ಕನ್ನಡ ಸುದ್ದಿ  /  ಮನರಂಜನೆ  /  Mega Family: ಮೆಗಾ ಫ್ಯಾಮಿಲಿ ಹೀರೋಗಳ ಬಗ್ಗೆ ನಾಗಬಾಬು ಕಮೆಂಟ್‌.. ಇವರ ಮನಸ್ಸಲ್ಲಿ ಹೀಗೊಂದು ಬೇಸರ ಇರಬಹುದಾ ಎಂದ ನೆಟಿಜನ್ಸ್‌!

Mega Family: ಮೆಗಾ ಫ್ಯಾಮಿಲಿ ಹೀರೋಗಳ ಬಗ್ಗೆ ನಾಗಬಾಬು ಕಮೆಂಟ್‌.. ಇವರ ಮನಸ್ಸಲ್ಲಿ ಹೀಗೊಂದು ಬೇಸರ ಇರಬಹುದಾ ಎಂದ ನೆಟಿಜನ್ಸ್‌!

'ಶ್ರೀದೇವಿ ಶೋಭನ್‌ಬಾಬು'‌ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ಬುಧವಾರ ಹೈದರಾಬಾದ್‌ನಲ್ಲಿ ನಡೆದಿದೆ. ಈ ಸಮಾರಂಭದಲ್ಲಿ ನಾಗಬಾಬು , ಸುಷ್ಮಿತಾ ಸೇರಿದಂತೆ ಚಿತ್ರತಂಡದ ಅನೇಕ ಮಂದಿ ಹಾಜರಿದ್ದರು. ಈ ವೇಳೆ ನಾಗಬಾಬು ಹೇಳಿದ ಮಾತುಗಳು ಈಗ ತೆಲುಗು ಚಿತ್ರರಂಗದಲ್ಲಿ ಚರ್ಚೆಗೆ ಕಾರಣವಾಗಿದೆ.

ಮೆಗಾ ಕುಟುಂಬದ ಹೀರೋಗಳ ಬಗ್ಗೆ ನಾಗಬಾಬು ಕಮೆಂಟ್
ಮೆಗಾ ಕುಟುಂಬದ ಹೀರೋಗಳ ಬಗ್ಗೆ ನಾಗಬಾಬು ಕಮೆಂಟ್

ತೆಲುಗಿನ ಕೊನಿಡೇಲ ಕುಟುಂಬದಲ್ಲಿ ಮೆಗಾಸ್ಟಾರ್‌ ಚಿರಂಜೀವಿ, ಪವನ್‌ ಕಲ್ಯಾಣ್‌ ಹಾಗೂ ನಾಗಬಾಬು ಮೂವರೂ ಚಿತ್ರರಂಗದಲ್ಲಿ ಮಿಂಚಿದ್ದಾರೆ. ಈಗಲೂ ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಇವರನ್ನು ಹೊರತು ಪಡಿಸಿ ನಾಗಬಾಬು ಪುತ್ರ ವರುಣ್‌ ತೇಜ್‌, ಪುತ್ರಿ ನಿಹಾರಿಕಾ, ಚಿರಂಜೀವಿ ಪುತ್ರ ರಾಮ್‌ ಚರಣ್‌, ಚಿರಂಜೀವಿ ಪತ್ನಿ ಸುರೇಖಾ ಅವರ ಕುಟುಂಬದಲ್ಲಿ ಅಲ್ಲು ಅರ್ಜುನ್‌, ಅಲ್ಲು ಅರವಿಂದ್‌ ಸೇರಿದಂತೆ ಅನೇಕ ಮಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಚಿರಂಜೀವಿ ಮೊದಲ ಪುತ್ರಿ ಸುಷ್ಮಿತಾ ಕೂಡಾ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಅವರು ಕಾಸ್ಟ್ಯೂಮ್‌, ನಿರ್ದೇಶನ, ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಅವರು 'ಶ್ರೀದೇವಿ ಶೋಭನ್‌ಬಾಬು' ಎಂಬ ಸಿನಿಮಾ ನಿರ್ಮಿಸಿದ್ದು ಈ ಚಿತ್ರ ಫೆಬ್ರವರಿ 18 ರಂದು ಬಿಡುಗಡೆಯಾಗಲಿದೆ. ಸಂತೋಷ್ ಶೋಭನ್ ಅಭಿನಯದ ಈ ಚಿತ್ರದಲ್ಲಿ ನಾಗಬಾಬು ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ಬುಧವಾರ ಹೈದರಾಬಾದ್‌ನಲ್ಲಿ ನಡೆದಿದೆ. ಈ ಸಮಾರಂಭದಲ್ಲಿ ನಾಗಬಾಬು , ಸುಷ್ಮಿತಾ ಸೇರಿದಂತೆ ಚಿತ್ರತಂಡದ ಅನೇಕ ಮಂದಿ ಹಾಜರಿದ್ದರು. ಈ ವೇಳೆ ನಾಗಬಾಬು ಹೇಳಿದ ಮಾತುಗಳು ಈಗ ತೆಲುಗು ಚಿತ್ರರಂಗದಲ್ಲಿ ಚರ್ಚೆಗೆ ಕಾರಣವಾಗಿದೆ.

''ನಮ್ಮ ಕುಟುಂಬದಲ್ಲಿ ಅನೇಕ ಹೀರೋಗಳಿದ್ಧಾರೆ. ಆದರೆ ಯಾರೂ ನನಗೆ ಯಾವುದೇ ಪಾತ್ರವನ್ನು ನೀಡಿಲ್ಲ. ಆದರೆ ಅಣ್ಣ ಚಿರಂಜೀವಿ ಮಗಳು ಸುಷ್ಮಿತಾ ಮಾತ್ರ ಈ 'ಶ್ರೀದೇವಿ ಶೋಭನ್‌ಬಾಬು' ಚಿತ್ರದ ಜೊತೆಗೆ ತಾವು ನಿರ್ಮಿಸುತ್ತಿರುವ ಮತ್ತೊಂದು ವೆಬ್‌ ಸೀರೀಸ್‌ನಲ್ಲಿ ಒಂದೊಳ್ಳೆ ಪಾತ್ರ ನೀಡಿದ್ದಾರೆ'' ಎಂದಿದ್ದಾರೆ. ನಾಗ ಬಾಬು ಈ ಮಾತನ್ನು ತಮಾಷೆಗೆ ಹೇಳಿದ್ದರೂ, ಅವರ ಮಾತುಗಳಲ್ಲಿ ನಿಜಕ್ಕೂ ತಮಗೆ ಯಾರೂ ಪಾತ್ರ ನೀಡಲಿಲ್ಲ ಎಂಬ ಬೇಸರ ಇರಬಹುದಾ..? ಎಂಬ ಚರ್ಚೆ ಸೋಷಿಯಲ್‌ ಮೀಡಿಯಾದಲ್ಲಿ ನಡೆಯುತ್ತಿದೆ.

ಮತ್ತೊಂದೆಡೆ ನಾಗಬಾಬು ಮಗಳ ಸಾಹಸವನ್ನು ಹೊಗಳಿದ್ದಾರೆ. ನಿರ್ಮಾಪಕರಿಗೂ ಸಾಕಷ್ಟು ಕಷ್ಟಗಳಿರುತ್ತವೆ. ಸುಷ್ಮಿತಾ ಮನಸ್ಸು ಮಾಡಿದರೆ ಅವರಿಗೆ ಟಾಲಿವುಡ್‌ನಲ್ಲಿ ಸಪೋರ್ಟ್‌ ಮಾಡಲು ಸಾಕಷ್ಟು ಜನರು ಬಂದು ನಿಲ್ಲುತ್ತಾರೆ. ಯಾರೇ ಆಗಲೀ ಅವರೊಂದಿಗೆ ಸಿನಿಮಾ ಮಾಡಲು ಒಪ್ಪಿಕೊಳ್ಳುತ್ತಾರೆ. ಆದರೆ ಸುಷ್ಮಿತಾ ಮಾತ್ರ ಯಾರ ಬೆಂಬಲವೂ ಇಲ್ಲದೆ ಸ್ವತಂತ್ರ್ಯವಾಗಿ ಸಿನಿಮಾ ಮಾಡಿದ್ದಾರೆ. ಶೀಘ್ರಲ್ಲೇ ಸುಷ್ಮಿತಾ ದೊಡ್ಡ ನಿರ್ಮಾಪಕಿಯಾಗಿ ಹೆಸರು ಮಾಡುತ್ತಾರೆ ಎಂದು ಹೇಳಿದ್ಧಾರೆ. ಶ್ರೀದೇವಿ ಶೋಭನ್‌ಬಾಬು ಚಿತ್ರವನ್ನು ಪ್ರಶಾಂತ್‌ ದಿಮ್ಮುಲ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಸಂತೋಷ್‌ ಶೋಭನ್‌ ಹಾಗೂ ಗೌರಿ ಕಿಶನ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಓದಿ

ಕನ್ನಡ ಚಿತ್ರರಂಗಕ್ಕೆ ಈ ಬಾರಿ ಬಜೆಟ್‌ನಲ್ಲಿ ಸಿಕ್ಕಿದ್ದೇನು... ಫಿಲ್ಮ್‌ ಸಿಟಿಗೆ ಸಂಬಂಧಿಸಿದ ಮನವಿ ಏನಾಯ್ತು..?

ಕನ್ನಡ ಚಿತ್ರರಂಗಕ್ಕೆ ಅನುಕೂಲವಾಗುವಂತೆ ಫಿಲ್ಮ್‌ ಸಿಟಿ ನಿರ್ಮಾಣ ಮಾಡಬೇಕು ಎನ್ನವುದು ಬಹಳ ವರ್ಷಗಳ ಕನಸು. ಪ್ರತಿ ಬಾರಿಯೂ ಇದರ ಬಗ್ಗೆ ಚರ್ಚೆ ನಡೆಯುತ್ತಿದೆ. ಸಿನಿಮಾ ಗಣ್ಯರು ಪ್ರತಿ ಬಾರಿ ಆಡಳಿತ ಪಕ್ಷದ ಬಳಿ ತೆರಳಿ ಮನವಿ ಮಾಡುತ್ತಲೇ ಇದ್ದಾರೆ. ಸಿಎಂ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಫಿಲ್ಮ್‌ ಸಿಟಿ ನಿರ್ಮಾಣಕ್ಕೆ ಒಂದಿಷ್ಟು ಅನುದಾನ ಘೋಷಿಸಿದ್ದರು. ಆದರೆ ಯಾವುದೂ ಇನ್ನೂ ಕೈಗೂಡಿಲ್ಲ. ಪೂರ್ತಿ ಸ್ಟೋರಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ದರ್ಶನ್‌ ಬರ್ತ್‌ಡೇಗೆ ಕ್ಯೂಟ್‌ ಫೋಟೋ ಹಂಚಿಕೊಂಡ ವಿಜಯಲಕ್ಷ್ಮಿ... ಅಣ್ಣ-ಅತ್ತಿಗೆಗೆ ದೃಷ್ಟಿ ತೆಗಿರೋ ಎಂದ ಫ್ಯಾನ್ಸ್

ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು, ರಾಜಕೀಯ ಗಣ್ಯರು ಕೂಡಾ ದರ್ಶನ್‌ ಬರ್ತ್‌ಡೇಗೆ ಶುಭ ಕೋರಿದ್ದಾರೆ. ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಕೂಡಾ ಪತಿ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭ ಕೋರಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯಲಕ್ಷ್ಮಿ , ದರ್ಶನ್‌ ಅವರ ತೋಳುಗಳನ್ನು ಹಿಡಿದು ಕುಳಿತಿರುವ ಫೋಟೋವೊಂದನ್ನು ಅಪ್‌ಲೋಡ್‌ ಮಾಡಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ಸುದ್ದಿಗೆ ಈ ಲಿಂಕ್‌ ಒತ್ತಿ.

IPL_Entry_Point