logo
ಕನ್ನಡ ಸುದ್ದಿ  /  ಮನರಂಜನೆ  /  Fighter: ಹೃತಿಕ್‌ ರೋಷನ್‌- ದೀಪಿಕಾ ಪಡುಕೋಣೆ ಸಿನಿಮಾಕ್ಕೆ ಗಲ್ಫ್‌ ದೇಶಗಳಲ್ಲಿ ನಿಷೇಧ, ಯುಎಇಯಲ್ಲಿ ಮಾತ್ರ ಫೈಟರ್‌ ಪ್ರದರ್ಶನ

Fighter: ಹೃತಿಕ್‌ ರೋಷನ್‌- ದೀಪಿಕಾ ಪಡುಕೋಣೆ ಸಿನಿಮಾಕ್ಕೆ ಗಲ್ಫ್‌ ದೇಶಗಳಲ್ಲಿ ನಿಷೇಧ, ಯುಎಇಯಲ್ಲಿ ಮಾತ್ರ ಫೈಟರ್‌ ಪ್ರದರ್ಶನ

Praveen Chandra B HT Kannada

Jan 24, 2024 09:55 AM IST

ಫೈಟರ್‌ ಸಿನಿಮಾ ಜನವರಿ 25ರಂದು ಬಿಡುಗಡೆ

  • ಸಿದ್ಧಾರ್ಥ್‌ ಆನಂದ್‌ ನಿರ್ದೇಶನದ ಹೃತಿಕ್‌ ರೋಷನ್‌ ಮತ್ತು ದೀಪಿಕಾ ಪಡುಕೋಣೆ ನಟನೆಯ ಫೈಟರ್‌ ಸಿನಿಮಾವು ಚಿತ್ರಮಂದಿರಗಳಲ್ಲಿ ಜನವರಿ 25ರಂದು ಬಿಡುಗಡೆಯಾಗಲಿದೆ. ಈ ಸಿನಿಮಾ ಯುಎಇ ಹೊರತುಪಡಿಸಿ ಇತರೆ ಗಲ್ಫ್‌ ದೇಶಗಳಲ್ಲಿ ಪ್ರದರ್ಶನಗೊಳ್ಳುತ್ತಿಲ್ಲ.

ಫೈಟರ್‌ ಸಿನಿಮಾ ಜನವರಿ 25ರಂದು ಬಿಡುಗಡೆ
ಫೈಟರ್‌ ಸಿನಿಮಾ ಜನವರಿ 25ರಂದು ಬಿಡುಗಡೆ

ಬೆಂಗಳೂರು: ಗಲ್ಫ್‌ ದೇಶಗಳಲ್ಲಿ ಹೃತಿಕ್‌ ರೋಷನ್‌ ಮತ್ತು ದೀಪಿಕಾ ಪಡುಕೋಣೆ ನಟನೆಯ ಫೈಟರ್‌ ಸಿನಿಮಾವನ್ನು ನೋಡಬೇಕೆಂದು ಬಯಸುವ ಸಿನಿಪ್ರಿಯರಿಗೆ ನಿರಾಶೆಯ ಸುದ್ದಿ. ಫಿಲ್ಮ್‌ ಬಿಸ್ನೆಸ್‌ ತಜ್ಞ ಮತ್ತು ನಿರ್ಮಾಪಕರಾದ ಗಿರೀಶ್‌ ಜೋಹಾರ್‌ ಪ್ರಕಾರ ಸದ್ಯ ಯುಎಇ ಹೊರತುಪಡಿಸಿ ಇತರೆ ಗಲ್ಫ್‌ ದೇಶಗಳಲ್ಲಿ ಫೈಟರ್‌ ಸಿನಿಮಾಕ್ಕೆ ಅನುಮತಿ ದೊರಕಿಲ್ಲ.

ಟ್ರೆಂಡಿಂಗ್​ ಸುದ್ದಿ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಗಲ್ಫ್‌ ದೇಶಗಳಲ್ಲಿ ಫೈಟರ್‌ ಸಿನಿಮಾ ಬಿಡುಗಡೆಯಾಗದೆ ಇರುವುದಕ್ಕೆ ಕಾರಣವೇನೆಂದು ಬಹಿರಂಗವಾಗಿಲ್ಲ. "ಒಂದು ಹಿನ್ನಡೆ, ಫೈಟರ್‌ ಸಿನಿಮಾವು ಮಧ್ಯ ಪ್ರಾಚ್ಯ ದೇಶಗಳಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿಲ್ಲ. ಇದಕ್ಕೆ ಆ ದೇಶಗಳು ಅಧಿಕೃತವಾಗಿ ನಿಷೇಧ ಹೇರಿವೆ. ಪಿಜಿ15 ಕ್ಲಾಸಿಫಿಕೇಷನ್‌ನೊಂದಿಗೆ ಯುಎಇಯಲ್ಲಿ ಮಾತ್ರ ಈ ಸಿನಿಮಾ ಬಿಡುಗಡೆಯಾಗಲಿದೆ" ಎಂದು ಗಿರೀಶ್‌ ಟ್ವೀಟ್‌ ಮಾಡಿದ್ದಾರೆ.

ಫೈಟರ್‌ ಸಿನಿಮಾಕ್ಕೆ ಗಲ್ಫ್‌ ದೇಶಗಳ ಸೆನ್ಸಾರ್‌ ಮಂಡಳಿಯಿಂದ ಹಸಿರು ನಿಶಾನೆ ದೊರಕಿಲ್ಲ. ಈ ವೈಮಾನಿಕ ಸಾಹಸಮಯ ಸಿನಿಮಾವು ಭಾರತದ ಚಿತ್ರಮಂದಿರಗಳಲ್ಲಿ ಜನವರಿ 25ರಂದು ಬಿಡುಗಡೆಯಾಗಲಿದೆ.

ಫೈಟರ್‌ ಸಿನಿಮಾದ ಬಗ್ಗೆ

ಈ ಸಿನಿಮಾವನ್ನು ಸಿದ್ಧಾರ್ಥ್‌ ಆನಂದ್‌ ನಿರ್ದೇಶಿಸಿದ್ದಾರೆ. ಹೃತಿಕ್‌ ರೋಷನ್‌ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿಲ್‌ ಕಪೂರ್‌, ಕರಣ್‌ ಸಿಂಗ್‌ ಗ್ರೋವರ್‌ ಮತ್ತು ಅಕ್ಷಯ್‌ ಒಬೆರಾಯ್‌ ಮುಂತಾದ ಕಲಾವಿದರೂ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮಾರ್ಫ್ಲಿಕ್ಸ್‌ ಫಿಕ್ಚರ್ಸ್‌ ಜೆ ವಿಯಾಕಾಮ್‌18 ಸ್ಟುಡಿಯೋಸ್‌ ಈ ಸಿನಿಮಾ ನಿರ್ಮಾಣ ಮಾಡಿದೆ. ಭಾರತೀಯ ವಾಯುಪಡೆಯ ಸಾಹಸ, ದೇಶಭಕ್ತಿ ಇತ್ಯಾದಿ ವಿಷಯಗಳು ಈ ಸಿನಿಮಾದಲ್ಲಿರುವ ಸಸೂಚನೆಯಿದೆ.

"ಮಮತಾ (ಸಿದ್ಧಾರ್ಥರ ಪತ್ನಿ) ಮತ್ತು ನಾನು ಮಾರ್ಫ್ಲಿಕ್ಸ್‌ ಎಂಬ ಸಿನಿಮಾ ಕಂಪನಿಯನ್ನು ಫೈಟರ್‌ ಸಿನಿಮಾದ ಮೂಲಕ ಆರಂಭಿಸಿದ್ದೇವೆ. ಈ ಸಿನಿಮಾ ಹಲವು ಗುರಿಗಳನ್ನು ಹೊಂದಿದೆ. ಇದು ನಮಗೆ ಕೇವಲ ಸಿನಿಮಾವಲ್ಲ. 2024ರ ಮೊದಲ ಈ ಸಿನಿಮಾವನ್ನು ಒಂದಿಷ್ಟು ಹಿಂಜರಿಕೆಯಿಂದಲೇ ಪ್ರೇಕ್ಷಕರ ಮುಂದಿಡಲು ಸಿದ್ಧವಾಗಿದ್ದೇವೆ. ಪಠಾಣ್‌ಗೆ ನೀವು ತೋರಿದ ಪ್ರೀತಿಯನ್ನು ಫೈಟರ್‌ಗೂ ತೋರುವ ನಿರೀಕ್ಷೆ ನನ್ನದ್ದು" ಎಂದು ಫೈಟರ್‌ ನಿರ್ದೇಶಕರಾದ ಸಿದ್ಧಾರ್ಥ್‌ ಹೇಳಿದ್ದಾರೆ.

ಫೈಟರ್ ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಫೈಟರ್ ಜೆಟ್‌ಗಳ ಸ್ಕ್ವಾಡ್ರನ್ ಲೀಡರ್‌ಗಳಾಗಿ ನಟಿಸುತ್ತಿದ್ದಾರೆ. ಇವರಿಬ್ಬರ ಜತೆಗೆ ಅನಿಲ್‌ ಕಪೂರ್‌ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಫೈಟರ್‌ ಸಿನಿಮಾದಲ್ಲಿ ಹೃತಿಕ್‌ ರೋಷನ್‌ ಅವರು ಸ್ಕ್ವಾಡ್ರಾನ್‌ ಲೀಡರ್‌ ಶಂಶೀರ್‌ ಪಠಾನಿಯಾ ಆಲಿಯಾಸ್‌ ಪಟ್ಟಿಯಾಗಿ, ದೀಪಿಕಾ ಪಡುಕೋಣೆ ಅವರು ಸ್ಕ್ವಾಡ್ರಾನ್‌ ಲೀಡರ್‌ ಮಿನಲ್‌ ರಾಥೋರ್‌ ಆಲಿಯಾಸ್‌ ಮಿನಿಯಾಗಿ ಮತ್ತು ಅನಿಲ್‌ ಅವರು ಗ್ರೂಪ್‌ ಕ್ಯಾಪ್ಟನ್‌ ರಾಕೇಶ್‌ ಜೈ ಸಿಂಗ್‌ ಆಲಿಯಾಸ್‌ ರಾಕಿಯಾಗಿ ನಟಿಸಿದ್ದಾರೆ. ಸಿದ್ಧಾರ್ಥ್ ಆನಂದ್ ಫೈಟರ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ಗಣರಾಜ್ಯೋತ್ಸವದಂದು ಅಂದರೆ 2024ರ ಜನವರಿ 26 ರಂದು ಬಿಡುಗಡೆಯಾಗಲಿದೆ. ನಾಳೆಯೇ ಈ ಸಿನಿಮಾದ ಪ್ರಿಮೀಯರ್‌ ಶೋ ಪ್ರದರ್ಶನಗೊಳ್ಳಲಿದೆ.

(This copy first appeared in Hindustan Times Kannada website. To read more like this please logon to kannada.hindustantime.com )

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ