logo
ಕನ್ನಡ ಸುದ್ದಿ  /  ಚುನಾವಣೆಗಳು  /  Chitradurga News: ಕೇಂದ್ರ ಸಚಿವರಿಗೆ ಖಾತ್ರಿ ಇಲ್ಲ ಟಿಕೆಟ್‌, ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಸಸ್ಪೆನ್ಸ್‌

Chitradurga News: ಕೇಂದ್ರ ಸಚಿವರಿಗೆ ಖಾತ್ರಿ ಇಲ್ಲ ಟಿಕೆಟ್‌, ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಸಸ್ಪೆನ್ಸ್‌

Umesha Bhatta P H HT Kannada

Mar 25, 2024 08:53 PM IST

ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ಎ.ನಾರಾಯಣಸ್ವಾಮಿ. ಮಾದಾರ ಚನ್ನಯ್ಯ ಸ್ವಾಮೀಜಿ ಅವರಲ್ಲಿ ಯಾರು ಅಭ್ಯರ್ಥಿಯಾಗಬಹುದು ಎನ್ನುವ ಕುತೂಹಲವಿದೆ.

    • ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ತನ್ನ ಅಭ್ಯರ್ಥಿ ಆಯ್ಕೆಗೆ ಪ್ರಯತ್ನ ನಡೆಸುತ್ತಲೇ ಇದೆ. 
ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ಎ.ನಾರಾಯಣಸ್ವಾಮಿ. ಮಾದಾರ ಚನ್ನಯ್ಯ ಸ್ವಾಮೀಜಿ ಅವರಲ್ಲಿ ಯಾರು ಅಭ್ಯರ್ಥಿಯಾಗಬಹುದು ಎನ್ನುವ ಕುತೂಹಲವಿದೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ಎ.ನಾರಾಯಣಸ್ವಾಮಿ. ಮಾದಾರ ಚನ್ನಯ್ಯ ಸ್ವಾಮೀಜಿ ಅವರಲ್ಲಿ ಯಾರು ಅಭ್ಯರ್ಥಿಯಾಗಬಹುದು ಎನ್ನುವ ಕುತೂಹಲವಿದೆ.

ಚಿತ್ರದುರ್ಗ: ಕರ್ನಾಟಕದ ಎಲ್ಲಾ ಕ್ಷೇತ್ರಗಳಿಗೂ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಆದರೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವ ವಿಚಾರದಲ್ಲಿ ಇನ್ನೂ ಸ್ಪಷ್ಟತೆ ಇಲ್ಲ. ಕೇಂದ್ರದಲ್ಲಿ ಸಾಮಾಜಿಕ ನ್ಯಾಯ ರಾಜ್ಯಸಚಿವರಾಗಿರುವ ಆನೇಕಲ್‌ ನಾರಾಯಣಸ್ವಾಮಿ ಅವರು ಪ್ರತಿನಿಧಿಸುವ ಈ ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿ ಸ್ಪರ್ಧಿಸುವರು ಎನ್ನುವ ಚರ್ಚೆಗಳು ನಡೆದಿವೆ. ಯಾರಾಗುತ್ತಾರೆ ಎನ್ನುವ ಕುತೂಹಲವಂತೂ ಬಿಜೆಪಿ ಕಾರ್ಯಕರ್ತರಲ್ಲಿ ಮಾತ್ರವಲ್ಲ. ಮುಖಂಡರು ಹಾಗೂ ಆಕಾಂಕ್ಷಿಗಳಲ್ಲೂ ಇದೆ. ದಿನಕ್ಕೆ ಒಂದು ಹೊಸ ಹೆಸರು ಇಲ್ಲಿ ಸೇರ್ಪಡೆಯಾಗುತ್ತಿರುವುದು ಸಸ್ಪೆನ್ಸ್‌ ಹೆಚ್ಚುವಂತೆ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ಲೋಕಸಭಾ ಚುನಾವಣೆ; 8889 ಕೋಟಿ ರೂ ಅಕ್ರಮ ವಸ್ತು ವಶ, ಶೇ 45 ಡ್ರಗ್ಸ್‌, 6ನೇ ಸ್ಥಾನದಲ್ಲಿ ಕರ್ನಾಟಕ

ಆಂಧ್ರ ಪ್ರದೇಶ ಚುನಾವಣೆ 2024; 175 ವಿಧಾನಸಭಾ ಸ್ಥಾನಗಳಿಗೆ ಮೇ 13ಕ್ಕೆ ಮತದಾನ, ಚುನಾವಣಾ ಟ್ರೆಂಡ್ ಅರ್ಥಮಾಡಿಕೊಳ್ಳಲು ಈ 10 ಅಂಶ

ಸಂಪಾದಕೀಯ: ಆರ್ಥಿಕ ಅಸಮಾನತೆಯ ಚರ್ಚೆಯಲ್ಲಿ ಜಾತಿಯ ಸಂಕೀರ್ಣ ಪಾತ್ರ, ಕಾಂಗ್ರೆಸ್‌ ಉರುಳಿಸಿದ ರಾಜಕೀಯ ದಾಳದ ಹಲವು ಒಳಸುಳಿಗಳು

ಲೋಕಸಭಾ ಚುನಾವಣೆ; ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಲಿಂಗಾಯತರದ್ದೇ ಪ್ರಾಬಲ್ಯ, ಯಡಿಯೂರಪ್ಪ ಕುಟುಂಬದ ರಾಜಕೀಯ ಭವಿಷ್ಯ ನಿರ್ಧರಿಸುವ ಮತದಾನ

ಬದಲಾವಣೆ ಯಾಕೆ

ಈ ಬಾರಿ ಆನೇಕಲ್‌ ಮೂಲದವರಾದ ಎ.ನಾರಾಯಣಸ್ವಾಮಿ ಇಲ್ಲಿಂದ ಸ್ಪರ್ಧಿಸಿ ಗೆದ್ದರು. ಆನಂತರ ಕೇಂದ್ರದಲ್ಲಿ ಮಂತ್ರಿಯೂ ಆದರು.ಅದರಲ್ಲೂ ಸಾಮಾಜಿಕ ನ್ಯಾಯ ಖಾತೆಯನ್ನು ಅವರಿಗೆ ನೀಡಲಾಗಿತ್ತು. ನಿರೀಕ್ಷೆಯಂತೆ ಅವರು ಕೆಲಸ ಮಾಡಲಿಲ್ಲ ಎನ್ನುವ ಬೇಸರ ಸ್ವತಃ ಪ್ರಧಾನಿ ಅವರಲ್ಲೂ ಇದೆ. ಅಲ್ಲದೇ ರಾಜ್ಯ ನಾಯಕರೂ ಕೂಡ ನಾರಾಯಣಸ್ವಾಮಿ ಅವರ ಕಾರ್ಯವೈಖರಿ ಬಗ್ಗೆಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಸ್ಥಳೀಯವಾಗಿ ಅಭಿಪ್ರಾಯ ಪಡೆದರೂ ಅಲ್ಲಿಯು ಇದೇ ಅಭಿಪ್ರಾಯ ಕೇಳಿ ಬಂದಿತ್ತು. ಈ ಕಾರಣದಿಂದ ನಾರಾಯಣಸ್ವಾಮಿ ಅವರನ್ನು ಬದಲಾಯಿಸಲಾಗುತ್ತದೆ ಎನ್ನುವ ಮಾತುಗಳು ಕೇಳಿ ಬಂದವು. ಈಗಾಗಲೇ ಐದು ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದೆ. ಕರ್ನಾಟಕದಲ್ಲೂ ಮೂರು ಪಟ್ಟಿ ಪ್ರಕಟಿಸಿದರೂ ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿ ಹೆಸರು ಪ್ರಕಟಿಸಿಲ್ಲ. ಇದು ಅಭ್ಯರ್ಥಿ ಬದಲಾವಣೆಯ ಸೂಚನೆ ಎಂದೇ ಹೇಳಲಾಗುತ್ತಿದೆ.

ಈ ನಡುವೆ ನಾರಾಯಣಸ್ವಾಮಿ ಕೂಡ ರಾಜ್ಯ ರಾಜಕಾರಣಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿರುವುದರಿಂದ ಮುಂದೆ ಅವರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಪ್ರತೀ ಬಾರಿ ಹೊಸಬರು

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಐದು ಬಾರಿಯಿಂದಲೂ ಹೊಸಬರಿಗೆ ಅವಕಾಶ ಮಾಡಿಕೊಂಡು ಬರಲಾಗುತ್ತಿದೆ. ಮೊದಲು ಇಲ್ಲಿ ಬಿಜೆಪಿ ಬೆಂಬಲದೊಂದಿಗೆ ಸಂಯುಕ್ತ ಜನತಾದಳದಿಂದ ಟಿಕೆಟ್‌ ಪಡೆದು ಗೆದ್ದಿದ್ದವರು ನಟ ಶಶಿಕುಮಾರ್.ನಂತರ ಅವರು ಪಕ್ಷ ಬದಲಿಸಿ ಸಕ್ರಿಯ ರಾಜಕಾರಣದಲ್ಲೂ ಇಲ್ಲ. ಆನಂತರ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ಅವರಿಗ ಬಿಜೆಪಿ ಟಿಕೆಟ್‌ ನೀಡಿದಾಗ ಅವರು ಸೋತರು. ಬಳಿಕ ಜನಾರ್ದನ ಸ್ವಾಮಿ ಎಂಬ ಹೊಸ ಮುಖಕ್ಕೆ ಮಣೆ ಹಾಕಲಾಯಿತು. ಅವರು ಗೆದ್ದರು. ಮತ್ತೊಂದು ಚುನಾವಣೆಗೆ ಅವಕಾಶ ಅವರಿಗೆ ದೊರೆತರೂ ಸೋತರು. ಹಿಂದಿನ ಅವಧಿಯಲ್ಲಿ ನಾರಾಯಣಸ್ವಾಮಿ ಅವಕಾಶ ಪಡೆದರು. ಈ ಬಾರಿ ಮತ್ತೆ ಹೊಸ ಪ್ರಮುಖ ಪ್ರಯೋಗವೇ ನಡೆದಿದೆ ಎನ್ನಲಾಗುತ್ತಿದೆ.

ಯಾರು ಆಕಾಂಕ್ಷಿಗಳು

ಬಾಗಲಕೋಟೆ ಜಿಲ್ಲೆ ಮುಧೋಳ ಕ್ಷೇತ್ರದ ಶಾಸಕರಾಗಿ, ಸಚಿವ, ಡಿಸಿಎಂ ಕೂಡ ಆಗಿದ್ದ ಹಿರಿಯ ನಾಯಕ ಗೋವಿಂದ ಕಾರಜೋಳ ಹೆಸರು ಮುಂಚೂಣಿಯಲ್ಲಿದೆ. ಇದಲ್ಲದೇ ಮಾದಾರ ಚನ್ನಯ್ಯ ಸ್ವಾಮೀಜಿ ಅವರ ಹೆಸರೂ ಮುಂಚೂಣಿಯಲ್ಲಿತ್ತಾದರೂ ಅವರೇ ಬೇಡ ಎನ್ನುವ ಸಂದೇಶ ನೀಡಿದ್ದರಿಂದ ಹೆಸರು ಹಿಂದೆ ಸರಿಯಿತು. ಇದಲ್ಲದೇ ಯುವ ಮುಖಂಡ ರಘು ಚಂದನ್‌ ಹೆಸರು ಕೂಡ ಇದೆ. ಆದರೆ ಟಿಕೆಟ್‌ ವಿಚಾರದಲ್ಲಿ ಅವರ ಬೆಂಬಲಿಗರು ಪಕ್ಷದ ಕಚೇರಿಗೆ ಕಲ್ಲು ಹೊಡೆದಿದ್ದು ಹಿನ್ನೆಡೆಯಾಗಿದೆ. ಇದೇ ಕ್ಷೇತ್ರದಿಂದ ಸಂಸದರಾಗಿದ್ದ ಜನಾರ್ದನ ಸ್ವಾಮಿ ಕೂಡ ಟಿಕೆಟ್‌ಗೆ ಪೈಪೋಟಿ ನಡೆಸಿದ್ದಾರೆ. ಇದರೊಟ್ಟಿಗೆ ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಅರವಿಂದ ಲಿಂಬಾವಳಿ ಹೆಸರೂ ಕೂಡ ಈಗ ಮುನ್ನಲೆಗೆ ಬಂದಿದೆ. ಹಿಂದೆ ಇಲ್ಲಿ ಬೋವಿ ಸಮಾಜದವರಿಗೆ ಅವಕಾಶ ನೀಡಿ ಗೆದ್ದ ಉದಾಹರಣೆಯಿದೆ. ಇದರಿಂದ ಅದೇ ಸಮುದಾಯಕ್ಕೆ ಅವಕಾಶ ನೀಡದರೆ ಹೇಗೆ ಎಂಬ ಬಗ್ಗೆಯೂ ಚರ್ಚೆಗಳು ನಡೆದಿವೆ. ಗೋವಿಂದ ಕಾರಜೋಳ ಇಲ್ಲವೇ ಅರವಿಂದ ಲಿಂಬಾವಳಿ ಅವರಲ್ಲಿ ಒಬ್ಬರಿಗೆ ಅವಕಾಶ ಸಿಗದೇ ಇದ್ದರೆ ಮತ್ತೊಮ್ಮೆ ನಾರಾಯಣಸ್ವಾಮಿಗೆ ಮಣೆ ಹಾಕಿದರೂ ಅಚ್ಚರಿಯಿಲ್ಲ ಎನ್ನುವ ಮಾತುಗಳೂ ಬಿಜೆಪಿ ವಲಯದಲ್ಲಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ