logo
ಕನ್ನಡ ಸುದ್ದಿ  /  ಮನರಂಜನೆ  /  Imdb List: ಈ ವರ್ಷದ 10 ಜನಪ್ರಿಯ ನಟಿ-ನಟರ ಪಟ್ಟಿ ಬಿಡುಗಡೆ ಮಾಡಿದ ಐಎಂಡಿಬಿ; ಶಾರೂಖ್‌ ಖಾನ್‌ಗೆ ಅಗ್ರಸ್ಥಾನ, ಇಲ್ಲಿದೆ ಸಂಪೂರ್ಣ ವಿವರ

IMDb List: ಈ ವರ್ಷದ 10 ಜನಪ್ರಿಯ ನಟಿ-ನಟರ ಪಟ್ಟಿ ಬಿಡುಗಡೆ ಮಾಡಿದ ಐಎಂಡಿಬಿ; ಶಾರೂಖ್‌ ಖಾನ್‌ಗೆ ಅಗ್ರಸ್ಥಾನ, ಇಲ್ಲಿದೆ ಸಂಪೂರ್ಣ ವಿವರ

Praveen Chandra B HT Kannada

Nov 22, 2023 04:43 PM IST

IMDb List:ಈ ವರ್ಷದ 10 ಜನಪ್ರಿಯ ನಟಿ-ನಟರ ಪಟ್ಟಿ ಬಿಡುಗಡೆ ಮಾಡಿದ ಐಎಂಡಿಬಿ

    • IMDb Most Popular Indian Stars: ಐಎಂಡಿಬಿಯು 2023ನೇ ಸಾಲಿನ ಜನಪ್ರಿಯ ಅಗ್ರ 10 ಸಿನಿಮಾ ನಟಿ ಮತ್ತು ನಟರ ಪಟ್ಟಿ ಬಿಡುಗಡೆ ಮಾಡಿದೆ. ಶಾರುಖ್‌ ಖಾನ್, ಅಲಿಯಾ ಭಟ್, ದೀಪಿಕಾ ಪಡುಕೋಣೆ, ವಾಮಿಕಾ ಗಬ್ಬಿ, ನಯನ ತಾರಾ, ತಮ್ಮನಾ ಭಾಟಿಯಾ, ಕರೀನಾ ಕಪೂರ್ ಖಾನ್, ಸೋಬಿತಾ ಧೂಲಿಪಲ, ಅಕ್ಷಯ್‌ ಕುಮಾರ್ ಮತ್ತು ವಿಜಯ್‌ ಸೇತುಪತಿ ಅಗ್ರ ಸ್ಥಾನ ಪಡೆದಿದ್ದಾರೆ.
IMDb List:ಈ ವರ್ಷದ 10 ಜನಪ್ರಿಯ ನಟಿ-ನಟರ ಪಟ್ಟಿ ಬಿಡುಗಡೆ ಮಾಡಿದ ಐಎಂಡಿಬಿ
IMDb List:ಈ ವರ್ಷದ 10 ಜನಪ್ರಿಯ ನಟಿ-ನಟರ ಪಟ್ಟಿ ಬಿಡುಗಡೆ ಮಾಡಿದ ಐಎಂಡಿಬಿ

ಬೆಂಗಳೂರು: ಸಿನಿಮಾ, ಟಿವಿ ಶೋ ಹಾಗೂ ಸಿನಿಮಾ ತಾರೆಯರ ಅಧಿಕೃತ ಮಾಹಿತಿ ತಾಣ ಐಎಂಡಿಬಿಯು 2023ರ ಅತ್ಯಂತ ಜನಪ್ರಿಯ 10 ಭಾರತೀಯ ಸಿನಿಮಾ ತಾರೆಯರ ಹೆಸರು ಘೋಷಿಸಿದೆ. ಈ ಐಎಂಡಿಬಿ ವೆಬ್‌ಸೈಟ್‌ಗೆ ಭೇಟಿ ನೀಡುವ ಬಳಕೆದಾರರ ಪೇಜ್‌ ವೀಕ್ಷಣೆ ಆಧರಿಸಿ ಈ ಅಗ್ರ ಹತ್ತು ನಟಿ ಮತ್ತು ನಟರ ಪಟ್ಟಿ ತಯಾರಿಸಲಾಗಿದೆ. ಈ ವರ್ಷ ಈ ಅಗ್ರರ ಪಟ್ಟಿಯಲ್ಲಿ ಶಾರೂಖ್‌ ಖಾನ್‌ ಮೊದಲ ಸ್ಥಾನದಲ್ಲಿದ್ದಾರೆ. ಪಠಾಣ್‌ ಮತ್ತು ಜವಾನ್‌ ಎಂಬೆರಡು ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನು ಇವರು ಈ ವರ್ಷ ನೀಡಿದ್ದು, ಜನಪ್ರಿಯತೆ ಹೆಚ್ಚಲು ಕಾರಣವಾಗಿದೆ. ಇವರ ನಂತರದ ಸ್ಥಾನವನ್ನು ನಟಿ ಆಲಿಯಾ ಭಟ್‌ ಪಡೆದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಮತ್ತಷ್ಟು ಹಿರಿದಾಯ್ತು ಕಣ್ಣಪ್ಪ ಸಿನಿಮಾ ತಾರಾಬಳಗ; ಅಕ್ಷಯ್‌ ಕುಮಾರ್‌, ಪ್ರಭಾಸ್‌ ಬಳಿಕ ಕಾಜಲ್‌ ಅಗರ್ವಾಲ್ ಎಂಟ್ರಿ

"ಎರಡು ಬ್ಲಾಕ್‌ಬಸ್ಟರ್‌ ಚಿತ್ರಗಳನ್ನು ನೀಡಿರುವ ಶಾರೂಖ್‌ ಖಾನ್‌ ಮೊದಲ ಸ್ಥಾನ ಪಡೆದಿದ್ದಾರೆ. ಹಾರ್ಟ್‌ ಆಫ್‌ ಸ್ಟೋನ್‌ ಎಂಬ ಅಂತಾರಾಷ್ಟ್ರೀಯ ಥ್ರಿಲ್ಲರ್ ಚಿತ್ರದಲ್ಲಿ ನಟಿಸಿದ ಅಲಿಯಾ ಭಟ್‌ ಎರಡನೇ ಸ್ಥಾನ ಪಡೆದಿದ್ದಾರೆ. ಇದು ಜಾಗತಿಕ ಪ್ರೇಕ್ಷಕರು ಐಎಂಡಿಬಿ ಬಳಸುವ ಉತ್ಸಾಹವನ್ನು ಸೂಚಿಸುತ್ತದೆ" ಎಂದು ಐಎಂಡಿಬಿಯ ಭಾರತೀಯ ಮುಖ್ಯಸ್ಥ ಯಾಮಿನಿ ಪಟೋಡಿಯಾ ಹೇಳಿದ್ದಾರೆ.

"ಐಎಂಡಿಬಿಯು ಅಭಿಮಾನಿಗಳ ಆಯ್ಕೆಗಳ ನಿಜವಾದ ಪ್ರತಿನಿಧಿ. ಅವರೇ ನಿಜವಾದ ರಾಜ ಮತ್ತು ನಿಜವಾದ ರಾಣಿ ಎಂದು ನನಗೆ ಎಂದಿಗೂ ಅನಿಸಿದೆ. ಅವರನ್ನು ಮೀರಿದ್ದು ಯಾವುದೂ ಇಲ್ಲ. ನನ್ನನ್ನು ಈ ಸ್ಥಾನಕ್ಕೆ ತಂದು ನಿಲ್ಲಿಸಿದ ಅಭಿಮಾನಿಗಳಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ಮುಂದೆಯೂ ಅವರನ್ನು ಹೀಗೆ ರಂಜಿಸುತ್ತಾ ಹೋಗುತ್ತೇನೆ ಎಂದು ನಂಬಿದ್ದೇನೆ" ಎಂದು ಆಲಿಯಾ ಭಟ್‌ ಪ್ರತಿಕ್ರಿಯೆ ನೀಡಿದ್ದಾರೆ.

"ಐಎಂಡಿಬಿಯ ಅತ್ಯಂತ ಜನಪ್ರಿಯ ಭಾರತೀಯ ತಾರೆಯರ ಪಟ್ಟಿಯಲ್ಲಿ ನನ್ನ ಹೆಸರು ಮೊದಲ ಬಾರಿಗೆ ಕಾಣಿಸಿಕೊಂಡಿದೆ ಮತ್ತು ನಾನು ಸಂತೋಷಗೊಂಡಿದ್ದೇನೆ! ಐಎಂಡಿಬಿಯ ಜಾಗತಿಕ ಪ್ರೇಕ್ಷಕರ ಭಾವನೆಯನ್ನು ಪ್ರತಿನಿಧಿಸುತ್ತದೆ ಎಂಬ ಅಂಶವು ವಿಶೇಷ. ವಿಶಾಲ್ ಭಾರದ್ವಾಜ್ ಅವರ ಸ್ಪೈ ಥ್ರಿಲ್ಲರ್ ಖುಫಿಯಾ ಮತ್ತು ವಿಕ್ರಮಾದಿತ್ಯ ಮೋಟ್ವಾನೆ ಅವರ ಅವಧಿಯ ಡ್ರಾಮಾ ಜುಬಿಲಿ, ಹೃದಯಸ್ಪರ್ಶಿ ವೆಬ್ ಸರಣಿ ಮಾಡರ್ನ್ ಲವ್ ಚೆನ್ನೈ, ಮತ್ತು ಪಂಜಾಬಿ ಚಲನಚಿತ್ರ ಕಾಲಿ ಜೋಟ್ಟವರೆಗೆ, ಈ ವರ್ಷ ಪೂರ್ತಿ ವಿಭಿನ್ನ ಪ್ರಕಾರ ಮತ್ತು ಭಾಷೆಗಳಲ್ಲಿ ಕೆಲಸ ಮಾಡುವ ಅವಕಾಶ ನನಗೆ ದೊರಕಿದೆ" ಎಂದು ಇದೇ ಮೊದಲ ಬಾರಿಗೆ ಐಎಂಡಿಬಿಯ ಟಾಪ್‌ 10 ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ವಾಮಿಕಾ ಗಬ್ಬಿ ಹೇಳಿದ್ದಾರೆ.

ಐಎಂಡಿಬಿಯ 2023ರ ಅತ್ಯಂತ ಜನಪ್ರಿಯ ಭಾರತೀಯ ತಾರೆಯರ ಪಟ್ಟಿ

1. ಶಾರುಖ್‌ ಖಾನ್

2. ಅಲಿಯಾ ಭಟ್

3. ದೀಪಿಕಾ ಪಡುಕೋಣೆ

4. ವಾಮಿಕಾ ಗಬ್ಬಿ

5. ನಯನ ತಾರಾ

6. ತಮ್ಮನಾ ಭಾಟಿಯಾ

7. ಕರೀನಾ ಕಪೂರ್ ಖಾನ್

8. ಸೋಬಿತಾ ಧೂಲಿಪಲ

9. ಅಕ್ಷಯ್‌ ಕುಮಾರ್

10. ವಿಜಯ್‌ ಸೇತುಪತಿ

ಐಎಂಡಿಬಿ ಪಟ್ಟಿಯಲ್ಲಿ ಆಲಿಯಾ ಭಟ್ ಸತತವಾಗಿ ಎರಡನೇ ವರ್ಷ 2ನೇ ಸ್ಥಾನದಲ್ಲಿದ್ದಾರೆ. 2023 ರಲ್ಲಿ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಮತ್ತು ಹಾರ್ಟ್ ಆಫ್ ಸ್ಟೋನ್ ನಲ್ಲಿ ನಟಿಸಿದ್ದಾರೆ. ಅವರು ಈ ವರ್ಷದ ಆರಂಭದಲ್ಲಿ ಮೆಟ್ ಗಾಲಾ ಮೂಲಕ ಪದಾರ್ಪಣೆ ಮಾಡಿದ್ದಾರೆ. 2022ರಲ್ಲಿ ಇವರು ನಟಿಸಿದ ಚಲನಚಿತ್ರ ಆರ್ ಆರ್ ಆರ್ ಅಕಾಡೆಮಿ ಪ್ರಶಸ್ತಿ ಮತ್ತು ಅತ್ಯುತ್ತಮ ಮೂಲ ಗೀತೆಗಾಗಿ ಗೋಲ್ಡನ್ ಗ್ಲೋಬ್ ಅನ್ನು ಗೆದ್ದುಕೊಂಡಿತು.

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ನಯನತಾರಾ (ನಂ. 5) ಶಾರುಖ್ ಖಾನ್ (ನಂ. 1) ಅವರೊಂದಿಗೆ ಜವಾನ್‌ನಲ್ಲಿ ಹಿಂದಿ ಚಲನಚಿತ್ರಕ್ಕೆ ಪದಾರ್ಪಣೆ ಮಾಡಿದರು. ದೀಪಿಕಾ ಪಡುಕೋಣೆ (ನಂ. 3) ಅವರು ಪಠಾಣ್‌ ಮತ್ತು ಜವಾನ್‌ಸಿನಿಮಾಗಳಲ್ಲಿ ಸಲ್ಮಾನ್‌ ಖಾನ್‌ ಜತೆ ನಟಿಸಿದ್ದಾರೆ. ಪಡುಕೋಣೆ ಅವರ ಪತಿ ರಣವೀರ್ ಸಿಂಗ್ ಅವರೊಂದಿಗೆ ಕಾಫಿ ವಿಥ್ ಕರಣ್ ಚಾಟ್ ಶೋನಲ್ಲಿ ಕಾಣಿಸಿಕೊಂಡಿರುವುದು ಕೂಡ ಸದ್ದು ಮಾಡಿತ್ತು.

ತಮನ್ನಾ ಭಾಟಿಯಾ (ನಂ. 6) ಅವರು ವಿಭಿನ್ನ ಪ್ರದೇಶ, ಭಾಷೆಗಳು ಮತ್ತು ವೇದಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಲಸ್ಟ್ ಸ್ಟೋರೀಸ್ 2, ಜೀ ಕರ್ದಾ ಮತ್ತು ಆಖ್ರಿ ಸಚ್‌ ನಂತಹ ಒಟಿಟಿ ಸ್ಟ್ರೀಮಿಂಗ್ ಚಲನಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಭೋಲಾ ಶಂಕರ್‌ನಲ್ಲಿ ನಟಿಸಿದ್ದರು ಮತ್ತು ಜೈಲರ್‌ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಐಎಂಡಿಬಿಯ ಈ ಪಟ್ಟಿಯಲ್ಲಿ ವಿಜಯ್ ಸೇತುಪತಿ ಈ ಬಾರಿ ನಂ. 10 ಪಡೆದಿದ್ದಾರೆ. ಜವಾನ್‌ ಇವರ ಮೊದಲ ಹಿಂದಿ ಚಿತ್ರವಾಗಿದೆ. ಫರ್ಜಿ ಎಂಬ ಮೊದಲ ಭಾರತೀಯ ಹಿಂದಿ ಸರಣಿಯಲ್ಲೂ ಇವರು ನಟಿಸಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ