಲ್ಲ.. ಅಂತ ಕ್ರಿಕೆಟ್​ ಲೋಕ ಕೇಳುತ್ತಿದ್ದ ದೊಡ್ಡ ಪ್ರಶ್ನೆಗೆ ಮುಟ್ಟಿನೋಡುಕೊಳ್ಳುವಂತೆ ಉತ್ತರ ಕೊಟ್ಟಿದ್ದಾರೆ.

ಜವಾಬ್ದಾರಿಯುತ ಶತಕ ಸಿಡಿಸಿ ಕೊಹ್ಲಿ

ಬಾರ್ಡರ್​​​​​ - ಗವಾಸ್ಕರ್​​ ಟೆಸ್ಟ್​ ಸರಣಿಯ (Border - Gavaskar Trophy) ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ಕಿಂಗ್​​, ದಾಖಲೆಯ 75ನೇ ಶತಕ (Virat Kohli 75th Century) ಸಿಡಿಸಿದ್ದಾರೆ. ವಿಶ್ವ ದರ್ಜೆಯ ಬೌಲರ್​​ಗಳನ್ನ ಚಿಂದಿ ಉಡಾಯಿಸಿದರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೊಹ್ಲಿ ಜವಾಬ್ದಾರಿಯುತ ಬ್ಯಾಟಿಂಗ್​ ನಡೆಸಿದರು. ಅವಕಾಶ ಸಿಕ್ಕಾಗೆಲ್ಲಾ ವಿರಾಟ ರೂಪ ತೋರಿದ ಕೊಹ್ಲಿ, 241 ಎಸೆತಗಳಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು. ಟೆಸ್ಟ್​​​ ಕ್ರಿಕೆಟ್​​​ನಲ್ಲಿ ವೃತ್ತಿಜೀವನದ 28ನೇ ಶತಕ ದಾಖಲಿಸಿದರು.

ಟೆಸ್ಟ್​​ನಲ್ಲಿ 1,206 ದಿನಗಳ ಬಳಿಕ ಶತಕ

ಟೆಸ್ಟ್​ ಕ್ರಿಕೆಟ್​ನಲ್ಲಿ ಸೆಂಚುರಿ ಯಾವಾಗ ಅಂತ ಕೇಳುತ್ತಿದ್ದವರಿಗೆ ಕೊಹ್ಲಿ ಉತ್ತರ ಕೊಟ್ಟಿದ್ದಾರೆ. ವಿಶ್ರಾಂತಿ ಬಳಿಕ ರಿಫ್ರೆಶ್​​ ಆಗಿ ಟೆಸ್ಟ್​ ಸರಣಿಯಲ್ಲಿ ಕಣಕ್ಕಿಳಿದ ಕೊಹ್ಲಿ, ಬರೋಬ್ಬರಿ 1,206 ದಿನಗಳ ಬಳಿಕ ಮೂರಂಕಿ ದಾಟಿದ್ದಾರೆ. 241ಎಸೆತಗಳಲ್ಲಿ 05 ಬೌಂಡರಿ​​ಗಳ ನೆರವಿನಿಂದ ಕೊಹ್ಲಿ, ಅಜೇಯ ಶತಕ​​​​​​ ಸಿಡಿಸಿದ್ದಾರೆ. 3 ವರ್ಷ 3 ತಿಂಗಳು, 39 ತಿಂಗಳು, 172 ವಾರಗಳ ಬಳಿಕ ಶತಕಕ್ಕಾಗಿ ಕಾಯುವಿಕೆಯನ್ನು ಕೊನೆಗೊಳಿಸಿದ್ದಾರೆ.

ಕೊನೇ ಶತಕ ಸಿಡಿಸಿದ್ದು 2019ರಲ್ಲಿ.!

ಹೌದು..! ಕೊಹ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಟೆಸ್ಟ್​​ ಶತಕ ಬಾರಿಸಿದ್ದು, 2019ರಲ್ಲಿ.! ಅಂದಿನಿಂದ ಕೊಹ್ಲಿ, ಬ್ಯಾಟನ್ನು ಮೇಲಕ್ಕೆತ್ತಿ ಸಂಭ್ರಮಿಸಿಯೇ ಇರಲಿಲ್ಲ.​​ 2019ರ ನವೆಂಬರ್​​​ 23ರಂದು ಬಾಂಗ್ಲಾ ವಿರುದ್ಧ ಪಿಂಕ್​ಬಾಲ್​ ಟೆಸ್ಟ್​​​ನಲ್ಲಿ (Pink Ball Test) 136 ರನ್​ ಗಳಿಸಿದ್ದರು. ಅದಾದ ಬಳಿಕ ಕೇವಲ ಅರ್ಧಶತಕಗಳನ್ನು ಸಿಡಿಸಿದ್ದ ಕೊಹ್ಲಿ, ಶತಕ ಸಿಡಿಸಲು ಒದ್ದಾಡಿದ್ದರು.

8 ತಿಂಗಳಲ್ಲಿ 5ನೇ ಶತಕ ಸಿಡಿಸಿದ ಕಿಂಗ್​.!

ಕಳೆದ ವರ್ಷ ಸೆಪ್ಟೆಂಬರ್​​​ 8ರಂದು ಟಿ20 ಕ್ರಿಕೆಟ್​​ನಲ್ಲಿ ಶತಕ ಸಿಡಿಸುವ ಮೂಲಕ ಫಾರ್ಮ್​​ಗೆ ಮರಳಿದ್ದರು. ಅದೇ ವರ್ಷ ಬಾಂಗ್ಲಾದೇಶದ ವಿರುದ್ಧದ ಏಕದಿನ ಪಂದ್ಯದಲ್ಲಿ ಶತಕ ಒನ್​ಡೇ ಕ್ರಿಕೆಟ್​ಗೂ ಕಂಬ್ಯಾಕ್​ ಮಾಡಿದ್ದರು. ಇದರ ನಂತರ ಈ ವರ್ಷ ಏಕದಿನ ಕ್ರಿಕೆಟ್​​​ನಲ್ಲಿ 2 ಶತಕ ಸಿಡಿಸಿ ಸಂಭ್ರಮಿಸಿದ್ದರು. ಆದರೆ ಟೆಸ್ಟ್​​​​ ಕ್ರಿಕೆಟ್​​ನಲ್ಲಿ ಮಾತ್ರ ಸಾಧ್ಯವಾಗಿರಲೇ ಇಲ್ಲ. ಇದೀಗ ಅದು ಕೂಡ ನೆರವೇರಿದೆ.

ಒಟ್ನಲ್ಲಿ..! ಏಕದಿನ, ಟಿ20 ಕ್ರಿಕೆಟ್​​​ನಲ್ಲಿ ಅದ್ಭುತ ಫಾರ್ಮ್​ಗೆ ಬಂದಿದ್ದ ಕೊಹ್ಲಿ, ಟೆಸ್ಟ್​ನಲ್ಲಿ ಪದೆಪದೇ ಫೇಲ್​ ಆಗುತ್ತಿದ್ದರು. ಇದರಿಂದ ನಿರಾಸೆಗೊಂಡಿದ್ದ ಫ್ಯಾನ್ಸ್​​ಗೆ ಕೊಹ್ಲಿ ಸೆಂಚುರಿ, ಫುಲ್ ಖುಷ್ ನೀಡಿದೆ. ಇಡೀ ಕ್ರಿಕೆಟ್ ಜಗತ್ತೇ ಕಾಯ್ತಿದ್ದ ದಿನಕ್ಕೆ ಬ್ರೇಕ್ ಹಾಕಿದ ಕೊಹ್ಲಿ, ಹಳೆಯ ಖದರ್​ಗೆ ಮರಳಿ, ಎದುರಾಳಿ ತಂಡಗಳಿಗೆ ನಡುಕ ಹುಟ್ಟಿಸಿದ್ದಾರೆ.