logo
ಕನ್ನಡ ಸುದ್ದಿ  /  ಮನರಂಜನೆ  /  Nawazuddin Siddiqui: ನವಾಜುದ್ದೀನ್ ಸಿದ್ದಿಕಿ ವಿರುದ್ಧ ರೇಪ್‌ ಕೇಸ್‌ ದಾಖಲಿಸಿದ ಪತ್ನಿ.. ಅಳಲು ತೋಡಿಕೊಂಡ ಆಲಿಯಾ: ವಿಡಿಯೋ

Nawazuddin Siddiqui: ನವಾಜುದ್ದೀನ್ ಸಿದ್ದಿಕಿ ವಿರುದ್ಧ ರೇಪ್‌ ಕೇಸ್‌ ದಾಖಲಿಸಿದ ಪತ್ನಿ.. ಅಳಲು ತೋಡಿಕೊಂಡ ಆಲಿಯಾ: ವಿಡಿಯೋ

HT Kannada Desk HT Kannada

Feb 25, 2023 12:23 PM IST

ನವಾಜುದ್ದೀನ್ ಸಿದ್ದಿಕಿ ವಿರುದ್ಧ ರೇಪ್‌ ಕೇಸ್‌ ದಾಖಲಿಸಿದ ಪತ್ನಿ

    • ನನ್ನನ್ನು ಮನೆಯಿಂದ ಹೊರ ಹಾಕಲು ಅವರು ಪ್ರಯತ್ನಿಸುತ್ತಲೇ ಇದ್ದಾರೆ. ನಾನು ಅವರಿಂದ ಬಹಳ ನರಕ ಯಾತನೆ ಅನುಭವಿಸುತ್ತಿದ್ದೇನೆ ಎಂದು ಆಲಿಯಾ ಸಿದ್ದಿಕಿ ಈ ಹಿಂದೆ ದೂರು ನೀಡಿದ್ದರು. ಇದೀಗ ಅವರು ಪತಿ ವಿರುದ್ಧ ರೇಪ್‌ ಕೇಸ್‌ ದಾಖಲಿಸಿದ್ದಾರೆ.
ನವಾಜುದ್ದೀನ್ ಸಿದ್ದಿಕಿ ವಿರುದ್ಧ ರೇಪ್‌ ಕೇಸ್‌ ದಾಖಲಿಸಿದ ಪತ್ನಿ
ನವಾಜುದ್ದೀನ್ ಸಿದ್ದಿಕಿ ವಿರುದ್ಧ ರೇಪ್‌ ಕೇಸ್‌ ದಾಖಲಿಸಿದ ಪತ್ನಿ

ನವಾಜುದ್ದೀನ್ ಸಿದ್ದಿಕಿ, ತಮ್ಮ ಅದ್ಭುತ ಅಭಿನಯದಿಂದಲೇ ಕೋಟ್ಯಂತರ ಸಿನಿ ಪ್ರೇಕ್ಷಕರನ್ನು ರಂಜಿಸಿದ ನಟ. ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವ ಅವರು, ವೈಯಕ್ತಿಕ ಜೀವನದಲ್ಲಿ ಮಾತ್ರ ಸಮಸ್ಯೆ ಎದುರಿಸುತ್ತಿದ್ಧಾರೆ. ಪತಿ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ನವಾಜುದ್ದೀನ್‌ ಸಿದಿಕಿ ಪತ್ನಿ ಆಲಿಯಾ 3 ವರ್ಷಗಳ ಹಿಂದೆಯೇ ಆರೋಪಿಸಿದ್ದರು.

ಟ್ರೆಂಡಿಂಗ್​ ಸುದ್ದಿ

ಒಂದು ವೇಳೆ ಕನ್ನಡದ ಬ್ಲಿಂಕ್ ಮಲಯಾಳಿ ಸಿನಿಮಾ ಆಗಿದ್ದಿದ್ರೆ, ಅಲ್ಲಿನವ್ರು ಎತ್ತಿ ಮೆರೆಸುತ್ತಿದ್ರು! ನಮ್ಮವರಿಗೆ ಏನಾಗಿದ್ಯೋ? INTERVIEW

Brundavana Serial: ಆಕಾಶ್‌ ನೆಮ್ಮದಿ ಹಾಳು ಮಾಡಲು ಭಾರ್ಗವಿ ಜೊತೆ ಗಿರಿಜಾ ಕೂಡ ಮಾಡ್ತಿದ್ದಾಳೆ ಸಂಚು; ಕೊನೆಗೂ ಸತ್ಯ ಹೇಳಿಲ್ಲ ಸುನಾಮಿ

‘ಪೌಡರ್‌’ ಕೊಟ್ಟು ಪವರ್‌ ಹೆಚ್ಚಿಸಲು ಹೊರಟ ಗುಲ್ಟು ನಿರ್ದೇಶಕ ಜನಾರ್ದನ್‌ ಚಿಕ್ಕಣ್ಣ; ನಗು ಉಕ್ಕಿಸುವ ಟೀಸರ್‌ ಬಿಡುಗಡೆ

ಶಿಳ್ಳೆ, ಕೇಕೆ, ಚಪ್ಪಾಳೆ.. ಬೆಳ್ಳಿತೆರೆ ಮೇಲೆ ಮತ್ತೆ ಮಿನುಗಿದ ಕಲ್ಟ್‌ ಕ್ಲಾಸಿಕ್‌ A ಚಿತ್ರ; ಥಿಯೇಟರ್‌ ಮುಂದೆ ಹಬ್ಬ ಮಾಡಿದ ಉಪ್ಪಿ ಫ್ಯಾನ್ಸ್

ಆಲಿಯಾ ಇದೀಗ ಸ್ವತ: ಪತಿ ವಿರುದ್ಧಅತ್ಯಾಚಾರ ಆರೋಪ ದಾಖಲಿಸಿದ್ದಾರೆ. ನವಾಜುದ್ದೀನ್‌ ಸಿದಿಕಿ ನನಗೆ ಯಾವ ರೀತಿ ಹಿಂಸೆ ಕೊಟ್ಟಿದ್ದಾರೆ ಅನ್ನೋದನ್ನು ಆಲಿಯಾ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ್ದಾರೆ. ಆತ ಸಮಾಜದಲ್ಲಿ ಅತ್ಯುತ್ತಮ ನಟ, ಆದರೆ ಮನೆ ಒಳಗೆ ಕ್ರೂರಿ ಎಂದು ಆಲಿಯಾ ಆರೋಪಿಸಿದ್ದಾರೆ. ನನ್ನನ್ನು ಮನೆಯಿಂದ ಹೊರ ಹಾಕಲು ಅವರು ಪ್ರಯತ್ನಿಸುತ್ತಲೇ ಇದ್ದಾರೆ. ನಾನು ಅವರಿಂದ ಬಹಳ ನರಕ ಯಾತನೆ ಅನುಭವಿಸುತ್ತಿದ್ದೇನೆ ಎಂದು ಆಲಿಯಾ ಸಿದ್ದಿಕಿ ಈ ಹಿಂದೆ ದೂರು ನೀಡಿದ್ದರು. ಇದೀಗ ಅವರು ಪತಿ ವಿರುದ್ಧ ರೇಪ್‌ ಕೇಸ್‌ ದಾಖಲಿಸಿದ್ದಾರೆ.

ನನ್ನ ಮಕ್ಕಳನ್ನು ಆತ ತನ್ನೊಂದಿಗೆ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಆತನೊಂದಿಗೆ ಮಕ್ಕಳನ್ನು ಕಳಿಸುವುದಿಲ್ಲ. ಮಕ್ಕಳು ಜನಿಸಿದಾಗಿನಿಂದ ಅವರ ಬಗ್ಗೆ ಆತನಿಗೆ ಸ್ವಲ್ಪವೂ ಕಾಳಜಿ ಇರಲಿಲ್ಲ. ಈಗ ಇದ್ದಕ್ಕಿದ್ದಂತೆ ಹೇಗೆ ಪ್ರೀತಿ ಬಂತು. ಯಾವುದೇ ಕಾರಣಕ್ಕೂ ಆತ ಮಕ್ಕಳನ್ನು ತನ್ನೊಂದಿಗೆ ಕರೆದೊಯ್ಯಲು ನಾನು ಬಿಡುವುದಿಲ್ಲ. ಈ ಸಂಬಂಧ ವರ್ಸೋವಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ಆಲಿಯಾ ಹೇಳಿಕೊಂಡಿದ್ದಾರೆ.

ನವಾಜುದ್ದೀನ್‌ ಮತ್ತು ಅವರ ತಾಯಿ ಮೆಹರುನ್ನೀಸಾ ನನಗೆ ಬಹಳ ಕಿರುಳು ನೀಡುತ್ತಿದ್ದಾರೆ. ನನಗೆ ಕೆಲವು ದಿನಗಳ ಆಹಾರ ಕೂಡಾ ನೀಡಿರಲಿಲ್ಲ. ಬಾತ್‌ರೂಮ್‌ ವ್ಯವಸ್ಥೆ ನೀಡದೆ, ಮಲಗಲು ಹಾಸಿಗೆಯನ್ನೂ ನೀಡದೆ ತೊಂದರೆ ಕೊಟ್ಟಿದ್ದಾರೆ. ನಮ್ಮ ರೂಮ್‌ನಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದು ಹೊರಗೆ ದಿನದ 24 ಗಂಟೆ ಬಾಡಿಗಾರ್ಡ್‌ ನಿಯೋಜಿಸಿದ್ದಾರೆ. ನನ್ನ ಪರ ವಕೀಲರು ನನ್ನನ್ನು ಭೇಟಿ ಮಾಡಲು ಕೂಡಾ ಅವರು ಅವಕಾಶ ನೀಡಿಲ್ಲ ಎಂದು ಆಲಿಯಾ, ಕೆಲವು ದಿನಗಳ ಹಿಂದೆ ಆರೋಪಿಸಿದ್ದರು.

ಆಲಿಯಾ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದ ಯುವತಿ

ಆಲಿಯಾ , ತಮ್ಮ ಪತಿ ನವಾಜುದ್ದೀನ್‌ ಸಿದ್ದಿಕಿ ವಿರುದ್ಧ ಕಿರುಕುಳ ಆರೋಪ ಹೊರಿಸಿದ್ದರೆ, ಆಲಿಯಾ ನನಗೆ ಹಣ ನೀಡದೆ ವಂಚನೆ ಮಾಡಿದ್ದಾರೆ ಎಂದು ಕಳೆದ ವರ್ಷ ಯುವತಿಯೊಬ್ಬರು ಆರೋಪಿಸಿದ್ದರು. ನವಾಜುದ್ದೀನ್‌ ಸಿದ್ದಿಕಿ ನಟನೆಯ 'ಹೋಲಿ ಕೌ' ಚಿತ್ರವನ್ನು ಆಲಿಯಾ ಸಿದ್ದಿಕಿ ನಿರ್ಮಿಸಿದ್ದರು. ''ಸಿನಿಮಾ ನಿರ್ಮಾಣಕ್ಕಾಗಿ ಆಲಿಯಾ ನನ್ನ ಬಳಿ 31 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಆದರೆ ಹೇಳಿದ ಸಮಯಕ್ಕೆ ಅವರು ಹಣವನ್ನು ಹಿಂತಿರುಗಿಸಿಲ್ಲ. ಕೊಟ್ಟ ಸಾಲ ವಾಪಸ್ ಕೇಳುತ್ತಿದ್ದರೂ ಆಕೆ ಮಾತ್ರ ನನಗೆ ಸ್ಪಂದಿಸುತ್ತಿಲ್ಲ'' ಎಂದು ಮಂಜು ಅಗರ್​​ವಾಲ್ ಎಂಬ ಯುವತಿ ಆರೋಪಿಸಿದ್ದರು. ಈ ಸಂಬಂಧ ಕಳೆದ ವರ್ಷ ಜೂನ್ 20 ರಂದು ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

''ಆಲಿಯಾ ಸಿದ್ದಿಕಿ, ನನಗೆ 2005 ರಿಂದ ಪರಿಚಯ. ನಾವಿಬ್ಬರೂ ಒಳ್ಳೆಯ ಸ್ನೇಹಿತರು. ಅವರು ನಿರ್ಮಾಪಕಿಯಾಗಲು ಬಹಳ ದಿನಗಳಿಂದ ಕಾಯುತ್ತಿದ್ದಾರೆ. ಹಾಗೇ ಅವರಿಗೆ 'ಹೋಲಿ ಕೌ' ಚಿತ್ರವನ್ನು ನಿರ್ಮಾಣ ಮಾಡುವ ಅವಕಾಶ ಒದಗಿ ಬಂತು. ಈ ಚಿತ್ರಕ್ಕೆ ಸಂಬಂಧಿಸಿದ ಕ್ರಿಯೇಟಿವ್ ಕೆಲಸಗಳನ್ನು ನೋಡಿಕೊಳ್ಳಲು ನನಗೆ ಜವಾಬ್ದಾರಿ ವಹಿಸಿದ ಆಕೆ ಹಣಕಾಸಿನ ವಿಚಾರವನ್ನು ತಾವೇ ನೋಡಿಕೊಳ್ಳುವುದಾಗಿ ಹೇಳಿದ್ದರು. ಹಾಗಾಗಿ ನಾನು ನಟ-ನಟಿಯರ ಮೇಲ್ವಿಚಾರಣೆ ವಹಿಸಿಕೊಂಡಿದ್ದೆ. ಹಣದ ಅವಶ್ಯಕತೆ ಇದ್ದಿದ್ದರಿಂದ ಅವರು ನನ್ನನ್ನು ಕೇಳಿದರು. ನಾನು ತಮ್ಮ ತಂದೆಯ ಬಳಿ ಹಣ ಕೇಳುವಂತೆ ಸೂಚಿಸಿದೆ. ನನ್ನ ತಂದೆ ಉಜ್ಜಯಿನಿಯಲ್ಲಿರುವ ಒಂದು ಮನೆಯನ್ನು ಮಾರಿ, ಅದರಿಂದ ಬಂದ ಹಣದಲ್ಲಿ ಆಲಿಯಾಗೆ ಸ್ವಲ್ಪ ಹಣ ನೀಡಿದರು. ತಿಂಗಳ ಒಳಗೆ ಹಣವನ್ನು ವಾಪಸ್ ನೀಡುತ್ತೇನೆ ಎಂದು ಹೇಳಿದ್ದ ಆಲಿಯಾ ಇದುವರೆಗೂ ನೀಡಿಲ್ಲ. ಎಷ್ಟು ಬಾರಿ ಕೇಳಿದರೂ ಸ್ಪಂದಿಸುತ್ತಿಲ್ಲ'' ಎಂದು ಮಂಜು ಅಗರ್​​ವಾಲ್ ಎಂಬುವವರು ದೂರಿನಲ್ಲಿ ಉಲ್ಲೇಖಿಸಿದ್ದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ