logo
ಕನ್ನಡ ಸುದ್ದಿ  /  ಮನರಂಜನೆ  /  ಸಮವಸ್ತ್ರದಲ್ಲಿ ಹೃತಿಕ್ ರೋಷನ್‌ -ದೀಪಿಕಾ ಪಡುಕೋಣೆ ಕಿಸ್ಸಿಂಗ್‌; ಫೈಟರ್‌ ಸಿನಿಮಾಕ್ಕೆ ಲೀಗಲ್‌ ನೋಟಿಸ್‌

ಸಮವಸ್ತ್ರದಲ್ಲಿ ಹೃತಿಕ್ ರೋಷನ್‌ -ದೀಪಿಕಾ ಪಡುಕೋಣೆ ಕಿಸ್ಸಿಂಗ್‌; ಫೈಟರ್‌ ಸಿನಿಮಾಕ್ಕೆ ಲೀಗಲ್‌ ನೋಟಿಸ್‌

Praveen Chandra B HT Kannada

Feb 07, 2024 06:21 AM IST

ಸಮವಸ್ತ್ರದಲ್ಲಿ ಹೃತಿಕ್ ರೋಷನ್‌ -ದೀಪಿಕಾ ಪಡುಕೋಣೆ ಕಿಸ್ಸಿಂಗ್‌, ಫೈಟರ್‌ ಸಿನಿಮಾಕ್ಕೆ ಲೀಗಲ್‌ ನೋಟಿಸ್‌

    • Fighter Movie Kissing Scene: ಹೃತಿಕ್‌ ರೋಷನ್‌ ಮತ್ತು ದೀಪಿಕಾ ಪಡುಕೋಣೆ ನಡುವೆ ಇರುವ ಚುಂಬನ ದೃಶ್ಯವನ್ನು ವಿರೋಧಿಸಿ ಭಾರತೀಯ ವಾಯುಪಡೆಯು ಫೈಟರ್‌ ಸಿನಿಮಾದ ವಿರುದ್ಧ ಲೀಗಲ್‌ ನೋಟಿಸ್‌ ಕಳುಹಿಸಿದೆ. ಈ ಸಿನಿಮಾವು ವಾಯುಪಡೆಯ ಘನತೆ ಕುರಿತು ತಪ್ಪಾಗಿ ನಿರೂಪಿಸುತ್ತದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಸಮವಸ್ತ್ರದಲ್ಲಿ ಹೃತಿಕ್ ರೋಷನ್‌ -ದೀಪಿಕಾ ಪಡುಕೋಣೆ ಕಿಸ್ಸಿಂಗ್‌, ಫೈಟರ್‌ ಸಿನಿಮಾಕ್ಕೆ ಲೀಗಲ್‌ ನೋಟಿಸ್‌
ಸಮವಸ್ತ್ರದಲ್ಲಿ ಹೃತಿಕ್ ರೋಷನ್‌ -ದೀಪಿಕಾ ಪಡುಕೋಣೆ ಕಿಸ್ಸಿಂಗ್‌, ಫೈಟರ್‌ ಸಿನಿಮಾಕ್ಕೆ ಲೀಗಲ್‌ ನೋಟಿಸ್‌

ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಫೈಟರ್ ಚಿತ್ರಕ್ಕೆ ಸಂಕಷ್ಟವೊಂದು ಎದುರಾಗಿದೆ. ಚಿತ್ರದ ಪ್ರಮುಖ ನಟ ನಟಿಯ ನಡುವೆ ಚುಂಬನ ದೃಶ್ಯಕ್ಕೆ ಸಂಬಂಧಪಟ್ಟಂತೆ ಫೈಟರ್‌ ಸಿನಿಮಾದ ವಿರುದ್ಧ ವಿಂಗ್‌ ಕಮಾಂಡರ್‌ ಸೌಮ್ಯ ದೀಪ್‌ದಾಸ್‌ ಲೀಗಲ್‌ ನೋಟಿಸ್‌ ನೀಡಿದ್ದಾರೆ ಎಂದು ಇಂಡಿಯಾ ಟಿವಿ ವರದಿ ಮಾಡಿದೆ. "ಐಎಎಫ್‌ ಸಮವಸ್ತ್ರವು ಕೇವಲ ಬಟ್ಟೆಯಲ್ಲ. ಇದು ಕರ್ತವ್ಯ, ರಾಷ್ಟ್ರೀಯ ಭದ್ರತೆ ಮತ್ತು ನಿಸ್ವಾರ್ಥ ಸೇವೆಗೆ ಅಚಲ ಬದ್ಧತೆಯ ಪ್ರಬಲ ಸಂಕೇತವಾಗಿದೆ" ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.  

ಟ್ರೆಂಡಿಂಗ್​ ಸುದ್ದಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಮತ್ತಷ್ಟು ಹಿರಿದಾಯ್ತು ಕಣ್ಣಪ್ಪ ಸಿನಿಮಾ ತಾರಾಬಳಗ; ಅಕ್ಷಯ್‌ ಕುಮಾರ್‌, ಪ್ರಭಾಸ್‌ ಬಳಿಕ ಕಾಜಲ್‌ ಅಗರ್ವಾಲ್ ಎಂಟ್ರಿ

ಜನವರಿ 25ರಂದು ಫೈಟರ್‌ ಸಿನಿಮಾ ಬಿಡುಗಡೆಯಾಗಿತ್ತು. ಬಾಕ್ಸ್‌ ಆಫೀಸ್‌ನಲ್ಲಿ ಫೈಟರ್‌ ಸಿನಿಮಾದ ಗಳಿಕೆ ಪರವಾಗಿಲ್ಲ ಎನ್ನುವಂತೆ ಇದೆ. ಚಿತ್ರ ಬಿಡುಗಡೆಯಾಗುವ ಮುನ್ನವೇ ಯುಎಇ ಹೊರತುಪಡಿಸಿ ಉಳಿದ ದೇಶಗಳಲ್ಲಿ ಸಿನಿಮಾ ರಿಲೀಸ್‌ಗೆ ಅವಕಾಶ ನೀಡಿರಲಿಲ್ಲ.

ಚುಂಬನದ ದೃಶ್ಯ- ಫೈಟರ್‌ ವಿರುದ್ಧ ಲೀಗಲ್‌ ನೋಟಿಸ್‌

ಭಾರತೀಯ ವಾಯುಪಡೆ, ಅದರ ಅಧಿಕಾರಿಗಳ ಮಾನಹಾಣಿ, ಅವಮಾನ ಮತ್ತು ನಕಾರಾತ್ಮಕ ಅಭಿಪ್ರಾಯ ಮೂಡಿಸುವ ಫೈಟರ್‌ ಚಿತ್ರದ ವಿರುದ್ಧ ಲೀಗಲ್‌ ನೋಟಿಸ್‌ ನೀಡಲಾಗಿದೆ. "ಭಾರತೀಯ ವಾಯುಪಡೆಯ ಸಮವಸ್ತ್ರವು ತ್ಯಾಗ, ಶಿಸ್ತು, ರಾಷ್ಟ್ರವನ್ನು ರಕ್ಷಿಸುವ ಅಚಲ ಸಮರ್ಪಣೆಯ ಅತ್ಯುನ್ನತ ಆದರ್ಶದ ರೂಪ. ವೈಯಕ್ತಿಕ ಪ್ರಣಯ ಸಂಬಂಧಗಳನ್ನು ಉತ್ತೇಜಿಸುವ ದೃಶ್ಯವನ್ನು ವಾಯುಪಡೆಯ ಸಮವಸ್ತ್ರದಲ್ಲಿ ಚಿತ್ರೀಕರಣ ಮಾಡಿರುವುದು ಇದರ ಅಂತರ್ಗತ ಘನತೆಯನ್ನು ಸಂಪೂರ್ಣವಾಗಿ ತಪ್ಪಾಗಿ ನಿರೂಪಿಸುತ್ತದೆ. ಇದು ಅಸಂಖ್ಯಾತ ಅಧಿಕಾರಿಗಳು ದೇಶ ಸೇವೆಗೆ ಮಾಡಿದ ಆಳವಾದ ತ್ಯಾಗವನ್ನು ಅಪಮೌಲ್ಯಗೊಳಿಸುತ್ತದೆ" ಎಂದು ಲೀಗಲ್‌ ನೋಟಿಸ್‌ನಲ್ಲಿ ತಿಳಿಸಲಾಗಿದೆ.

"ಇಷ್ಟು ಮಾತ್ರವಲ್ಲದೆ ಸಮವಸ್ತ್ರದಲ್ಲಿ ಅನುಚಿತ ನಡವಳಿಕೆಯನ್ನು ಪ್ರೇರೇಪಿಸುತ್ತದೆ. ನಮ್ಮ ದೇಶದ ಗಡಿಯನ್ನು ರಕ್ಷಿಸುವ ಜವಾಬ್ದಾರಿ ಹೊಂದಿರುವವರ ನೈತಿಕ ಮಾನದಂಡಗಳನ್ನು ದುರ್ಬಲಗೊಳಿಸುವ ಅಪಾಯಕಾರಿ ಅಂಶವನ್ನು ಹೊಂದಿದೆ. ತಾಂತ್ರಿಕವಾಗಿ ಸಮವಸ್ತ್ರದಲ್ಲಿ ಚುಂಬಿಸುವುದು ರೊಮ್ಯಾಂಟಿಕ್‌ ಎಂದು ಚಿತ್ರೀಕರಿಸಬಹುದು. ಆದರೆ, ಐಎಎಫ್‌ ಅಧಿಕಾರಿಗಳು ಈ ರೀತಿ ಮಾಡುವುದು ಅನುಚಿತ ಮತ್ತು ಅಸಮಂಜಸ. ಅಧಿಕಾರಿಗಳಿಂದ ನಿರೀಕ್ಷಿಸಲಾಗುವ ಶಿಸ್ತು ಮತ್ತು ಸಭ್ಯತೆಗೆ ವಿರುದ್ಧವಾಗಿದೆ" ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಫೈಟರ್ ಸಿನಿಮಾದ ಕುರಿತು

ಇತ್ತೀಚೆಗೆ ಬಿಡುಗಡೆಯಾದ ಫೈಟರ್‌ ಸಿನಿಮಾವು ಪ್ರೇಕ್ಷಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯುತ್ತಿದೆ. ಗಲ್ಲಾಪೆಟ್ಟಿಗೆಯಲ್ಲೂ ಪರವಾಗಿಲ್ಲ ಎನ್ನುವಂತೆ ಉತ್ತಮವಾಗಿ ವಹಿವಾಟು ನಡೆಸುತ್ತಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಫೈಟರ್ ಚಿತ್ರದಲ್ಲಿ ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್ ಮತ್ತು ಅಕ್ಷಯ್ ಒಬೆರಾಯ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಹೃತಿಕ್ ಸ್ಕ್ವಾಡ್ರನ್ ಲೀಡರ್ ಶಂಶೇರ್ ಪಠಾನಿಯಾ ಅಲಿಯಾಸ್ ಪ್ಯಾಟಿಯಾಗಿ, ದೀಪಿಕಾ ಸ್ಕ್ವಾಡ್ರನ್ ಲೀಡರ್ ಮಿನಾಲ್ ರಾಥೋಡ್ ಅಕಾ ಮಿನ್ನಿಯಾಗಿ ಮತ್ತು ಅನಿಲ್ ದೇಶಕ್ಕಾಗಿ ಹೋರಾಡುವ ಗ್ರೂಪ್ ಕ್ಯಾಪ್ಟನ್ ರಾಕೇಶ್ ಜೈ ಸಿಂಗ್ ಅಲಿಯಾಸ್ ರಾಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಹೃತಿಕ್ ಮತ್ತು ದೀಪಿಕಾ ಪಡುಕೋಣೆ ಪರದೆ ಹಂಚಿಕೊಂಡಿದ್ದಾರೆ. ಭಾರತದಲ್ಲಿ ಫೈಟರ್‌ ಸಿನಿಮಾವು 150 ಕೋಟಿ ರೂ. ಕ್ಲಬ್‌ಗೆ ಪ್ರವೇಶಿಸಿದೆ. ಜಾಗತಿಕವಾಗಿ 300 ಕೋಟಿ ರೂ.ಗಿಂತಲೂ ಹೆಚ್ಚು ಗಳಿಕೆ ಮಾಡಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ