logo
ಕನ್ನಡ ಸುದ್ದಿ  /  ಮನರಂಜನೆ  /  ಲಾಪಟಾ ಲೇಡಿಸ್‌ ಟ್ರೈಲರ್‌ ನೋಡಿದ್ರ? ಮುಸುಕು ಧರಿಸಿದ ವಧು ಅದಲು ಬದಲು, ವಿಭಿನ್ನ ಕಥೆಯ ಕಾಮಿಡಿ ಸಿನೆಮಾ

ಲಾಪಟಾ ಲೇಡಿಸ್‌ ಟ್ರೈಲರ್‌ ನೋಡಿದ್ರ? ಮುಸುಕು ಧರಿಸಿದ ವಧು ಅದಲು ಬದಲು, ವಿಭಿನ್ನ ಕಥೆಯ ಕಾಮಿಡಿ ಸಿನೆಮಾ

Praveen Chandra B HT Kannada

Jan 25, 2024 06:19 AM IST

ಲಾಪಟಾ ಲೇಡಿಸ್‌ ಟ್ರೈಲರ್‌

    • Laapataa Ladies trailer: ಕಿರಣ್‌ ರಾವ್‌ ನಿರ್ದೇಶನದ ಲಾಪಟಾ ಲೇಡಿಸ್‌ ಸಿನೆಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಧೋಬಿ ಘಾಟ್‌ ಸಿನೆಮಾ ನಿರ್ದೇಶಿಸಿದ ಹದಿನಾಲ್ಕು ವರ್ಷಗಳ ಬಳಿಕ ಕಿರಣ್‌ ರಾವ್‌ ಈ ಚಿತ್ರ ನಿರ್ದೇಶಿಸಿದ್ದಾರೆ. ಕಿರಣ್‌ ರಾವ್‌ ಮಾಜಿ ಪತಿ ಅಮೀರ್‌ ಖಾನ್‌ ಅವರ ಪ್ರೊಡಕ್ಷನ್‌ ಹೌಸ್‌ನಿಂದ ಈ ಚಿತ್ರ ತಯಾರಾಗಿದೆ.
ಲಾಪಟಾ ಲೇಡಿಸ್‌ ಟ್ರೈಲರ್‌
ಲಾಪಟಾ ಲೇಡಿಸ್‌ ಟ್ರೈಲರ್‌

ಕಿರಣ್‌ ರಾವ್‌ ಅವರು ಲಾಪಟಾ ಲೇಡಿಸ್‌ ಎಂಬ ಹೊಸ ಹಾಸ್ಯ ಸಿನೆಮಾದ ಮೂಲಕ ಬಾಲಿವುಡ್‌ಗೆ ಹಿಂತುರುಗಿದ್ದಾರೆ. ಇದೀಗ ಲಾಪಟಾ ಲೇಡಿಸ್‌ ಸಿನೆಮಾದ ಟ್ರೈಲರ್‌ ಬಿಡುಗಡೆಯಾಗಿದ್ದು, ಸಖತ್‌ ಕಾಮಿಡಿ ಇರುವ ಸೂಚನೆ ದೊರಕಿದೆ. ಕಿರಣ್‌ ರಾವ್‌ ಅವರ ಮಾಜಿ ಪತಿ ನಟ ಅಮಿರ್‌ ಖಾನ್‌ ಪ್ರೊಡಕ್ಷನ್‌ ಹೌಸ್‌ನಿಂದ ಈ ಲಾಪಟಾ ಲೇಡಿಸ್‌ ಸಿನೆಮಾ ನಿರ್ಮಾಣವಾಗಿದೆ. ಈ ಸಿನೆಮಾದಲ್ಲಿ ಅಪರಿಚಿತ ಮುಖಗಳು ಇವೆ. ಅಂದರೆ, ಹೆಚ್ಚು ಪರಿಚಿತರಲ್ಲದ ಕಲಾವಿದರು ಇದ್ದಾರೆ. ಜತೆಗೆ, ಈ ಸಿನೆಮಾದ ಕಥೆಯೂ ಅಪರಿಚಿತ. ರೈಲಲ್ಲಿ ಇಬ್ಬರು ನವವಧುಗಳು ಅದಲು ಬದಲಾಗುತ್ತಾರೆ. ಮುಸುಕು ಧರಿಸಿರುವ ಕಾರಣ ತಿಳಿಯದೆ ಅದಲು ಬದಲಾಗುತ್ತಾರೆ. ಮನೆಗೆ ಬಂದು ನೋಡಿದಾಗ ವರ ತಬ್ಬಿಬ್ಬಾಗುತ್ತಾನೆ.

ಟ್ರೆಂಡಿಂಗ್​ ಸುದ್ದಿ

ನಟಿ ಪವಿತ್ರಾ ಜಯರಾಮ್‌ಗೆ ನನ್ನ ಗಂಡ ಆರನೇಯವನು; ಅಕ್ರಮ ಸಂಬಂಧದ ಬಗ್ಗೆ ಮೌನ ಮುರಿದ ಮೃತ ಚಂದ್ರಕಾಂತ್‌ ಪತ್ನಿ ಶಿಲ್ಪಾ

Amruthadhaare: ಜೈದೇವ್‌ ಕಿಡ್ನ್ಯಾಪ್‌ ಕಥೆ ಕೇಳಿ ಹೆಸರಘಟ್ಟಕ್ಕೆ ಬಂದಳು ಮಲ್ಲಿ; ಚಿಕ್ಕಮಗಳೂರಿನಲ್ಲಿ ಹನಿಮೂನ್‌ ನಡುವೆಯೇ ಅಲರ್ಟ್‌ ಆದ ಭೂಮಿ

ನಾನಿನ್ನೂ ಅವನ ನೆನಪಿನಲ್ಲಿಯೇ ಇದ್ದೇನೆ! ವಯಸ್ಸು 50 ದಾಟಿದರೂ ಮದುವೆ ಆಗದಿರುವುದಕ್ಕೆ ಕಾರಣ ತಿಳಿಸಿದ ‘ಹಾಲುಂಡ ತವರು​’ ನಟಿ ಸಿತಾರಾ

ನಟಿ ಪವಿತ್ರಾ ಜಯರಾಮ್‌ ಅಪಘಾತದಲ್ಲಿ ಸಾವನ್ನಪ್ಪಿದಾಗ ಅದೇ ಕಾರ್‌ನಲ್ಲಿದ್ದ ನಟ ಚಂದ್ರಕಾಂತ್‌ ಆತ್ಮಹತ್ಯೆ!

ಲಾಪಟಾ ಲೇಡಿಸ್‌ ಟ್ರೈಲರ್‌ ವಿಮರ್ಶೆ

ವರನೊಬ್ಬ ತನ್ನ ಕುಟುಂಬ ಮತ್ತು ಗ್ರಾಮಸ್ಥರ ಮುಂದೆ ಈಗಷ್ಟೇ ಮದುವೆಯಾಗಿ ಕರೆತಂದ ತನ್ನ ವಧುವಿನ ಮುಖದ ಮೇಲಿನ ಮುಸಕು ಸರಿಸುತ್ತಾನೆ. ಆದರೆ, ಆ ವಧು ತಾನು ವಿವಾಹವಾದ ವಧುವಲ್ಲ ಎಂದು ಮಸುಕು ಸರಿಸಿದಾಗ ಅವನಿಗೆ ತಿಳಿಯುತ್ತದೆ. ಇನ್ನೊಂದು ಕಡೆ ಬೇರೆ ವ್ಯಕ್ತಿಯೊಬ್ಬ ತನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ಪೊಲೀಸ್‌ ಸ್ಟೇಷನ್‌ನಲ್ಲಿ ದೂರು ನೀಡುತ್ತ ಇರುತ್ತಾನೆ. ಅಲ್ಲಿನ ಪೊಲೀಸ್‌ಗೆ ಆ ವರನ ಮೇಲೆಯೇ ಸಂದೇಹ ಇದೆ. ಅಲ್ಲೊಬ್ಬ ವರ, ಇಲ್ಲೊಬ್ಬ ವರ, ಅವನ ಪತ್ನಿ ಇವನ ಬಳಿ, ಇವನ ಪತ್ನಿ ಬೇರೊಂದು ಕಡೆ... ಒಟ್ಟಾರೆ ವಿಭಿನ್ನ ಜಾನರ್‌ನ ಲಾಪಟಾ ಲೇಡಿಸ್‌ ಟ್ರೈಲರ್‌ ನೋಡಿ ಸಿನಿಮಾ ಪ್ರೇಮಿಗಳು ವಾಹ್‌ ಎಂದಿದ್ದಾರೆ.

ಲಾಪಟಾ ಲೇಡಿಸ್‌ನಲ್ಲಿ ನಿತಾಶಿ ಗೋಯೆಲ್‌, ಪ್ರತಿಭಾ ರಾಂತ, ಸ್ಪರ್ಷ್‌ ಶ್ರೀವಾತ್ಸವ ಮತ್ತು ಛಾಯಾ ಖದಮ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ ಈ ಸಿನೆಮಾ ಟೊರಾಂಟೊ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡಿದೆ. ಸಿದ್ಧಾರ್ಥ್‌ ಆನಂದ್‌ ನಿರ್ದೇಶನದ ವೈಮಾನಿಕ ಸಾಹಸ ಸಿನೆಮಾ ಫೈಟರ್‌ ಬಿಡುಗಡೆಯ ಒಂದು ವಾರದ ಬಳಿಕ ಲಾಪಟಾ ಲೇಡಿಸ್‌ ತೆರ ಕಾಣುತ್ತಿದೆ. ಅಂದಹಾಗೆ, ಫೈಟರ್‌ ಸಿನೆಮಾದಲ್ಲಿ ಹೃತಿಕ್‌ ರೋಷನ್‌ ಮತ್ತು ದೀಪಿಕಾ ಪಡುಕೋಣೆ ಹಾಗೂ ಅನಿಲ್‌ ಕಪೂರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಲಾಪಟಾ ಲೇಡಿಸ್‌ ಬಗ್ಗೆ ಅಮೀರ್‌ ಖಾನ್‌ ಏನಂದ್ರು?

ಟೊರಾಂಟೊ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಈ ಸಿನೆಮಾದ ಕುರಿತು ಮೆಚ್ಚುಗೆ ಮತ್ತು ಉತ್ತಮ ವಿಮರ್ಶೆ ದೊರಕಿದ ಬಳಿಕ ಈ ಸಿನೆಮಾದ ನಿರ್ಮಾಪಕರಾದ ಅಮಿರ್‌ ಖಾನ್‌ ಖುಷಿಗೊಂಡಿದ್ದರು. "ಲಾಪಟಾ ಲೇಡಿಸ್‌ ಸಿನೆಮಾದ ಕುರಿತು ವೀಕ್ಷಕರು ಮತ್ತು ಸಿನಿರಂಗದವರ ಪ್ರತಿಕ್ರಿಯೆ ನೋಡಿ ನಿಜಕ್ಕೂ ರೋಮಾಂಚನಗೊಂಡಿದ್ದೇನೆ. ನನಗೆ ಕಿರಣ್‌ ರಾವ್‌ ಬಗ್ಗೆ ಹೆಮ್ಮೆಯಾಗಿದೆ. ಜನಪ್ರಿಯ ಮಾಧ್ಯಮದಲ್ಲಿ ಆಕೆ ದೃಢವಾಗಿದ್ದಾಳೆ. ಈ ಸಿನೆಮಾ ಬಿಡುಗಡೆಗೊಳಿಸಲು ಕಾಯುತ್ತಿದ್ದೇನೆ" ಎಂದು ಅಮೀರ್‌ ಖಾನ್‌ ಹೇಳಿದ್ದಾರೆ. ಇತ್ತೀಚೆಗೆ ಅಮೀರ್‌ ಖಾನ್‌ ಮಗಳ ಮದುವೆ ನಡೆದಿತ್ತು. ಅಮೀರ್‌ ಖಾನ್‌ ಮತ್ತು ಕಿರಣ್‌ ರಾವ್‌ ಜತೆಯಾಗಿ ಮಗಳ ಮದುವೆ ಮಾಡಿಕೊಟ್ಟಿದ್ದರು.

ನಿರ್ದೇಶಕಿ ಕಿರಣ್‌ ರಾವ್‌ ಹೀಗಂದ್ರು

ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಸಿನಿಮಾ ನಿರ್ದೇಶಕಿ ಕಿರಣ್‌ ರಾವ್‌ ಹೀಗೆ ಪ್ರತಿಕ್ರಿಯೆ ನೀಡಿದ್ದರು. " ಪ್ರೇಕ್ಷಕರ ನಗು, ಕಣ್ಣೀರು ಮತ್ತು ಚಪ್ಪಾಳೆಗಳನ್ನು ಪ್ರತ್ಯಕ್ಷವಾಗಿ ಅನುಭವಿಸುವುದಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ಟಿಐಎಫ್‌ಎಫ್‌ನಲ್ಲಿ ಬಂದ ಪ್ರತಿಕ್ರಿಯೆ ನೋಡಿ ಖುಷಿಗೊಂಡಿದ್ದೇವೆ. ಚಿತ್ರಮಂದಿರಗಳಲ್ಲಿ ಈ ಸಿನೆಮಾ ಬಿಡುಗಡೆ ಮಾಡುವ ಕ್ಷಣಕ್ಕಾಗಿ ಕಾಯುತ್ತಿದ್ದೇನೆ" ಎಂದು ಕಿರಣ್‌ ರಾವ್‌ ಹೇಳಿದ್ದಾರೆ.

ಜಿಯೋ ಸ್ಟುಡಿಯೋದ ಜ್ಯೋತಿ ದೇಶ್‌ಪಾಂಡೆ ಅವರು ಲಾಪಟಾ ಲೇಡಿಸ್‌ ಸಿನೆಮಾದ ಸಹ ನಿರ್ಮಾಪಕರು. ಅಮಿರ್‌ ಖಾನ್‌ ಪ್ರೊಡಕ್ಷನ್‌ ಮತ್ತು ಕಿಡ್ಲಿಂಗ್‌ ಪ್ರೊಡಕ್ಷನ್‌ನಡಿ ಸಿನೆಮಾ ತಯಾರಾಗಿದೆ. ಬಿಪ್‌ಲ್ಯಾಬ್‌ ಗೋಸ್ವಾಮಿ ಅವರ ಪ್ರಶಸ್ತಿ ಪುರಷ್ಕೃತ ಕಥೆಯೊಂದನ್ನು ಆಧರಿಸಿ ಈ ಸಿನೆಮಾ ತಯಾರಿಸಲಾಗಿದೆ. ಸ್ನೇಹಾ ದೇಸಾರಿ ಅವರು ಚಿತ್ರದ ಸಂಭಾಷಣೆ ಮತ್ತು ಚಿತ್ರಕಥೆ ಬರೆದಿದ್ದಾರೆ. ದಿವ್ಯಾ ನಿಧಿ ಶರ್ಮಾ ಅವರು ಹೆಚ್ಚುವರಿ ಡೈಲಾಗ್‌ಗಳನ್ನು ಸೇರಿಸಿದ್ದಾರೆ. ಮಾರ್ಚ್‌ 1ರಂದು ಲಪಟಾ ಲೇಡಿಸ್‌ ಸಿನೆಮಾ ಬಿಡುಗಡೆಯಾಗಲಿದೆ.

(This copy first appeared in Hindustan Times Kannada website. To read more like this please logon to kannada.hindustantime.com )

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ