ಕನ್ನಡ ಸುದ್ದಿ  /  ಕ್ರೀಡೆ  /  Virat Kohli: ‘ಆಕೆಯಿಂದಲೇ ನನ್ನ ಜೀವನ ಬದಲಾಯಿತು, ಇಲ್ಲದಿದ್ದರೆ..’: ಜೀವನ ಬದಲಿಸಿದ ಘಟನೆ ನೆನೆದ ಕೊಹ್ಲಿ!

Virat Kohli: ‘ಆಕೆಯಿಂದಲೇ ನನ್ನ ಜೀವನ ಬದಲಾಯಿತು, ಇಲ್ಲದಿದ್ದರೆ..’: ಜೀವನ ಬದಲಿಸಿದ ಘಟನೆ ನೆನೆದ ಕೊಹ್ಲಿ!

ಆರ್​​ಸಿಬಿ ಪಾಡ್​ಕಾಸ್ಟ್​ನಲ್ಲಿ ತಮ್ಮ ಜೀವನದ ಕೆಲವು ಪ್ರಮುಖ ಘಟನೆಗಳನ್ನು ಮೆಲುಕು ಹಾಕಿದ ವಿರಾಟ್​ ಕೊಹ್ಲಿ, ತನ್ನ ತಂದೆಯ ನಿಧನದ ನಂತರ ಪರಿಸ್ಥಿತಿ ಹೇಗೆ ತಿರುವು ಪಡೆದುಕೊಂಡಿತು ಎಂಬುದನ್ನು ನೆನಪಿಸಿಕೊಂಡಿದ್ದಾರೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ

ವಿರಾಟ್ ಕೊಹ್ಲಿ.! (Virat Kohli) ಕ್ರಿಕೆಟ್​ ದುನಿಯಾದ One & Only ಬ್ಯಾಟಿಂಗ್ ಕಿಂಗ್​.. ಪ್ರೆಸೆಂಟ್​ ಜೆನ​ರೇಷನ್​ನಲ್ಲಿ ಶತಕ, ಅರ್ಧಶತಕ, ರನ್​, ಯಾವುದೇ ವಿಭಾಗದಲ್ಲೂ ಕೊಹ್ಲಿಯೇ ನಂ.1. ವಿರಾಟ್​​ಗೆ ಕ್ರಿಕೆಟ್ ಮೇಲಿರುವ ಉತ್ಸಾಹ, ಬದ್ಧತೆಯೇ ಕೊಹ್ಲಿಯನ್ನ ಸೂಪರ್ ಸ್ಟಾರ್ ​ಕ್ರಿಕೆಟಿಗನನ್ನಾಗಿ ಮಾಡಿದೆ. ಅಭಿಮಾನಿ ಬಳಗವಂತೂ ಲೆಕ್ಕಕ್ಕೇ ಇಲ್ಲ. ವರ್ಷಕ್ಕೆ ಆದಾಯವೇ ನೂರಾರು ಕೋಟಿ ಬರುತ್ತದೆ. ಇಷ್ಟೆಲ್ಲಾ ಇದ್ದರೂ ಜೀವನ ಬದಲಾಗಿದ್ದು, ಆಕೆಯಿಂದ ಮಾತ್ರ ಎಂದು ಹೇಳಿದ್ದಾರೆ.

ವಿರಾಟ್​ ಕೊಹ್ಲಿ ತನ್ನ ಜೀವನದಲ್ಲಾದ ಬದಲಾವಣೆ ಬಗ್ಗೆ ಕೊಹ್ಲಿ, ಮನ ಬಿಚ್ಚಿ ಮಾತನಾಡಿದ್ದಾರೆ. ಆರ್​​ಸಿಬಿ ಪಾಡ್​ಕಾಸ್ಟ್​ನಲ್ಲಿ ತಮ್ಮ ಜೀವನದಲ್ಲಿ ನಡೆದ ಮಹತ್ವದ ಘಟನೆಗಳನ್ನು ನೆನೆದಿದ್ದಾರೆ. ತನ್ನ ತಂದೆಯ ನಿಧನದ ಬಳಿಕ ಪರಿಸ್ಥಿತಿ ಹೇಗಿತ್ತು.? ಅದಕ್ಕೆ ತಿರುವು ಸಿಕ್ಕಿದ್ದು ಎಲ್ಲಿ..? ಯಾವೆಲ್ಲಾ ವಿಷಯಗಳಿಂದ ಜೀವನ ಬದಲಾಗದೇ ಹಾಗೆಯೇ ಉಳಿದಿತ್ತು.? ಹೀಗೆ ಪ್ರಯಾಣದ ಬಗ್ಗೆ ಕಿಂಗ್​ ಕೊಹ್ಲಿ ಮೆಲುಕು ಹಾಕಿದ್ದಾರೆ.

ನನ್ನ ವೃತ್ತಿ ಜೀವನದಲ್ಲಿ ಹಲವು ಹಂತಗಳನ್ನು ದಾಟಿ ಬಂದಿದ್ದೇನೆ. ಸಂತೋಷ, ನೋವು, ಹಣ, ಆಟ, ಫಿಟ್​ನೆಸ್​, ಊಟ ಎಲ್ಲವನ್ನೂ ಅನುಭವಿಸಿದ್ದೇನೆ. ಆದರೆ ಇದ್ಯಾವುವು ನನ್ನ ಜೀವನ ಬದಲಿಸಲಿಲ್ಲ. ತೃಪ್ತಿ ನೀಡಲಿಲ್ಲ. ಆದರೆ, ಅನುಷ್ಕಾ ಶರ್ಮಾ (Anushka Sharma) ಭೇಟಿ ನನ್ನ ಜೀವನವನ್ನೇ ಬದಲಾಯಿಸಿತು. ಹೊಸ ಜೀವನವನ್ನು ನೋಡಿದೆ ಎಂದು ಹೇಳಿದ್ದಾರೆ.

ನನ್ನ ತಂದೆ ತೀರಿಕೊಂಡ ನಂತರ ನನ್ನ ದೃಷ್ಟಿಕೋನ ಬದಲಾಯಿತು. ತಿರುವು ಮಾತ್ರ ಸಿಗಲಿಲ್ಲ. ಮೊದಲು ಹೇಗಿತ್ತೋ ಹಾಗೆಯೇ ಇತ್ತು. ಆದರೆ ಜೀವನದಲ್ಲಿ ಏನು ಸಾಧಿಸಬೇಕೆಂದುಕೊಂಡಿದ್ದೇನೋ ಅದರ ಮೇಲೆ ಮತ್ತಷ್ಟು ಗಮನ ಹರಿಸಿದೆ. ಇದು ನನ್ನ ಕನಸು ನೆರವೇರಿಸಿಕೊಳ್ಳಲು ಪ್ರೇರಣೆಯಾಗೇ ಉಳಿಯಿತು. ಬಲವು ಹೆಚ್ಚಾಯಿತು. ಹಾಗಂತ ಅದು ನನ್ನ ಜೀವನವನ್ನು ಬದಲಿಸಲು ಸಾಧ್ಯವಾಗಲಿಲ್ಲ. ನನ್ನ ಸುತ್ತಲಿನ ವಾತಾವರಣವೂ ಬದಲಾಗಿಲ್ಲ. ಎಲ್ಲವೂ ಖಾಲಿ ಅನಿಸಿತು ಎಂದು ಹೇಳಿದ್ದಾರೆ.

ಜೀವನ ತಿರುವು ಪಡೆದ ಕ್ಷಣಗಳ ಕುರಿತು ಮಾತನಾಡಿದ ಕೊಹ್ಲಿ, ಅನುಷ್ಕಾ ಶರ್ಮಾ ಭೇಟಿಯಾದ ಬಳಿಕ ನನ್ನ ಜೀವನ ಭಿನ್ನ ಎನಿಸಿತು. ಅಂದಿನಿಂದ ನಾನು ಜೀವನವನ್ನು ಸಂಪೂರ್ಣ ವಿಭಿನ್ನವಾಗಿ ನೋಡಲು ಪ್ರಾರಂಭಿಸಿದೆ. ಜೀವನದಲ್ಲಿ ಹೊಸ ಕ್ಷಣವನ್ನು ಕಂಡೆ. ಹಾಗಾಗಿ ನಾನು ಅನುಷ್ಕಾಳನ್ನು ಭೇಟಿಯಾಗಿರುವುದನ್ನೇ ಜೀವನ ಬದಲಿಸಿದ ಕ್ಷಣ ಎಂದು ಕರೆಯುತ್ತೇನೆ ಎಂದು ಮಾಜಿ ನಾಯಕ ಹೇಳಿದ್ದಾರೆ.

ಇದು ನಾನು ಜೀವನದಲ್ಲಿ ಮರೆಯಲಾಗದ ಕ್ಷಣ. ಯಾಕೆಂದರೆ ನೀವು ಪ್ರೀತಿಸುತ್ತಿರುವಾಗ, ನೀವು ಬದಲಾಗಲು ಪ್ರಾರಂಭಿಸುತ್ತೀರಿ. ನಾವು ನಮ್ಮ ಪ್ರೀತಿ ಪಾತ್ರರ ಜೊತೆ ಮುಂದುವರಿಯಲು ಬಯಸುತ್ತೀರಿ. ಅವರಿಂದ ನೀವು ಅನೇಕ ವಿಷಯಗಳನ್ನು ಒಪ್ಪಿಕೊಳ್ಳುತ್ತೀರಿ. ನನಗೂ ಹೀಗೆಯೇ ಜರುಗಿತು. ಇದೇ ಭಾವನೆಗಳು ನನ್ನನ್ನು ಮತ್ತಷ್ಟು ಇಂಪ್ರೆಸ್​ ಮಾಡಿದವು. ಹಾಗಾಗಿ ಈ ಕ್ಷಣ, ನನ್ನ ಜೀವನವನ್ನೇ ಬದಲಾಯಿಸಿದ ಕ್ಷಣವಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ.