ಕನ್ನಡ ಸುದ್ದಿ  /  ಮನರಂಜನೆ  /  ಜವಾನ್‌ಗೆ ಹೆದರಿ ಸಲಾರ್‌ ದಿನಾಂಕ ಕಬಳಿಸಿದ ಚಂದ್ರಮುಖಿ 2; ಸೆ. 28ಕ್ಕೆ ಕಂಗನಾ, ರಾಘವ್‌ ಲಾರೆನ್ಸ್‌ ಸಿನಿಮಾ ರಿಲೀಸ್‌

ಜವಾನ್‌ಗೆ ಹೆದರಿ ಸಲಾರ್‌ ದಿನಾಂಕ ಕಬಳಿಸಿದ ಚಂದ್ರಮುಖಿ 2; ಸೆ. 28ಕ್ಕೆ ಕಂಗನಾ, ರಾಘವ್‌ ಲಾರೆನ್ಸ್‌ ಸಿನಿಮಾ ರಿಲೀಸ್‌

ಹಿರಿಯ ನಿರ್ದೇಶಕ ಪಿ ವಾಸು ನಿರ್ದೇಶನದಲ್ಲಿ ಮೂಡಿ ಬಂದಿರುವ ಚಂದ್ರಮುಖಿ 2 ಸಿನಿಮಾದಲ್ಲಿ ರಾಘವ್ ಲಾರೆನ್ಸ್ ವೆಟ್ಟೈಯನ್ ರಾಜನಾಗಿ ಕಾಣಿಸಿಕೊಂಡಿದ್ದಾರೆ. ಚಂದ್ರಮುಖಿಯಾಗಿ ಕಂಗನಾ ನಟಿಸಿದ್ದಾರೆ. ಈ ಸಿನಿಮಾ ಇದೀಗ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.

ಜವಾನ್‌ಗೆ ಹೆದರಿ ಸಲಾರ್‌ ದಿನಾಂಕ ಕಬಳಿಸಿದ ಚಂದ್ರಮುಖಿ 2; ಸೆ. 28ಕ್ಕೆ ಕಂಗನಾ, ರಾಘವ್‌ ಲಾರೆನ್ಸ್‌ ಸಿನಿಮಾ ರಿಲೀಸ್‌
ಜವಾನ್‌ಗೆ ಹೆದರಿ ಸಲಾರ್‌ ದಿನಾಂಕ ಕಬಳಿಸಿದ ಚಂದ್ರಮುಖಿ 2; ಸೆ. 28ಕ್ಕೆ ಕಂಗನಾ, ರಾಘವ್‌ ಲಾರೆನ್ಸ್‌ ಸಿನಿಮಾ ರಿಲೀಸ್‌

Chandramukhi 2:‌ ಸೆಪ್ಟೆಂಬರ್‌ನಲ್ಲಿ ಸರಣಿ ದೊಡ್ಡ ಸಿನಿಮಾಗಳ ದಂಡೇ ಬಿಡುಗಡೆಯಾಗುತ್ತಿದೆ. ಈಗಾಗಲೇ ಜವಾನ್‌ ಸಿನಿಮಾ ನೋಡುಗರಿಂದ ಮೆಚ್ಚುಗೆ ಪಡೆದು ಮುನ್ನುಗ್ಗುತ್ತಿದೆ. ಈ ನಡುವೆ ಟ್ರೇಲರ್‌ ಬಿಡುಗಡೆ ಮಾಡಿಕೊಂಡು, ರಿಲೀಸ್‌ ದಿನಾಂಕವನ್ನೂ ಘೋಷಿಸಿಕೊಂಡಿದ್ದ ಚಂದ್ರಮುಖಿ 2 ಸಿನಿಮಾ ಇದೀಗ ತನ್ನ ರಿಲೀಸ್‌ ದಿನವನ್ನು ಮುಂದೂಡಿಕೊಂಡಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಸೆ. 19ರಂದಿ ಚಂದ್ರಮುಖಿ 2 ಸಿನಿಮಾ ಬಿಡುಗಡೆ ಆಗಬೇಕಿತ್ತು.

ಟ್ರೆಂಡಿಂಗ್​ ಸುದ್ದಿ

ಹೀಗೆ ಬಿಡುಗಡೆ ದಿನಾಂಕ ಮುಂದೂಡಿಕೊಂಡಿದ್ದಕ್ಕೆ ಕಾರಣ ಹುಡುಕ ಹೊರಟರೆ ಅಲ್ಲಿ ಜವಾನ್‌ ಸಿನಿಮಾ ಕಾಣಿಸುತ್ತದೆ. ದೊಡ್ಡ ಮಟ್ಟದ ಓಪನಿಂಗ್‌ ಪಡೆದುಕೊಂಡಿರುವ ಜವಾನ್‌ ಸಿನಿಮಾ, ಸೆ. 7ರಂದು ಬಿಡುಗಡೆ ಆಗಿದೆ. ಆ ಸಿನಿಮಾದಿಂದ ಚಂದ್ರಮುಖಿಗೂ ಅಡೆತಡೆ ಆಗಬಹುದೆಂಬ ಕಾರಣಕ್ಕೆ ಸೆ. 28ರ ದಿನವನ್ನು ಫಿಕ್ಸ್‌ ಮಾಡಿಕೊಂಡಿದೆ. ಈ ಮೂಲಕ ಜವಾನ್‌ಗೆ ಹೆದರಿ ಸಲಾರ್ ದಿನವನ್ನು ಕಬಳಿಸಿದೆ ಈ ಸಿನಿಮಾ.

ಖ್ಯಾತ ನಿರ್ದೇಶಕ ಕಂ ನಟ ರಾಘವ ಲಾರೆನ್ಸ್ ಮತ್ತು ಬಾಲಿವುಡ್ ನಟಿ ಕಂಗನಾ ರಣಾವತ್ ಮೊದಲ ಸಲ ಚಂದ್ರಮುಖಿ 2 ಸಿನಿಮಾ ಮೂಲಕ ಒಂದಾಗಿದ್ದಾರೆ. ಹಿರಿಯ ನಿರ್ದೇಶಕ ಪಿ. ವಾಸು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಹಾರರ್ ಕಾಮಿಡಿ ಸಿನಿಮಾ ಸೆಪ್ಟಂಬರ್ 19 ರಂದು ಬಿಡುಗಡೆಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ ಚಂದ್ರಮುಖಿ 2 ಈ ತಿಂಗಳ ಕೊನೆಯಲ್ಲಿ ತೆರೆ ಕಾಣಲಿದೆ. ಅಂದರೆ ಸೆಪ್ಟಂಬರ್ 28ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗಲಿದೆ.

ಹಿರಿಯ ನಿರ್ದೇಶಕ ಪಿ ವಾಸು ನಿರ್ದೇಶನದಲ್ಲಿ ಮೂಡಿ ಬಂದಿರುವ ಚಂದ್ರಮುಖಿ 2 ಸಿನಿಮಾದಲ್ಲಿ ರಾಘವ್ ಲಾರೆನ್ಸ್ ವೆಟ್ಟೈಯನ್ ರಾಜನಾಗಿ ಕಾಣಿಸಿಕೊಂಡಿದ್ದಾರೆ. ಚಂದ್ರಮುಖಿಯಾಗಿ ಕಂಗನಾ ನಟಿಸಿದ್ದಾರೆ. 2005ರಲ್ಲಿ ಬಿಡುಗಡೆಯಾಗಿದ್ದ ಕ್ಲಾಸಿಕ್ ಸಿನಿಮಾ ಚಂದ್ರಮುಖಿ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ಸೂಪರ್ ಸ್ಟಾರ್ ರಜನಿಕಾಂತ್ ನಾಯಕನಾಗಿ ನಟಿಸಿದ್ದ ಈ ಚಿತ್ರ ಹಿಟ್ ಲಿಸ್ಟ್ ಸೇರಿತ್ತು. ಇದೀಗ 18 ವರ್ಷಗಳ ಬಳಿಕ ಚಂದ್ರಮುಖಿ ಸೀಕ್ವೆಲ್ ಬರ್ತಿದ್ದು, ನಿರೀಕ್ಷೆ ಇಮ್ಮಡಿಗೊಳಿಸಿದೆ.

ಲೈಕಾ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಚಂದ್ರಮುಖಿ 2 ಚಿತ್ರ ನಿರ್ಮಾಣವಾಗಿದೆ. ಎಂ.ಎಂ. ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಆರ್.ಡಿ. ರಾಜಶೇಖರ್ ಛಾಯಾಗ್ರಹಣ, ಅಂಥೋನಿ ಸಂಕಲನ ಈ ಸಿನಿಮಾಗಿದೆ. ಕಂಗನಾ ರಣಾವತ್ ಜೊತೆ ರಾಘವ ಲಾರೆನ್ಸ್, ಲಕ್ಷ್ಮೀ ಮೆನನ್, ಮಹಿಮಾ ನಂಬಿಯಾರ್, ವಡಿವೇಲು, ರಾಧಿಕಾ ಶರತ್ ಕುಮಾರ್, ಸುರೇಶ್ ಮೆನನ್ ಮುಂತಾದವರು ನಟಿಸಿದ್ದಾರೆ.

ಮನರಂಜನೆ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point