logo
ಕನ್ನಡ ಸುದ್ದಿ  /  ಮನರಂಜನೆ  /  Sara Ali Khan: ಹಣೆಗೆ ಗಂಧ, ಕುಂಕುಮ ಇಟ್ಟು ಶಿವರಾತ್ರಿ ಆಚರಿಸಿದ ಸಾರಾ ಅಲಿಖಾನ್‌.. ಸೋಷಿಯಲ್‌ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ!

Sara Ali Khan: ಹಣೆಗೆ ಗಂಧ, ಕುಂಕುಮ ಇಟ್ಟು ಶಿವರಾತ್ರಿ ಆಚರಿಸಿದ ಸಾರಾ ಅಲಿಖಾನ್‌.. ಸೋಷಿಯಲ್‌ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ!

HT Kannada Desk HT Kannada

Feb 21, 2023 08:19 AM IST

ಸಾರಾ ಅಲಿ ಖಾನ್‌ ಶಿವರಾತ್ರಿ ಆಚರಣೆ

    • ಸಾರಾ ಹಂಚಿಕೊಂಡಿರುವ ಈ ಫೋಟೋಗೆ ಜನರು ವಿವಿಧ ರೀತಿ ಕಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ನೀವು ಮುಸ್ಲಿಂ ಅಥವಾ ಹಿಂದೂ, ಯಾವ ಧರ್ಮಕ್ಕೆ ಸೇರಿದವರು..? ಎಂದು ಪ್ರಶ್ನಿಸುತ್ತಿದ್ದಾರೆ. ಈ ವಿಚಾರದಲ್ಲಿ ಧರ್ಮವನ್ನು ಎಳೆ ತರಬೇಡಿ ಎಂದು ನೆಗೆಟಿವ್‌ ಕಮೆಂಟ್‌ ಮಾಡುವವರಿಗೆ ಕೆಲವು ನೆಟಿಜನ್ಸ್‌ ಮನವಿ ಮಾಡುತ್ತಿದ್ದಾರೆ.
ಸಾರಾ ಅಲಿ ಖಾನ್‌ ಶಿವರಾತ್ರಿ ಆಚರಣೆ
ಸಾರಾ ಅಲಿ ಖಾನ್‌ ಶಿವರಾತ್ರಿ ಆಚರಣೆ

ಮೊನ್ನೆಯಷ್ಟೇ ದೇಶಾದ್ಯಂತ ಜನ ಸಾಮಾನ್ಯರು, ಸೆಲೆಬ್ರಿಟಿಗಳು ಮಹಾಶಿವರಾತ್ರಿ ಆಚರಿಸಿದ್ದಾರೆ. ಹಬ್ಬದ ಆಚರಣೆಯ ಫೋಟೋ, ವಿಡಿಯೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬಾಲಿವುಡ್‌ ನಟಿ ಸಾರಾ ಅಲಿ ಖಾನ್‌ ಕೂಡಾ ಶಿವರಾತ್ರಿ ಸೆಲಬ್ರೇಷನ್‌ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಸಾರಾ ಫೋಟೋಗಳಿಗೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಮೋದಿ ಕೆಲಸ ಹೊಗಳುವಂತೆ ರಶ್ಮಿಕಾ ಮಂದಣ್ಣಗೆ ಸಿಕ್ಕಿದೆ 10 ಕೋಟಿ ರೂ!? ‘ಇನ್ನೊಬ್ಬಳು ಕಂಗನಾ ಬಂದಳು’ ಎನ್ನುತ್ತ ನಟಿಯನ್ನು ಝಾಡಿಸಿದ ನೆಟ್ಟಿಗರು

Seetha Rama Serial: ಅಶೋಕನ ಮೇಲೆ ಮಾರಣಾಂತಿಕ ಹಲ್ಲೆ, ಇದು ಭಾರ್ಗವಿ ಸಂಚೋ, ರುದ್ರಪ್ರತಾಪನ ಕೈವಾಡವೋ?

Brundavana Serial: ಮನೆಯವರ ಮುಂದೆ ತಗ್ಲಾಕ್ಕೊಂಡ ಆಕಾಶ್‌, ಸುನಾಮಿ ಬಾಯಿಂದ ಸತ್ಯ ಹೇಳಿಸ್ತಾರಾ ಮಾವ ಸತ್ಯಮೂರ್ತಿ?

ಶೇಕಡಾ 66 ಅಂಕ ತೆಗೆದು ಎಸ್‌ಎಸ್‌ಎಲ್‌ಸಿ ಪಾಸ್‌ ಆದ ಭಾಗ್ಯಾ, ಸಪ್ಪೆ ಮೋರೆ ಹಾಕಿ ನಿಂತ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ಸ್ಟಾರ್‌ ಕಿಡ್‌ ಸಾರಾ ಅಲಿ ಖಾನ್‌, ಬಾಲಿವುಡ್‌ನ ಬೇಡಿಕೆ ನಟಿಯರಲ್ಲಿ ಒಬ್ಬರು. 2018 ರಲ್ಲಿ ತೆರೆ ಕಂಡ 'ಕೇದಾರನಾಥ್‌' ಚಿತ್ರದ ಮೂಲಕ ಬಾಲಿವುಡ್‌ಗೆ ಬಂದ ಸಾರಾ ಅಲಿ ಖಾನ್‌ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. 3 ದಿನಗಳ ಹಿಂದೆ ಅವರು ಶಿವರಾತ್ರಿ ಆಚರಿಸಿದ್ಧಾರೆ. ಮುಂಬೈನ ಶಿವನ ದೇವಸ್ಥಾನವೊಂದರಲ್ಲಿ ಕುಳಿತು ದೇವರ ಧ್ಯಾನ ಮಾಡಿದ್ದಾರೆ. ಹಣೆಗೆ ಗಂಧ, ಕುಂಕುಮ ಇಟ್ಟಿದ್ದಾರೆ. ಈ ಫೋಟೋಗಳನ್ನು ಸಾರಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಕೆಲವರು ಸಾರಾ, ದೈವ ಭಕ್ತಿಗೆ ಮೆಚ್ಚಿ ಕಮೆಂಟ್‌ ಮಾಡಿದ್ದರೆ ಇನ್ನೂ ಕೆಲವರು ಈ ಫೋಟೋಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಮುಸ್ಲಿಂ ಧರ್ಮಕ್ಕೆ ಸೇರಿದವರಾಗಿ ನೀವು ಹಣೆಗೆ ಗಂಧ, ಕುಂಕುಮ ಇಟ್ಟು ಈ ರೀತಿ ಶಿವರಾತ್ರಿ ಆಚರಣೆ ಮಾಡುವುದು ಸರಿಯಲ್ಲ ಎಂದರೆ ಕೆಲವರು ರಂಜಾನ್‌ ಆಚರಣೆ ಕೂಡಾ ಮಾಡಿ, ನಮಾಜ್‌ ಮಾಡಿ ಎಂದು ಕಮೆಂಟ್‌ ಮಾಡಿದ್ದಾರೆ. ಒಟ್ಟಿನಲ್ಲಿ ಸಾರಾ ಹಂಚಿಕೊಂಡಿರುವ ಈ ಫೋಟೋಗೆ ಜನರು ವಿವಿಧ ರೀತಿ ಕಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ನೀವು ಮುಸ್ಲಿಂ ಅಥವಾ ಹಿಂದೂ, ಯಾವ ಧರ್ಮಕ್ಕೆ ಸೇರಿದವರು..? ಎಂದು ಪ್ರಶ್ನಿಸುತ್ತಿದ್ದಾರೆ. ಈ ವಿಚಾರದಲ್ಲಿ ಧರ್ಮವನ್ನು ಎಳೆ ತರಬೇಡಿ ಎಂದು ನೆಗೆಟಿವ್‌ ಕಮೆಂಟ್‌ ಮಾಡುವವರಿಗೆ ಕೆಲವು ನೆಟಿಜನ್ಸ್‌ ಮನವಿ ಮಾಡುತ್ತಿದ್ದಾರೆ.

ಅಂದಹಾಗೆ ಸಾರಾ ಅಲಿ ಖಾನ್‌, ಸಿಖ್‌ ಸಮುದಾಯಕ್ಕೆ ಸೇರಿದ ಅಮೃತಾ ಸಿಂಗ್ ಹಾಗೂ ಮುಸ್ಲಿಂ ಧರ್ಮಕ್ಕೆ ಸೇರಿದ ಸೈಫ್‌ ಅಲಿ ಖಾನ್‌ ಪುತ್ರಿ. ಸಾರಾ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಇದುವರೆಗೂ ಅವರು ಕೇದಾರ್‌ನಾಥ್‌, ಸಿಂಬ, ಲವ್‌ ಆಜ್‌ ಕಲ್‌, ಕೂಲಿ ನಂ 1, ಅತ್‌ರಂಗಿ ರೇ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಗ್ಯಾಸ್‌ ಲೈಟ್‌ ಸೇರಿ ಒಟ್ಟು ನಾಲ್ಕು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ ಇದ್ದಾರೆ.

ಮತ್ತಷ್ಟು ಮನರಂಜನೆ ಸುದ್ದಿಗಳು ಇಲ್ಲಿವೆ

ಅವರನ್ನು ಬಿಟ್ಟು ಬರುವಾಗ ಒಂದು ನಯಾ ಪೈಸೆ ಕೂಡಾ ನನ್ನೊಂದಿಗೆ ತರಲಿಲ್ಲ..‌ ಅಂಜು ಪ್ರಭಾಕರ್‌ ಎಕ್ಸ್‌ಕ್ಲೂಸಿವ್‌ ಇಂಟರ್‌ವ್ಯೂ

ಚೆನ್ನೈಗೆ ಸೇರಿದ ಅಂಜು ಬಾಲನಟಿಯಾಗಿ, ನಾಯಕಿಯಾಗಿ ಗುರುತಿಸಿಕೊಂಡಿದ್ದರು. ವಿಪರ್ಯಾಸ ಎಂದರೆ ಪ್ರಭಾಕರ್‌ ಅವರ ಕೈ ಹಿಡಿದಾಗ ಅಂಜು ಅವರಿಗೆ 17, ಪ್ರಭಾಕರ್‌ ಅವರಿಗೆ 48 ವರ್ಷ. ಹಾಗೇ ಇಬ್ಬರೂ ಜೊತೆಗೆ ಇದ್ದದ್ದು ಒಂದೂವರೆ ವರ್ಷ ಮಾತ್ರ. ಅಂಜು ಹಾಗೂ ಪ್ರಭಾಕರ್‌ಗೆ ಜನಿಸಿದ ಮಗನೇ ಅರ್ಜುನ್.‌ ಪ್ರಭಾಕರ್‌ ಮೂರನೇ ಪತ್ನಿ ಹಾಗೂ 5ನೇ ಪುತ್ರನ ಬಗ್ಗೆ ಬಹಳಷ್ಟು ಜನರಿಗೆ ಮಾಹಿತಿ ಇಲ್ಲ. ಹಿಂದುಸ್ತಾನ್‌ ಟೈಮ್ಸ್‌ ಕನ್ನಡ ವೆಬ್‌ಸೈಟ್‌ಗೆ ನಟಿ ಅಂಜು ನೀಡಿರುವ ಎಕ್ಸ್‌ಕ್ಲೂಸಿವ್‌ ಸಂದರ್ಶನ ಇಲ್ಲಿದೆ. ಇಂಟರ್‌ವ್ಯೂ ನೋಡಲು ಇಲ್ಲಿ ಕ್ಲಿಕ್‌ ಮಾಡಿ.

ಮೆಗಾ ಫ್ಯಾಮಿಲಿ ಹೀರೋಗಳ ಬಗ್ಗೆ ನಾಗಬಾಬು ಕಮೆಂಟ್‌.. ಇವರ ಮನಸ್ಸಲ್ಲಿ ಹೀಗೊಂದು ಬೇಸರ ಇರಬಹುದಾ ಎಂದ ನೆಟಿಜನ್ಸ್‌!

ಚಿರಂಜೀವಿ ಮೊದಲ ಪುತ್ರಿ ಸುಷ್ಮಿತಾ ಕೂಡಾ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಅವರು ಕಾಸ್ಟ್ಯೂಮ್‌, ನಿರ್ದೇಶನ, ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಅವರು 'ಶ್ರೀದೇವಿ ಶೋಭನ್‌ಬಾಬು' ಎಂಬ ಸಿನಿಮಾ ನಿರ್ಮಿಸಿದ್ದು ಈ ಚಿತ್ರ ಫೆಬ್ರವರಿ 18 ರಂದು ಬಿಡುಗಡೆಯಾಗಲಿದೆ. ಸಂತೋಷ್ ಶೋಭನ್ ಅಭಿನಯದ ಈ ಚಿತ್ರದಲ್ಲಿ ನಾಗಬಾಬು ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಂಪೂರ್ಣ ಸ್ಟೋರಿ ಓದಲು ಈ ಲಿಂಕ್‌ ಒತ್ತಿ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ