ಕನ್ನಡ ಸುದ್ದಿ  /  Video Gallery  /  Dimple Queen Rachita Ram Visited To Koragajja Temple At Mangalore Koragajja Kola Karavali Daiva Guliga

Mangalore Koragajja : ಮಂಗಳೂರಿನ ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಸ್ನೇಹಿತರೊಂದಿಗೆ ಬಂದು ಪ್ರಾರ್ಥನೆ ಸಲ್ಲಿಸಿದ ರಚಿತಾ ರಾಮ್

May 31, 2023 05:16 PM IST Prashanth BR
twitter
May 31, 2023 05:16 PM IST
  •  ಕೊರಗಜ್ಜನ ಆದಿ ಕ್ಷೇತ್ರ ಮಂಗಳೂರಿನ ಕುತ್ತಾರಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಭೇಟಿ ನೀಡಿದರು. ತನ್ನ ಸ್ನೇಹಿತರ ಜೊತೆಗೆ ಕೊರಗಜ್ಜನ ದರ್ಶನ ಪಡೆದ ರಚಿತಾ ರಾಮ್, ಮುಂದಿನ ತಿಂಗಳು ರಿಲೀಸ್ ಆಗಲಿರುವ ಮ್ಯಾಟ್ನಿ, ಬ್ಯಾಡ್ ಮ್ಯಾನರ್ಸ್ ಚಿತ್ರಗಳ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಚಿತಾ, ಕೊರಗಜ್ಜನ ಕ್ಷೇತ್ರಕ್ಕೆ ಬರಬೇಕು ಅಂತ ಅನ್ನಿಸಿತ್ತು. ಹೀಗಾಗಿ ಸ್ನೇಹಿತರೊಂದಿಗೆ ಬಂದು ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ತಿಳಿಸಿದರು. ಕುತ್ತಾರುವಿನಲ್ಲಿರುವ ಕೊರಗಜ್ಜನ ಆದಿಸ್ಥಳಕ್ಕೆ ಸಾಕಷ್ಟು ಮಂದಿ ಚಿತ್ರತಾರೆಯರು ಆಗಮಿಸಿ ತಮ್ಮ ಪ್ರಾರ್ಥನೆಯನ್ನ ಸಲ್ಲಿಸಿ ಫಲಕಂಡಿರೋದು ವಿಶೇಷ.
More