logo
ಕನ್ನಡ ಸುದ್ದಿ  /  ಮನರಂಜನೆ  /  Bafta: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು? ದೀಪಿಕಾ ಪಡುಕೋಣೆ ಸೌಂದರ್ಯಕ್ಕೆ ಬೋಲ್ಡ್‌ ಆದ ವಿದೇಶಿಗರು

BAFTA: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು? ದೀಪಿಕಾ ಪಡುಕೋಣೆ ಸೌಂದರ್ಯಕ್ಕೆ ಬೋಲ್ಡ್‌ ಆದ ವಿದೇಶಿಗರು

Praveen Chandra B HT Kannada

Feb 19, 2024 10:07 AM IST

77ನೇ ಬಿಎಎಫ್‌ಟಿಯ ಫಿಲ್ಮ್‌ ಅವಾರ್ಡ್‌ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ

    • Deepika Padukone: ಭಾನುವಾರ ನಡೆದ ಬ್ರಿಟಿಷ್‌ ಅಕಾಡೆಮಿ ಫಿಲ್ಮ್ಸ್‌ ಅವಾರ್ಡ್‌ನಲ್ಲಿ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಆಕರ್ಷಣೆಯ ಕೇಂದ್ರ ಬಿಂದು ವಿಶೇಷವಾಗಿ ಅಂತಾರಾಷ್ಟ್ರೀಯ ಅಭಿಮಾನಿಗಳು "ವೂ ಈಸ್‌ ಶೀ?" ಎಂದು ಅಚ್ಚರಿಯಿಂದ ದೀಪಿಕಾರತ್ತ ದೃಷ್ಟಿ ಹಾಯಿಸಿದ್ದಾರೆ.
77ನೇ ಬಿಎಎಫ್‌ಟಿಯ ಫಿಲ್ಮ್‌ ಅವಾರ್ಡ್‌ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ
77ನೇ ಬಿಎಎಫ್‌ಟಿಯ ಫಿಲ್ಮ್‌ ಅವಾರ್ಡ್‌ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮತ್ತು ಗಾಯಕಿ ದುವಾ ಲಿಪಾ ಸೇರಿದಂತೆ ಹಲವು ಸೆಲೆಬ್ರಿಟಿಗಳು 77ನೇ ಬಿಎಎಫ್‌ಟಿಯ ಫಿಲ್ಮ್‌ ಅವಾರ್ಡ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಸವ್ಯಸಾಚಿ ಲುಕ್‌ನಿಂದ ದೀಪಿಕಾ ಪಡುಕೋಣೆ ಭಾರತೀಯ ಅಭಿಮಾನಿಗಳನ್ನು ಮಾತ್ರವಲ್ಲದೆ ಅಂತಾರಾಷ್ಟ್ರೀಯ ಅಭಿಮಾನಿಗಳನ್ನು ಸೆಳೆದರು. ಈ ಸಂದರ್ಭದಲ್ಲಿ ಕೆಲವರು "ವೂ ಈಸ್‌ ಶೀ?" ಯಾರಿವಳು ಎಂದು ಕೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಬಿಎಎಫ್‌ಟಿಎ ಕಾರ್ಯಕ್ರಮದಲ್ಲಿ ದೀಪಿಕಾ ಉಡುಗೆ ಹೇಗಿತ್ತು?

ದೀಪಿಕಾ ಪಡುಕೋಣೆ ಅವರು ಚಿನ್ನದ ಮತ್ತು ಬೆಳ್ಳಿಯ ಅಲಂಕಾರವಿರುವ ಶಿಮ್ಮೆರಿ ಸಾರಿ ಧರಿಸಿದ್ದರು. ಇದಕ್ಕೆ ತಕ್ಕಂತೆ ಮ್ಯಾಚಿಂಗ್‌ ಬ್ಲೌಸ್‌ ಧರಿಸಿದ್ದರು. ಕೊಲ್‌ ರಿಮ್ಮಡ್‌ ಐಸ್‌, ಮೆಸ್ಟಿ ಹೇರ್‌ ಬನ್‌, ಸ್ಟೇಟ್‌ಮೆಂಟ್‌ ಇಯರಿಂಗ್ಸ್‌ ಇತ್ಯಾದಿಗಳಿಂದ ದೀಪಿಕಾ ಪಡುಕೋಣೆ "ಯಾರಿವಳ ಯಾರಿವಳು ಸೂಜಿಮಲ್ಲಿ ಕಣ್ಣವಳು?" ಎಂದು ಎಲ್ಲರೂ ಕೇಳುವಂತೆ ಮಿಂಚುತ್ತಿದ್ದರು. ದೀಪಿಕಾ ಪಡುಕೋಣೆ ಅವರು ದೀ ಝೋನ್‌ ಆಫ್‌ ಇಂಟ್ರೆಸ್ಟ್‌ ಸಿನಿಮಾದ ನಟನೆಗಾಗಿ ಜೊನಾಥನ್‌ ಗ್ಲಾಝರ್‌ ಅವರಿಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ನೀಡಿದರು.

ವೂ ಈಸ್‌ ಶೀ? (Who is she?)

ಟ್ವಿಟ್ಟರ್‌ ಅಕಾ ಎಕ್ಸ್‌ನಲ್ಲಿ ಸಾಕಷ್ಟು ಜನರು ವು ಈಸ್‌ ಶೀ ಎಂದು ದೀಪಿಕಾ ಪಡುಕೋಣೆಯ ಫೋಟೋದ ಜತೆ ಕೇಳಿದ್ದಾರೆ. ದುವಾ ಲಿಪಾರನ್ನು ಇಷ್ಟೊಂದು ಜನರು ಕೇಳಲಿಲ್ಲ. "ವು ಈಸ್‌ ಶೀ?" ಎಂದು ಪ್ರಶ್ನೆ ಕೇಳಿದವರಿಗೆ ಸಾಕಷ್ಟು ಜನರು "ಆಕೆ ಬಾಲಿವುಡ್‌ನ ದೊಡ್ಡ ನಟಿ" ಎಂದೆಲ್ಲ ಖುಷಿಯಿಂದ ಪರಿಚಯ ಮಾಡಿಕೊಟ್ಟಿದ್ದಾರೆ.

ದುವಾ ಲಿಪಾ

ಕೋಟಿಗೊಬ್ಬಳು ಸುಂದರಿ

"ಇವಳು ದೀಪಿಕಾ ಪಡುಕೋಣೆ. ಮದರ್‌ ಟು ಮಿಲಿಯನ್ಸ್‌" ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. "ಈಕೆ ಭಾರತದ ದೊಡ್ಡ ಸೂಪರ್‌ಸ್ಟಾರ್" ಎಂದು ಮತ್ತೊಬ್ಬರು ಪರಿಚಯಿಸಿದ್ದಾರೆ. "ಓಹ್‌ ಮೈಗಾಡ್‌, ದೀಪಿಕಾ ಪಡುಕೋಣೆ ಎಷ್ಟೊಂದು ಸುಂದರವಾಗಿ ಕಾಣಿಸುತ್ತಾರೆ" "ಆಕೆ ದೀಪಿಕಾ ಪಡುಕೋಣೆ, ಭಾರತದ ಅತ್ಯುತ್ತಮ ನಟಿ" ಎಂದೆಲ್ಲ ಕಾಮೆಂಟ್‌ಗಳು ಎಕ್ಸ್‌ನಲ್ಲಿ ಕಾಣಿಸಿವೆ.

ದುವಾ ಲಿಪಾ ಹೊಸ ಹಾಡು

ಇತ್ತೀಚಿಗೆ ದುವಾ ಲಿಪಾ ತನ್ನ ಹೊಸ ಹಾಡು "ಟ್ರೇನಿಂಗ್‌ ಸೀಸನ್‌" ಬಿಡುಗಡೆ ಮಾಡಿದ್ದರು.

ದೀಪಿಕಾ ಪಡುಕೋಣೆ ಸಿನಿಮಾ

ದೀಪಿಕಾ ಪಡುಕೋನೆ ಇತ್ತೀಚೆಗೆ ವಾಯುಪಡೆಯ ಕಥಾಹಂದರ ಹೊಂದಿರುವ ಫೈಟರ್‌ ಸಿನಿಮಾದಲ್ಲಿ ಹೃತಿಕ್‌ ರೋಷನ್‌ ಜತೆ ನಟಿಸಿದ್ದರು. ಸಿದ್ಧಾರ್ಥ ಆನಂದ್‌ ನಿರ್ದೇಶನದ ಈ ಚಿತ್ರದಲ್ಲಿ ಅನಿಲ್‌ ಕಪೂರ್‌, ಕರಣ್‌ ಸಿಂಗ್‌ ಗ್ರೋವರ್‌ ಮತ್ತು ಅಕ್ಷಯ್‌ ಓಬೆರಾಯ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ದೀಪಿಕಾ ಪಡುಕೋಣೆ ಅವರ ಮುಂಬರುವ ಚಿತ್ರ ಕಲ್ಕಿ 2898 ಎಡಿ. ಈ ಚಿತ್ರದಲ್ಲಿ ಪ್ರಭಾಸ್‌ ಜತೆ ನಟಿಸಿದ್ದಾರೆ. ನಾಗ್‌ ಅಶ್ವಿನ್‌ ನಿರ್ದೇಶನದ ಈ ಚಿತ್ರದಲ್ಲಿ ಅಮಿತಾಬ್‌ ಬಚ್ಚನ್‌ ಕೂಡ ನಟಿಸಿದ್ದಾರೆ. ಕಲ್ಕಿ ಸಿನಿಮಾವು ಮೇ 9, 2024ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ