ನಮಗೂ ಮೊಮ್ಮಗು ಬೇಕು, ಕತ್ರಿನಾ ಕೈಫ್ ಅತ್ತೆ ಮನೆಯಿಂದ ಒತ್ತಡ; ಪತಿ ವಿಕ್ಕಿ ಕೌಶಾಲ್ ಪ್ರತಿಕ್ರಿಯೆ
Sep 10, 2023 10:37 AM IST
ನಮಗೂ ಮೊಮ್ಮಗು ಬೇಕು, ಕತ್ರಿನಾ ಕೈಫ್ ಅತ್ತೆ ಮನೆಯಿಂದ ಒತ್ತಡ; ಪತಿ ವಿಕ್ಕಿ ಕೌಶಾಲ್ ಪ್ರತಿಕ್ರಿಯೆ
- ನಟ ವಿಕ್ಕಿ ಕೌಶಾಲ್ ಮತ್ತು ಕತ್ರಿನಾ ಕೈಫ್ ಮದುವೆಯಾಗಿ ಬರುವ ಡಿಸೆಂಬರ್‌ಗೆ ಎರಡು ವರ್ಷಗಳಾಗಲಿದೆ. ಇತ್ತ ವಿಕ್ಕಿ ಕೌಶಾಲ್ ಮನೆಯಿಂದ ಮೊಮ್ಮಗು ಬೇಕು ಎಂಬ ಬೇಡಿಕೆ ಹೆಚ್ಚಾಗಿದೆಯಂತೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ.
Katrina Kaif: ಬಾಲಿವುಡ್‌ನಲ್ಲಿ ಮದುವೆಯಾದರೂ, ಮಕ್ಕಳನ್ನು ಮಾಡಿಕೊಳ್ಳುವುದು ಕೆಲ ವರ್ಷಗಳ ಬಳಿಕವೇ. ಸಿನಿಮಾರಂಗದಲ್ಲಿ ಮುಂದುವರಿಯುವುದರಿಂದ ಸಿನಿಮಾ ಕೆಲಸಗಳಿಗೆ ಅಡ್ಡಿಯಾಗಬಾರದೆಂಬ ಕಾರಣಕ್ಕೆ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದವರೂ ಇದ್ದಾರೆ. ಇದೀಗ ಇದೇ ವಿಚಾರ ಬಾಲಿವುಡ್‌ನ ಸ್ಟಾರ್ ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಾಲ್ ಬಗೆಗೂ ಹಲವು ಊಹಾಪೋಹಗಳು ಹರಿದಾಡುತ್ತಲಿವೆ.
ಮದುವೆಯಾಗಿ ಎರಡು ವರ್ಷಗಳಾಗುತ್ತ ಬಂದರೂ, ಇನ್ನೂ ಏನು ಸಿಹಿ ಸುದ್ದಿ ಇಲ್ವಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಆಗಾಗ ಟೀಸ್ ಮಾಡುತ್ತಿದ್ದದ್ದೂ ಇದೆ. ಹೋದಲ್ಲಿ ಬಂದಲ್ಲಿ, ಕತ್ರಿನಾ ಕೈಫ್ ಫೋಟೋ ಹಾಕಿ ಕಾಲೆಳೆಯುತ್ತಿದ್ದಾರೆ. ಆದರೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಈ ಜೋಡಿ ತಾವಾಯ್ತು ತಮ್ಮ ಕೆಲಸವಾಯ್ತು ಎಂದಷ್ಟೇ ಬಿಜಿಯಾಗಿದ್ದಾರೆ.
ಇತ್ತ ದಿ ಗ್ರೇಡ್ ಇಂಡಿಯನ್ ಫ್ಯಾಮಿಲಿ ಸಿನಿಮಾದ ಪ್ರಮೋಷನ್‌ನಲ್ಲಿ ವಿಕ್ಕಿ ಕೌಶಾಲ್ ತೊಡಗಿಸಿಕೊಂಡಿದ್ದಾರೆ. ಸಿನಿಮಾ ಕುರಿತು ಸಂದರ್ಶನಗಳಲ್ಲೂ ಭಾಗವಹಿಸಿದ್ದಾರೆ. ಈ ವೇಳೆ ಮಗು ಪಡೆಯುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಕತ್ರಿನಾ ಕೈಫ್‌ಗೆ ಸಿಹಿ ಸುದ್ದಿ ನೀಡುವಂತೆ ಅತ್ತೆಯಿಂದ ಒತ್ತಡವಿದೆಯೇ? ಎಂಬ ಪ್ರಶ್ನೆ ಎದುರಾಗಿದೆ.
ಸದ್ಯಕ್ಕೆ ನಾನು ನನ್ನ ಹೆಂಡತಿ ಚೆನ್ನಾಗಿದ್ದೇವೆ. ಎರಡೂ ಕುಟುಂಬಗಳೂ ಚೆನ್ನಾಗಿವೆ. ಜತೆಗೆ ನಮ್ಮಿಬ್ಬರಿಗೆ ಮಕ್ಕಳು ಮಾಡಿಕೊಳ್ಳುವಂತೆ ಮನೆಯವರಿಂದಲೂ ಒತ್ತಡವಿಲ್ಲ. ಆದರೆ, ಆದಷ್ಟು ಬೇಗ ಸಿಹಿ ಸುದ್ದಿ ನೀಡಿ, ನಮಗೂ ಮೊಮ್ಮಗು ಬೇಕು ಎಂಬ ಪರೋಕ್ಷ ಮಾತುಗಳು ಆಗಾಗ ಕೇಳುತ್ತಿರುತ್ತವೆ. ಜತೆಗೆ ನಮ್ಮ ಮನೆಯಲ್ಲಿ ಈ ವಿಚಾರದಲ್ಲಿ ಯಾರೂ ಹೆಚ್ಚು ಭಾಗವಹಿಸುವುದಿಲ್ಲ. ಇಬ್ಬರೂ ಹಲವು ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದೇವೆ. ಸದ್ಯಕ್ಕೆ ಆ ಥರದ ಪ್ಲಾನ್ ಏನೂ ಇಲ್ಲ ಎಂದಿದ್ದಾರೆ.
ಅಂದಹಾಗೆ. ಕತ್ರಿನಾ ಮತ್ತು ವಿಕ್ಕಿ ಕೌಶಾಲ್ ಅವರದ್ದು ಪ್ರೇಮ ವಿವಾಹ. 2018ರಲ್ಲಿ ಇಬ್ಬರೂ ಡೇಟಿಂಗ್‌ನಲ್ಲಿದ್ದರು. ಅದಾದ ಬಳಿಕ 2021ರ ಕುಟುಂಬಗಳ ಒಪ್ಪಿಗೆ ಪಡೆದು ಡಿಸೆಂಬರ್‌ನಲ್ಲಿ ಅದ್ದೂರಿಯಾಗಿ ವಿವಾಹವಾದರು.
ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ