logo
ಕನ್ನಡ ಸುದ್ದಿ  /  Entertainment  /  Actor And Youtuber Mallu Jamakhandi Join Hands With Director Shashanks Love 360 Movie Promotion

Love 360: 'ಲವ್‌ 360' ಹೀರೋಯಿನ್‌ ಹಿಂದೆ ಬಿದ್ದ ಯೂಟ್ಯೂಬರ್‌ ಮಲ್ಲು ಜಮಖಂಡಿ!; ಪ್ರೀತಿ ಉಳಿಸಿಕೊಳ್ಳಲು ಒದ್ದಾಟ...

Aug 14, 2022 12:29 PM IST

: "ಲವ್‌ 360" ಹೀರೋಯಿನ್‌ ಹಿಂದೆ ಬಿದ್ದ ಯೂಟ್ಯೂಬರ್‌ ಮಲ್ಲು ಜಮಖಂಡಿ!; ಪ್ರೀತಿ ಉಳಿಸಿಕೊಳ್ಳಲು ಒದ್ದಾಟ...

    • ಮಲ್ಲು ಜಮಖಂಡಿ ಅಂದ ತಕ್ಷಣ ನೆನಪಿಗೆ ಬರುವುದು ಅವರ ಕಾಮಿಡಿ ವಿಡಿಯೋಗಳು. "ಮಲ್ಲು ಜಮಖಂಡಿ ಕಾಮಿಡಿ" ಹೆಸರಿನ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಿಲಿಯನ್‌ ಫಾಲೋವರ್ಸ್‌ ಸಂಪಾದಿಸಿರುವ ಇದೇ ಮಲ್ಲು ಇದೀಗ, "ಲವ್‌ 360" ಚಿತ್ರದ ಹೀರೋಯಿನ್‌ ಹಿಂದೆ ಬಿದ್ದಿದ್ದಾರೆ!
: "ಲವ್‌ 360" ಹೀರೋಯಿನ್‌ ಹಿಂದೆ ಬಿದ್ದ ಯೂಟ್ಯೂಬರ್‌ ಮಲ್ಲು ಜಮಖಂಡಿ!; ಪ್ರೀತಿ ಉಳಿಸಿಕೊಳ್ಳಲು ಒದ್ದಾಟ...
: "ಲವ್‌ 360" ಹೀರೋಯಿನ್‌ ಹಿಂದೆ ಬಿದ್ದ ಯೂಟ್ಯೂಬರ್‌ ಮಲ್ಲು ಜಮಖಂಡಿ!; ಪ್ರೀತಿ ಉಳಿಸಿಕೊಳ್ಳಲು ಒದ್ದಾಟ... (Instagram/ Mallu Jamakhandi Youtube)

ಬೆಂಗಳೂರು: ಮಲ್ಲು ಜಮಖಂಡಿ ಅಂದ ತಕ್ಷಣ ನೆನಪಿಗೆ ಬರುವುದು ಅವರ ಕಾಮಿಡಿ ವಿಡಿಯೋಗಳು. "ಮಲ್ಲು ಜಮಖಂಡಿ ಕಾಮಿಡಿ" ಹೆಸರಿನ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಿಲಿಯನ್‌ ಫಾಲೋವರ್ಸ್‌ ಸಂಪಾದಿಸಿರುವ ಇದೇ ಮಲ್ಲು ಇದೀಗ, "ಲವ್‌ 360" ಚಿತ್ರದ ಹೀರೋಯಿನ್‌ ಹಿಂದೆ ಬಿದ್ದಿದ್ದಾರೆ! ಅಚ್ಚರಿ ಅನಿಸಿದರು ಇದು ಸತ್ಯ..

ಟ್ರೆಂಡಿಂಗ್​ ಸುದ್ದಿ

Brundavana Serial: ಭಾರ್ಗವಿಯ ದಾಳ, ಸಹನಾಳ ಪ್ರೀತಿ ಆಕಾಶ್‌ ಎಂದು ತಿಳಿಯದೇ ಸಹಾಯ ಮಾಡುವ ಪುಷ್ಪಾ, ಗಂಡನನ್ನೇ ದೂರ ಮಾಡಿಕೊಳ್ತಾಳಾ?

Darshan: ಮಳೆಗಾಲ ಶುರುವಾಗುತ್ತಿದೆ, ದಸರಾ ಅಂಬಾರಿ ಆನೆ ಅರ್ಜುನನಿಗೆ ಸಮಾಧಿ ನಿರ್ಮಾಣ ಯಾವಾಗ? ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಪ್ರಶ್ನೆ

Amruthadhaare: ನನ್ನ ಶ್ರಮಕ್ಕೆ ಸಾಮರ್ಥ್ಯಕ್ಕೆ ಬೆಲೆಯೇ ಇಲ್ವ? ಭೂಮಿಕಾಳ ಬೇಸರದ ಮಾತಿಗೆ ಕಂಗಲಾದ ಗೌತಮ್‌ ದಿವಾನ್‌

Kaatera: ‘ನಾನು ಗೆದ್ದ ಎತ್ತಿನ ಬಾಲ ಹಿಡಿಯಲ್ಲ, ಅದು ಮುಗಿದ ಅಧ್ಯಾಯ!’ ಕಾಟೇರ ತಂಡದ ದಿಢೀರ್‌ ಸುದ್ದಿಗೋಷ್ಠಿಯಲ್ಲಿ ದರ್ಶನ್‌ ಸ್ಪಷ್ಟನೆ

ಹೌದು, ಇನ್ನೇನು ಇದೇ 19ಕ್ಕೆ ಶಶಾಂಕ್‌ ನಿರ್ದೇಶನದ "ಲವ್‌ 360" ಸಿನಿಮಾ ಬಿಡುಗಡೆ ಆಗಲಿದೆ. ಆ ಸಿನಿಮಾದ ಪ್ರಚಾರದಲ್ಲಿ ಇಡೀ ಸಿನಿಮಾ ತಂಡ ಬಿಜಿಯಾಗಿದೆ. ಹೀಗಿರುವಾಗಲೇ ಇದೇ ಸಿನಿಮಾ ತಂಡ ಉತ್ತರ ಕರ್ನಾಟಕ ಭಾಗದ ಕಡೆಗೂ ಸಿನಿಮಾ ತಲುಪಿಸಬೇಕೆಂದು ಮಲ್ಲು ಜಮಖಂಡಿ ಅವರ ಮೊರೆ ಹೋಗಿದೆ. ಈ ವೇಳೆಯೇ ಚಿತ್ರದ ನಾಯಕಿಯನ್ನು ಮಲ್ಲು ಬುಟ್ಟಿಗೆ ಹಾಕಿಕೊಂಡಿದ್ದಾರೆ.

ಅಂದರೆ, ಸಿನಿಮಾ ಪ್ರಚಾರದ ಸಲುವಾಗಿಯೇ ಹೊಸ ಸ್ಕಿಟ್‌ ಮಾಡಿರುವ ಮಲ್ಲು ಮತ್ತವರ ಟೀಮ್‌, ರಚನಾ ಇಂದರ್‌ ಅವರನ್ನು ಬಲೆಗೆ ಬೀಳಿಸಿಕೊಳ್ಳುವ ಬಗೆಯನ್ನು ಹಾಸ್ಯಮಯವಾಗಿ ಹೇಳಿದೆ. ಕೊನೆಗೆ ತಾನಾಗಿಯೇ ಬಂದ ಹುಡುಗಿ ಮಲ್ಲುಗೆ ಒಲಿಯುತ್ತಾಳಾ? ಅದನ್ನು ವಿಡಿಯೋದಲ್ಲಿ ಕಣ್ತುಂಬಿಕೊಳ್ಳಿ. ಇದೇ ಸ್ಕಿಟ್‌ನಲ್ಲಿ ಚಿತ್ರದ ನಾಯಕ ಪ್ರವೀಣ್‌ ಸಹ ಕಾಣಿಸಿಕೊಂಡಿದ್ದಾರೆ. ಕೊನೆಯಲ್ಲಿ ನಿರ್ದೇಶಕ ಶಶಾಂಕ್‌ ಅವರ ಎಂಟ್ರಿಯೂ ಆಗುತ್ತದೆ.

ಚಿತ್ರದಿಂದ ಬಂತು ಜಜಾಂಗ್​ ಜಾಂಗ್​ ಪ್ರಮೋಷನಲ್‌ ಸಾಂಗ್..‌

ಯೋಗರಾಜ್‌ ಭಟ್‌ ಹಾಡೊಂದಕ್ಕೆ ಸಾಹಿತ್ಯ ಬರೆದಿದ್ದಾರೆ ಎಂದರೆ ಅಲ್ಲಿ ಒಂದು ಹೊಸ ಪದದ ಬಳಕೆ ಆಗಿಯೇ ಇರುತ್ತದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗವನ್ನೇ ಗಮನದಲ್ಲಿಟ್ಟುಕೊಂಡು ಹಾಡುಗಳಿಗೆ ಸಾಹಿತ್ಯ ಬರೆಯುತ್ತಾರವರು. ಇದೀಗ "ಲವ್‌ 360" ಚಿತ್ರದಲ್ಲಿಯೂ ಅಂಥದ್ದೊಂದು ಪ್ರಯತ್ನ ಮಾಡಿದ್ದಾರೆ. ಇದೀಗ ಆ ಪ್ರಮೋಷನಲ್‌ ಹಾಡು ಬಿಡುಗಡೆ ಆಗಿದೆ. "ಜಜಾಂಗ್‌ ಜಾಂಗ್‌.." ಎಂದು ಶುರುವಾಗುವ ಈ ಹಾಡಿಗೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸುವುದರ ಜತೆಗೆ ಅವರೇ ಧ್ವನಿಯಾಗಿದ್ದಾರೆ. ಸದ್ಯ ಬಿಡುಗಡೆ ಆಗಿರುವ ಈ ಹಾಡು ಸದ್ದು ಮಾಡುತ್ತಿದ್ದು, ಭಟ್ಟರ ಸಾಹಿತ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಟ್ರೇಲರ್‌ಗೆ ಸಿಕ್ತು ಶಿವಣ್ಣನ ಮೆಚ್ಚುಗೆ...

"ಲವ್‌ 360" ಸಿನಿಮಾ ಬಗ್ಗೆ ಹೇಳುವುದಾದರೆ, ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೇಲರ್‌ ಬಿಡುಗಡೆ ಆಗಿದೆ. ವಿಶೇಷ ಎಂಬಂತೆ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಈ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ ಕೊಟ್ಟಿದ್ದಾರೆ. ಈ ವೇಳೆ ಮಾತನಾಡಿದ್ದ ಶಿವಣ್ಣ, "ಶಶಾಂಕ್ ನನ್ನ ಅಚ್ಚುಮೆಚ್ಚಿನ ನಿರ್ದೇಶಕರಲ್ಲಿ ಒಬ್ಬರು. ಅವರ ನಿರ್ದೇಶನದಲ್ಲಿ ನಾನು ನಟಿಸಬೇಕಿತ್ತು. ಕಾರಣಾಂತರದಿಂದ ಆಗಿಲ್ಲ. ಮುಂದೆ ನಮಿಬ್ಬರ ಕಾಂಬಿನೇಶನ್ ನಲ್ಲಿ ಚಿತ್ರ ಬರುತ್ತದೆ. ಸದ್ಯ ಶಶಾಂಕ್ ನಿರ್ದೇಶನದ "ಲವ್ 360" ಚಿತ್ರದ ಟ್ರೇಲರ್ ನೋಡಿದೆ. ಚೆನ್ನಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಸುಮಧುರವಾಗಿವೆ. ಅದರಲ್ಲೂ ಸಿದ್ ಶ್ರೀರಾಮ್ ಹಾಡಿರುವ "ಜಗವೇ ನೀನು ಗೆಳತಿಯೇ" ಹಾಡಂತೂ ನನಗೆ ಬಹಳ ಇಷ್ಟ. ನಾಯಕ, ನಾಯಕಿ ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದಾರೆ. ನಾನು ಬಿಡುಗಡೆ ದಿನದಂದೇ ಈ ಚಿತ್ರವನ್ನು ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆಗೆ ನೋಡುತ್ತೇನೆ" ಎಂದಿದ್ದರು ನಟ ಶಿವರಾಜಕುಮಾರ್.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು